ಕಾಲವನ್ನು ತಡೆಯೋರು...
ಕಾಲಾನ್ ತಡ್ಯೋರ್ಯಾರೂ ಇಲ್ಲಪ್ಪ
ಬಾಲಾನ್ ಬಿಟ್ಟು ಬೆಕ್ಕಿಲ್ಲಪ್ಪಾ
ಹಲಾಹಲವದ್ ಕಹೀನೇ ಅಲ್ವಾ
ಹಾಲನ್ ಕುಡೀದೇ ಬದುಕ್ತೀರೇನಪ್ಪಾ?
ಅಲ್ಲವೆಂದವರಿಗೆ ತಿಳ್ಸೋದ್ ಕಷ್ಟ
ಗೊತ್ತು ಗುರಿಸಿಲ್ದಿರೋ ಜೀವ್ನಾನೇ ನಷ್ಟ
ಲಂಚದ ಕೈಯದು ಎಂದಿಗೂ ಭ್ರಷ್ಟ
ಬೆಳಿಬೇಕು ಸರ್ಯಾಗ್ ತಿಂದು ದಷ್ಟಪುಷ್ಟ..
ಗಲ್ಲದ್ ಮೇಲೆ ಒಳ್ಳೇ ಮಾತಿರ್ಲಿ
ಸಲ್ಲದ್ ಕಾರ್ಯಕ್ ತಲೆ ಹಾಕ್ದಿರ್ಲಿ
ಬೆಲ್ಲದ್ ಹಾಗೆ ಒಳ್ಳೆ ಮನಸಿರ್ಲಿ
ಮಲ್ಲಿಕಾರ್ಜುನನ್ ದಯೆಯು ಎಲ್ಲರ್ ಮೇಲಿರ್ಲಿ..
@ಪ್ರೇಮ್@
06.12.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ