ಹೀಗೊಂದು ಅಪೀಲು....
ನಾನು ಯಾರಿಂದಲೂ ಯಾವಾಗಲೂ ಯಾವುದೇ ಪ್ರತಿಕ್ರಿಯೆಗಳನ್ನು ನಿರೀಕ್ಷಿಸುವುದಿಲ್ಲ. ಏಕೆಂದರೆ ನಾನು ಸಾಹಿತಿ. ಹಾಗಾಗಿ ನಾನು ನನ್ನ ಕೆಲಸವನ್ನು ನನ್ನಷ್ಟಕ್ಕೆ ಮುಂದುವರಿಸುತ್ತಾ ಹೋಗುತ್ತಿರುತ್ತೇನೆ. ಅದು ನನ್ನ ಸ್ವಭಾವ. ಆದರೆ ಬೇರೆಯವರು ಇತರರ ಬಗ್ಗೆ ಅಭಿಪ್ರಾಯ ಕೇಳಿದಾಗ, ನಿಮ್ಮನ್ನು ತುಂಬಾ ಪ್ರಶಂಸಿಸಿ, ನೀವು ತುಂಬಾ ಒಳ್ಳೆಯವರು, ಸಹಾಯಕರು, ಏನಾದರೂ ಕೇಳಿದರೆ ತಕ್ಷಣ ಉತ್ತರ ಕೊಡುತ್ತೀರಿ ಎಂದು ಹೇಳುತ್ತಾ ಮಾತನಾಡಿದಾಗ ನಾನು, “ಹಾಗೆ ಅನಿಸಲ್ಲ. ಅವರು ನನ್ನ ಯಾವತ್ತೋ ಹಾಕಿದ ಮೆಸೇಜ್‌ಗೆ ಇನ್ನೂ ಉತ್ತರಿಸಿಲ್ಲ” ಎಂದು ನೇರವಾಗಿ ಸತ್ಯವನ್ನು ಇದ್ದ ಹಾಗೆ ಹೇಳುವ ನೇರ ವ್ಯಕ್ತಿ ನಾನು. ಅಷ್ಟೇ ಮಾತು ನಡೆಯುವುದು.. ನಾನು ಯಾರನ್ನೂ ಅವರ ಬೆನ್ನ ಹಿಂದೆ ಮಾತನಾಡಲು ಕೂಡ ಇಷ್ಟಪಡುವುದಿಲ್ಲ. ಅದು ನನ್ನ ಸ್ವಭಾವ ಮತ್ತು ಮನೋಭಾವ. ಏಕೆಂದರೆ ಬದುಕಿನಲ್ಲಿ ಅವರವರ ಕಷ್ಟ ಅವರವರಿಗೆ ಮಾತ್ರ ಗೊತ್ತಿರುತ್ತದೆ. ಇತರರಿಗೆ ಅದು ಅಷ್ಟು ಚೆನ್ನಾಗಿ ಅರ್ಥ ಆಗದು. ನನಗೆ ನನ್ನ ಕಷ್ಟವೇ ದೊಡ್ಡದು, ನಿಮಗೆ ನಿಮ್ಮ ಕಷ್ಟವೇ ದೊಡ್ಡದು. ಪ್ರಪಂಚವೇ ಹಾಗೆ ಅಲ್ಲವೇ?
ಎರೆಯವರು ನಿಮ್ಮ ಬಗ್ಗೆ ಏನಾದರೂ ಹೇಳಿದರೆ, ನಾನು ನನ್ನ ಅಭಿಪ್ರಾಯ ಹೇಳಿದ ಕೂಡಲೇ ಅದನ್ನು ನಿಮಗೆ ತಿರುಗಿ ಹೇಳಿಬಿಟ್ಟರೆ ನನಗೆ ನೋವಾಗದೆ? ಇದು ಕೆಲವರ ಗುಣ. ಅದು ಒಳ್ಳೆಯದೋ ಕೆಟ್ಟದೋ ಎಂದು ನಾನು ನಿರ್ಧರಿಸಲು ಸಾಧ್ಯವಿಲ್ಲ. ಆದರೆ ಅವರ ಮನಸ್ಸಿನಲ್ಲಿ ಯಾವುದೇ ಮಾತುಗಳು ಮತ್ತು ಯೋಚನೆಗಳು ನಿಲ್ಲುವುದಿಲ್ಲ ಎನ್ನುವುದು ಸತ್ಯವಾದ ಮಾತು. ಅವರು ಓಪನ್ ಮೈಂಡೆಡ್ ಆಗಿದ್ದು, ತನ್ನ ಸ್ನೇಹಿತರ ಜೊತೆ ತನಗೆ ಗೊತ್ತಿರುವುದನ್ನು ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ಆದರೆ ಅವರಲ್ಲಿ ಒಂದು ಗುಣ ಖಂಡಿತಾ ಇದೆ , ಅವರಿಗೆ ಬದುಕಿನ ಯಾವುದೇ ರಹಸ್ಯವನ್ನು ಕಾಯ್ದಿಡಲು ಸಾಧ್ಯವಾಗದು. ತಕ್ಷಣ ತನ್ನ ಅನಿಸಿಕೆಯನ್ನು ಯಾರಲ್ಲಿ ಆದರೂ ಹೇಳಿ ಬಿಡಬೇಕು.
ನಾನು ಅವರ ಓಪನ್ ಅಭಿಪ್ರಾಯಗಳು ಕೆಟ್ಟವು ಎಂದು ಹೇಳುವುದಿಲ್ಲ. ಆದರೆ ಅದು ಹಲವಾರು ಬಾರಿ ಯಾರನ್ನಾದರೂ ನೋಯಿಸಬಹುದು. ನಮ್ಮ ಸ್ವಭಾವ ನೇರವಾಗಿರಲಿ ಅಥವಾ ಪರೋಕ್ಷವಾಗಿರಲಿ, ಅದು ಇತರರನ್ನು ನೋಯಿಸಬಾರದು. ನಮ್ಮ ಸ್ನೇಹಿತರ ಸ್ವಭಾವವನ್ನು ನಿಧಾನವಾಗಿ ಅವರಿಗೆ ತಿಳಿಸಬೇಕು, ಒಮ್ಮೆಲೆ ಅಚಾನಕ್ ಹೇಳಬಾರದು. ಕೌನ್ಸೆಲರ್ ಆಗಿ ಮತ್ತು ಸೈಕಾಲಜಿ ವಿದ್ಯಾರ್ಥಿನಿಯಾಗಿ, ಇದು ನನ್ನ ಅಭಿಪ್ರಾಯ.
ಯಾರೋ ನಿಮ್ಮ ಬಗ್ಗೆ ಬೇರೆಯವರಲ್ಲಿ ಕೇಳಿ, ಕೆಲವು ವಿಷಯಗಳನ್ನು ಅವರಿಂದ ತಿಳಿದುಕೊಂಡು, ಅದನ್ನು ತಕ್ಷಣವೇ ನಿಮಗೆ ಹೇಳಿಬಿಡಬಾರದು. ಆ ಸಮಯದಲ್ಲಿ ನೀವು ಯಾವ ಮನಸ್ಥಿತಿಯಲ್ಲಿ ಇರುತ್ತೀರೋ ಗೊತ್ತಿಲ್ಲ. ನೀವು ಅದನ್ನು ಹೇಗೆ ಸ್ವೀಕರಿಸುತ್ತೀರೋ ಗೊತ್ತಿಲ್ಲ.
ನನ್ನ ಅನುಭವದ ಪ್ರಕಾರ, ಏಕೆಂದರೆ ನನಗೆ ಬಹಳಷ್ಟು ಸ್ನೇಹಿತರು ಇದ್ದಾರೆ, ನಮ್ಮ ಹತ್ತಿರದ ಸ್ನೇಹಿತರ ಸ್ವಭಾವವನ್ನು ಸರಿಪಡಿಸಲು ನಾವು ಮೊದಲು ಅವರ ಮನಸ್ಥಿತಿ ಮತ್ತು ಮನೋಭಾವವನ್ನು ಅರ್ಥಮಾಡಿಕೊಳ್ಳಬೇಕು. ನಂತರ ನಿಧಾನವಾಗಿ ಅವರನ್ನು ಮನವರಿಕೆ ಮಾಡಬೇಕು. ಏಕಾಏಕಿ ಹೇಳುವುದು ಒಳ್ಳೆಯದಲ್ಲ. ಅವರು ನನ್ನ ಒಳ್ಳೆಯ ಸ್ನೇಹಿತರಲ್ಲಿ ಒಬ್ಬರು. ಆದರೆ ಇದೇ ಕಾರಣಕ್ಕೆ ಕೆಲವರು “ಮಹಿಳೆಯರಿಗೆ ಯೋಚನೆ ಇರುವುದಿಲ್ಲ” ಎಂದು ಹೇಳುತ್ತಾರೆ. ಕೆಲವರು ವ್ಯಕ್ತಿಯ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ತಕ್ಷಣ ಮಾತನಾಡುತ್ತಾರೆ.
ನಾನು ಕೆಲವರಿಗೆ ಇದನ್ನು ಆಗಾಗ ಹೇಳುತ್ತೇನೆ. ಅವರು ತಕ್ಷಣ ಪ್ರತಿಕ್ರಿಯಿಸದೆ ಮೊದಲು ಯೋಚಿಸಿ, ನಂತರ ನಿಧಾನವಾಗಿ ಮನವರಿಕೆ ಮಾಡಬೇಕು. ಏಕೆಂದರೆ ನಾವು ಎಲ್ಲರೂ ಪರಿಪಕ್ವರು ಮತ್ತು ಸಮಾಜದಲ್ಲಿ ಹೇಗೆ ವರ್ತಿಸಬೇಕು, ಯಾರೊಂದಿಗೆ ಹೇಗೆ ಎಷ್ಟು ಮಾತನಾಡಬೇಕು ಎಂಬುದನ್ನು ತಿಳಿದಿದ್ದೇವೆ. ನಾವು ನಮ್ಮ ಮನಸ್ಸು ಸೂಚಿಸುವಂತೆ ವರ್ತಿಸುತ್ತೇವೆ. ಮನಸ್ಸು ಕಂಪ್ಯೂಟರ್‌ನಂತಿದೆ. ಅದರೊಳಗೆ ಇರುವುದನ್ನೇ ಅದು ಹೊರಹಾಕುತ್ತದೆ. AI ಕೂಡ ಗೂಗಲ್‌ನಿಂದ ಮಾಹಿತಿ ಪಡೆದುಕೊಳ್ಳುವ ಹಾಗೆ. ಅದೇ ರೀತಿಯಾಗಿ ನಾವು ನಮ್ಮ ಮನಸ್ಸಿನಲ್ಲಿ ಸಕಾರಾತ್ಮಕತೆ, ಗೌರವ, ಪ್ರೀತಿ, ಕಾಳಜಿ, ಸ್ನೇಹ ಇತ್ಯಾದಿಗಳನ್ನು ತುಂಬಿಕೊಳ್ಳಬೇಕು. ಅದು ಅವರ ಸ್ನೇಹದ ಸ್ವಭಾವವಾಗಿರಬಹುದು. ಆದರೆ ಕೆಲವೆಡೆ ಅದು ಇತರರಿಗೆ ನೋವುಂಟು ಮಾಡುತ್ತದೆ. ಹಾಗೆ ನಾವು ಮಾಡಬಾರದು.
ಇದು ಹಲವು ಬಾರಿ ನಡೆದಾಗ ನಾವು ಬುಧ್ಧಿ ಕಲಿಯದೆ ಹೋದರೆ ನಾವು ಮೂರ್ಖರು. ಯಾರೋ ನಿಮ್ಮ ಗೆಳೆಯರು ನಿಮ್ಮ ಬಗ್ಗೆ ಕೇಳಿ, ನಂತರ ನನ್ನ ಮಾತುಗಳನ್ನು ನಿಮಗೆ ಹಾಗೆಯೇ ಹೇಳಿಬಿಟ್ಟರು ಅಂದುಕೊಳ್ಳಿ. ಅವರು ನನ್ನ ಒಳ್ಳೆಯ ಸ್ನೇಹಿತೆ ಅಥವಾ ಗೆಳೆಯ ಆದ್ದರಿಂದ, ನಾನು ಅವರ ಮೇಲೆ ನಂಬಿಕೆ ಇಟ್ಟು ನನ್ನ ಅಭಿಪ್ರಾಯವನ್ನು ನೇರವಾಗಿ ಹಂಚಿಕೊಂಡಿರಬಹುದು. ಅದು ಯಾರಿಗೂ ನೋವು ಕೊಡುವ ಉದ್ದೇಶದಿಂದ ಅಲ್ಲ. ಬದಲಾಗಿ ಒಬ್ಬ ವ್ಯಕ್ತಿಯ ಬಗ್ಗೆ ನಮ್ಮ ಅಭಿಪ್ರಾಯವಷ್ಟೇ. ಆದರೆ ಅವರು ಅದನ್ನು ಮತ್ತೆ ಅವರಿಗೆ ನೇರವಾಗಿ ಹೇಳಿ ಬಿಡುವುದು ಎಷ್ಟು ಸರಿ?. ಅದು ಇಬ್ಬರಿಗೂ ನೋವು ತರಬಹುದು. ಮುಂದೆ ಒಂದು ದಿನ ನೀವು ಮತ್ತೊಬ್ಬರ ಬಗ್ಗೆ ಅವರಲ್ಲಿ ಮಾತನಾಡಿದರೆ, ಅವರು ಅದನ್ನೂ ಇನ್ನೊಬ್ಬರಿಗೆ ನೇರವಾಗಿ ಹೇಳಿ ಅವರಿಗೂ ನೋವು ತರುವಂತೆ ಮಾಡಿ ಬಿಡಬಹುದು. ಇಂಥವರ ಜೊತೆ ಏನಾದರೂ ಮಾತನಾಡುವಾಗ ನಾವು ತುಂಬಾ ಕೇರ್ಫುಲ್ ಆಗಿರಬೇಕು. ಏಕೆಂದರೆ ನಾವು ಧನಾತ್ಮಕವಾಗಿ ಮಾತನಾಡಿದರೂ ಕೂಡ ಎದುರಿಗೆ ಅದನ್ನು ಸ್ವೀಕರಿಸುವ ವ್ಯಕ್ತಿಯ ಮನೋಭಾವ ಎಂಥದ್ದು ಎಂದು ನಮಗೆ ತಿಳಿದಿರುವುದಿಲ್ಲ. ಹಾಗಾಗಿಯೇ ಬಹಳ ಒಬ್ಬೊಬ್ಬರ ಕಡೆ ತಪ್ಪು ಅಭಿಪ್ರಾಯ ಹುಟ್ಟಿಕೊಳ್ಳುತ್ತದೆ. ಹಾಗೆ ಆಗಲು ನಾವು ಬಿಡಬಾರದು. ಅಲ್ಲವೇ?
ನನ್ನ ಅಭಿಪ್ರಾಯದಲ್ಲಿ ಇದು ನ್ಯಾಯವಾದ ಸ್ವಭಾವವಲ್ಲ. ಯಾರಾದರೂ ತಮ್ಮ ಅಭಿಪ್ರಾಯವನ್ನು ನನ್ನೊಂದಿಗೆ ಹಂಚಿಕೊಂಡರೆ, ನಾನು ಅದನ್ನು ಇನ್ನೊಬ್ಬರೊಂದಿಗೆ ಎಂದಿಗೂ ಮತ್ತೆ ಹಂಚಿಕೊಳ್ಳುವುದಿಲ್ಲ. ಅದು ಅವರವರ ವೈಯಕ್ತಿಕ ಅಭಿಪ್ರಾಯ. ಅದನ್ನು ಯಾರಿಗೂ ಪ್ರಕಟಿಸುವುದಕ್ಕೆ ಅಲ್ಲ. ಅವರು ತಮ್ಮ ಹತ್ತಿರದವರಿಗೆ ನಂಬಿಕೆ ಇಟ್ಟು ಹಂಚಿಕೊಳ್ಳುತ್ತಾರೆ. ನಾನು ಮಾಡುತ್ತಿರುವುದು ಸರಿಯೇ, ತಪ್ಪೇ ಎಂದು ನನ್ನನ್ನು ನಾನು ಮೊದಲು ಕೇಳಿಕೊಳ್ಳಬೇಕು.
ನಿಮ್ಮ ಬಗ್ಗೆ ಅವರು ನನ್ನ ಜೊತೆ ಮಾತನಾಡಿದಾಗ, ಅವರ ಮೇಲೆ ನಂಬಿಕೆ ಇಟ್ಟು ನನ್ನ ಪ್ರಾಮಾಣಿಕ ಅಭಿಪ್ರಾಯವನ್ನು ಹಂಚಿಕೊಳ್ಳುತ್ತೇನೆ. ಏಕೆಂದರೆ ಅವರು ನನ್ನ ಆತ್ಮೀಯರು. . ಅದು ಯಾರಿಗೂ ನೋವು ಕೊಡಲು ಹೇಳಿದ ಮಾತಲ್ಲ. ಅದು ನನ್ನ ಅಭಿಪ್ರಾಯ ಮಾತ್ರ. ನೀವು ಎಲ್ಲರನ್ನೂ ಹೇಗೆ ನೋಡುತ್ತೀರೋ ಹಾಗೆ ನಾನು ನಿಮ್ಮನ್ನು ನೋಡುವುದಿಲ್ಲ. ನಾನು ನಿಮ್ಮ ಹತ್ತಿರದ ಸ್ನೇಹಿತೆಯಲ್ಲ. ನಾನು ನಿಮ್ಮ ಒಳ್ಳೆಯ ಹಿತೈಷಿ ಮಾತ್ರ. ಹಾಗಾಗಿ ನನಗೆ ಅನ್ನಿಸಿದ್ದನ್ನು ನಾನು ಹೇಳಿ ಬಿಡುತ್ತೇನೆ ಅಷ್ಟೇ..
ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ನೀವು ನನಗೆ ಅನೇಕ ವಿಷಯಗಳನ್ನು ಕಲಿಸಿದ್ದೀರಿ. ಆದ್ದರಿಂದ ನಾನು ನಿಮಗೆ ಚಿರಋಣಿ ಮತ್ತು ನಿಮ್ಮನ್ನು ಗುರುಗಳಂತೆ ಗೌರವಿಸುತ್ತೇನೆ. ಆ ಗೌರವ ಸದಾ ನನ್ನ ಹೃದಯದಲ್ಲಿ ಇರುತ್ತದೆ ಮತ್ತು ಮುಂದೆಯೂ ಹಾಗೆಯೇ ಇರುತ್ತದೆ.ಇವೆಲ್ಲ ನಿಜವಾದ ಮಾತುಗಳೇ.
ತುಂಬಾ ಓದಲು ನಿಮ್ಮ ಸಮಯವನ್ನು ತೆಗೆದುಕೊಂಡಿದ್ದಕ್ಕೆ ಕ್ಷಮಿಸಿ ಬಿಡಿ. ಇದು ಗುಣಗಳ ವಿಷಯ. ಕೊನೆಯಲ್ಲಿ ನಾನು ಹೇಳಬೇಕೆಂದರೆ, ನಾನು ಯಾರ ಬಗ್ಗೆ ಕೂಡ ಕೆಟ್ಟದಾಗಿ ಮಾತನಾಡಿಲ್ಲ ಮತ್ತು ಮಾತನಾಡುವುದಿಲ್ಲ. ನಾನು ನನ್ನ ಅಭಿಪ್ರಾಯವನ್ನು ಮಾತ್ರ ಹೇಳಿದ್ದೇನೆ. ನನ್ನ ಮಾತುಗಳಿಂದ ಯಾರಿಗಾದರೂ ನೋವಾದರೆ ತುಂಬಾ ಕ್ಷಮೆಯಾಚಿಸುತ್ತೇನೆ. ನಾನು ಸದಾ ನಿಮ್ಮನ್ನು , ನಿಮ್ಮ ವ್ಯಕ್ತಿತ್ವವನ್ನು ಗೌರವಿಸುತ್ತೇನೆ. ನನ್ನಿಂದ ತಪ್ಪಿದ್ದರೆ, ನೋವಾದರೆ, ಬೇಸರವಾದರೆ ಕ್ಷಮಿಸಿ ಬಿಡಿ … ಅಷ್ಟೇ.ನೀವೇನಂತೀರಿ?
@ಹನಿಬಿಂದು@
08.02.2026
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ