[4/17, 8:35 AM] Wr Vishwanath Gowda Mysore: ಪ್ರೇಮ ರವರ. ಸ್ಪೂರ್ತಿ
ನಾ ಧರೆಯ ಮೇಲೆ ಕಣ್ಣು ಬಿಟ್ಟಾಗಲೇ ನಾ ಕೂಗಿದ ದನಿಗೆ ಹರುಷಗೊಂಡು ಸಂತಸದಿ ಮುದ್ದಾಡಿ ಎಂಬ ಕವನದ ಸಾಲುಗಳು ನಮ್ಮ ಮೈ ಮನವನ್ನು ತಣಿಸುತ್ತವೆ ಅಮ್ಮ ಎಂದೊಡನೆ ನಮ್ಮ ಮನದಲ್ಲಿರುವ ನೋವುಗಳೆಲ್ಲವೂ ಮಾಯವಾಗುವ ಔಷಧ ಕಾಣದ ರೂಪಕ್ಕೆ ಬಣ್ಣ ಬಣ್ಣದ ಕನಸ್ಸುಗಳ ಕಟ್ಟುವ ಮಮತಾಮಹಿ ತಾಯಿ ಕವನ ಸೊಗಸಾಗಿದೆ
[4/17, 8:40 AM] Wr Ravi Jadav Sonekavi: *ಪ್ರೇಮಕ್ಕ*
ಅವರ ಈ *ಸ್ಫೂರ್ತಿಯೊಳಗ*
೦೧)..ಈ ಜಗದ ಅಸಾಮಾನ್ಯ ಮೂರ್ತಿಗಳನ್ನು ಅನನ್ಯವಾದ ಪ್ರೀತಿಯಿಂದ ಚಿತ್ರಿಸುವ ಚಿತ್ರಣವಿದೆ,
ತಾಯಿ, ಪ್ರಕೃತಿ, ದೈವ ಮಕ್ಕಳು ಗುರುಗಳು ಯೋಧರು, ವೈದ್ಯರು. ನ್ಯಾಯಾಧೀಶರು, ಈ ಎಲ್ಲ ಅಮೂರ್ತ ಸ್ವರೂಪಗಳ ಭವದ ಬುತ್ತಿ ತನ್ಮಯತೆಯಿಂದ ಕೂಡಿದೆ.
೦೨.)ಪ್ರಕೃತಿಗೆ ಸಂಬಂಧಿಸಿದ ಕೆಲವು ಪದಗಳು!
ಧರೆ,ಹಸಿರು, ಗಿಡ.ಮರ, ನೀರು, ಸೂರ್ಯ, ಗಾಳಿ, ಇರುಳು, ಚಂದ್ರ, ಸಾಗರ, ಹಸಿರೆಲೆ, ಪರ್ವತ, ಹಿಮ ಹೀಗೆ ಇತ್ಯಾದಿ ಪ್ರಕೃತಿಗೆ ಪೂರಕವಾಗಿ ತನ್ನ ಸ್ವಾಭಿಮಾದ ಲಕ್ಷ್ಮಣ ರೇಖೆಯಲ್ಲಿ ಹೇಳುವ ಸೂಕ್ಷ್ಮತೆ,
೦೩) ಪ್ರಾಸ ತರುವ ಪ್ರಯತ್ನ,
ಒಂದು ಸಮತಟ್ಟವಾದ ಬರವಣಿಗೆ ಪ್ರಾಸ ಬಂದರೆ ಅದಕ್ಕೆ ಮೇರಗು ಒಲವು ಶೋಭೆ ಬರುತ್ತದೆ ಎನ್ನುವ ಭಾವನೆಯನ್ನು ಗೋವಿಂದ ಪೈಗಳು ೨೦ನೇ ಶತಮಾನದಲ್ಲಿಯೇ ತ್ಯಜಿಸಿದ್ದಾರೆ.
ಒಮ್ಮೆ ವಿವೇಚಿಸಿ ಪ್ರೇಮಾ ಮೇಡಮ್..ನೀವು ಬುದ್ದಿವಂತರು, ಜಾಣರು,
ದೊಡ್ಡವರು ನಾನು ಹೇಳುವ ಹಾಗಿಲ್ಲ.
ಕುಡಿಸಿ, ಮುದ್ದಾಡಿ ನೀಡಿ, ಬೆಳೆಸಿಟ್ಟು, ಕೊಟ್ಟು, ತಂದಿಟ್ಟು, ಸಂತಸವಿಟ್ಟು, ಅಂದವನಿಟ್ಟು,
ಸುರಿದಿಟ್ಟು, ಮನವಿಟ್ಟು, ತುಂಬಿಟ್ಟು, ಬಡಿಸಿಟ್ಟು, ಹರಿಬಿಟ್ಟು,ತುರುಕಿಟ್ಟು.ಇತ್ಯಾದಿ ಪದಗಳು ಬಲವಂತದಿಂದ ಬಂದು ಈಕವಿತೆಯ ರಶ್ಮಿಯನ್ನು ತೋರಿಸುವ ತಂತ್ರಗಾರಿಕೆಯಲಿದೆ.
೦೪) ಮಾನವ ಕೇಂದ್ರಿತ ಪದಗಳು.
ಮಾನವನಿಗೆ ಸಂಬಂಧಿಸಿದ ಕಣ್ಣು, ಊಟಾ, ನಿದ್ರೆ, ಪ್ರೀತಿ, ನೀತಿ, ಭಕ್ತಿ, ಶಕ್ತಿ, ಕಲಿಕೆ, ಆಸೆ, ಅಸೂಯೆ, ಕಾಮ, ಮದ ಕ್ರೋಧ ಮೋಹ ಲೋಭ,ಇತ್ಯಾದಿ ಪದಗಳು ಮನುಷ್ಯನ ಮೌಲ್ಯಗಳನ್ನು ಹೇಳುವಂತ ವಿವೇಕವಿದೆ.
*ಒಟ್ಟಾರೆಯಾಗಿ,*
*ಅರ್ಥಪೂರ್ಣ*
*ದೀರ್ಘವಾಗಿರುವುದು ಬಿಟ್ಟು ಕವಿತೆ ಅಂತರಾಳ ಭಾವ ತುಂಬಿ ಹರಿಯುವ ಹಾಗೆ, ಅಲೆಗಳು*
*ಅಪ್ಪಳಿಸುವ ಹಾಗೆ , ಪ್ರಾಸ ಪದಗಳಿಂದ ತಪ್ಪಿಕೊಳ್ಳದಂತೆ ಕಟ್ಟಿ ಹಾಕುವ ಕೆಲಸವನ್ನು ಮಾಡಿ,*
*ಮಾನವ ಕೇಂದ್ರತವಾದ ಎಲ್ಲ ಪರಿಭಾಷೆಗಳಿಗೆ ಒಮ್ಮೆ ಜೀವ ಕೊಟ್ಟ ಜನನಿಯಂತೆ !*
ದೀರ್ಘವಾಗಿರುವುದು ಬಿಟ್ಟು ಮತ್ಯಾವ ಮಾತಿಲ್ಲ,
*ದೀರ್ಘವಾಗಿರುವುದು.*
*ಇತಿಮಿತಿಯಲ್ಲಿ ಸ್ವಲ್ಪ ಸಾಲುಗಳನ್ನು ಇಟ್ಟು ಬರೆದರೆ ಚೆನ್ನ ಪ್ರೇಮಕ್ಕ*
ನನ್ನ ಮಾತಿದು,
*ಧನ್ಯವಾದ ಪ್ರೇಮಕ್ಕ ನಾನು ಶುದ್ಧ ಸೋನೆ ಹುಡ್ಗ*
@Soone.
ಸೋನೆ
[4/17, 11:39 AM] Wr Vijaya Kundapur: ಪ್ರೇಮ್ ರವರ
*ಸ್ಪೂರ್ತಿ*
ಬದುಕಿನ ವಿವಿಧ ಮಜಲುಗಳಲ್ಲಿ ಬರಹಕ್ಕೆ ಸ್ಪೂರ್ತಿಯಾದವರನ್ನು ನೆನೆದು ಬರೆದ ಕವನ ಬಹಳ ಸೊಗಸಾಗಿದೆ...
ಮೊದಲಿಗೆ ಹೆತ್ತ ತಾಯಿ ಲಾಲಸಿ ಮುದ್ದಿಸಿ ಕೈ ಹಿಡಿದು ನೆಡೆಸುತ್ತಾ ತಿದ್ದಿಸಿದ್ದು
ನಂತರ ಪ್ರಕೃತಿ ಸ್ಪೂರ್ತಿಯಾಗಿದ್ದು
ಹಾಗೆಯೇ ಬದುಕಿನ ತಿರುವುಗಳಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬದುಕಿಗೆ, ಬರಹಕ್ಕೆ ಸ್ಪೂರ್ತಿಯಾದ ದೈವ ಶಕ್ತಿ,ಗೆಳೆಯರು ಯೋಧರು ಹೀಗೆ ಚೈತನ್ಯ ತುಂಬಿದವರನ್ನು ಸ್ಮರಿಸುವ ಕವನ ಬಹಳ ಸೊಗಸಾಗಿದೆ
ಸಾಲುಗಳ ಮಿತಿ ಹೆಚ್ಚಾಗಿದೆ
ಆದಷ್ಟು ನಾಲ್ಕು ಸಾಲಿನ ನಾಲ್ಕರಿಂದ ಐದು ಪ್ಯಾರಾದಲ್ಲಿ ಕವನ ಬರೆಯಲು ಪ್ರಯತ್ನಿಸಿ
ಶುಭವಾಗಲಿ
[4/17, 8:22 PM] Prem: ಹೃದಯ ತುಂಬಿ ಹಾರೈಕೆಗಳ ಮಹಾ ಸಾಗರ ಹರಿಸಿದ ಕವಿಮನಗಳ ಪ್ರೀತಿಗೆ ನಾನು ಚಿರಋಣಿ. ಚಂದ್ರು ಸರ್ ಅವರ ಉತ್ತಮ ನಾಯಕತ್ವ ನನಗೆ ತುಂಬಾ ಹಿಡಿಸಿತು. ಅವರು ಪ್ರತಿ ದಿನ ವಿಮರ್ಶಕರನ್ನು ಹಾಗೂ ಕವಿಗಳನ್ನು ಕರೆದೊಯ್ಯುವ ರೀತಿ ಚೆನ್ನಾಗಿದೆ. ಗುಂಪಲ್ಲಿ ಗೋವಿಂದ ಅಂತ ಹಲವಾರು ಗುಂಪುಗಳ ಮಾಡಿದ ಅಡ್ಮಿನ್ ಎಲ್ಲೋ ಎಸ್ಕೇಪ್ ಆದ ಗುಂಪುಗಳು ನೆಲಕ್ಕಚ್ಚಿವೆ. ಕೆಲವು ಯಾರ್ಯಾರೋ ಕವನ ಹಾಕಿ ಉಸಿರು ಮಾತ್ರ ಎನ್ನುವಂತಿವೆ. ನಾಯಕ ಸರಿಯಿದ್ದರೆ ಮಾತ್ರ ಒಗ್ಗಟ್ಟಿನಿಂದ ಸರ್ವ ಕಾರ್ಯಕ್ಕೆ ಬಲ ಬರುವುದು..ಉತ್ತಮ ವಿಮರ್ಶಕರಾದ ವಿಜಯಾ ಮೇಡಂ, ಸೋನೆ ಕವಿ, ..ಇವರೆಲ್ಲರಿಗೂ ಧನ್ಯವಾದಗಳು..ನಿಮ್ಮೆಲ್ಲರ ಪ್ರೀತಿ ಹೀಗೇ ಇರಲಿ..
@ಪ್ರೇಮ್@
[4/18, 10:34 AM] +91 70220 69778: *ಕವಿಯತ್ರಿ* ಪ್ರೇಮ್
*ಕವನ* ಉಪ್ಪಿಟ್ಟು
ಏನೆ ತಿಂಡಿಕೊಟ್ಟರೂ ನಾ ಮುಂದೆ.ಉಪ್ಪಿಟ್ಟು ಎಂದರೆ ಯಾವತ್ತೂ ಹಿಂದೆ.ಯಾಕೆಂದರೆ ನನಗೆ ಇಷ್ಟ ಇಲ್ಲ. ಅಮ್ಮನ ಏಟಿಗೆ ಹೆದರಲಾರೆ.ಉಪ್ಪಿಟ್ಟು ಎಂದೂ ತಿನ್ನಲಾರೆ.
*ವಿಶೇಷವಾದ ಕವನ*
ಯಾಕೆ ಹೇಳಿ? ಉಪ್ಪಿಟ್ಟು ನನಗೂ ಇಷ್ಟ ಇಲ್ಲ.
[4/18, 1:09 PM] Wr Vijaya Kundapur: ಪ್ರೇಮ್ ರವರ
*ಉಪ್ಪಿಟ್ಟು*
ಹಾಸ್ಯ ಲಹರಿಯ ಕವನ ಬಹಳ ಸೊಗಸಾಗಿ ಮೂಡಿದೆ
*ಉಪ್ಪಿಟ್ಟೆಂದರೆ ಉಪ್ಪುಪ್ಪುಲ್ಲ ಮೂಗು ಮೂರಿಯೋದ್ಯಾಕೆ*
*ತರಕಾರಿ ಹಾಕಿ ಮಾಡಿದ ಉಪ್ಪಿಟ್ಟಿನ ರುಚಿಗೆ ಮನಸೋಲದೆ ಓಡೋದ್ಯಾಕೆ*
*ದಿನವೂ ದೋಸೆ ಇಡ್ಲಿ ತಿನ್ತಾ ಇದ್ರೆ ಬೇರೆ ತಿಂಡಿಯ ಸವಿ ತಿಳಿಯೋದು ಬೇಡ್ವಾ*
*ತುಪ್ಪದಲ್ಲಿ ಘಮ್ಮನೆ ಹುರಿದ ಉಪ್ಪಿಟ್ಟಿನಲಿ ಹುಳಿ ಸಿಹಿ ಸೇರಿಸಿದ ರುಚಿ ನಾಲಿಗೆ ತಣೀಸೋದಿಲ್ವಾ*
*ಉಪ್ಪಿಟ್ಟೆಂದರೆ ಮನೆ ದೇವರಂತೆ ಆಪಾದ್ಭಾಂದವ ನೆಂಟ*
*ಉಪ್ಪಿಟ್ಟು ತಿಂದು ಜಟ್ಟಿಯಾಗಿ ಆಗ್ಬಹುದು ಎಂಟೆದೆ ಭಂಟ*
ಉಪ್ಪಿಟ್ಟಿನ ಪ್ರಹಸನ ಬಹಳ ಸೊಗಸಾಗಿದೆ
*ನಮ್ಮ ಉಪ್ಪಿಟ್ಟೇಶ್ವರ ಪುಟ್ಟಣ್ಣನವರು ಬರುವ ಮೊದಲು ಅಡಗಿಕೊಳ್ಳಿ*
ಧನ್ಯವಾದಗಳು
ಶುಭವಾಗಲಿ
[4/18, 2:50 PM] +91 94493 61345: ಪ್ರೇಮ್ ಅವರ ಕವನವೇನೊ ಚೆನ್ನಾಗಿದೆ. ಆದರೆ ನಾನು ಉಪ್ಪಿಟ್ಟು ಅಭಿಮಾನಿ ಆದ್ದರಿಂದ ಇಷ್ಟವಾಯಿತು ಅಂತ ಹೇಳಲ್ಲ.
[4/19, 11:52 AM] Wr Vijaya Kundapur: ಪ್ರೇಮ್ ರವರ
*ಹಾಳಾಯಿತು*
ಮಾನವ ಬುದ್ದಿ ಶಕ್ತಿ ಉಪಯೋಗಿಸಿ ಜೆ ಸಿ ಬಿ ಕಂಡು ಹಿಡಿದ
ಆ ಯಂತ್ರವು ಭೂ ತಾಯಿಯ ಒಡಲು ಬಗೆದು ಪ್ರಕೃತಿಯಲ್ಲಿ ಅಸಮತೋಲನ ಉಂಟು ಮಾಡಿತು
ಮಳೆ ನೀರು ಹಿಡಿದಿಡಲು ಮರದ ಬೇರಿರರದಂತೆ ಬುಡ ಮೇಲು ಮಾಡಿದ ಯಂತ್ರವು ಅಟ್ಟಹಾಸ ಮೆರೆದು ಪ್ರಕೃತಿಯನ್ನು ಹಾಳು ಗೆಡವಿತು
ಎಲ್ಲವನ್ನೂ ತಿಳಿದ ಮನುಜ ಏಕೆ ಹೀಗೆ ಅತುರದಿಂದ ತನ್ನ ಕಾಲ ಮೇಲೆ ಕೊಡಲಿ ಹಾಕಿಕೊಂಡು ಈಗ ಪ್ರಕೃತಿ ಮುನಿದಿದೆ ಎಂದು ಗೋಳಾಡುವ ಮೊದಲು ಅರಿವು ಮೂಡಿಸಿಕೊಳ್ಳಲಿ
ಪ್ರಕೃತಿಯ ನಾಶ ನಿಲ್ಲಿಸಲಿ ಎಂದು ಸಾಮಾಜಿಕ ಕಳಕಳಿ ಸಾರುವ ಕವನ ಬಹಳ ಸೊಗಸಾಗಿ ಮೂಡಿದೆ....
ಧನ್ಯವಾದಗಳು
ಶುಭವಾಗಲಿ
[4/19, 6:41 PM] +91 97432 18549: ಕು.ಸರಿತಾ.ಕೆ.ಗುಬ್ಬಿ ಇವರ ಕವನ ಹಾಗೂ ಕಥಾ ಸಂಕಲನಗಳ ಲೋಕಾರ್ಪಣೆಯು ದಿನಾಕ ೧೨/೫/೨೦೧೯ ರ ಭಾನುವಾರ ಬೆಳಗ್ಗೆ ೧೦.೩೦ ಕ್ಕೆ ಕುವೆಂಪು ಕನ್ನಡ ಭವನ ವಿದ್ಯಾನಗರ ದಾವಣಗೆರೆಯಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದ್ದು,
ಕವಿಗೋಷ್ಠಿಗೆ ಹೆಸರು ನೊಂದಾಯಿಸುವ,ಕಡ್ಡಾಯವಾಗಿ ಬರುವಂತಹ ಆಸಕ್ತ ಕವಿಗಳು ಮಾತ್ರ ಏಪ್ರಿಲ್ 30 ರೊಳಗೆ ತಮ್ಮ ಹೆಸರುಗಳನ್ನ ನೊಂದಾಯಿಸಲು ತಿಳಿಸಲಾಗಿದೆ.
ಕವಿಗೋಷ್ಠಿಗೆ ಆಗಮಿಸಿದ ಕವಿಗಳಿಗೆ ಕಾರ್ಯಕ್ರಮದ ಕೊನೆಯಲ್ಲಿ ನೆನಪಿನ ಕಾಣಿಕೆ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು.
ಹೆಸರು ನೊಂದಾಯಿಸಲು.
9611969690 ಗೆ ತಮ್ಮ ಪೂರ್ಣ ಹೆಸರನ್ನು ಕೊಡಬೇಕಾಗಿ ಕೋರಲಾಗಿದೆ.
ವಿ.ಸೂ...
ಆಯ್ಕೆ ಆದ ಕವಿಗಳು ಕಾರ್ಯಕ್ರಮದ ದಿನ ಬೆಳಿಗ್ಗೆ 10.30 ರೊಳಗೆ ಆಗಮಿಸಬೇಕಾಗಿ ವಿನಂತಿಸುತ್ತೇವೆ.ಬೇಗನೇ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಿ.ಮದ್ಯಾಹ್ನ ಉಪಹಾರದ ವ್ಯವಸ್ಥೆ ಇರುತ್ತದೆ.
ಧನ್ಯವಾದಗಳೊಂದಿಗೆ
ನಿರ್ವಹಣಾ ಸಮಿತಿ
[4/20, 8:04 AM] +91 89708 66790: *ಪ್ರೇಮ ಮೇಡಂರವರ*
*ಜೀವನದಾಟ*
ಹೌದು... ಜೀವನವೇ ಒಂದು ಆಟವೆಂದು ತಿಳಿದು ಆಡಲು ಸದಾ ಸಿದ್ಧರಿರಬೇಕು ಅಲ್ಲದೆ ಆಡುವ ಮೊದಲು ನಾವು ಬಲಶಾಲಿಗಳಾಗಲು ಬೇಕಾದ ಸಿದ್ಧತೆಯನ್ನು ಮಾಡಿಕೊಂಡಿರಬೇಕೆಂಬುದ ಆಟದ ಮೂಲಕ ಜೀವನದಲ್ಲಿ ಬದುಕಲೊಂದು ಪಾಠವನ್ನು ತಿಳಿಸಿದ್ದಾರೆ...
ಗೆಲುವಲಿ ಸಿಗುವ ಸಂತಸ, ಕೀರ್ತಿಗಳೆಲ್ಲವೂ ನಮ್ಮ ಪಾಲಾಗುವುದು ಎಂಬುದನ್ನೂ ಅರ್ಥೈಸಿದ್ದಾರೆ...
ಧನ್ಯವಾದಗಳು ಮೇಡಂ..
*ಪ್ರತಿಮ*
[4/20, 9:08 AM] Wr Abhi: *ಪ್ರೇಮ ಮೇಡಂ ಅವರ ಜೀವನದಾಟ*
ಸಾನೆಟ್‌ನ ಅನ್ನು ಕನ್ನಡದಲ್ಲಿ ಪ್ರಯತ್ನಿಸಿರೋದಕ್ಕೆ ಅಭಿನಂದನೆಗಳು ಮೇಡಂ. ಸಾನೆಟ್ ಅನ್ನೋ ಪದ ನೋಡಿದ ಕೂಡಲೇ *ವಿಲಿಯಂ ಷೇಕ್ಸ್‌ಪಿಯರ್‌ನ ಸಾನೆಟ್ 116* ನೆನಪಾಯ್ತು.
ಬದುಕನ್ನು ಕ್ರಿಕೆಟ್‌ಗೆ ಹೋಲಿಸಿ ಬರೆದಿದ್ದೀರಾ. ಕ್ರಿಕೆಟ್‌ನ ಪದಗಳನ್ನು ಬದುಕಿಗೆ ಹೋಲಿಸಿಕೊಂಡು ಬದುಕಿಗೆ ಒಂದು ಉತ್ತಮ ಸಂದೇಶ ಕೊಡುತ್ತಿದ್ದೀರಾ. ಮೂರನೇ ಪ್ಯಾರಾ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗದೇ ದೇಶಕ್ಕೂ ನಾವು ಮುಡಿಪು ಎಂದು ಹೇಳಿರುವುದು ಗಮನಾರ್ಹ
*ಸಾನೆಟ್ ಅಂತಾ ಬರೆದಿರೋದಕ್ಕೆ ಒಂದು ಪ್ರಶ್ನೆ ಮೇಡಂ.*
Usually ಸಾನೆಟ್‌ಗಳು *ABAB CDCD EFEF GG* ಪ್ರಾಸದ formation ಅಲ್ಲಿರುತ್ತೆ. ಅದು ಇಲ್ಲಿ ಕಾಣಸಿಗಲಿಲ್ಲ.
ನನಗೆ ತಿಳಿದಿರುವ ಮಟ್ಟಿಗೆ ಸಾನೆಟ್‌ಗಳು *ಇಂಗ್ಲೀಷ್, ಫ್ರೆಂಚ್ ಮತ್ತು ಇಟಾಲಿಯನ್ ಭಾಷೆಗಳಲ್ಲಿ ಮೂಡಿಬಂದಿದ್ದವು*. ನಾನು ಇಂಗ್ಲೀಷ್ ಸಾನೆಟ್ಸ್ ಮಾತ್ರ ಓದಿರೋದ್ರಿಂದ ಈ ಪ್ರಶ್ನೆ ಮೇಡಂ ತಪ್ಪು ತಿಳಿಯಬೇಡಿ
ಇಷ್ಟವಾಯಿತು ಕವಿತೆ
ಧನ್ಯವಾದಗಳು
ಅಭಿ
[4/20, 6:56 PM] Wr Sudha Raju: ಅದರಲ್ಲೂ petratchan type of sonnet ಓದಿ Shakespearean sonnet ಗಿಂತ...Spenserian ಸೋನೆಟ್ ನಲ್ಲಿ ಒಳ್ಳೆಯ ಪ್ರಾಸ ಪದಗಳನ್ನು ಕಾಣಬಹುದು
[4/21, 6:10 AM] Prem: ಮಾಡರ್ನ್ ವಚನ-3
ಮಕ್ಕಳ ಕಡೆ ಗಮನವೀಯದೆ
ಮೊಬೈಲ್ ಗೆ ಪೂರ್ತಿ ಸಮಯ ಕೊಡುವ
ತಾಯಿಗೆ ಮುಂದೆ ಸಮಯ ಕೊಡುವರೇ ಜಗದಿ ಶಿವಾ...
@ಪ್ರೇಮ್@
21.04.2019
[4/22, 9:49 AM] +91 93530 34779: ಪ್ರೇಮ ಮೇಡಂ *ಕವಿಗಳು* ಹೇಗಿರಬೇಕು ಅಂತ ಸಿಹಿಯಾಗಿ ಸರಳವಾಗಿ ಬರೆದಿದ್ದೀರಿ.
ಗೆಳೆಯರಿಂದ ಸದಾ ಕಲಿಯುತ್ತಾ..ಇಷ್ಟ ಆದ ಸಾಲನ್ನು ಹೇಳತ್ತಾ.. ಒಬ್ಬರಿಗೊಬ್ಬರು ಬಾಂಧವ್ಯ ಬೆಸೆದು ಬದುಕಬೇಕು.
ಬರೆದಷ್ಟೂ ಸಾಲುಗಳು ಅರ್ಥಪೂರ್ಣ
ಧನ್ಯವಾದಗಳು ಮೇಡಂ.
[4/22, 10:52 AM] +91 94837 75075: ಪ್ರೇಮ್ ಸಾರ್ ಭಾವನೆ ಮನದಂಗಳದಲ್ಲಿ ಅದೇನು ಭಾವುಕತೆ ತುಂಬಿದೆಯೋ ತಿಳಿಯದು ವಿಮರ್ಶೆಯ ಒಳಗುಟ್ಟು ಅದೇನಿದೆಯೋ ವಿಮರ್ಶೆಯ ಭಂಡಾರವೇ ಅಡಗಿದೆ ನನ್ನ ಕವಿತೆಗೆ ಜೀವ ತುಂಬಿದ ನಿಮಗೆ ನಾನೇನು ಕೊಡಲಿ ಹರುಷದ ಮನಸ್ಸಿನಿಂದ ತಮಗೆ ಹೃದಯ ಪೂರ್ವಕ ಅಭಿನಂದನೆಗಳು ಮತ್ತು ಧನ್ಯವಾದಗಳು ಸಲ್ಲಿಸುವೆ ಇಷ್ಟನ್ನು ನಾನು ಕೊಡಬಹುದು ಸ್ವಾಮಿ
[4/22, 11:04 AM] Wr Jabiulla Mulla: ಕವಿಗಳು
ಚಿರ ಬಾಂಧವ್ಯಕೆ ಸಾಕ್ಷ್ಯದಂತಿರಬೇಕು
ಕವಿ ಮನಗಳ ಸಂಬಂಧ..
ತಾ ಬೆಳೆದು ಇತರರ ಬೆಳೆಸುತಲಿ..
ತಾ ಬರೆದು ಪರರನು ಓದುತಲಿ..
ತಪ್ಪುಗಳ ಸರಿಪಡಿಸುತಲಿ..
ಗೆಳೆಯರಿಂದ ಸದಾ ಕಲಿಯುತಲಿ..
ಆನಂದದ ಭಾವಗಳ ಹಂಚುತಲಿ..
ಇಷ್ಟವಾದ ಸಾಲುಗಳ ತಿಳಿಸುತಲಿ...
ಸಂಕಟದಲಿ ಸಹಾಯ ಹಸ್ತ ನೀಡುತಲಿ
ಪಂಕಜದಂತೆ ಕೆಸರಲೂ ಅರಳುತಲಿ
ವಂಚನೆಯಿಲ್ಲದೆ ಸಮಾಜವ ತಿದ್ದುತಲಿ..
ತನ್ನ ಜೀವನದಿ ಉತ್ತಮಗೊಳ್ಳುತಲಿ..
ವಂದನೆ ಪಡೆದು ವಂದಿಸಿಕೊಳ್ಳುತ,
ಹಿಗ್ಗದೆ ಕುಗ್ಗದೆ ಜನರನು ತಿದ್ದುತ,
ವಸುಂದರೆಯೊಳದೆ ನಿರಂತರ ನಗುತ, ನಗಿಸುತ
ಕವಿಗಳು ಬದುಕಲಿ ಪರೋಪಕಾರಿಯಾಗುತ..
@ಪ್ರೇಮ್@
22.04.2019
*ಕವಿಗಳು*
*ರಚನೆ- ಪ್ರೇಮ್*
*ತುಂಬಾ ಒಳ್ಳೆಯ ಸಾಲುಗಳು ಮೇಡಂ ಹಿಡಿಸಿದವು ಚಿರಬಾಂಧವ್ಯಕ್ಕೆ ಸಾಕ್ಷಿಯಂತಿರಬೇಕು ಕವಿಮನಗಳ ಸಂಬಂಧ ನಿಜ ಗುರುಗಳೇ ತಾನು ಬೆಳೆಯುವುದರ ಜೊತೆ ಜೊತೆಗೆ ತನನ್ನೊಡನಿರುವವರನ್ನು ಬೆಳೆಸುವ ಮನಸಿರುವವನೇ ನಿಜವಾದ ಕವಿ ತನ್ನಲ್ಲಿರುವುದನ್ನು ಹಂಚಿ ತನಗೆ ತಿಯದಿರುವುದನ್ನು ತಿಳಿದುಕೊಳ್ಳುವವನು ಕವಿ ಹೃದಯ ಸವಿ ಹೃದಯ ಅನ್ನೋ ಮಾತಿದೆ ಆದರೆ ನಮ್ಮ ಮಧ್ಯ ಕೆಲವು ಇಂತಹ ಕವಿಗಳಿದ್ದಾರೆ ಅವರನ್ನು ಯಾವ ದೃಷ್ಟಿಯಿಂದ ನೋಡಿದರೂ ಕವಿಗಳು ಅನಿಸುವುದೇ ಇಲ್ಲ ಬರೀ ಕವಿತ್ವ ಇದ್ದರೆ ಸಾಲದು ಜೊತೆಗೊಂದಿಷ್ಟು ತಾಳ್ಮೆ ಸಹನೆ ಸಹಕಾರ ಮನೋಭಾವ ಇತರರನ್ನು ಗೌರವಿಸುವ ನಗುತಿರಬೇಕು ನಮ್ಮಲ್ಲಿ ಜ್ಞಾನವಿದ್ದ ಮಾತ್ರಕ್ಕೆ ನಾವೇನು ಸಕಲ ವಿದ್ಯಾ ಪಾರಂಗತರಲ್ಲ ಎಷ್ಟು ಕಲಿತರೂ ಇನ್ನೂ ಉಳಿಯುವ ಸಾಗರವಿದು ಅಂತಹ ಕವಿಗಳಿಗೆ ತಮ್ಮಲ್ಲಿ ಅಲ್ಪ ಮಟ್ಟಿಗೆ ಕವಿತ್ವ ಬಂದ ತಕ್ಷಣ ಇತರರು ಯಾಕೆ ಕೀಳಾಗಿ ಹೋಗ್ತಾರೋ ಗೊತ್ತಿಲ್ಲ ಎಲ್ಲ ಕವಿಗಳು ಹಾಗಿಲ್ಲ ಆದರೆ ಕೆಲವರು ನಮ್ಮ ಮದ್ಯಯೇ ಇದಾರೆ ಅಂತವರು ಅಂತವರು ನಿಮ್ಮ ಕವನ ಓದಿಯಾದರೂ ತಮ್ಮ ಅಹಂಕಾರ ದರ್ಪ ನಾನು ಪಂಡಿತ ಅನ್ನೋ ಭಾವನೆಯಿಂದ ಹೊರಬರಲಿ*
*ತಪ್ಪುಗಳನ್ನು ತಿದ್ದುವ ಆ ತಪ್ಪನ್ನ ತಿಳಿಸಿ ಹೇಳುವ ಗುಣ ಒಬ್ಬ ಕವಿಗೆ ತುಂಬಾ ಮುಖ್ಯ ಹಾಗೆಯೇ ಇತರರ ಸಲಹೆ ಸೂಚನೆಗಳನ್ನೂ ಪಾಲಿಸಬೇಕು ಒಳ್ಳೆಯ ವಿಚಾರ ಒಂದು ಚಿಕ್ಕ ಮಗುವಿನಿಂದ ಕಲಿಯಬಹುದಾಗಿದ್ದರೆ ಅದನ್ನು ಸಂತೋಷದಿಂದ ಸ್ವೀಕರಿಸಬೇಕು ಎಲ್ಲರೂ ಕಲಿಯುವ ಎಲ್ಲರಿಗೂ ಕಲಿಸುವ ಒಳ್ಳೆಯ ಭಾವ ಒಳ್ಳೆಯ ಭಾವನೆಯನ್ನು ಹಂಚಿಕೊಳ್ಳಲು ಯಾವತ್ತೂ ಒಂದು ಹೆಜ್ಜೆ ಮುಂದೆ ನಾವಿರಬೇಕು ಎನ್ನುವ ಮೊದಲ ಚರಣದ ಸಾಲುಗಳು ಹಿಡಿಸಿದವು ಗುರುಗಳೇ*
*ಇದು ಈಗಿನ ಕವಿಗಳಲ್ಲಿ ತುಂಬಾ ಮುಖ್ಯವಾಗಿ ಬರಬೇಕಾದ ಗುಣ ಗುರುಗಳೇ ಬರೀ ಬರವಣಿಗೆಗೆ ಆದ್ಯತೆ ಕೊಡದೆ ಬರವಣಿಗೆ ಜೊತೆಗೆ ಕೊಂಚ ಮಾನವೀಯತೆ ಇಟ್ಟುಕೊಂಡು ನಡೆದರೆ ಆ ಕವಿಯ ಜೊತೆಗೆ ಆತನ ಕವಿತ್ವವೂ ಸಾರ್ಥಕತೆಯ ನಿಟ್ಟುಸಿರು ಬಿಡುತ್ತದೆ...ಇನ್ನೊಂದು ಮುಖ್ಯವಾದ ವಿಚಾರ ತಿಳಿಸಿದ್ದೀರಿ ನಿಮ್ಮ ಎರಡನೇಯ ಚರಣದಲ್ಲಿ ಕವಿಯಾದವನು ಬರೀ ಮನರಂಜನೆಗೆ ತನ್ನ ಕವಿತ್ವ ಪ್ರದರ್ಶಿಸದೇ ಸಮಾಜದಲ್ಲಿ ಕೆಲವು ಬದಲಾವಣೆಗೆ ಕಾರಣವಾಗಬೇಕು ಬರವಣಿಗೆಗೆ ಖಂಡಿತವಾಗಿಯೂ ಆ ಶಕ್ತಿ ಇದೆ ಕತ್ತಿ ಗಿಂತಲೂ ಪೆನ್ನು ಹರಿತ ಎನ್ನುವ ಮಾತಿದೆ ಹಾಗೆ ಒಬ್ಬ ಕವಿಯ ಲೇಖನಗಳು ಬರೀ ಮನರಂಜನೆಗೆ ಸೀಮಿತಗೊಳ್ಳದೇ ಸಮಾಜ ಓರೆ ಕೋರೆಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ತುಂಬಾ ಸುಂದರವಾದ ಸಾಲುಗಳು ಗುರುಗಳೇ*
*ತಮ್ಮ ಕೊನೇಯ ಚರಣ ತುಂಬಾ ಹಿಡಿಸಿತು ಗುರುಗಳೇ ಒಂದೆರಡು ಪ್ರಶ್ನೆಗಳು ಸನ್ಮಾನಗಳು ಆದರೆ ಸಾಕು ಯಾರಾದರೂ ನಾಲ್ಕು ಹೊಗಳಿಕೆಯ ಮಾತುಗಳು ಹೇಳಿದರೆ ಸಾಕು ಕಾಲು ನೆಲದ ಮೇಲೆ ನಿಲ್ಲೋದೆ ಇಲ್ಲ ನನ್ನ ಪ್ರಕಾರ ಅವರು ಕವಿಗಳೆ ಅಲ್ಲಾ ಕವಿ ಎಲ್ಲರನ್ನೂ ಪ್ರೀತಿಸುತ್ತಾನೆ ಎಲ್ಲರಲ್ಲೂ ಕಲಿಯಬಯಸುತ್ತಾನೆ ಸದಾ ಹಸನ್ಮುಖಿಯಾಗಿರುತ್ತಾನೆ ಇತರರ ನೋವಿಗೆ ಸ್ಪಂಧಿಸುತ್ತಾನೆ ನಿಜವಾದ ಕವಿಮನಸು ಇತರರ ಏಳಿಗೆಯಲ್ಲಿ ಎಂದೂ ಅಸೂಹೆ ಪಡುವುದಿಲ್ಲ ಅದಕ್ಕೆ ದೊಡ್ಡವರು ಹೇಳುತ್ತಾರೆ ರವಿ ಕಾಣದ್ದನ್ನು ಕವಿ ಕಂಡ ಎಂದು ಅವನಲ್ಲಿ ಬೆರೆಯದೇ ಒಂದು ಸುಂದರವಾದ ಪ್ರಪಂಚವಿದೆ ಅಲ್ಲಿ ಎಲ್ಲರನ್ನೂ ಆದರಿಸುವ ಆಚರಣೆ ಇದೆ ಪ್ರೀತಿಸುವ ಮನೋಭಾವವಿದೆ ಸಾಹಿತ್ಯವನ್ನು ಪೂಜಿಸುವ ಭಕ್ತಿ ಇದೆ ಪುಟ್ಟ ಹೃದಯದಲ್ಲಿ ದೊಡ್ತನದ ಛಾಯೆ ಇದೆ ಎಷ್ಟು ಕಲಿತರೂ ಇನ್ನೂ ಕಲಿಸುವ ಪಾಠಶಾಲೆ ಇದೆ ಅಲ್ಲಿ ತನಗೆ ತಿಳಿದದ್ದನ್ನು ಇತರರಿಗೆ ತಿಳಿಸಿ ತಿದ್ದಿ ತಿಳಿಸಿ ಹೇಳುವ ಗುರುವಿನ ಗುಣವಿದೆ ಕೆದಕಿದಷ್ಟೂ ಉಕ್ಕಿ ಬರುವ ಶಬ್ಧ ಭಂಡಾರವಿದೆ ಎಲ್ಲಿ ಹುಡುಕಿದರೂ ಸಿಗದ ಮಾನವೀಯ ಮೌಲ್ಯಗಳಿವೆ ಆ ಪ್ರಪಂಚ ಬೆರೆಯದನ್ನೇ ಹೇಳಿಕೊಡುವ ಗುರುಕುಲ ಅಲ್ಲಿ ಎಲ್ಲೂ ಅಹಂಕಾರ ಅಸಹನೆ ತಾತ್ಸಾರ ಗರ್ವ ಕಾಣಸಿಗದು ಅವನೇ ಕವಿ*
ತುಂಬಾ ಒಳ್ಳೆಯ ಕವನ ಓದಿಸಿದ್ದೀರಿ ಗುರುಗಳೇ ಧನ್ಯವಾದಗಳು ಕವಿಭಾವಕ್ಕೆ ಧಕ್ಕೆ ಆಗಿದ್ದರೆ ಕ್ಷಮೆ ಇರಲಿ
ನನಗೆ ತಿಳಿದ ಮಟ್ಟಿಗೆ ನನ್ನ ಅನಿಸಿಕೆಗಳನ್ನು ತಿಳಿಸಿರುವೆ
*ಸೂಚನೆ -ಮೇಲಿನ ಕೆಲವು ಪದಗಳನ್ನು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ ಎಲ್ಲರಿಗೂ ಹೇಳಿದ್ದಲ್ಲ ನಮ್ಮ ಸಮಾಜದ ಮದ್ಯ ಇರುವ ಕೆಲವರಿಗೆ ಮಾತ್ರ*
ಧನ್ಯವಾದಗಳು
*ಜಬಿ....?*
[4/22, 12:49 PM] Prem: ಮಾಡರ್ನ್ ವಚನ-4
ಎದುರು ಸಿಕ್ಕವರ ನೋಡದೆ
ಪಕ್ಕ ಇರುವವರ ಕೇಳದೆ
ಬೊಕ್ಕ ತಲೆಯಾಗೋವರೆಗೂ
ಸಿಕ್ಕ ಸಿಕ್ಕವಗೆ ಟೋಪಿ ಹಾಕುವ
ಮನುಜನ ನಂಬೋದೆತೋ ಶಿವಾ...
@ಪ್ರೇಮ್@
22.04.2019
[4/22, 12:50 PM] Prem: ವಚನ-5
ಭಕುತಿಯೆಂಬಂತೆ ದೇವಾಲಯದಿ ಗಿರಕಿ ಹೊಡೆದು
ಮಹಿಳಾ ಮಣಿಗಳ ನೋಡುತ ಮನವ ಕೊಳಕಿಸಿಕೊಂಡೊಡೆ
ಪುಣ್ಯವೆಲ್ಲಿಯದು ಸಿಗವುದು ಶಿವಾ...
@ಪ್ರೇಮ್@
22.04.2019
[4/23, 8:59 AM] +91 84948 17130: *ಪ್ರೇಮ್ ಮೇಡಮ್ ರವರ ಕವನ*
ಒಗ್ಗರಣೆ ತುಂಬಾ ಚೆನ್ನಾಗೆ ಹಾಕಿರುವಂತಿದೆ.
ಸುಮಧುರ ಬಾಂಧವ್ಯ ನಮ್ಮಿಬ್ಬರದು
ಮತ್ತಿನ್ನೇನು ಬೇಕು ಸುಂದರ ಬದುಕಾಗಲು.
ಪ್ರೀತಿಯಿಂದ ತುತ್ತನ್ನ ಕೊಟ್ಟರೆ ಸಾಕು. ಬಯಸಿಲ್ಲ ನಾ ಮತ್ತಿನ್ನೇನು ಎಂಬ ನಲ್ಲೆಯ ಮಾತು ನಲ್ಲನ ಕಿವಿಗೆ ಎಷ್ಟು ಮಧುರವಾಗಿರುತ್ತದಲ್ಲವೆ? ಅದೂ ಶಾಪಿಂಗ್ ಶಾಪಿಂಗ್ ಎನುವ ಈ ಕಾಲದಲ್ಲಿ...
ತಮ್ಮ ಈ ಲಯಭರಿತ ಜೀವನ ನಗುನಗುತ ಹೀಗೆಯೇ ಇರಲಿ ಮೇಡಮ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ