ಸೋಮವಾರ, ಜುಲೈ 30, 2018

400. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-6

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-6

ನಮ್ಮ ಮನೇಲಿ ಕರೆಂಟ್ ಇಲ್ಲದಿದ್ದರೆ ನಾವು ಕೆಇಬಿಗೆ ಫೋನ್ ಮಾಡುವುದಿಲ್ಲ, ಬದಲಾಗಿ ಪಕ್ಕದ ಮನೆಯವರ ಫ್ಯೂಸ್ನಲ್ಲಿ ಇಣುಕಿ ನೋಡಿ ಅವರಿಗೂ ಕತ್ತಲೆಯಿದ್ದರೆ ಸಮಾಧಾನ ನಮಗೆ..

  ಮೇಲ್ನೋಟಕ್ಕೆ ಇದು ಜೋಕ್ಸ್ ಅನಿಸಿದರೂ ಇದು ಸೀರಿಯಸ್ ವಿಷಯ. ಒಂದು ನಾವು ನಮ್ಮ ಜೀವನಕ್ಕಿಂತ ಹೆಚ್ಚಾಗಿ ಬೇರೆಯವರ ಜೀವನ ವಿಧಾನ, ಶೈಲಿಯ ಮೇಲೆ ನಮ್ಮ ಆಸಕ್ತಿ ಜಾಸ್ತಿ! ನಮ್ಮ ಮನೆಯ ಕಾವಲಿಯೇ ತೂತಾಗಿದ್ದರೂ ಇತರರ ಮನೆಯ ತೂತಾದ ದೋಸೆಯನ್ನು ಎತ್ತಿ ತೋರಿಸಿ ಆಡಿಕೊಳ್ಳುವವರು ನಾವು.. ನಮ್ಮ ಈ ಗುಣವೇ ಟಿವಿಯ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ಗೆ ಬಂಡವಾಳ! ಪ್ರತಿಯೊಬ್ಬರಿಗೂ ಇತರರ ಬಗ್ಗೆ ಆಸಕ್ತಿ!!

  ನಮ್ಮ ಜೀವನದಲ್ಲೆ ಸಾಧಿಸಬೇಕಾದ ಹಲವಾರು ಕೆಲಸಗಳಿವೆ. ಸಾಧಿಸಲಾಗದು. ಜೀವನ ಒತ್ತಡದ ಗೂಡಾಗಿದೆ.ನಡೆಸಲಾಗದು.. ನಾವೂ ಒತ್ತಡಗಳಿಂದ ಒದ್ದಾಡುತ್ತಿರುವುದಲ್ಲದೆ, ನಮ್ಮ ಮಕ್ಕಳ ಪುಟ್ಟ ಹೃದಯ, ಮನಸ್ಸಿಗೂ ಅದನ್ನೆ ಬಿತ್ತುತ್ತೇವೆ. ಜೀವವನ್ನೇ ಪಣವೊಡ್ಡಿ ಬದುಕಲು ಕಲಿಸುತ್ತೇವೆ!
  ಅಷ್ಟೇಕೆ ..ನಮ್ಮ ಒತ್ತಡ, ಕೋಪೋದ್ರೇಕಕ್ಕೆ ಒಳಗಾಗುವವರು ಪೆಟ್ಟು ತಿನ್ನುವವರು ಹೆಂಡತಿ,ಮಕ್ಕಳು, ನಾವು ಸಾಕಿದ ಪ್ರೀತಿಯ ಪ್ರಾಣಿಗಳು! ಮೊಬೈಲ್ ನಮ್ಮ ದೇವರು.. ಅಲ್ಲಿರುವ ಸಂದೇಶಗಳು ನಮ್ಮ ಮಂತ್ರ! ಮೇಲಿನ ದೇವರು ನಮ್ಮನ್ನು ಕರೆಯುವವರೆಗೆ ನಾವು ಈ ದೇವರ ಧ್ಯಾನದಲ್ಲೆ ಇರುತ್ತೇವೆ!

  ಬರ್ತ್ಡೇ ಆಚರಣೆಗೆ,ವಿದೇಶ ಪ್ರವಾಸಕ್ಕೆ,ಸತ್ತರೂ ವಿಶ್ ಸಾಮಾಜಿಕ ಜಾಲ ತಾಣಗಳಲ್ಲೇ... ನಮ್ಮ ಜೀವನದ ಬಗ್ಗೆ ಯೋಚನೆ ಮಾಡುತ್ತಾ, ನಮ್ಮನ್ನು ನಾವು ಮುಂದೆ ಸಾಗಿಸುತ್ತಾ ಆನಂದದಿಂದ ಬದುಕೋಣ! ಪರರ ಚಿಂತೆ ನಮಗೇಕೆ ಅಲ್ಲವೇ? ಸಾಧ್ಯವಾದರೆ ಒಂದಿಷ್ಟು ಸಹಾಯ ಮಾಡೋಣ, ಇಲ್ಲದಿದ್ದರೆ ಸುಮ್ಮನಿದ್ದುಬಿಡೋಣ. ನೀವೇನಂತೀರಿ?
@ಪ್ರೇಮ್@

399. Hanuman's words

U too have the power

All the monkeys gathered together

They said, 'you alone have the power'

Rama came and told,
'you alone have the power'

Lakshman ran shouting at me,
'you alone have the power'

Angada highlighted at me,
'you alone have the power'

All my friends shouted at me,
'you alone have the power'

I just tried once in my life
To cross the sea to reach Lanka..

Reached Seeta, brought
her symbol to Sri Ram

One should enforce us
to Reach high and high

Friends are real boosters of our life
So that we can fly high into the sky....
@prem@

398. ಶಾಯರಿ

ಶಾಯರಿ

ಚಿಂತೆಯ ಮರೆಸಿ
ಜೀವನ ಬೆಳೆಸಿತು,

ದು:ಖವ ಮರೆಸಿ
ಕನಸು ನನಸಾಗಿಸಿತು,

ಗೋರಿಯ ಮರೆಸಿ
ನೆನಪು ಮರುಕಳಿಸಿತು,

ಚಿತೆಯ ಮರೆಸಿ
ಜೀವನ ಬೆಳೆಸಿತು,

ಕತ್ತಲ ಓಡಿಸಿ
ಬೆಳಕನು ತರಿಸಿತು
ನಿನ್ನ ಶುದ್ಧ ಪ್ರೀತಿ!!!

397. ಗಝಲ್-29

ಗಝಲ್

ನೋವಿನ ಬಾಳಿಗೆ ಮುಲಾಮಿನಂತೆ ನಿನ್ನ ಪ್ರೀತಿ
ನಾಳಿನ ಬಾಳಿಗೆ ಬೆಳಕಿನಂತೆ ನಿನ್ನ ಪ್ರೀತಿ..

ಅರಳುವ ಮೊಗ್ಗಿನ ಮೇಲೆ ಬಿದ್ದ ಹನಿಯಂತೆ,
ಇರುಳು ಕತ್ತಲಾದ ಇಳೆಗೆ ಬಿದ್ದ ಬೆಳದಿಂಗಳಂತೆ ನಿನ್ನ ಪ್ರೀತಿ.

ಹಣೆ ಮಧ್ಯ ಚಂದಿರನಂತಿರುವ ತಿಲಕದಂತೆ
ಕಗ್ಗತ್ತಲೆಯ ನಾಡಿಗೆ ರವಿ ಕಿರಣವು ಬಿದ್ದು ಹೊಳೆವಂತೆ ನಿನ್ನ ಪ್ರೀತಿ.

ಮದನನ  ಬಾಣವು ತಾಗಿ ತನ್ನ ಮರೆತವರಂತೆ,
ಮನದೆಳು ನೋವಿದ್ದರೂ ಮರೆಸುವ ತುಟಿಯ ಕಿರುನಗೆಯಂತೆ ನಿನ್ನ ಪ್ರೀತಿ..

ಜಡೆಯ ಬುಡಕೆ ಇಷ್ಟಪಟ್ಟು ಮುಡಿದ ಮಲ್ಲಿಗೆಯಂತೆ,
ಕಡೆಯ ಸಾಲಲಿ ಇಷ್ಟ ಪಟ್ಟು ಉಣ್ಣುವ ವ್ಯಕ್ತಿಯಂತೆ ನಿನ್ನ ಪ್ರೀತಿ..

ಪ್ರೇಮನ ಪ್ರೇಮಭರಿತ ನಿಶ್ಕಲ್ಮಶ ಹೃದಯದಂತೆ
ಮಣ್ಣೊಳಗೆ ಇಳಿದ ಮೊದಲ ಮಳೆ ನೀರಿನಂತೆ ನಿನ್ನ ಪ್ರೀತಿ..
@ಪ್ರೇಮ್@

ಶುಕ್ರವಾರ, ಜುಲೈ 27, 2018

396.ಚಂದಿರ

2. ನನ್ನ ನೋಡಿ

ನಾನು ನಿಮ್ಮ ಚಂದಿರ
ಇರುವೆನೆಂದು ಸುಂದರ
ಆದರಿಂದು ಗ್ರಹಣ ವರ
ಕಾಣಲಾರೆ ನೀನು ಧರಾ!

ನನಗೆ ಅಡ್ಡ ಬಂದೆ ಇಳೆ!
ನಾನು ಕಾಣದಂತೆ ತಡೆದೆಯಲ್ಲೆ!
ರವಿಯ ಕಿರಣ ಬೇಕು ನಲ್ಲೆ..
ನೀನೆ ಕತ್ತಲೆಯ ಸಹಿಸುವೆಯಲ್ಲೆ...

ಹುಣ್ಣಿಮೆಯ ಚಂದ್ರ ನಾನು
ಅಡ್ಡ ಬಂದು ತಡೆದೆ ನೀನು
ಸುತ್ತುವೆನು ನಿನ್ನ ನಿತ್ಯ ನಾನು
ರವಿಯ ಕಿರಣ ತಡೆವೆಯೇನು?

ರವಿ-ಶಶಿಯು ನಿನಗೆ ಬೇಕು
ನಿತ್ಯ ಬೆಳಕು ನೀಡ ಬೇಕು
ನಿನ್ನ ನಾನು ಸುತ್ತ ಬೇಕು
ಹಗಲಿರುಳು ನಡೆಯಬೇಕು...
@ಪ್ರೇಮ್@

395.ಗ್ರಹಣ

11. ಶಶಿಯಳಲು

ಎಲೆ ಇಳೆಯೇ ಹೀಗೆ ಮಾಡಬಹುದೇ ನೀನು?
ನಮ್ಮೀರ್ವರ ನಡುವೆ ನೀನೇಕೆ ಬರುವೆ?
ತಡೆದು ರವಿಯ ಹೊನ್ನ ಕಿರಣವನು!
ಹಗಲಿರುಳು ನಿನ್ನ ಸುತ್ತುವೆ ನಾನು..

ಬೆಳಕನೆಲ್ಲ ನೀ ತಡೆಯುವುದು ತರವೇ?
ನಮ್ಮ ಮಧ್ಯೆ ಬಂದು ನಿಲ್ಲುವುದು ಸರಿಯೇ?
ನನ್ನ ಬೆಳದಿಂಗಳ ನೀನು ಮುಚ್ಚುವುದೇ?
ನನ್ನನಂಧಕಾರದ ಕೂಪಕೆ ನೀ ತಳ್ಳುವುದೇ...

ರವಿ-ಶಶಿಯರು ಬೆಂಗಾವಲು ನಿನಗೆ!
ಹಗಲಿರುಳು ಬೆಳಗುವೆವು ನಿನ್ನ ನಗೆ!
ನೀ ಹೀಗೆ  ಬರಲು ಬೆಳಕ್ಹೇಗೆ ಪ್ರತಿಫಲಿಸಲಿ?
ನನ್ನ ನಂಬಿದವಗೆ ನಾ ಮುಖ ಹೇಗೆ ತೋರಿಸಲಿ?

ಚಂದಿರಗೆ ಕಷ್ಟವೆಂದು ನಿನ್ನ ಜನ ತಿಳಿದಿಹರು!
ಉಪವಾಸ, ಪೂಜೆ- ಜಪತಪಗೈಯ್ಯುವರು!
ನನ್ನೊಲವು ನಿನಗೆಂದು, ಬಾರದಿರು ನಡುವೆ!
ನಾನೆಂದು ನಿನ್ನ ಸುತ್ತ ತಿಳಿದುಕೋ ಒಲವೆ...!

ಗುರುವಾರ, ಜುಲೈ 26, 2018

394. ಬರಹ

ಬರಹ

ಬರಹವೆಂದರೇನು ಪ್ರಿಯೆ
ಬರೆಯುವೆಯೇ ಉತ್ತರ..
ನಿನ್ನ ಪ್ರೀತಿಯಿಹುದು ನಿನಗೆ
ಹೇಳಲಾರೆ ಉತ್ತರ..

ಮನದ ಮೂಲೆಯಲ್ಲಿ ಎಲ್ಲೋ
ಭಾವನೆಗಳ ಮಹಾಪೂರ
ಬರಹ ರೂಪವಾಗಿ ಬಂದು
ಹರಿದಾಗಿದೆ ಸಾಗರ...

ಹಾರ ತುರಾಯಿ ಶಾಲು ಕೊಟ್ಟು
ಗೌರವಿಸಿದರು ಈ ಜನ
ಹಸಿವೆ ನೀಗಿ ಊಟ ಕೊಟ್ಟು
ತಣಿಸಲಿಲ್ಲ ಉದರವನು..

ಬರಹಗಾರನಾದರೇನು
ದುಡಿದು ಗಳಿಸೆ ಗೆಲುವನು
ತನ್ನ ಕಾಲ ಮೇಲೆ ತಾನು
ನಿಲ್ಲೆ ಅವನು ಬರೆವನು...

@ಪ್ರೇಮ್@

395. E

Good morning EV
Erase your worries
End poring tears
Evolve new ideas
Educate your mind
Extract good qualities
Energise your hear
Encourage your hobbies
Everyone live good
Everywhere love all
Engage yourselves
Eager to learn new things
Everything we can't have
Every day be new
Every human are special
Enter into new field
Enjoy every moment
Even death is following
Either you or others
Everyone is equal here
Especially fresh you look
Especially leave bad habits
Ever live more happily
Eat less think, work more
Each one needs sleep
Except you others can't achieve
Early beginning is half done
Exactly it's your own life
Email your worries to god
Enjoy every moment...
@prem@

ಬುಧವಾರ, ಜುಲೈ 25, 2018

393. 6ಹನಿಗವನಗಳು

[7/22, 10:35 PM] Prem: ಶಾಯರಿ-1

ಬದುಕೆಂದರೆ ಸುಖ
ಎಂದರಿತಿದ್ದ ಸಖ
ನೋಡಲಿಲ್ಲ ಹೆಂಡತಿ ಮುಖ
ಬಾರಿಸಿದಳು ನಖ-ಶಿಖ!
ಕುಣಿದು ಕುಪ್ಪಳಿಸಿದಳು ತಕತಕ
ಕೊಟ್ಟು ಬದುಕಿಗೆ ದು:ಖ!!!
@ಪ್ರೇಮ್@
[7/22, 10:38 PM] Prem: ಶಾಯರಿ-2

ನನ್ನ ಅತ್ತೆಯ ತೂಕವು
ನಾನು, ನನ್ನ ಹೆಂಡತಿ,
ನಮ್ಮೆರಡು ಮಕ್ಕಳು
ಮತ್ತು ಮಾವನವರ
ತೂಕಗಳ ಮೊತ್ತಕ್ಕೆ ಸಮ....
[7/22, 10:40 PM] Prem: ೩. ಶಾಯರಿ
ನನಗಿರುವುದೊಂದೇ ಚಾಳಿ
ಅದು ನಿಲ್ಲದ ಚಳಿ
ನಲ್ಲೆ ನೀ ತಾರೆ ಕಂಬಳಿ
ನೀ ಸಾರೆ ನನ್ನ ಬಳಿ...
ಮಂಗ ಮಾಯ ಚಳಿ!!!
@ಪ್ರೇಮ್@
[7/22, 10:43 PM] Prem: ಮನದ ಮಾತಿಗೆ
ಮೌನ ಸಾಕ್ಷಿ
ನಮ್ಮ ಮಾತಿಗೆ
ಮೊಬೈಲೆ ಸಾಕ್ಷಿ...
ಕದ್ದು ನೋಡುವಾಗ
ಸಿದ್ಧು ಸಾಕ್ಷಿ..
@ಪ್ರೇಮ್@
[7/22, 10:45 PM] Prem: ನಂಬಿ ಕೆಟ್ಟವರಿಲ್ಲ
ತರಲು ದುಡ್ಡು ಕೊಟ್ಟರೆ
ತರದೆ ಬಿಟ್ಟವರಿಲ್ಲ!
ಬಾರ್ ನ ಬಳಿ ಇರುವ ಗೆಳೆತನ
ಇನ್ನೆಲ್ಲಿ ಸಿಗಲು ಸಾಧ್ಯ ಗೆಳೆಯ?
[7/22, 10:47 PM] Prem: ನಿನ್ನಂದಕೆ ನಾ ಅಭಿಮಾನಿ
ನನ್ನಂದಕೆ ಯಾರಭಿಮಾನಿ?
ಅದು ನಾನೇ ಅಲ್ಲವೇ?
ಹಾಗಂತ ಯಾರೂ ಹೇಳಿಲ್ಲವೇ...
ಅದು ನೀನಲ್ಲವೇ...

392. ನ್ಯಾನೋ ಕತೆ

ನ್ಯಾನೋ ಕತೆ

ಗಂಡೇ ಏಕೆ ಬೇಕು?

ಅಮ್ಮ ಬೀಡಿ ಕಟ್ಟಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದರು. ಅಮ್ಮನ ಕಷ್ಟ ನೋಡಲಾಗದೆ ಮಗಳು ಸುನೀತಾಳೂ ಬೀಡಿ ಕಲಿತು ಅಮ್ಮನಿಗೆ ನೆರವಾಗತೊಡಗಿದಳು. ಜೀವನದಲ್ಲಿ ಗುರಿಯಿಟ್ಟು ಕಷ್ಟಪಟ್ಟು , ಓದಿದಳು. ಇದೀಗ ಅವಳು ಟೀಚರ್ ಸುನೀತಾ. ಅಮ್ಮ ಬೀಡಿ ಕಟ್ಟಬೇಕಾಗಿಲ್ಲ, ಮಗಳು ನೋಡಿಕೊಳ್ಳುತ್ತಾಳೆ. ಮದುವೆ ಆದಾಗ ಗಂಡನಿಗೆ ಅಮ್ಮನ ಬಗ್ಗೆ ಮೊದಲೆ ತಿಳಿಸಿದ್ದಾಳೆ ಕೂಡಾ..ಇದೀಗ ಅಮ್ಮನಿಗೆ ಗಂಡು ಮಕ್ಕಳಿಲ್ಲದ ಕೊರಗಿಲ್ಲ...
@ಪ್ರೇಮ್@

391. ಡಬ್ಬಿಂಗ್ ಸಾಂಗ್

ಡಬ್ಬಿಂಗ್ ಹಾಡು-1

ನಿಲ್ಲು ನಿಲ್ಲೇ ನನ್ನ ನಲ್ಲೆ...ನನಗೀಗ
ನಿನ್ನಾಸರೆ ಬೇಕಾಗಿದೆ..
ನೀನಿಲ್ಲದೆ ಬದುಕೇ ಇಲ್ಲ.... ನಿನ್ನ ಪ್ರೀತಿಯೇ
ಮನಸೆಲ್ಲ ತುಂಬ್ಹೋಗಿದೆ....
ನೀನಿಲ್ಲದ ಬದುಕು ಬಳಲಿ ಬೆಂಡಾಗಿದೆ....//ಪ//

ಕೊನೆಯಾಗದಿರಲಿ ಈ ನಿನ್ನ ಪ್ರೀತಿ
ನಾನಿರುವೆ ನಿನ್ನಾ ಜೊತೆಗೆ..
ನಿನಗಾಗಿ ನಾನು ನನಗಾಗಿ ನೀನು
ಬದುಕೆಲ್ಲ ಮೀಸಲು ನಿನಗೆ...
ಬಾಳಲ್ಲಿ ನಿನ್ನ ಪ್ರೀತಿಯು ಸಾಕು......
ಪ್ರೀತಿಯಲಿ ಖುಷಿಯಾಗಿದೇ....//

ನಿನ್ನ ನೋಡೋ ಹರುಷದಿ ಮನವಿಂದು ಕಾತರಿಸಿದೆ....//ನಿಲ್ಲು//

ನಮ್ಮಿಬ್ಬರ ಬಾಳು ಜೇನಿರುವ ಹಾಲು
ನೀ ನನ್ನ ಕೈ ಹಿಡಿದರೇ..
ನಾ ನಿನ್ನ ಮಗುವು ನೀನೆನ್ನ ತಾಯಿ
ಪೊರೆ ನನ್ನ ನಿನ್ನ ಪ್ರೀತಿಲೀ.....
ನೀನಿರದ ಬಾಳು ಅದು ಬರೀ ಗೋಳು.......
ನೀನಿರದೆ ನಾನಿಲ್ಲವೇ....//

ನನ್ನ ಜೀವ ನಿನ್ನಲ್ಲಿಯೇ ನನ್ನ ಪ್ರಾಣವು ನಿನ್ನಲ್ಲಿದೇ..//ನಿಲ್ಲು//
@ಪ್ರೇಮ್@

390.ಹನಿ

ಮನದನ್ನೆಯ ಮಧುರ ಪ್ರೀತಿಗೆ ಮನಕರಗದವರು,ಮುದ್ದಾಡದವರು,
ಮೋಹಿತರಾಗದವರುಂಟೆ
ಈ ಮಹಾನ್ ಭುವಿಯ ಮಡಿಲಿನಲಿ?      
  @ಪ್ರೇಮ್@

389. ಶುಭಹಾರೈಕೆ

ಶುಭ ಹಾರೈಕೆ

ನವೀನ ನವ್ಯ ನವದಿನವು
ನಗು ಮೊಗವ ಬೆಳೆಸಲಿ
ನವಭಾವ ನವಚೇತನ
ನಿತ್ಯ ಪುಟಿದು ಚಿಮ್ಮಲಿ..

ನಾ ನಿನಗೆ ನೀ ನನಗೆ
ಸಹಾಯ ಮನವು ಬರಲಿ
ನಮ್ಮೆಲ್ಲರ ಒಗ್ಗೂಡಿಸೊ
ದೈತ್ಯ ಶಕ್ತಿ ನಡೆದು ಬರಲಿ...

ನಾದದ ನಗು ನಮ್ಮೆದೆಯಲಿ
ನಿನಾದದ ರಂಗೇರಲಿ
ಉದಯ ರವಿಯ ನಿತ್ಯ ಕಿರಣ
ನವೀನ ರಂಗು ಸ್ಫುರಿಸಲಿ..

ನಮ್ಮ ಮನವು ನೃತ್ಯವಾಡಿ
ನವವಸಂತ ಹೊಮ್ಮಲಿ
ನಾದ ನಾಟ್ಯ ಜೊತೆಗೆ ಸೇರಿ
ಜೀವನಾದ ನಲಿಯಲಿ...
@ಪ್ರೇಮ್@

ಮಂಗಳವಾರ, ಜುಲೈ 24, 2018

388. Silence is painful

Silence is painful

Modern minds must learn
Mean should mean by all...
Most minds mild and meek
Members missing moments
Mobiles killing most of times..
Mingleness is very less
Far facebook friends are close,
Famous throughout medias
Don't know who are Neighbours...
Misty minds see only nears
Most youngsters talk less
Everywhere Communication errors..
Most members murmur with tears..
Mug of words should pore out
But education is in foriegn languages..
Mother tongue is Indian's...
Most elder mind cries..
For Muted sound of younger..
Because of these mobile phones...
@prem@

387.ಶಿಶುಗೀತೆ

ಶಿಶುಗೀತೆ-1

ಬಾರೋ ಗೆಳೆಯ

ಬಾರೋ ಗೆಳೆಯ ನನ್ನ ಸನಿಹ
ಸೂರ್ಯ-ಚಂದ್ರರ ನೋಡೋಣ..
ಗಿಡ-ಮರ-ಲತೆಗಳ ಸುತ್ತಮುತ್ತ
ಹಕ್ಕಿಗಳಂತೆ ಹಾರೋಣ...

ಚಿಲಿಪಿಲಿಯ ರಾಗದೊಡನೆ
ಪರಿಸರವ ಸುತ್ತೋಣ..
ನೀನು-ನಾನು ಒಟ್ಟು ಸೇರಿ
ನದಿಯಲಿಂದು ಈಜೋಣ...

ಪಾಟಿ ಚೀಲ ಸ್ಲೇಟು ಬಳಪ
ಮರೆತು ಆಟವನಾಡೋಣ..
ವಿಮಾನದಾಟ ಆಡಲು ನಾವು
ಚಿಟ್ಟೆಗಳನ್ನು ಹಿಡಿಯೋಣ...

ಮನದ ದುಗುಡ ಕಳೆದುಕೊಂಡು
ಹಾಡಿ ಕುಣಿದು ನಲಿಯೋಣ...

@ಪ್ರೇಮ್@

ಸೋಮವಾರ, ಜುಲೈ 23, 2018

386.ನ್ಯಾನೋ ಕತೆ

ನ್ಯಾನೋ ಕತೆ

ಋಣ

ನಾನಾಗ ಎರಡನೇ ತರಗತಿಯಲ್ಲಿ ಓದುತ್ತಿದ್ದೆ. ಸ್ಲೇಟು ತುಂಡಾಗಿತ್ತು. ಆ ತುಂಡು ಸ್ಲೇಟನ್ನೇ ಹಿಡಿದು ಬರೆಯುತ್ತಿದ್ದೆ. ನೋಡಿದ ಶಿಕ್ಷಕ ಕೃಷ್ಣ ಮೂರ್ತಿ ರಾವ್ ರಿಗೆ ಸಿಟ್ಟು, ಬೇಸರ ಒಮ್ಮೆಲೇ ಬಂತು! ನನ್ನ ಕೈಲಿದ್ದ ತುಂಡು ಸ್ಲೇಟನ್ನು ತೆಗೆದು ಬಿಸಾಕಿ, ಯಾವುದೋ ದೊಡ್ಡ ಮಕ್ಕಳಲ್ಲಿ ದುಡ್ಡು ಕೊಟ್ಟು, ಹೊಸ ಸ್ಲೇಟು ತಂದು ಕೊಟ್ಟರು!
ಅವರ ಋಣ ತೀರಿಸುವುದು ಬಾಕಿಯಿದೆ....
@ಪ್ರೇಮ್@

Nano story

Debt

One of the teacher called Krishna Murthy Rao was a kind and hot. He used to teach well. Once when I was a student in class two, I had no slate to write. My slate was broke up and I waswriting in a small piece of that slate. He came to me!!
Gazed at me angrily, but his pity was in his eyes.. He took the slate forcefully from my little hands. Threw it out into the portico..!!
   Gave the amount from his pocket to an elder boy and told him to buy a new slate for me..
  I am still in his debt...
@prem@

384. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-5

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-5

ಒಂದು ಕಾಲವಿತ್ತು. ಶಿಕ್ಷಕರೆಂದರೆ ಮಹಾನ್ ಪಂಡಿತರು, ಅವರು ತಿಳಿಯದ ಜ್ಞಾನವಿಲ್ಲ, ಊರಿನಲ್ಲಿ ಯಾರಿಗೆ ಏನೇ ಕಾಗದ ಪತ್ರಗಳು ಬಂದರೂ ಓದಿ ಅರ್ಥೈಸಿ ಹೇಳಿ, ಅದಕ್ಕೆ ಉತ್ತರಿಸುವವರೂ ಅವರೆ! ಊರಲ್ಲೆಲ್ಲ ಆ ಊರಿನ ಗುರುಗಳಿಗೆ ರಾಜ ಮರ್ಯಾದೆ. ಅವರು ಊರಿನ ಕಾರ್ಯಕ್ರಮಕ್ಕೆ ಬಂದರೆಂದರೆ ಕಾರ್ಯಕ್ರಮಕ್ಕೆ ವಿಶೇಷ ಕಳೆ!
    ಕಾಲಕ್ರಮೇಣ ಶಿಕ್ಷಕರ ಸಂಖ್ಯೆ ಏರುತ್ತಾ ಹೋಯಿತು, ಪರ ಊರಿನ ಶಿಕ್ಷಕರು ನಮ್ಮೂರಿಗೆ ಬರತೊಡಗಿದರು. ನಮ್ಮೂರಿಗೆ ಬಂದ ಶಿಕ್ಷಕರು ಕೆಳ ಜಾತಿಯವರೆಂದು ಗೊತ್ತುಪಡಿಸಿಕೊಂಡ ಮತಾಂಧ ಜನರಿಂದ ಶಿಕ್ಷಕರು ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳತೊಡಗಿದರು. ಹೆಚ್ಚೇಕೆ, ದೂರದಿಂದ ಬಂದ ಶಿಕ್ಷಕರಿಗೆ ಕನಿಷ್ಠ ಪಕ್ಷ ಆ ಊರಿನಲ್ಲಿ ನೆಲೆಯೂರಲು ಜಾಗವನ್ನೂ ಕಲ್ಪಿಸಿ ಕೊಡಲಿಲ್ಲ! ಎಷ್ಟೋ ದೂರದ ಸಿಟಿಗಳಲ್ಲಿ ಬಾಡಿಗೆ ಮನೆ ಪಡೆದು ಓಡಾಡುವ ಪರಿಸ್ಥಿತಿ ಶಿಕ್ಷಕರದ್ದಾಯಿತು. ಹಿಂದೆ ಶಿಕ್ಷಕರ ಬಳಿ ಯಾರೂ ಬಾಡಿಗೆ ಪಡೆಯದ ಕಾಲವೂ ಇತ್ತು!
ತದನಂತರ ಎಲ್ಲೋ ಪಕ್ಕದಲ್ಲಿದ್ದ ಕೋಣೆಯೊಂದನ್ನು ಬಾಡಿಗೆಗೆ ಪಡೆದು ಗೂಡಿನಲ್ಲಿ ವಾಸಿಸುವಂತೆ ಅದರಲ್ಲಿದ್ದರೆ ಊಟಕ್ಕೊಂದು ಹೋಟೆಲ್ ಕೂಡಾ ಆ ಹಳ್ಳಿಯಲ್ಲಿ ಇರುತ್ತಿರಲಿಲ್ಲ! ಈ ಎಲ್ಲಾ ಕಷ್ಟಗಳಿಂದ ಪಾರಾಗಲು ಅವರು ನಗರ ಜೀವನವನ್ನೆ ಅವಲಂಬಿಸ ಬೇಕಾಯ್ತು!
  ಇದೀಗ ಪರಿಸ್ಥಿತಿ ಬದಲಾಗಿದೆ. ತಂತ್ರಜ್ಞಾನ ಮುಂದುವರಿದಂತೆ ಏನು ಕಲಿತರೂ, ಎಷ್ಟು ಕಲಿತರೂ ಕಡಿಮೆಯೇ! ಈಗ ವಿದ್ಯಾರ್ಥಿಗಳೇ ಶಿಕ್ಷಕರಿಗೆ ಜೀವನ ಪಾಠ ಕಲಿಸುವಷ್ಟು ಬೆಳೆದು ಬಿಟ್ಟಿದ್ದಾರೆ! ಭಯ- ಭಕ್ತಿ ಹೋಗಿ ಗೆಳೆತನ ಬಂದಿದೆ! ಹಲವೆಡೆ ತುಳಿತ, ಥಳಿತಕ್ಕೊಳಗಾದವರೂ ಇದ್ದಾರೆ!
   ನವೀನ ಯುಗದಲ್ಲಿ ಕಾಲ ಬದಲಾಗಿದೆಯೋ, ಜನರು ಬದಲಾಗಿಹರೋ ನಾನರಿಯೆ! ಒಂದು ಕಾಲದಲ್ಲಿ ಗೌರವಿಸಲ್ಪಡುತ್ತಿದ್ದ ಶಿಕ್ಷಕ ವೃಂದ ಇದೀಗ ಭಯದ ನೆರಳಲ್ಲೆ ಬದುಕ ಬೇಕಾಗಿದೆ! ಒಂದು ಕಾಲದಲ್ಲಿ 'ಬೆತ್ತ' ಎನ್ನುವುದು ಶಿಕ್ಷಕರ ಆಸ್ತಿಯಾಗಿತ್ತು, ದ್ಯೋತಕವಾಗಿತ್ತು! ಅದಕ್ಕೆ ಹೆದರಿ ಕಲಿತವರೆಷ್ಟೋ? ಆದರೆ ಇಂದು ಶಿಕ್ಷಕರಿಗೆ ಕೋಲು ಹಿಡಿಯುವುದಿರಲಿ, ಮುಟ್ಟಲಿಕ್ಕೂ ಅಧಿಕಾರವಿಲ್ಲ! ಅಷ್ಟೇ ಏಕೆ, ಇಂದಿನ ಶಿಕ್ಷಕ ಎಷ್ಟು ಅಸಹಾಯಕನೆಂದರೆ ತಪ್ಪು ಮಾಡಿದ ವಿದ್ಯಾರ್ಥಿಗೆ ಗದರಲೂ ಇಲ್ಲ, ಬೈಯಲೂ ಇಲ್ಲ, ಕಣ್ಣೂ ದೊಡ್ಡದು ಮಾಡಿ ನೋಡುವಂತಿಲ್ಲ!!! ಅದರ ಜೊತೆ ಕಡ್ಡಾಯ ಪ್ರಾಥಮಿಕ ಶಿಕ್ಷಣ, ಯಾವ ವಿದ್ಯಾರ್ಥಿ ಕಲಿಯದಿದ್ದರೂ ಶಿಕ್ಷಕರೇ ಹೊಣೆ! ವಿದ್ಯಾರ್ಥಿಯನ್ನು ನಪಾಸು ಮಾಡುವಂತಿಲ್ಲ. ಪಾಸಾಗುವವರೆಗೆ ಕಲಿಸಿ ಬರೆಸಿ, ದಾಖಲೆಗಳನ್ನಿಟ್ಟು ಮುಂದಿನ ವರ್ಗಕ್ಕೆ ಕಳುಹಿಸಲೇ ಬೇಕು! ಹೀಗೆ ಮುಂದೆ ದಾಟುತ್ತಾ ಬಂದವರಿಗೆ ಹಲವು ಸಲ ಕೆಲ ಶಿಕ್ಷಕರು ತಾನೇ ಪರೀಕ್ಷೆ ಬರೆದಿದ್ದರೂ ಅಚ್ಚರಿಯಿಲ್ಲ!!!
  ಹಾಗೆ ಏನೂ ಬರೆಯದೆ ಓದದೆ ಹತ್ತನೇ ತರಗತಿಯವರೆಗೆ ಬಂದ ಮಕ್ಕಳು ಇದ್ದರೆ ಎಲ್ಲರೊಡನೆ ಅವರಿಗೂ ಪಬ್ಲಿಕ್ ಪರೀಕ್ಷೆ! ಅಲ್ಲೂ ಎಲ್ಲರೂ ಪಾಸಾಗಬೇಕು! ಇಲ್ಲಿ ಪಾಸಾದ ಪರ್ಸೆಂಟೇಜ್ ನೋಡೋದೇ ಜನರ ಕೆಲಸ!
ಇಷ್ಟೇ ಅಲ್ಲ! ಶಾಲೆಗೆ ಬರದ ಮಗುವಿನ ಮನೆಗೆ (ಉಳಿದೆಲ್ಲ ಬಂದ ಲ ಮಕ್ಕಳನ್ನು ಬಿಟ್ಟು) ತೆರಳಿ, ಅವರ ಪೋಷಕರ ಮನವೊಲಿಸಿ, ಶಾಲೆಗೆ ಕರೆತರಬೇಕು! ಇನ್ನು ಅವನೇನಾದರೂ ಶಾಲೆಗೆ ಹೋಗಲಿಚ್ಚಿಸದೆ, ಅನಾಹುತ ಮಾಡಿಕೊಂಡರೂ ಶಿಕ್ಷಕರೇ ಜವಾಬ್ದಾರಿ!
  ಮನೆಗೆ ಕರೆತರಲು ಹೋದಾಗ ಆ ವಿದ್ಯಾರ್ಥಿ ಕಲ್ಲು ಬಿಸಾಡಿದರೂ ಅವನಿಂದ ತಪ್ಪಿಸಿ, ಮನೆಯವರು ಗದರಿದರೂ ಗದರಿಸಿಕೊಂಡು ಬರಬೇಕು!
    ಪುಸ್ತಕ, ತರಕಾರಿ, ಸಾಮಾನು ಹೊತ್ತೊಯ್ದು ಹಾಕಿ, ಊಟ ಕೊಟ್ಟು ಸಲಹ ಬೇಕು! ಪ್ರತಿ ವಿದ್ಯಾರ್ಥಿಯ ಜವಾಬ್ದಾರಿ ಶಿಕ್ಷಕರ ಮೇಲಿದೆ! ಆದರೂ ಊರಿನವರ್ಯಾರೂ ಆ ಶಿಕ್ಷಕನನ್ನು ಗುರುತಿಸಲಾರರು! ಕಾರಣ ಆ ಊರಿನ ಹೆಚ್ಚಿನ ಜನ ತಮ್ಮ ಮಕ್ಕಳನ್ನು ಬೇರೆ ಊರಿನ ಶಾಲೆಗಳಿಗೆ ಕಳುಹಿಸುವವರೇ! ಕಾರಣ 'ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ' ,ತಮ್ಮ ಅನುಕೂಲ, ಬಸ್ಸಿನ ವ್ಯವಸ್ಥೆ, ಮುಂದಾಲೋಚನೆ, ಆಂಗ್ಲ ವ್ಯಾಮೋಹ ಇತ್ಯಾದಿ!
  ಒಟ್ಟಿನಲ್ಲಿ ಶಿಕ್ಷಕರಿಂದು ತುಳಿತಕ್ಕೊಳಗಾದವರಾಗಿದ್ದಾರೆ. ಮನೆಗೆ ಯಾವುದಾದರೂ ಕೆಲಸಕ್ಕೆ ಬರುವವರೂ ಶಿಕ್ಷಕರು,ಅದರಲ್ಲೂ ಪರ ಊರಿನ ಶಿಕ್ಷಕರೆಂದರೆ ಹೆಚ್ಚೇ ಕೇಳುತ್ತಾರೆ! ಅಂಗಡಿಯವರೂ ಅಷ್ಟೆ, ತಮ್ಮ ಊರಿನ ಪರಿಚಯದ  ಜನರಿಗೂ, ಪರ ಊರಿನ ಶಿಕ್ಷಕರಿಗೂ ಅಜಗಜಾಂತರ ವ್ಯತ್ಯಾಸ!!!
  ಒಟ್ಟಿನಲ್ಲಿ ನೋವು ನುಂಗಿಕೊಂಡು, ಕಷ್ಟದ, ನೋವಿನ ಮಣಿಗಳನ್ನೇ ಪೋಣಿಸಿ ಸರಮಾಡಿ,ಅದನ್ನೇ ತೊಟ್ಟು ಬದುಕುವ ನರಕದ ಬಾಳು ಇಂದಿನ ಶಿಕ್ಷಕರದಾಗಿದೆ ಎಂದರೆ ತಪ್ಪಿಲ್ಲ. ನೀವೇನಂತೀರಿ?
@ಪ್ರೇಮ್@

384. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-5

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-5

ಒಂದು ಕಾಲವಿತ್ತು. ಶಿಕ್ಷಕರೆಂದರೆ ಮಹಾನ್ ಪಂಡಿತರು, ಅವರು ತಿಳಿಯದ ಜ್ಞಾನವಿಲ್ಲ, ಊರಿನಲ್ಲಿ ಯಾರಿಗೆ ಏನೇ ಕಾಗದ ಪತ್ರಗಳು ಬಂದರೂ ಓದಿ ಅರ್ಥೈಸಿ ಹೇಳಿ, ಅದಕ್ಕೆ ಉತ್ತರಿಸುವವರೂ ಅವರೆ! ಊರಲ್ಲೆಲ್ಲ ಆ ಊರಿನ ಗುರುಗಳಿಗೆ ರಾಜ ಮರ್ಯಾದೆ. ಅವರು ಊರಿನ ಕಾರ್ಯಕ್ರಮಕ್ಕೆ ಬಂದರೆಂದರೆ ಕಾರ್ಯಕ್ರಮಕ್ಕೆ ವಿಶೇಷ ಕಳೆ!
    ಕಾಲಕ್ರಮೇಣ ಶಿಕ್ಷಕರ ಸಂಖ್ಯೆ ಏರುತ್ತಾ ಹೋಯಿತು, ಪರ ಊರಿನ ಶಿಕ್ಷಕರು ನಮ್ಮೂರಿಗೆ ಬರತೊಡಗಿದರು. ನಮ್ಮೂರಿಗೆ ಬಂದ ಶಿಕ್ಷಕರು ಕೆಳ ಜಾತಿಯವರೆಂದು ಗೊತ್ತುಪಡಿಸಿಕೊಂಡ ಮತಾಂಧ ಜನರಿಂದ ಶಿಕ್ಷಕರು ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳತೊಡಗಿದರು. ಹೆಚ್ಚೇಕೆ, ದೂರದಿಂದ ಬಂದ ಶಿಕ್ಷಕರಿಗೆ ಕನಿಷ್ಠ ಪಕ್ಷ ಆ ಊರಿನಲ್ಲಿ ನೆಲೆಯೂರಲು ಜಾಗವನ್ನೂ ಕಲ್ಪಿಸಿ ಕೊಡಲಿಲ್ಲ! ಎಷ್ಟೋ ದೂರದ ಸಿಟಿಗಳಲ್ಲಿ ಬಾಡಿಗೆ ಮನೆ ಪಡೆದು ಓಡಾಡುವ ಪರಿಸ್ಥಿತಿ ಶಿಕ್ಷಕರದ್ದಾಯಿತು. ಹಿಂದೆ ಶಿಕ್ಷಕರ ಬಳಿ ಯಾರೂ ಬಾಡಿಗೆ ಪಡೆಯದ ಕಾಲವೂ ಇತ್ತು!
ತದನಂತರ ಎಲ್ಲೋ ಪಕ್ಕದಲ್ಲಿದ್ದ ಕೋಣೆಯೊಂದನ್ನು ಬಾಡಿಗೆಗೆ ಪಡೆದು ಗೂಡಿನಲ್ಲಿ ವಾಸಿಸುವಂತೆ ಅದರಲ್ಲಿದ್ದರೆ ಊಟಕ್ಕೊಂದು ಹೋಟೆಲ್ ಕೂಡಾ ಆ ಹಳ್ಳಿಯಲ್ಲಿ ಇರುತ್ತಿರಲಿಲ್ಲ! ಈ ಎಲ್ಲಾ ಕಷ್ಟಗಳಿಂದ ಪಾರಾಗಲು ಅವರು ನಗರ ಜೀವನವನ್ನೆ ಅವಲಂಬಿಸ ಬೇಕಾಯ್ತು!
  ಇದೀಗ ಪರಿಸ್ಥಿತಿ ಬದಲಾಗಿದೆ. ತಂತ್ರಜ್ಞಾನ ಮುಂದುವರಿದಂತೆ ಏನು ಕಲಿತರೂ, ಎಷ್ಟು ಕಲಿತರೂ ಕಡಿಮೆಯೇ! ಈಗ ವಿದ್ಯಾರ್ಥಿಗಳೇ ಶಿಕ್ಷಕರಿಗೆ ಜೀವನ ಪಾಠ ಕಲಿಸುವಷ್ಟು ಬೆಳೆದು ಬಿಟ್ಟಿದ್ದಾರೆ! ಭಯ- ಭಕ್ತಿ ಹೋಗಿ ಗೆಳೆತನ ಬಂದಿದೆ! ಹಲವೆಡೆ ತುಳಿತ, ಥಳಿತಕ್ಕೊಳಗಾದವರೂ ಇದ್ದಾರೆ!
   ನವೀನ ಯುಗದಲ್ಲಿ ಕಾಲ ಬದಲಾಗಿದೆಯೋ, ಜನರು ಬದಲಾಗಿಹರೋ ನಾನರಿಯೆ! ಒಂದು ಕಾಲದಲ್ಲಿ ಗೌರವಿಸಲ್ಪಡುತ್ತಿದ್ದ ಶಿಕ್ಷಕ ವೃಂದ ಇದೀಗ ಭಯದ ನೆರಳಲ್ಲೆ ಬದುಕ ಬೇಕಾಗಿದೆ! ಒಂದು ಕಾಲದಲ್ಲಿ 'ಬೆತ್ತ' ಎನ್ನುವುದು ಶಿಕ್ಷಕರ ಆಸ್ತಿಯಾಗಿತ್ತು, ದ್ಯೋತಕವಾಗಿತ್ತು! ಅದಕ್ಕೆ ಹೆದರಿ ಕಲಿತವರೆಷ್ಟೋ? ಆದರೆ ಇಂದು ಶಿಕ್ಷಕರಿಗೆ ಕೋಲು ಹಿಡಿಯುವುದಿರಲಿ, ಮುಟ್ಟಲಿಕ್ಕೂ ಅಧಿಕಾರವಿಲ್ಲ! ಅಷ್ಟೇ ಏಕೆ, ಇಂದಿನ ಶಿಕ್ಷಕ ಎಷ್ಟು ಅಸಹಾಯಕನೆಂದರೆ ತಪ್ಪು ಮಾಡಿದ ವಿದ್ಯಾರ್ಥಿಗೆ ಗದರಲೂ ಇಲ್ಲ, ಬೈಯಲೂ ಇಲ್ಲ, ಕಣ್ಣೂ ದೊಡ್ಡದು ಮಾಡಿ ನೋಡುವಂತಿಲ್ಲ!!! ಅದರ ಜೊತೆ ಕಡ್ಡಾಯ ಪ್ರಾಥಮಿಕ ಶಿಕ್ಷಣ, ಯಾವ ವಿದ್ಯಾರ್ಥಿ ಕಲಿಯದಿದ್ದರೂ ಶಿಕ್ಷಕರೇ ಹೊಣೆ! ವಿದ್ಯಾರ್ಥಿಯನ್ನು ನಪಾಸು ಮಾಡುವಂತಿಲ್ಲ. ಪಾಸಾಗುವವರೆಗೆ ಕಲಿಸಿ ಬರೆಸಿ, ದಾಖಲೆಗಳನ್ನಿಟ್ಟು ಮುಂದಿನ ವರ್ಗಕ್ಕೆ ಕಳುಹಿಸಲೇ ಬೇಕು! ಹೀಗೆ ಮುಂದೆ ದಾಟುತ್ತಾ ಬಂದವರಿಗೆ ಹಲವು ಸಲ ಕೆಲ ಶಿಕ್ಷಕರು ತಾನೇ ಪರೀಕ್ಷೆ ಬರೆದಿದ್ದರೂ ಅಚ್ಚರಿಯಿಲ್ಲ!!!
  ಹಾಗೆ ಏನೂ ಬರೆಯದೆ ಓದದೆ ಹತ್ತನೇ ತರಗತಿಯವರೆಗೆ ಬಂದ ಮಕ್ಕಳು ಇದ್ದರೆ ಎಲ್ಲರೊಡನೆ ಅವರಿಗೂ ಪಬ್ಲಿಕ್ ಪರೀಕ್ಷೆ! ಅಲ್ಲೂ ಎಲ್ಲರೂ ಪಾಸಾಗಬೇಕು! ಇಲ್ಲಿ ಪಾಸಾದ ಪರ್ಸೆಂಟೇಜ್ ನೋಡೋದೇ ಜನರ ಕೆಲಸ!
ಇಷ್ಟೇ ಅಲ್ಲ! ಶಾಲೆಗೆ ಬರದ ಮಗುವಿನ ಮನೆಗೆ (ಉಳಿದೆಲ್ಲ ಬಂದ ಲ ಮಕ್ಕಳನ್ನು ಬಿಟ್ಟು) ತೆರಳಿ, ಅವರ ಪೋಷಕರ ಮನವೊಲಿಸಿ, ಶಾಲೆಗೆ ಕರೆತರಬೇಕು! ಇನ್ನು ಅವನೇನಾದರೂ ಶಾಲೆಗೆ ಹೋಗಲಿಚ್ಚಿಸದೆ, ಅನಾಹುತ ಮಾಡಿಕೊಂಡರೂ ಶಿಕ್ಷಕರೇ ಜವಾಬ್ದಾರಿ!
  ಮನೆಗೆ ಕರೆತರಲು ಹೋದಾಗ ಆ ವಿದ್ಯಾರ್ಥಿ ಕಲ್ಲು ಬಿಸಾಡಿದರೂ ಅವನಿಂದ ತಪ್ಪಿಸಿ, ಮನೆಯವರು ಗದರಿದರೂ ಗದರಿಸಿಕೊಂಡು ಬರಬೇಕು!
    ಪುಸ್ತಕ, ತರಕಾರಿ, ಸಾಮಾನು ಹೊತ್ತೊಯ್ದು ಹಾಕಿ, ಊಟ ಕೊಟ್ಟು ಸಲಹ ಬೇಕು! ಪ್ರತಿ ವಿದ್ಯಾರ್ಥಿಯ ಜವಾಬ್ದಾರಿ ಶಿಕ್ಷಕರ ಮೇಲಿದೆ! ಆದರೂ ಊರಿನವರ್ಯಾರೂ ಆ ಶಿಕ್ಷಕನನ್ನು ಗುರುತಿಸಲಾರರು! ಕಾರಣ ಆ ಊರಿನ ಹೆಚ್ಚಿನ ಜನ ತಮ್ಮ ಮಕ್ಕಳನ್ನು ಬೇರೆ ಊರಿನ ಶಾಲೆಗಳಿಗೆ ಕಳುಹಿಸುವವರೇ! ಕಾರಣ 'ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ' ,ತಮ್ಮ ಅನುಕೂಲ, ಬಸ್ಸಿನ ವ್ಯವಸ್ಥೆ, ಮುಂದಾಲೋಚನೆ, ಆಂಗ್ಲ ವ್ಯಾಮೋಹ ಇತ್ಯಾದಿ!
  ಒಟ್ಟಿನಲ್ಲಿ ಶಿಕ್ಷಕರಿಂದು ತುಳಿತಕ್ಕೊಳಗಾದವರಾಗಿದ್ದಾರೆ. ಮನೆಗೆ ಯಾವುದಾದರೂ ಕೆಲಸಕ್ಕೆ ಬರುವವರೂ ಶಿಕ್ಷಕರು,ಅದರಲ್ಲೂ ಪರ ಊರಿನ ಶಿಕ್ಷಕರೆಂದರೆ ಹೆಚ್ಚೇ ಕೇಳುತ್ತಾರೆ! ಅಂಗಡಿಯವರೂ ಅಷ್ಟೆ, ತಮ್ಮ ಊರಿನ ಪರಿಚಯದ  ಜನರಿಗೂ, ಪರ ಊರಿನ ಶಿಕ್ಷಕರಿಗೂ ಅಜಗಜಾಂತರ ವ್ಯತ್ಯಾಸ!!!
  ಒಟ್ಟಿನಲ್ಲಿ ನೋವು ನುಂಗಿಕೊಂಡು, ಕಷ್ಟದ, ನೋವಿನ ಮಣಿಗಳನ್ನೇ ಪೋಣಿಸಿ ಸರಮಾಡಿ,ಅದನ್ನೇ ತೊಟ್ಟು ಬದುಕುವ ನರಕದ ಬಾಳು ಇಂದಿನ ಶಿಕ್ಷಕರದಾಗಿದೆ ಎಂದರೆ ತಪ್ಪಿಲ್ಲ. ನೀವೇನಂತೀರಿ?
@ಪ್ರೇಮ್@

385. Life

Life
Love your life as it loves you
Let the life lighten you
Leave lot of worries to fate
Load smile in your life...
Long live using lovely life,
Little jumps and humps follow,
Lengthy layers lays us lamps
Which light our life slightly...
Leaving your tomorrow
Leave to today's lovely life,
Tomorrow follows happily...
Light your life candle
With your smiles...
Which is the symbol of success...
@prem@

383.ನ್ಯಾನೋ ಕತೆ-5

1.ನ್ಯಾನೋ ಕತೆ

ಅಜ್ಞಾನ

ಸ್ವಲ್ಪ ವರುಷಗಳ ಹಿಂದಿನ ಕತೆ. ಆಗಿನ್ನೂ ಮೊಬೈಲ್ ಹಳ್ಳಿಗಳಿಗೆ ಬಂದಿರಲಿಲ್ಲ. ಚಿಲ್ಲರೆ(ಕಾಯಿನ್) ಫೋನ್ ಕಾಲ. ಜನ ಕಾಯಿನ್ ಹಿಡಿದು ಕ್ಯೂ ನಿಲ್ಲುತ್ತಿದ್ದರು. ಲವರ್ಸ್ ಲೆಕ್ಕ ಇಲ್ಲದಷ್ಟು ಕಾಯಿನ್ ಕಳೆದುಕೊಳ್ಳುತ್ತಿದ್ದರು. ರಾಮಣ್ಣ ಅಲ್ಲಿ ಬಂದು ಕಾಯಿನ್ ಹಾಕಿ ನಂಬರ್ ಒತ್ತಿದರು. ಅತ್ತಕಡೆಯಿಂದ ಮಹಿಳೆಯ ಧ್ವನಿ ಬಂತು, "ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ". "ಅಮ್ಮಅವನು ಒಳ ಬಂದ ಕೂಡಲೇ ನನ್ನಿಂದ ಪಡೆದ ಸಾಲ ರೂ.೧೦,೦೦೦ ವನ್ನು ಇಂದೇ ತಂದು ಕೊಡಲು ಹೇಳಿ" ರಾಮಣ್ಣ ಹೇಳಿ ಫೋನಿಟ್ಟರು! 'ಟಣ್' ಅಂತ ಕಾಯಿನ್ ಕೆಳಗೆ ಬಿತ್ತು! "ದೇವೇಗೌಡರ ಮಗ ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿ ಇದೊಂದು ಒಳ್ಳೆ ಕೆಲಸ ಮಾಡಿದ್ದಾರೆ. ಫೋನ್ ಫ್ರೀ" ಎನ್ನುತ್ತಾ ಮನೆಗೆ ನಡೆದರು ರಾಮಣ್ಣ!!!
@ಪ್ರೇಮ್@

ಭಾನುವಾರ, ಜುಲೈ 22, 2018

382. ಬಾಳ ಬೆಳಕು

ಬಾಳ ಬೆಳಕು

ಬಾಳ ಬೆಳಕು
ನಡೆಸಬೇಕು
ಹೂವು-ಮುಳ್ಳು ಹಾಸಿಗೆ..

ಮನದ ಬೆಳಕು
ಅರಳಬೇಕು
ನಗುತಲಿರಲಿ ಹೊತ್ತಿಗೆ..

ಶಶಿ-ರವಿಯರು
ನಗಲುಬೇಕು
ಬೆಳಕಿರದೆ ಸಾಧ್ಯವೇ...

ನೀನು ನನ್ನ
ಬಾಳ ಬೆಳಕು
ಬರದಿರಲು ಆಗದೇ...

ನಾನೆ ನಿನ್ನ
ಜೀವ-ಬೆಳಕು
ನೀನೆ ನನಗಾಸರೆ
ನಾನು ನಿನ್ನ ಕೈಸೆರೆ...
@ಪ್ರೇಮ್@

380. ಗಝಲ್-5

ಗಝಲ್

ಭುವಿಗೆ ಸುರಿಯುತಿಹೆವು ಪ್ಲಾಸ್ಟಿಕ್, ಮಾಡಬೇಕೆ ಸ್ವಚ್ಛತೆ?
ಒಟ್ಟಾಗಿ ರಾಶಿ ಹಾಕಿಹೆವು ಕಸವ,  ಮುಂದುವರೆಸಬೇಕೆ ಸ್ವಚ್ಛತೆ?

ಮರಗಳನೆಲ್ಲ ಕಡಿದು ರಸ್ತೆ-ಮನೆಗಳ ಕಟ್ಟಿದೆವು
ಬರಿದಾಗಿದೆ ಗಾಳಿ,ಗಿಡ ನೆಟ್ಟು ಹೆಚ್ಚಿಸಬೇಕೆ ಸ್ವಚ್ಛತೆ?

ಮಾತಿನಲು ಕೊಳಕ ಉಗಿದು ಹೊರಹಾಕುತಿಹೆವು.
ನಮ್ಮ ಮನದೊಳಗೆ ತುಂಬಿಸಬೇಕೆ ಸ್ವಚ್ಛತೆ?

ಬಟ್ಟೆಬರೆ ತುಂಡಾಯ್ತು,ಹರಿದ್ಹರಿದು ಹೋಯ್ತು
ಹರಿದು ಹಾಕಿಕೊಂಡ ಬಟ್ಟೆಯ ಹೊಲಿದು ಉಳಿಸಬೇಕೆ ಸ್ವಚ್ಛತೆ?

ಪ್ರೀತಿ-ಪ್ರೇಮದ ಕಾಮದ ಹುಚ್ಚಿನಲಿ ಮರೆತಿಹೆವು ಜಗವ
ಗುಡಿಸಿ ಜಾಲಾಡಿಸಿ ಮನವ, ಬೆಳೆಸಬೇಕೆ ಸ್ವಚ್ಛತೆ?

@ಪ್ರೇಮ್@

381. ದೀವಿಗೆ

ದೀವಿಗೆ

ನನ್ನ ಮನದ ಬೆಳಕು
ನಿನಗೆ ನೀಡಿದೆ ಬದುಕು
ನಾನೇ ನಿನ್ನ ತಳುಕು
ತಿಳಿಯೋ ಮನುಜ ನಿಜಕು//

ಹುಟ್ಟು-ಸಾವು ಆಗಬೇಕು
ಪರರ ಬದುಕ ಬೆಳಕು
ಮೆಟ್ಟಿ ನಿಂತು ದುಡಿಯಬೇಕು
ಬಗ್ಗಬೇಡ ಯಾವ ದುಃಖಕು//

ನಾನೆ ಸೂರ್ಯ-ಚಂದ್ರ ಬೆಳಕು
ದೀಪ-ರೂಪದ ಜಾಲಕು
ಕತ್ತಲೋಡಿಸಿ  ತರುವೆ ಬೆಳಕು
ನಾನೇ ಬೇಕು ಕಣ್ಣಿನೊಳಕು//

ಜಗದ ಜೀವರಾಶಿ ಮನಕು
ಸೃಷ್ಠಿ ಕೊಡುತಿದೆ ತನ್ನ ಬೆಳಕು
ನವವಸಂತದಿ ಹಾಡಲಿಕ್ಕು
ಬೇಕೆ ಬೇಕು ನಾನೆ ಅದಕು//
@ಪ್ರೇಮ್@

ಶುಕ್ರವಾರ, ಜುಲೈ 20, 2018

379.mind

Mind

Mind's moments are
Miracle and marvelous .
Motion of mind is
Nor miserable neither mise
Mind itself is mature
With the mutinous ideas
As well as meaningful things...
Mind is most melodious music,
Sometimes it is mild magic.
Most probably mighty thought -
Mind is most great itself..
Millions of minds are
Act like monkeys,  yet
Mind is like Marbles.
Mysterious experiences
Stored in meek mind...
Mad, man made thoughts, most memorable
'Me, my, mine, myself, my style'
My mind most refuses such motivations..
Mother nature's mild mind
Most mammals spoil murky mind
Misuse it and make  weak and mad mood..
Mind should be meaningful
Memorable, most elegant
Elaborated evolved evoked
To rule and control all...
@Prem @

The poet has attempted to present mind's behavior through the poem. Human mind is fickle. The poet has rightly compared it with marbles. Thoughts which dwells in mind of a human being determines his / her course of life. Virtuous mind leads virtuous life while evil mind produces evil life. Mind of a human reflects his / her internal true personality . Outwardly spoken or written words may be deceiving. In this connection, I remember two beautiful lines of Radha Suchi, an EV member, " When care is Expressed truly, people will get Impressed naturally  !! ". It is the mind which produces sensible as well as revolutionary or violent humans. I also remember the oft - qouted line of well known poet, Ravidas, " MAN CHANGA TO KATHOTI ME GANGA ( If your mind is pure, you need not search for Almighty God elsewhere ) . In this poem, the poet has employed a poetic device called ' Alliteration ' extensively. He used words which had begun with letter ' m ' for fifty nine (59) times throughout the poem  ! Many readers feel it troublesome, but I have no objection against it. Mind is really miracle and marvoulous. Many psychologist spend their lives while analysing mind's behaviour and many more are still doing their research on it. I  like the poet's idea that mysterious experiences are stored in meek minded people. He ended the poem with a suggestion that a human being's mind should be mature enough to live in a peaceful society.
By Datta Nawadkar

378. ವಿಮರ್ಶೆಗಳು-ಹನಿಹನಿಯ ಬಳಗ

[7/19, 10:35 AM] ‪+91 99728 19664‬: ಪ್ರೇಮ್ ಅವರ ಗಜಲ್ ಒಂದು ಪಾರವಾಳದ ಜೀವನದ ದುರಂತ ಕಥೆಯನ್ನೇ ಹೇಳುತ್ತಿದೆ. ಪಾರಿವಾಳದ ನೋವು ಮನಸಿಗೆ ತಟ್ಟುತ್ತದೆ.
[7/19, 5:19 PM] Wr Champu: ಪ್ರೇಮ ಅವರ ಗಜ಼ಲ್ *ಸು.ರಂ ಎಕ್ಕುಂಡಿ* ಅವರ *ಪಾರಿವಾಳ* ಕವಿತೆಯನ್ನು ನೆನಪಿಸುತ್ತಿದೆ ಇದು ಕಥನ‌ಕವನದಂತೆ ಕಾಣುತ್ತಿದೆ . ಇದನ್ನು ಕಥನ ಕವನವಾಗಿಸಿದರೆ ಚಂದವಾಗಿ ಕಾಣಿಸುತ್ತದೆ
[7/20, 11:29 AM] ‪+91 99450 72718‬: ಪ್ರೇಮ್ ರವರ ಗಝಲ್ ಮಾನವತೆ ಮೆರೆಯುವ ಭಾವ ಹೊಂದಿದೆ
[7/20, 1:32 PM] Wr Champu: ಗಜ಼ಲ್

ಕವಿ-ಪ್ರೇಮ
👉ನಿಯಮ ಅನ್ವಯವಾಗಿದೆ
👉ಹೂರಣ- ದಿನೇಶವರು ಮಾನವನಾಗಿ ಮಾಡಬೇಕಾದ ಕಾರ್ಯಗಳನ್ನು ತಮ್ಮ ಗಜ಼ಲ್ ಮೂಲಕ ಹೇಳಿದರೆ ಅದರ ಮುಂದುವರಿದ ಭಾಗದಂತೆ ಪ್ರೇಮ ಅವರ ಗಜ಼ಲ್ ಇದೆ. ದೇಷದ ಕಳೆ, ಮೋಸದ ಸುರಿಮಳೆ, ವೈರಿ ಕದನದ ಮಾಲೆ,ಕಪಟದ ಸುಳಿ, ಸೇಡಿನ ಕೆಂಡದ ಉರಿಯು ಏತಕೆ? ಎಂದು ಪ್ರಶ್ನಿಸುವುದರ ಮೂಲಕ ಪ್ರೇಮ ಪ್ರೀತಿ ಸ್ನೇಹದ ಚಿಗುರು ಒಡಮೂಡಲೆಂಬ ಅದಮ್ಯ ಮೌಲ್ಯ ಇದು ಹೊತ್ತು ನಿಂತಿದೆ. ಕವಿ ಹೃದಯಕ್ಕೆ ನಮನಗಳು
*🎼ಚಂಪೂ✒*

ಗುರುವಾರ, ಜುಲೈ 19, 2018

377. ಗಝಲ್-6

ಗಝಲ್,

ಮಾನವತೆಯ ನಡುವೆ ದ್ವೇಷದ ಕಹಳೆಯು ಏಕೆ?
ಪ್ರೀತಿಯ ನಡುವೆ ಮೋಸದ ಸುರಿಮಳೆಯು ಏಕೆ?

ಪ್ರೀತಿ-ಸ್ನೇಹಗಳ ನಡುವೆ ಸಂತಸದ ಸವಿ
ನಡುನಡುವೆ ವೈರ ಕದನಗಳ ಮಾಲೆಯು ಏಕೆ?

ನಂಬಿಕೆಯು ಬದುಕಿನ ಮೂಲ ಗುರಿ
ಅದರೆಡೆಯಲಿ ಕಪಟತನದ ಸುಳಿಯು ಏಕೆ?

ಗೆಳೆತನದ ಮಾಯೆಯದು ಮರೆಯಲಸಾಧ್ಯ
ಮರೆಯಲಿ ನೋಡಿಯೂ ಗುರುತಿಸದಿರುವ ಎದೆಯು ಏಕೆ?

ಪ್ರೇಮದ ಮನದಿ ಬದುಕಲು ಬೇಕು
ಸೇಡಿನ ಕಿಡಿಯ ಕೆಂಡದ ಉರಿಯು ಏಕೆ?
@ಪ್ರೇಮ್@

376. ಗಝಲ್-7

ಗಝಲ್

ನೀ ಬಂದಾಗ ನಡು ನಡಗುವುದು ಏಕೆ?
ನಿನ್ನ ನೋಡಿದಾಗ ಎದೆ ಬಡಿದುಕೊಳ್ಳುವುದು ಏಕೆ?

ಮನಸಲ್ಲೆಲ್ಲಾ ಬಂದು ಕಚಗುಳಿ ಕೊಡುವುದು
ಕನಸಲ್ಲೂ ನನ್ನ  ಕಾಡಿಸುವುದು ಏಕೆ?

ಸ್ಪರ್ಶ ಸುಖದಿ ಮೈ ನವಿರೇಳುವುದು
ನೆನಪಿನಂಗಳದಿ ಅರಳಿ ನಗುವುದು ಏಕೆ?

ನಿನ್ನೊಡನೆ ಕಳೆದ ಪ್ರತಿ ಕ್ಷಣವೂ ಅಪ್ರತಿಮ
ಮೌನ ಮರೆತು ಮುದ್ದಾಡುವುದು ಏಕೆ?

ಪ್ರಿಯ ನುಡಿಯಲಿ ಕರೆದುದೇ ಚೆನ್ನ
ಪ್ರೇಮನ ನೆಲ್ಮೆಯಲಿ ಕರೆಯದಿರುವುದು ಏಕೆ?
@ಪ್ರೇಮ್@

375. ಕವಿತೆ

ಕವಿತೆ

ಬತ್ತದೊರತೆ ನಲಿವಿನಲಿ
ಪುಟಿದು ಬಂತು
ನನ್ನೆದೆ ಗೂಡಲ್ಲಿ
ಮುದ್ದು ಹಕ್ಕಿಯಾಗಿ...

ಮತ್ತೊಮ್ಮೆ ಇಣುಕಿಣುಕಿ
ಜಾರದಂತೆ ಬಳುಬಳುಕಿ
ಸುತ್ತಲಿಂದ ಹೆಕ್ಕಿಹೆಕ್ಕಿ
ಪಕ್ಕದಲ್ಲೆ ಸುಳಿಯಿತು..

ಮೆತ್ತನೆದ್ದು ಬಂದಿತದು
ಧುತ್ತನೆದ್ದು ನಿಂತಿತದು
ಕತ್ತಲೆಯ ಸೀಳಿತದು
ಸುತ್ತಲೆಲ್ಲ ಪಸರಿಸಿತು..

ನರ್ತನವ ಮಾಡುತ್ತ
ಕರ್ತನನೆ ಕಾಡುತ್ತ
ವರ್ತನೆಯ ಬದಲಾಯಿಸುತ
ವರ್ತಕನ ಕವನವಿದು...
@ಪ್ರೇಮ್@

374.ಬದುಕು

ಕವನ

ಏಕೆ ಬದುಕೆ
ಭವಣೆ ತೋರಿ
ಬಳಲಿ ಬೆಂಡಾಗಿಸಹೆ
ನನ್ನ ಒಲವ...

ನಿನ್ನ ಮಿಡಿತ
ನನ್ನ ತುಡಿತ
ಮಿಂಚಿ ಮಾಯವಾಗಿದೆ
ನೀನು ಬರಬಾರದೆ..

ಬರಡಾದ ಬಾಳೀಗ
ಮಿಂಚಿದಂತೆ ಆಗಿದೆ
ಮನದ ಮೂಲೆಯಲ್ಲೆಲ್ಲೋ
ನಿನ್ನ ನೆನಪಾಗಿದೆ..

ಭವದ ಚಿಂತೆ
ಬಿಸುಟು ನಾನು
ನಿನ್ನನೇ ನೆಚ್ಚಿದೆ
ನೀನೇ ಸಾಗಿದೆ..
@ಪ್ರೇಮ್@

373. ಗಝಲ್-8

ಗಝಲ್

ಇಣುಕಿಣುಕಿ ನೋಡಿ ಉತ್ತಮ ಜಾಗವೆಂದರಿಯಿತಾ ಪಾರಿವಾಳ
ಕಷ್ಟದಲಿ ಕಡ್ಡಿಗಳ ತಂದು ಗೂಡು ಕಟ್ಟಿತಾ ಪಾರಿವಾಳ...

ಖುಷಿಯಲಿ ತನ್ನ ನೋವ ಮರೆಯಿತು
ಗೂಡಿನಲಿ ಮೊಟ್ಟೆಯಿಟ್ಟಿತಾ ಪಾರಿವಾಳ..

ಮೊಟ್ಟೆಯ ಮೇಲೆ ಕುಳಿತು ಕಾವುಕೊಟ್ಟಿತು
ತನ್ನ ಜವಾಬ್ದಾರಿಯ ಶ್ರದ್ಧೆಯಿಂದ ಮಾಡಿತಾ ಪಾರಿವಾಳ..

ಮೊಟ್ಟೆಯೊಡೆಯಿತು, ಮರಿಗಳ ನೋಡಿತು
ಸಂತಸದಿ ನಕ್ಕು ನಲಿಯಿತಾ ಪಾರಿವಾಳ...

ಬಾಯಿ ತೆರೆದು ಕುಳಿತು 'ಅಮ್ಮಾ'ಎಂದು ಕರೆದವು ಮರಿಗಳು
ಮಕ್ಕಳಿಗೆ ಕಾಳ ತರಲು ಹಾರಿತಾ ಪಾರಿವಾಳ..

ಬೀಸಿದನು ಬಲೆಯ ಮಾನವ ಕಾಳ ಹಾಕಿ
ಬಲೆಯಲಿ ಸಿಕ್ಕಿ ಒದ್ದಾಡಿತಾ ಪಾರಿವಾಳ

ಪಂಜರದಿ ಹಾಕಿ ಖುಷಿಪಟ್ಟ ಮನುಜ
ಪುಟ್ಟ ಕಂದಮ್ಮಗಳ ಹಸಿವ ಬೇಗೆಗೆ ಮರುಗಿತಾ ಪಾರಿವಾಳ

ಪ್ರೇಮದಿ ಬೆಳೆಸಬೇಕಾದ ಕಂದಮ್ಮಗಳ ನೆನೆಯಿತು
ಏನೂ ತಿನ್ನದೆ ತನ್ನ ಜೀವ ಕಳೆದುಕೊಂಡಿತಾ ಪಾರಿವಾಳ...
@ಪ್ರೇಮ್@