ಬುಧವಾರ, ಫೆಬ್ರವರಿ 26, 2025

ತುಡರ್ ಪರ್ಬ

ತುಡರ್ ಪರ್ಬ

ಬತ್ತ್ಂಡಕ್ಕ ಬತ್ತ್ಂಡಣ್ಣ ತುಡರ್ ಪರ್ಬಯೇ
ದೀಪ ಸಾಲ್ ತೋಜೊಂದುಂಡು ಮಾತ ಕಡೆಟ್‌ಯೇ//

ಸಾರ  ಮಾನಿ ಕುಸಿನ್ ಪಟ್‌ದ್ ನಡಪಿ ಸೋಕುಯೇ
ಕಾರ್ ಪತ್ತಿ ನಟ್ಟಿ ವರನ್ ಮಲ್ಲಕ್ಲೆಡಯೇ....
ಬಲಿಯೇಂದ್ರೆ ಜತ್ತ್ ಬತ್ತ್  ತೂಪಿ ಪೊರ್ಲುಯೇ
ಎಣ್ಣೆ ಪೂಜಿ ಮೀಪಿ ಸುಖಲ ಏರೆಗುಂಡುಯೇ//

ಗುರ್ಕೆ ದಿಂಜ ನೀರ್ ಪಾಡ್ದ್ ತೂಪಿನೇರ್‌ಯೇ
ಬಲಿಯೇಂದ್ರಗ್ ಕೂ ಪಾಡುನ ದಾದ ಮರ್ಲ್‌ಯೇ
ಮಾಮಿ ಮರ್ಮಲ್ ಕೂಡ್ಡು ಮಲ್ತಿ ಅಟಿಲ ಕಮ್ಮೆನ
ಮಾಮು ಮರ್ಮಯೆ ಒಟ್ಟು ಕುಲ್ದು ಉನ್ಪಿ ಸಮ್ಮನ//

ಬಿನ್ನೆ ಇಷ್ಟೆ ದೋಸ್ತಿ ಪಂದ್ ಮಾತ ಬತ್ತೆರ್
ಪೊನ್ನೆ ಗೋಂಕು ಕುಕ್ಕುದ ಮರ ಮಾತ ತೂಯೆರ್
ಪೇಂಟೆಡಿತ್ತಿ ಜೋಕ್ಲು ಮಾತ ನಲ್ತ್ ತಿರ್ಗೆರ್
ಸೋಂಟೆ ಪತ್‌ದ್ ಕಂಡಡಕುಲು ಮಾತ ಬಲ್ತೆರ್ //

ದುರ್ಸು ಮಾಲೆ ಲಕ್ಷ್ಮಿ ಬಾಂಬು ಪುಡಾತ್ ಬುಡ್ಯೆರ್
ನೆಲ ಚಕ್ರ ಬೆದ್‌ರ ಪುಂಡೆಲ್ ತೂದು ನಲ್ತೆರ್
ಬೋಂಟೆ ದೇರ್ಯರೆಂದ್ ಪಂದ್ ಕಾಡ್ ಪೊಗ್ಯೆರ್
ಓಂಟೆ ಬೆತ್ತ ಕಂತ್ ಮಲ್ಲ ಬಟ್ಟಿ ಮಲ್ತೆರ್ //
@ಹನಿಬಿಂದು@
24.10.2024


ಭಾವಗೀತೆ

ಭಾವಗೀತೆ - ಭಾರತಿಗೆ

ಬಾಗಿ ನಮಿಸುವೆ ಭವ್ಯ ಮಾತೆಗೆ 
ಭರತ ಭೂಮಿಯ ಒಡತಿಗೆ
ಭಾವ ತುಂಬಿದ ಹೃದಯ ಪದಗಳ
ಮುಡಿಸಿ ಆರತಿ ದೇವಿಗೆ//

ಭಕ್ತಿ ಯುಕ್ತಿ ಶಕ್ತಿ ಬೆರೆಸುತ 
ವಿಶ್ವ ಶಾಂತಿಯ ಬೇಡುವೆ
ಭವ್ಯ ಮನದಿ ಬೇನೆ ಕಳೆಯಲು
ನಿತ್ಯ ಭಜಿಸಿ ಹಾಡುವೆ//

ಜಾತಿ ನೀತಿ ಮರೆತು ಬಾಳಲು
ಪ್ರೀತಿ ಹೆಚ್ಚಲು ಕೋರುವೆ
ಸ್ಪೂರ್ತಿ  ಬದುಕನು ನೀಡು ಎನುತಲಿ
ರಾತ್ರಿ ಹಗಲು ಸ್ತುತಿಸುವೆ//

ನೀತಿ ನಿರ್ಮಲವಾಗಿ ಸೂಕ್ತಿಯು
ಸರ್ವರೆದೆಯನು ಮುಟ್ಟಲಿ
ಕೀರ್ತಿ  ಜಗದ ಮೂಲೆ ಮೂಲೆಗೂ
ಸರ್ವ ಸುಖವೂ ಹಬ್ಬಲಿ//
@ಹನಿಬಿಂದು@
27.02.2025

ಭಾನುವಾರ, ಫೆಬ್ರವರಿ 16, 2025

ನವಭಾವ

ನವಭಾವ

ಪುಟ್ಟ ಹಕ್ಕಿ ಹಾರಿ ಹಾರಿ ನೂರು ಭಾವ ಮೂಡಿದೆ
ಎದೆಯ ಒಳಗೆ ಹಿಗ್ಗು ಹಿಗ್ಗಿ ಮನವು ಇಂದು ನಲಿದಿದೆ 

ಬಳ್ಳಿ ಬಳಸಿ ಮರವ ಹಿಡಿದು ಎತ್ತರಕ್ಕೆ ಏರಿದೆ
ಲಿಲ್ಲಿಯಂತೆ ಅರಳಿ ಬಿರಿದ ಸುಮವು ತಾನು ನಗುತಿದೆ
ನೂರು ಆಸೆ ಹೊತ್ತ ಮೋಡ ಹೊಸತು ಹನಿಯ ಚೆಲ್ಲಿದೆ
ಗಗನದಿಂದ ಇಳೆಯ ಸ್ಪರ್ಶಕಾಗಿ ಹನಿಯು ಕಾದಿದೆ

ಖುಷಿಯ ಹಣ್ಣು ರಸವ ತುಂಬಿ ಸವಿಯ ಇಲ್ಲಿ ತುಂಬಿದೆ
ಮಸಿಯ ಮರೆತು ತಳವ ಬಿಟ್ಟ ಪಾತ್ರೆ ಇಂದು ಬೆಳಗಿದೆ
ಪ್ರೇಮದಿಂದ ಮಧುವ ಹೀರೆ ಪಕ್ಷಿ ಕಾದು ಕುಳಿತಿದೆ
ರೋಮ ರೋಮಗಳಲು ಹೊಸತು ನಾದ ಹೊಮ್ಮಿ ಬಂದಿದೆ

ಕಾಮ ಕ್ರೋಧ ಮೋಹ ಲೋಭ ಎಲ್ಲ ತಾನು ಮರೆತಿದೆ
ಮದ ಮಾತ್ಸರ್ಯ ಮರುಕ ಬಿಟ್ಟು ಪ್ರೀತಿಯಿಂದ ತಣಿದಿದೆ
ದೂರ ಸಾಗುತ್ತಿದ್ದ ನಾವೆ ದಡಕೆ ಸನಿಹವಾಗಿದೆ
ಸಾರಿ ಸಾರಿ ಸ್ನೇಹಗಾನ ಮೊಳಗಿ ಕರೆಯ ನೀಡಿದೆ
@ಹನಿಬಿಂದು@
17.02.2025

ಗುರುವಾರ, ಫೆಬ್ರವರಿ 13, 2025

ದಶಕ -131

ದಶಕ -131

ಬತ್ತದ ಉತ್ಸಾಹ ಜೀವನ ಬಿತ್ತಲು 
ಬೆಟ್ಟದ ಆಸೆಯು ದಿನದಲಿ ಸುತ್ತಲು 
ಕೆತ್ತದ ಮೂರ್ತಿಯ ಹಾಗಿದೆ ಎತ್ತಲು
ರಕ್ತದ ಬಣ್ಣವು ಒಂದೇ ಜಗದೊಳು

ನಾನು ನನ್ನದು ಎಂಬುದು ಏನಿದೆ
ತಾನು ಹಂಚಿದುದು ಮಾತ್ರವೇ ಜಗಕಿದೆ 
ಪ್ರಾಣ ಹೋಗುವವರೆಗೂ ಉಸಿರಿದೆ
ತ್ರಾಣ ಇದ್ದರೆ ದುಡಿತಕೆ ಕಸುವಿದೆ

ಜಗದಲಿ ನೋವು ಬೇಸರ ಸಾಕಾಗಿದೆ
ಶಾಂತಿ ನೆಮ್ಮದಿ ಪ್ರೀತಿ ಬೇಕಿದೆ
@ಹನಿಬಿಂದು@
13.02.2025

ಬುಧವಾರ, ಫೆಬ್ರವರಿ 12, 2025

ದಶಕ -129

ದಶಕ -129

ಬಳ್ಳಿ ಬಾಗಿದೆ ಮೊಗ್ಗು ಹೊತ್ತು
ನಲ್ಲಿ ತಿರುಗಿಸಿ ನೀರ ತೆತ್ತು
ಎಲ್ಲಿ ಹೋಯಿತು ದೊಡ್ಡ ಮರವು 
ಜೆಲ್ಲಿ ಕಾಂಕ್ರೀಟ್ ಮನೆಯ ಅಂದವು

ನಿತ್ಯ ಗೊಬ್ಬರ ಹಾಕಿ ಬೆಳೆಸಿ
ಹೂವು ಹಣ್ಣಲಿ ಬಾಗಿ ಉಳಿಸಿ
ತನ್ನದೆನುತ ಬಳಿಕ ತಿಳಿಯಲು
ಪ್ರೀತಿ ಮಕ್ಕಳ ಮೇಲೆ ಅಳಿಯಲು

ಮನವು ಭಾರ ಮೋಹ ದೂರ
ಜೀವ ಸಾಗರ ಹಸಿರೇ ಪರಿಸರ?
@ಹನಿಬಿಂದು@
10.02.2025

ದಶಕ -130

ದಶಕ -130

ಜಾರಿ ಜಾರಿ ಹೋದ ಕನಸು
ಹಾರಿ ಹಾರಿ ಹೋದ ಮನಸು
ಬಾರಿ ಬಾರಿ ನೊಂದ ಹೃದಯ
ತೋರಿ ತೋರಿ ಸ್ನೇಹ ಕರೆಯ

ಮತ್ತೆ ಮತ್ತೆ ಉಕ್ಕಿ ಪ್ರೇಮ
ಸತ್ತು ಸತ್ತು ಹುಟ್ಟಿ ಮೋಹ
ಮುತ್ತು ಮುತ್ತು ಕೊಟ್ಟ ಬಣ್ಣ
ಹತ್ತು ಹತ್ತು ಯೋಚನೆ ಅಣ್ಣ

ನೊಂದ ಬೆಂದ ಬದುಕ ಬಯಕೆ
ಗೆದ್ದ ಸೋತ ಬಾಳ ಕುಣಿಕೆ
@ಹನಿಬಿಂದು@
13.02.2025

vision

Vision 

You are here, O star!
Deep in my eyes bar
Like a gold streaker
As a super shining star
With lots of bright rays bearer!

Silver rays of life secret
Future plans of brightened fate
Structure types of boat
Mixture colours of kite
Venture ideas of might!

Sundays of a worker
Greenery of a leafy tree
Aim thought of a sailor
Bravery of a soldier 
Gaming of a gambler!!

Goodness of our conducts
Wellness of the good moods
Examples for daily hard works
Reality for the continuous tasks!

O my dear forever and ever
You are always near here
For each moment clever hour
The friend of bright future
It is the 'sun' of  earth forever...
@HoneyBindu@
12.01.2025








ಶುಕ್ರವಾರ, ಫೆಬ್ರವರಿ 7, 2025

ಮಹಿಳೆ

ಹೀಗೊಂದು ಮುಖಪುಟದಲ್ಲಿ ಜಾಹೀರಾತು ನೋಡಿದೆ. ಅದೇನು ಅಂದರೆ ಬೇರೆ ಬೇರೆ ಯೂನಿವರ್ಸಿಟಿಯಲ್ಲಿ ಪದವಿ, ಡಾಕ್ಟರೇಟ್ ಕೊಡುತ್ತೇವೆ, ಅಪ್ಲೈ ಮಾಡಿ ಅಂತ ಬರುತ್ತದಲ್ಲ, ಹಾಗಲ್ಲ, ಸಂಗೀತ, ನೃತ್ಯ, ವಾದ್ಯ ಕಲಿಸುತ್ತೇವೆ ಅಂತ ಬರುತ್ತದಲ್ಲಾ ಹಾಗೆ. ಆನ್ಲೈನ್ ನಲ್ಲಿ ಯಕ್ಷಗಾನ ಕಲಿಸುತ್ತೇವೆ ಅಂತ. ನನ್ನ ಮಗಳಿಗೆ ಮೊದಲಿನಿಂದಲೂ ಯಕ್ಷಗಾನದಲ್ಲಿ ಆಸಕ್ತಿ. ಹಾಗಾಗಿ ನನ್ನ ಗೆಳತಿಯೊಡನೆ ಕೇಳಿದೆ." ಅದೆಲ್ಲ ಸಾಮಾಜಿಕ ಜಾಲ ತಾಣಗಳಲ್ಲಿ ಬರುವುದು ಬೋಗಸ್, ದುಡ್ಡು ಮಾಡ್ಲಿಕ್ಕೆ ಮಾಡ್ತಾರೆ ,ಅದು ಹೇಗೆ ಅನ್ ಲೈನಿನಲ್ಲಿ ಅದನ್ನು ಕಲಿಯಲು ಸಾಧ್ಯ?  ಮನೆ ಪಕ್ಕದಲ್ಲಿ ಎಲ್ಲಾದರೂ ನೋಡು" ಅಂದರು. 
    ಯಕ್ಷಗಾನ ಕಲಿಯಲೆeಬೇಕು ಎಂದು ಆಸೆ ಪಡುತ್ತಿದ್ದ ಮಗಳನ್ನು ಪ್ರತಿದಿನ ಶಾಲೆ ಬಿಟ್ಟು ಹೊರಗೆಲ್ಲೋ ತರಗತಿಗೆ ಕರೆದುಕೊಂಡು ಹೋಗುವಷ್ಟು ಸಮಯ ನನ್ನಲ್ಲಿ ಇಲ್ಲದ ಕಾರಣ, ಮೂಲ್ಕಿಯಲ್ಲಿ ಯಕ್ಷಗಾನ ತರಗತಿ ಅಲ್ಲಲ್ಲಿ ನಡೆಯುತ್ತಿದ್ದರೂ ಸಮಯ, ಪ್ರಯಾಣ, ಹೊರಗೆ ದುಡಿದ ಸುಸ್ತು ನನ್ನನ್ನು ಯಾವ ಹೊರಗಿನ ತರಗತಿಯಿಂದಲೂ ದೂರ ಇಟ್ಟಿತ್ತು. ಡ್ರಾಯಿಂಗ್, ಸಂಗೀತ ಕಾರ್ಯಕ್ರಮವೇ ಅಲ್ಲದೆ ಭರತನಾಟ್ಯ ಕೂಡ ಆನ್ ಲೈನ್ ನಲ್ಲಿ ಸಿಗುವಾಗ ಇದೂ ಯಾಕೆ ಪ್ರಯತ್ನಿಸಬಾರದು ಎಂಬ ಭಂಡ ಧೈರ್ಯ ಮಾಡಿ ಯಾರು ಏನು ಹೇಳಿದರೂ ಕೇಳದೆ, ಜಾಹೀರಾತಿನಿಂದ ಮೊಬೈಲ್ ನಂಬರ್ ಪಡೆದು ನೇರವಾಗಿ ಕರೆ ಮಾಡಿ ಕೇಳಿಯೇ ಬಿಟ್ಟೆ. ಎಲ್ಲವನ್ನೂ ವಿಚಾರಿಸಿದ ಬಳಿಕ 1000/- ಫೀಸ್ ಕಟ್ಟಿ ಆಸೆ ಪಟ್ಟ ಮಗಳನ್ನು ನಿರಾಸೆಗೊಳಿಸದೆ ತರಗತಿಗೆ ಸೇರಿಸಿಯೂ ಬಿಟ್ಟೆ. ಆದರೆ ಮುಂದೆ ಆದದ್ದೇ ಬೇರೆ.
     ನಾವೆಲ್ಲಾ ಯಕ್ಷಗಾನ ಗಂಡುಕಲೆ ಅಂತ ತಿಳಿದವರು. ಈಗೀಗ ಅಲ್ಲಲ್ಲಿ ಭಾಗವತಿಕೆ, ಅರ್ಥಧಾರಿ, ವೇಷಧಾರಿ ಅಂತ ಒಬ್ಬೊಬ್ಬರು, ಒಂದೊಂದು ಸಂಘ ಮಹಿಳೆಯರದ್ದು ಕಾಣಿಸುತ್ತಿದೆ ಅಷ್ಟೇ. ಹಾಗಾಗಿ ಇಲ್ಲೂ ಗುರುಗಳು ಯಾವುದಾದರೂ ಸರ್ ಇರಬಹುದು ಅಂದುಕೊಂಡರೆ ಅದು ಸಂಪೂರ್ಣ ತಪ್ಪಾಯಿತು. ಇಲ್ಲಿ ಯಕ್ಷಗಾನ ಕಲಿಸುವುದು ಒಬ್ಬ ಹೆಣ್ಣು ಮಗಳು. ನಾಟ್ಯ ಪ್ರವೀಣೆ. ಹೆಸರು ಕೀರ್ತನಾ ಉದ್ಯಾವರ ಅಂತ. 
  
     ಸಾಮಾಜಿಕ ಜಾಲ ತಾಣಗಳ ಮೂಲಕ ಮನೆಯಲ್ಲೇ ಕುಳಿತು ಒಟ್ಟಿಗೆ ತರಗತಿಯಲ್ಲಿ ಕಲಿಯುವ ಹಾಗೆಯೇ, ಅಡಿಯಿಂದ ಮುಡಿಯವರೆಗೆ ನೋಡುತ್ತಾ, ಪ್ರತಿ ತರಗತಿಯಲ್ಲಿಯು ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತಿ ಹಾವಭಾವಗಳನ್ನು ಗಮನಿಸುತ್ತಾ ಸರ್ವ ಅಭಿನಯಗಳಲ್ಲಿ, ಕಣ್ಣು,ಕೈ, ಕಾಲು, ಚಲನೆ, ನಡಿಗೆ, ನಾಟ್ಯ ಎಲ್ಲವನ್ನೂ ಗಮನಿಸಿ ಅಲ್ಲಲೇ ತಿದ್ದುತ್ತಾ, ಜೊತೆಗೆ ತಿದ್ದಿ ಸರಿ ಪಡಿಸಿ ಇನ್ನೊಮ್ಮೆ ನೃತ್ಯ ಮಾಡಿದ ವಿಡಿಯೋ ಕಳಿಸಲು ತಿಳಿಸಿ ಅದನ್ನು ಕೂಡಾ ವಿಮರ್ಶೆ ಮಾಡುವ ಗುರು ಕೀರ್ತನಾ ಉದ್ಯಾವರ ಅವರ ಅಪಾರ ತಾಳ್ಮೆ ತುಂಬಾ ಹಿಡಿಸಿತು. ಆಧುನಿಕ ತಂತ್ರಜ್ಞಾನವನ್ನು ಹೀಗೂ ಬಳಸಿಕೊಳ್ಳಬಹುದು ಎಂದು ಸಮರ್ಥವಾಗಿ ತೋರಿಸಿ ಕೊಟ್ಟವರು  ಕಥೆಗಾರರು ತಂಡದವರು. ಅಬ್ಬಾ.. ಸಣ್ಣ ಮಕ್ಕಳಿಂದ ಹಿಡಿದು, ವಯಸ್ಕ ವಿದ್ಯಾರ್ಥಿ, ಎಷ್ಟೆಂದರೆ ರಿಟೈರ್ಡ್ ಆದವರಿಗೂ ಕೂಡಾ ಮನೆಯಿಂದ ದೂರ ಹೋಗದೆ,  ಆಸಕ್ತಿ ಒಂದಿದ್ದರೆ ಸಾಕು , ಮನೆಯಲ್ಲೇ ಒಂದು ಕೋಣೆಯ ಒಳಗೆ ಕುಳಿತು ಅಭ್ಯಾಸ ಮಾಡಿ ಕಲಿಯಲು ಅವಕಾಶ. ಮತ್ತೆ ಬಾಲ್ಯದ ವಿದ್ಯಾರ್ಥಿ ಜೀವನಕ್ಕೆ ಹೋದ ಅನುಭವ. 
          ಅಕಸ್ಮಾತ್ ಆನ್ ಲೈನ್ ತರಗತಿಗೆ ಸೇರಿಕೊಳ್ಳಲು ಒಂದೊಂದು ದಿನ ಅಸಾಧ್ಯ ಆದರೂ ಅದಕ್ಕೂ ಇಲ್ಲಿ ಪರಿಹಾರ ಇದೆ. ಆಯಾ ದಿನದ ಕಾರ್ಯಕ್ರಮ ರೆಕಾರ್ಡ್ ಆಗಿ ನಮ್ಮ ವಾಟ್ಸ್ ಆ್ಯಪ್ ಗುಂಪಿಗೆ ಬಂದು ಬಿಡುತ್ತದೆ. ತಾಳಗಳ ನೋಟ್ಸ್ ಕೂಡಾ. ಎಲ್ಲವೂ ಶಾಲೆಯಲ್ಲಿ ಕಲಿತ ಹಾಗೆಯೇ ಇಲ್ಲಿ. ರಿವಿಶನ್ ಅಂತೂ ನಿತ್ಯ ಇವೆ. ವಾರಕ್ಕೆ ಒಂದು ತರಗತಿ ಆದ ಕಾರಣ , ಪ್ರತಿ ವಿದ್ಯಾರ್ಥಿಯೂ ಆ ದಿನ ಯಾವಾಗ ಬರುತ್ತದೆ ಎಂದು ಕಾಯುತ್ತಾ ಇರುತ್ತಾರೆ. 
    ಖಂಡಿತಾ ಇದು ಅತಿಶಯೋಕ್ತಿಯ ಮಾತಲ್ಲ. ನನಗೆ ನೃತ್ಯ ಬಾರದು. ಆದರೆ ಮಗಳು ನಿತ್ಯ ಕಲಿಯುವ ತರಗತಿಯನ್ನು, ನನ್ನ ಕೆಲಸಗಳ ಜೊತೆಗೆ ಮಗಳಿಗೆ ಕಲಿಸುವ ಪರಿಯನ್ನು ನೋಡುತ್ತಾ ಮೂಕ ವಿಸ್ಮಿತಳಾದವಳು ನಾನು. ಪ್ರತಿ ತಿಂಗಳು ನೆನಪಾದಾಗ ಫೀಸ್ ತುಂಬಿಸಿದ್ದು ಮಾತ್ರ ನಾನು. ಕಲಿಯುತ್ತಾ ಇದ್ದದ್ದು ಅವಳು.ಅಚ್ಚುಕಟ್ಟಾದ ಶಿಸ್ತು, ಸಂಯಮದ ಈ ಪಾಠಕ್ಕೆ ಖುಷಿ ಪಟ್ಟೆ. ಮಗಳು ಒಂದಿಷ್ಟು ಕಲಿತಳು ಅಂದುಕೊಂಡಾಗ ಮುಂದೆ ಸಾಗುವ ಸಮಯ ಬಂದಿತು. ಮುಂದಿನ ಪಾಠಕ್ಕೂ , ಕಲಿಕೆಗೂ ಸಿದ್ದಳಾದಳು. ಮುಂದೆ ಯಕ್ಷಗಾನದ ಹಾಡು ಕೂಡಾ ಬೇಕೆನ್ನುತ್ತಾಳೋ ಏನೋ. ಈಗಾಗಲೇ ಅವರ ಬಳಿಯೇ ಭರತ ನಾಟ್ಯಕ್ಕೆ ಸೇರಿ ಕೊಳ್ಳುವೆ,  ತುಂಬಾ ಇಷ್ಟದ ಟೀಚರ್ ಅಂತ ಹೇಳಿ ಆಗಿದೆ. ಏನೇ ಆಗಲಿ ಮೋಸ, ವಂಚನೆ ಅಂತೂ ಇಲ್ಲಿ ಇಲ್ಲ. ಕಲಿಕಾರ್ಥಿಗಳಿಗೆ ಉತ್ತಮ ಟ್ರೈನಿಂಗ್. ಯಕ್ಷಗಾನ ಕಲಿಯಬೇಕು ಎನ್ನುವವರು ಪ್ರಯತ್ನಿಸಿ, ಒಮ್ಮೆ ನೋಡಿ. ಮತ್ತೆ ಹೇಳಿ. ಇದು ಜಾಹೀರಾತಲ್ಲ. ಅನಿಸಿಕೆ ಅಷ್ಟೇ. ಇವತ್ತು ಮಗಳಿಗೆ ಸರ್ಟಿಫಿಕೇಟ್ ಬಂದಿದೆ. ಮೊದಲೇ ಬಂದಿತ್ತೋ ಏನೋ. ನನ್ನ ಕೆಲಸದ ಒತ್ತಡದಲ್ಲಿ ನಾನು ವಾಟ್ಸ್ ಆ್ಯಪ್ ನೋಡಿದ್ದು ಇಂದು. ಮಗಳಿಗೆ ಖುಷಿಯೋ ಖುಷಿ. 
  ಯಕ್ಷಗಾನದಂತಹ  ಉತ್ತಮ ಕಲೆಯನ್ನು ಕಲಿಸಿ ಮುಂದಿನ ಜನಾಂಗಕ್ಕೆ ಸುಲಭವಾಗಿ ಪಸರಿಸುತ್ತಿರುವ ಈ ಕುಟುಂಬಕ್ಕೆ, ಅವರ ತಂಡಕ್ಕೆ ಶಹಬ್ಬಾಸ್ ಎನ್ನಲೇ ಬೇಕು ಅಲ್ಲವೇ? ನಿಮ್ಮ ವಿದ್ಯಾರ್ಥಿಗಳ ಸಂಖ್ಯೆ ಸಾವಿರವಾಗಲಿ  ಎಂಬುದು ನಮ್ಮ ಶುಭ ಹಾರೈಕೆಗಳು .ನೀವೇನಂತೀರಿ? 
@ಹನಿಬಿಂದು@
08.02.2025

ಮಂಗಳವಾರ, ಫೆಬ್ರವರಿ 4, 2025

ದಶಕ -124

ದಶಕ -126

ಮನಸ್ಸೆಂಬ ಮರ್ಕಟನ ಹದ್ದುಬಸ್ತಿನಲ್ಲಿ  ಇಡಬೇಕಲ್ಲವೇ
ಇದುಬೇಕು ಅದುಬೇಕು ಅಲ್ಲಿಲ್ಲಿ ಕಂಡದ್ದೆಲ್ಲಾ ಸಾಕಾಗಲ್ವೆ!
ಯಾರೂ ಹೇಳೋರಿಲ್ಲ "ನಮಗೆ ಇಷ್ಟೇ ಸಾಕು ಸಾಕೆಂದು"
ಬೇಡಿಕೆ ಇನ್ನಷ್ಟು ಮತ್ತಷ್ಟು ಮತ್ತೊಂದಿಷ್ಟು ಹಾಕೆಂದು! 

ಒಂದಿಷ್ಟು ಕಾಣಿಕೆ ಸಮಾಜ ದೇವರ ಹುಂಡಿಗೆ ಹಾಕಲು
ಮತ್ತೊಂದಿಷ್ಟು  ಹಿರಿಯರ ಬಡ ಬಗ್ಗರ ದಾನಕ್ಕೆ ನೂಕಲು
ಮಗದೊಂದಿಷ್ಟು ಹೊರ  ರೋಗಿಗಳ ಸೇವೆಗೆ ಮುಡಿಪಿಡಲು 
ಒಂಚೂರು ಬಡ ವಿದ್ಯಾರ್ಥಿಗಳ ಕಲಿಕೆಗೆ ಕೂಡಿ ಕೊಡಲು

ಇಂದು ಬಾಳಿದವ ನಾಳೆ ಧರೆಯಲಿ ಇದ್ದಾನೆಯೋ ಇಲ್ಲವೋ
ಯಾರಿಗೆ ತಿಳಿದಿಹುದು ಘಳಿಗೆ, ಯಾವಾಗ ಹೊರಡುವೆವೋ!
@ಹನಿಬಿಂದು@
02.02.2025

ದಶಕ -126

ದಶಕ -126

ಮನಸ್ಸೆಂಬ ಮರ್ಕಟನ ಹದ್ದುಬಸ್ತಿನಲ್ಲಿ  ಇಡಬೇಕಲ್ಲವೇ
ಇದುಬೇಕು ಅದುಬೇಕು ಅಲ್ಲಿಲ್ಲಿ ಕಂಡದ್ದೆಲ್ಲಾ ಸಾಕಾಗಲ್ವೆ!
ಯಾರೂ ಹೇಳೋರಿಲ್ಲ "ನಮಗೆ ಇಷ್ಟೇ ಸಾಕು ಸಾಕೆಂದು"
ಬೇಡಿಕೆ ಇನ್ನಷ್ಟು ಮತ್ತಷ್ಟು ಮತ್ತೊಂದಿಷ್ಟು ಹಾಕೆಂದು! 

ಒಂದಿಷ್ಟು ಕಾಣಿಕೆ ಸಮಾಜ ದೇವರ ಹುಂಡಿಗೆ ಹಾಕಲು
ಮತ್ತೊಂದಿಷ್ಟು  ಹಿರಿಯರ ಬಡ ಬಗ್ಗರ ದಾನಕ್ಕೆ ನೂಕಲು
ಮಗದೊಂದಿಷ್ಟು ಹೊರ  ರೋಗಿಗಳ ಸೇವೆಗೆ ಮುಡಿಪಿಡಲು 
ಒಂಚೂರು ಬಡ ವಿದ್ಯಾರ್ಥಿಗಳ ಕಲಿಕೆಗೆ ಕೂಡಿ ಕೊಡಲು

ಇಂದು ಬಾಳಿದವ ನಾಳೆ ಧರೆಯಲಿ ಇದ್ದಾನೆಯೋ ಇಲ್ಲವೋ
ಯಾರಿಗೆ ತಿಳಿದಿಹುದು ಘಳಿಗೆ, ಯಾವಾಗ ಹೊರಡುವೆವೋ!
@ಹನಿಬಿಂದು@
02.02.2025

ಲೇಖನ

ನಮ ಓಟು ದಾಯೆ ಪಾಡೊಡು?

             ಪ್ರತಿ ದೇಸದ ಪ್ರಜೆಕ್ಲೆಗ್ ಅಕ್ಲೆನ ದೇಸೊಡು ಬದ್ ಕೆರೆ ಅಕ್ಲೆನನೇ ಆಯಿನ ರೂಲ್ಸ್ ಉಂಡು . ಆ ದೇಸಡ್ ಬದುಕುನ ಕಾರಣ ಪೊರೆಲ್ಲಾ ಅವೆನ್ ಪಾಲಿಸಾವೊಡು. ಅಂಚೆನೆ ನಮ್ಮ ದೇಸೊಡುಲಾ ನಮ್ಮ ಸಂವಿಧಾನ ಭಾರತದ ಪ್ರಜೆ ಆಯಿನ ನಮಕ್ ಕೆಲವೊಂಜಿ ಹಕ್ಕ್ ಲೆನ್ ಬೊಕ್ಕ ಕೆಲವೊಂಜಿ ಮೂಲಭೂತ ಬೇಲೆಲೆನ್ ಕೊರ್ತುಂಡು. ಐಕ್ಲೆನ್ ಪಾಲಿಸವುನವು ನಮ್ಮ ಧರ್ಮ. ಪೆದ್ದಿ ಅಪ್ಪೆ ಲೆಕ್ಕನೇ ಬದುಕುನ ದೇಸ. ಆದೇಸೊಗುಲ ಅಪ್ಪೆಗ್ ಕೊರ್ಪಿಲೆಕ್ಕನೇ ಮರ್ಯಾದೆ ಕೊರೊಡು . ಪೂರ ಜನಲ ಅಕ್ಲೆನ ಬೇಲೆ ಬೊಕ್ಕ ಕರ್ತವ್ಯ ತೆರಿಯೊನೊಡು. ತೆರಿದ್ ಮಾತೆಲ್ಲಿಕ ಬಾಳ್ ಸಂದಾವೊಡು. ಬಾಳ್ ಬೆಳಗೂಡು.
        ಅಂಚಿನ ಎಡ್ಡೆಡ್ಡೆ ಹಕ್ಕ್ ಲೆಡ್ ಓಟುದ ಹಕ್ಕಲಾ ಒಂಜಿ. ಭಾರತಡ್ ಪುಟ್ಟುದು ಬುಳೆಯಿನ ಪ್ರತಿಯೊಂಜಿ ಜೋಕ್ಲೆಗ್ಲಾ ಮುಲ್ತ ಪ್ರಜೆಕ್ಲೆನ ಸಮ್ಮಾನ ತಿಕ್ಕುಂಡು. ಅಕ್ಲೆಗ್ ಪದಿನೆನ್ಮ ವರ್ಸ ಆಯಿ ಕೂಡ್ಲೆ ಅಕ್ಲು ಅಕ್ಲೆನ ಜಾಗೆದ ಎಮ್ಮೆಲ್ಲೆನಕ್ಲೆನ್ ಬೊಕ್ಕ ಎಂ.ಪಿ.ನ್ ಓಟು ಪಾಡ್ ದ್  ಅಕ್ಲೆಗ್ ಬೋಡಾಯಿನಕ್ಲೆನ್  ಅಕ್ಲೆನ ಏರೆಗ್ಲಾ ಗೊತ್ತಾವಂದಿಲೆಕ್ಕ  ಓಟು ಪಾಡುನ ಅವ್ಕಾಸ ಉಂಡು . ಎಂಕೇ ಓಟು ಕೊರ್ಲೆ ಪಂದ್ ಕೇನುನ ಅವ್ಕಾಸ ಓಟುಗು ಉಂತಿನಕ್ಲೆಗ್ಲಾ ಉಂಡು.
       ನಮ ನಮ್ಮ ಓಟುನು ನಮಕ್ ಬೋಡಾಯಿನಕ್ಲೆಗ್ ಪಾಡೊಡ್ಡ ದುಂಬು , ದುಂಬು ಪಿರ ತೂದು ಬೊಕ್ಕ ಮಸ್ತ್ ಆಲೋಚನೆ ಮಲ್ತ್,  ದೇಸೊದ ಬೊಕ್ಕ ನಮ್ಮಲಾ ನಮ್ಮ ಜೋಕ್ಲೆನಲಾ ಭವ್ಸ ತೂದು,  ಏರ್ ಊರು ಉದ್ಧಾರ ಮಲ್ಪುವೆರಾ,  ಜನಕ್ಲೆಗ್ ಸಾಯ ಆಪೆರಾ,  ಏರ್ ನಮ್ಮ ದೇಸೊನು ನನಲಾ ಎತ್ತರಗ್ ಕೊನೊಪೆರಾ ಅಕ್ಲೆಗ್ ಓಟು ಪಾಡೊಡು. 
     ಓಟು ಪಾಡ್ನಗ "ಆಯೆ ಕಾಸ್ ಕೊರಿಯೇ, ಇಂಬೆ ಪನ್ನೆಕ್ ಪಾಡಿಯೆ" ಪಂದ್ ಪನಂದೆ ತನ್ನೊಕ್ಕೆಡ್ ತನ್ಕ್ ದೇಸ ಉದ್ಧಾರ ಏರ್ ಮಲ್ಪುವೆರ್ ಪಂದ್ ತೋಜುಂಡ ಅಕ್ಲೆಗ್ ನಮ ಓಟು ಪಾಡೊಡು. ಅವು ಅತ್ತಂದೆ ಪೊಕ್ಕಡೆ ಏರಾ ಪಂಡೆರ್ ಪಂದ್ ಒಯಿಕಾ ಒತ್ತುಂಡ ದೇಸ ಮಿತ್ತ್ ಬರಂದ್ . ನಮ್ಮ ದೇಸೊಗು ಎಡ್ಡೆ ನಾಯಕ ನಕ್ಲೆನ್ ಆರಿಸವುನ  ಮಲ್ಲ ಜವಬ್ದಾರಿ ನಮ್ಮ ಮಿತ್ತ್ ಉಂಡು . ಅವೆನ್ ಸರಿಯಾಯಿನ ರೀತಿಡ್ ಬಳಕೆ ಮತ್ತೊನೊಡು. ಓಟು ಪಾಡ್ ಜಿಡ  ಗೊತ್ತಾಂತಿನ  ಜನಕುಲು ಬೊಡ್ಚಾಂದಿನಾಯಗ್ ಪಾಡ್ದ್ ಆಯನೇ ದೇಸ ಆಳುನ ಸಾಧ್ಯತೆ ಉಂಡು . ನಮ್ಮ ದೇಸ ನಮ್ಮ ಸೊತ್ತು. ಅವು ನಮ್ಮ ಕೈಟೇ ಇತ್ ದ್ ದುಂಬು ಎತ್ತರ ಬುಳೆವೊಡಾಂಡ ನಮ ಪೂರೆರ್ನ ಓಟು ಭಾರಿ ಮುಖ್ಯ.
  ನಮ ಪೂರ ನಮ್ಮ ಬೇಲೆನ್ ಬರಿಕ್ ದೀದ್ ನಮ್ಮ ದೇಸೋದ ಏಳ್ಗೆಗಾದ್ ಓಟು ಪಾಡ್‌ಗ ಆವಂದೇ ? ನಿಕುಲು ದಾದ ಪನ್ಪರ್? 
@ಹನಿಬಿಂದು@
24.04.2024

ದಶಕ -127

ದಶಕ -127

ಯಾಕೋ ಮಾನವ ಯಾಕೋ ದುರ್ಬುದ್ಧಿ?
ಹಾಲೂಡುವ ಹಸುವಿನ ಕೆಚ್ಚಲು ಕೊಯ್ಯುವೆ!
ಸಹಾಯಕ ಆನೆಯ ಸೊಂಡಿಲು ಕಡಿಯುವೆ!
ಆಡುವ ಹಾವುಗಳ ಬೆಂಕಿ ಹಾಕಿ ಸುಡುವೆ!!

 ಪ್ರಾಣಿ ಕೀಟ ಪಕ್ಷಿ ಸಂಕುಲಗಳ ನಾಶಪಡಿಸುವೆ!
ಕಾಡಿನ ಮರಗಳ ನೆಲಸಮ ಮಾಡಿ ಬಿಡುವೆ!
ಅಂದದ ಸಾಗರಕೆ ಪ್ಲಾಸ್ಟಿಕ್ ಕಸವ ತುಂಬುವೆ!
ಚಂದದ ಮಣ್ಣನು ವಿಷದಲಿ ಮಲಿನ ಮಾಡಿರುವೆ!

ಮುಂದಿನ ಜನಾಂಗ ಬದುಕು ಕಟ್ಟಬೇಡವೇ?
ಗಾಳಿ ನೀರು ಮಣ್ಣು ಪರಿಸರ ಶುದ್ಧ ಬೇಡವೇ? 
@ಹನಿಬಿಂದು@
03.02.2025

ದಶಕ -128

ದಶಕ -128
ಕೋಳಿಯ ಕೂಗಿಗೆ ಏಳುವ ನಮಗೆ
ಗೂಳಿಯ ಹಾಗೆ ತಿನ್ನಲು ಬೇಕು!!
ಧೂಳದು ಕಾಲಿಗೆ ಮೆತ್ತಲೇ ಬಾರದು!
ಶಾಲೆಯ  ಕಲಿಕೆ, ಜೀವನ ಪಾಠವೂ ಬೇಕು

ಹಾಲಿಗೆ ಹಸುವು,  ಧೈರ್ಯಕೆ ನಾಯಿಯು
ಮುದ್ಧಿಗೆ ಬೆಕ್ಕು,  ಮದ್ದಿಗೆ ಇಲಿಯೂ 
ತಿರುಗಲು ಕುದುರೆ,  ಮೆರವಣಿಗೆಗೆ ಆನೆ
ಸಾಮಾನು ಹೊರಿಸಲು ಕತ್ತೆಯೂ ಬೇಕು

ಪ್ರಾಣಿ ಪಕ್ಷಿಗಳ ಸಹಾಯ ಪಡೆದು
ಏತಕೆ ಅವುಗಳ ಸಾಯಿಸ ಬೇಕು? 
@ಹನಿಬಿಂದು@
04.02.2025