ಸ್ವಾಭಿಮಾನವಲ್ಲ, ಅಹಂಕಾರ ಎಂದಿಗೂ
ಇದು ಇಂದಿನ ಬಾಳಿನ ಗುರಿಯು ಎಂದಿಗೂ
ತನ್ನ ಬದುಕು ತನಗೆ ಮಾತ್ರ ಬೇರೆ ಯಾರಿಗಿಲ್ಲ
ತಾಯಿ ತಂದೆ ಬಂಧು ಬಳಗ ಗೊತ್ತೇ ಇಲ್ಲಿ ಇಲ್ಲ//
ತಂದೆ ತಾಯಿ ಸತ್ತರೇನು ಕೆಲಸ ನಮಗೆ ಬೇಕು
ಓದು ಬರಹ ಕಲಿಸಿದವರು ಈಗ ಯಾಕೆ ಬೇಕು
ಗಂಡು ಹೆಣ್ಣು ಸಿಕ್ಕಿದಾಗ ನಮಗೆ ನಾವೇ ಹಿರಿಯರು
ಹೊಸದಾದ ಬದುಕು ಮಾಡೇ ಓಡಿ ಹೋಗಿ ಬಿಡುವರು//
ತಾನು ತನ್ನ ಜನರು ಎನುವ ಭಾವವಿಲ್ಲಿ ಮರೆವರು
ಹಣವೇ ಮುಖ್ಯ ಗುಣವು ಅಲ್ಲ ಎನುವುದನ್ನು ಮೆರೆವರು
ತಂದೆ ತಾಯಿಯ ಬದುಕು ಕೊನೆಗೆ ಯಾರು ಇಲ್ಲದಂತಿದೆ
ಹಿರಿಯ ಜೀವನ ನನಗೆ ನೀನು ನಿನಗೆ ನಾನು ಬದುಕಿದೆ//
ಕೆಲಸದಲ್ಲಿ ಬದುಕಿನಲ್ಲಿ ಮಕ್ಕಳೆಲ್ಲ ಮರೆತರು
ಯಾರೋ ಕೆಲಸದವರ ತಂದು ಮನೆಯಲಲ್ಲಿ ಇಟ್ಟರು
ಏನು ಏನು ಬೇಡ ಎನ್ನುವುದನ್ನು ತಿಳಿಯರು
ಬೇರು ಮರೆತು ಹಣದ ಮೇಲೆ ಬದುಕು ಕಟ್ಟಿ ನಿಂತರು//
ಪ್ರೇಮ ಕರುಣೆ ದಯೆ ದಾಕ್ಷಿಣ್ಯ ಎಲ್ಲ ಅವರು ಮರೆತರು
ಕೊಡು ಕೊಳ್ಳುವ ಸಹಾಯ ಹಸ್ತ ದೂರ ಎಸೆದು ಬಿಟ್ಟರು
ಹಣವ ಮಾಡಿ ಬಾರು ಪಬ್ಬು ಎನ್ನುವುದನ್ನು ಕಲಿತರು
ಬೋರು ಅನಿಸಿದಾಗಲೆಲ್ಲ ಕುಡಿವ ಚಟವ ಹಿಡಿದರು//
ಕುಡಿತ ಕುಣಿತ ದೇಹದಲ್ಲಿ ನೋವ ತಂದುಕೊಟ್ಟಿತು
ಸಣ್ಣ ವಯಸ್ಸಿನಲ್ಲೇ ದೇಹ ಕೊಯಿಸಿ ಬೆಂದು ಹೋದರು
ವಿಷದ ಆಹಾರವನ್ನು ದುಡ್ಡು ಕೊಟ್ಟು ತಿಂದು ಬಿಟ್ಟರು
ಬೇರೆ ಏನೂ ಸಿಗದು ಅಲ್ಲಿ ನೀರಿರದ ಊರು ಎಂದರು//
ಮೂಲ ಬೇರು ತಾಯಿ ಊರು ಮರೆತು ದೂರ ಸಾಗಿದೆ
ಸಂಸ್ಕಾರ ಸಂಸ್ಕೃತಿ ಎಂಬ ಪದವೆಲ್ಲ ಮರೆತು ಹೋಗಿದೆ
ತಾನು ತನ್ನದೆನುತ ಸರ್ವ ಭಾವವೆಲ್ಲ ಬಿಸುಟು ಆಗಿದೆ
ಇನ್ನು ಇತ್ತ ನೋಡಿ ಬದುಕೋ ಆಸೆ ದೂರವಾಗಿದೆ//
ಒಂಟಿತನವು ಕಾಡಿ ಹಿರಿಯ ಜೀವಗಳ ಬೆಲೆ ತಿಳಿದಿದೆ
ಆದರೇನು ಕಾಲವೀಗ ಕಳೆದು ಹೋಗಿ ಬಹಳ ಹೊತ್ತಾಗಿದೆ
ಹಳೆಯ ಬದುಕು ಪ್ರೀತಿ ಗಮನ ಎಲ್ಲಾ ಕಳೆದು ಹೋಗಿದೆ
ಬಂದೆಯಾ ಬಾ ಏನು ಕೊಡಲಿ ಎನುವ ಹೃದಯ ಇಲ್ಲವಾಗಿದೆ//
@ಹನಿಬಿಂದು@
08.08.2026
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ