ಶುಕ್ರವಾರ, ಜನವರಿ 1, 2021

ಕಾಲುಂಗುರ

ಕಾಲುಂಗುರ

ದುಂಡಗಿರುವ ವೃತ್ತಾಕಾರದ ಬೆಳ್ಳಿ ಕಾಲುಂಗುರವಿದು
ಸುಂದರವು ಸರ್ವ ಸುಮಂಗಲಿಯರಿಗೆ ಅಲಂಕಾರಕ್ಕಿದು.

ಕಾಲ ಬೆರಳೆಂಬ ಪುಟ್ಟ ಜಾಗವಿದಕೆ
ದಾಳದಂತೆ ಉರುಳಿಸುವುದು  ಗಂಡನ ಮನವನಿದು!

ಮದುವೆಯಾದ ಮಗಳಿಗೆ ಭೂಷಣವು ಬೆಳ್ಳಿಯಲಿ
ಕಾಲು ನೋಡಿದಾಗಲೇ ಗೌರವ ಬರುವುದು.

ಚಿನ್ನ ಬಣ್ಣದವುಗಳಿಗೆ ಬೆಲೆಯಿಲ್ಲವಿಲ್ಲಿ
ಗರ್ಭಕೋಶದ ಆರೋಗ್ಯಕೆ ಹಿತಕಾರಿ ಆಗಿಹುದು.

ಕೈಬಳೆ ತಾಳಿಯೊಂದಿಗೆ ಜೋಡಿಸಿಕೊಂಡಿಹುದು ತಾನು
ಮನೆಯ ಮಹಾಲಕ್ಷ್ಮಿ ಕಾಲಿಗೆ ಮುದ್ದಾಗಿಹುದು.

ಕಾಲಬೆರಳ ಬಳೆಯಿದು ಸುತ್ತಿಕೊಂಡೂ ಇರುವುದು
ವಧುವರರ ಕಾಲಿನಲಿ ಅಂದದಿ ಶೋಭಿಸುತಿಹುದು.

ಬಾನಿನ ಚಂದಿರನಂತೆ ಕಾಲಲಿ ಹೊಳೆದಿಹುದು
ಪ್ರೇಮದಿ ಧರಿಸಿದ ಮಹಿಳೆಯ ಸಲಹುವುದು.
@ಪ್ರೇಮ್@
14.12.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ