ಶುಕ್ರವಾರ, ಜನವರಿ 1, 2021

ಊರಿಗುಪ್ಕಾರಿ...

ಊರಿಗುಪ್ಕಾರಿ.....

ನೋಡ್ರಪ್ಪೋ ನನ್ ಹಂಡ ಊರಿಗುಪ್ಕಾರಿ ಮನೆಗ್ಮಾರಿ..
ರೋಡಲ್ ಹೋಗೋ ಹುಡ್ಗೀರ್ಗೆಲ್ಲ
ಡ್ರಾಪ್ ಕೊಟ್ ಸಹಾಯ ಮಾಡ್ತಾನಲ್ಲೋ
ನನ್ ಮಾತ್ರ ಮಾರ್ಕೆಟ್ ವರ್ಗೂ ಬಸ್ ಹತ್ಕೊಂಡ್ ಹೋಗಂತಾನಲ್ಲೋ..

ಮುದ್ಕೀರ್ ಕಂಡ್ರೆ ಕಾಲಿಗ್ ಬಿದ್ದು
ಒಳ್ಳೇ ಆಶೀರ್ವಾದ ಬೇಡ್ತಾನಲ್ಲೋ..
ನಮ್ಮಮ್ಮ ಬಂದ್ರೆ ಮುದ್ಕೀ ಅಂತ ತಾತ್ಸಾರ ಮಾಡಿ ನೋಡ್ತಾನಲ್ಲೋ..

ಹುಡ್ ಗ್ರೂ ಬಂದ್ರೆ ಫ್ರೆಂಡ್ಸಂತಾನೆ
ಊಟಕ್ ಮನೆಗೇ ಕರೀತಾನೆ
ತಂದ್ಹಾಕೋಕೆ ಆಗ್ದೇ  ಇರೋನ್
ಮನೆಗಪ್ಕಾರಿ ಹೇಗಾದಾನು?

ಮಕ್ಳು ಬಂದ್ರೆ ಎತ್ಕೋತಾನೆ
ಚಾಕ್ಲೇಟ್ ಗೀಕ್ಲೇಟ್ ಕೊಡ್ತಾನೆ
ಮಕ್ಳು ಬೇಕೋ ನಮ್ಗಂದಾಗ
ಮಾರು ದೂರ ಓಡ್ತಾನಲ್ರೀ.. ಸಾಕೋದ್ಯಾರು ಅಂತಾನಲ್ರೀ..

ತಾತ ಅಂಕಲ್ ಯಾರೇ ಸಿಕ್ರೂ 
ಓಡೋಗ್ ಕೆಲ್ಸ ಮಾಡ್ಕೊಡ್ತಾನೆ
ಅಣ್ತಮ್ಮ ಬಂದು ಮೂಟೆ ಎತ್ತೋ 
ಅಂದ್ರೆ ದೂರ ಓಡೋಗ್ತಾನೆ..

ಯಾರಿಗ್ಹೇಳ್ಳಿ ನನ್ ಕಷ್ಟಾನಾ
ದ್ಯಾವ್ರೇ ನೀನು ಮೇಲೆಲ್ಲಿರುವೆ?
ಒಂದ್ ಕೀತಾ ಬಂದು ಕಣ್ ಬಿಟ್ ನೋಡೋ
ಈ ಮನ್ಸಾಗೆ ಸರಿ ಬುದ್ಧೀ ನೀಡೋ..
@ಪ್ರೇಮ್@
06.12.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ