ವಸಂತ
ಬಾರೋ ವಸಂತ ಹಾಡಿಸುತ ಕೋಗಿಲೆಯ
ಬಾರೋ ವಸಂತ ಚಿಗುರಿಸುತ ಮಾಮರವ
ಬಾರೋ ವಸಂತ ಹೂ ತರುತಲಿ ಹಣ್ಣುಗಳ
ಬಾರೋ ವಸಂತ ಹೆಚ್ಚಿಸುತ ಚಳಿ ತಂಪ..
ಬಾರೋ ವಸಂತ ಮಂಕಾಗಿಸುತ ರವಿಕಿರಣ
ಬಾರೋ ವಸಂತ ದೂರೆಳೆಯುತ ಮಳೆಹನಿಯ
ಬಾರೋ ವಸಂತ ಹನಿಸುತ ಮಂಜು ಹನಿಯ
ಬಾರೋ ವಸಂತ ಬೀಸುತಲಿ ತಂಗಾಳಿಯ
ಬಾರೋ ವಸಂತ ದೂರಿಡುತಲಿ ಗುಡುಗು ಸಿಡಿಲಬ್ಬರವ
ಬಾರೋ ವಸಂತ ತರುತಲಿ ತರುಲತೆಗಳ ಕಂಪಿನೊಲವ
ಬಾರೋ ವಸಂತ ಹೆಚ್ಚಿಸುತ ತಣ್ಣನೆಯ ಅನುಭವವ
ಬಾರೋ ವಸಂತ ತರುತಲಿ ಧರೆಗೆ ಸಂಕ್ರಾಂತಿಯ
ಬಾರೋ ವಸಂತ ಬೀರುತಲಿ ಸರ್ವರಿಗೆ ಎಳ್ಳು ಬೆಲ್ಲವ
ಬಾರೋ ವಸಂತ ಆಚರಿಸುತ ಕುವೆಂಪು, ಏಸುಕ್ರಿಸ್ತರ ಜನ್ಮ ದಿನಾಚರಣೆಯ
ಬಾರೋ ವಸಂತ ಚುಂಬಿಸುತ ಉದುರುತಿಹ ಮಂಜು ಹನಿಯ
ಬಾರೋ ವಸಂತ ಜನಮನ ತಂಪಾಗಿಸಿ ಕಂಪೀಯಲು
ಬಾರೋ ವಸಂತ ಮಾಮರದ ಚಿಗುರೊಳಗೆ ಸವಿಬಾಳ ಹಂಚಲು
ಬಾರೋ ವಸಂತ ಜಾತಿ,ಮತ, ಧರ್ಮಗಳಲಿ ಸಾಮರಸ್ಯ ಹೆಚ್ಚಿಸಲು
ಬಾರೋ ವಸಂತ ಮೇಲು ಕೀಳೆನು ಭಾವಗಳ ಕಿತ್ತೆಸೆಯಲು
ಬಾರೋ ವಸಂತ ಮನಗಳಲಿ ಪ್ರೇಮ ಬೀಜವ ಬಿತ್ತಲು..
@ಪ್ರೇಮ್@
20.12.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ