ಸೋಮವಾರ, ಏಪ್ರಿಲ್ 1, 2024

ಹಾಸ್ಯ ಕವನ

ಕೋಪ

ಗುಂಡಗೂ ನಂಜಿಗೂ ಕೋಪ
ಕಾರಣ ಏಕೋ ಭೂಪ
ನಂಜಿಗೆ ಬೇಕು ಚಿನ್ನದ ಸರ
ಗುಂಡನು ಕೊಟ್ಟ ಕಾಸಿನ ಸರ

ಬಹಳ ದಿನಗಳ ಬಳಿಕ ತಿಳಿಯಿತು
ಅದು ಒಂದು ಗ್ರಾಮಿನ ಸರ
ಪಕ್ಕದ ಮನೆಯ ನರಸಮ್ಮನಿಂದ
ಅವಳ ಬಳಿಯೂ ಅದೇ ಸರ!

ನಂಜಿಯ ಕೋಪಕೆ ಮಿತಿ ಇಲ್ಲ
ಗುಂಡನ ನಗುವಿಗೆ ಸಾಟಿ ಇಲ್ಲ
ಮಡದಿಯ ಮಂಗ ಮಾಡಿಹನು
ಹಣವನು ಉಳಿಸಿ ಮೆರೆದಿಹನು 

ನಂಜಿಯ ಕೋಪದ ಹೊಳೆ ಉಕ್ಕಿತ್ತು
ಲಟ್ಟಣಿಗೆಯೊಂದು ಕೈಗೆ ಸಿಕ್ಕಿತ್ತು
ಗುಂಡನು ಬರಲು ಸಮಯವು ಇತ್ತು
 ಕೋಪದಿ ನಂಜಿ ಮನ ಬುಸುಗುಡುತಿತ್ತು

ಗುಂಡನು ಮನೆಗೆ ಖುಷಿಯಲಿ ಬರಲು
ಕೋಪವು ನೆಗೆದು ಚಿಮ್ಮುತ ಉಕ್ಕಲು
ಕೈಯಲ್ಲೊಂದು ತಿಂಡಿಯ ಕವರು
ಓಡುತ ಪರಿಮಳ ಮೂಗಿಗೆ ಬರಲು

ಕೋಪವ ಮುಂದೂಡಿ ಇಟ್ಟಾಯ್ತು
ಚಕ್ಕುಲಿ ತಿನ್ನುವ ಮನಸಾಯ್ತು
ಕೋಪವು ಕರಗಿ ನೀರಾಯ್ತು
ಅವಲಕ್ಕಿ ಸರವೇ ಪಾಲಾಯ್ತು
@ಹನಿ ಬಿಂದು@
02.04.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ