ಗಝಲ್
ಸಣ್ಣ ದೇವಾಲಯಕೆ ಪುಟ್ಟ ಬೀಗವಿದು ಮೂಗುತಿ
ಹೆಣ್ಣ ಮೂಗಿನಲಿ ಪುಟಾಣಿ ಬಂಗಾರವಿದು ಮೂಗುತಿ
ಕಾಲಕ್ಕೆ ತಕ್ಕಂತೆ ಬಣ್ಣ , ಆಕಾರ, ಬದಲಾಯಿಸುತ್ತಿರುವುದು
ಗಾತ್ರ, ಸ್ಥಾನವನೂ ಆಗಾಗ ಬದಲಾಯಿಸುವುದು ಮೂಗುತಿ
ಗೃಹಲಕ್ಷ್ಮಿಗೆ ಅಂದ ನೀಡಲಿದು ಸಹಕಾರಿ ಆಗಲಿಹುದು
ಗ್ರಹ ನಕ್ಷತ್ರಗಳನೂ ಮಣಿಯಲಿ ನಿಭಾಯಿಸಬಲ್ಲುದು ಮೂಗುತಿ!
ಸೂರ್ಯನ ಬೆಳಕ ಪ್ರತಿಬಿಂಬಿಸಿ ದೇಹಕೆ ಕಳಿಸುವುದು
ಕೋಪ ತಗ್ಗಿಸಿ ಸಹನೆ ಹೆಚ್ಚಿಸುವುದು ಮೂಗುತಿ
ಮಹಿಳೆಯ ಹೆಮ್ಮೆಯ ಸಂಕೇತಗಳಲಿ ಒಂದಲ್ಲವೇ ಇದು?
ಭಾರತೀಯ ನಾರಿಯ ಲಕ್ಷಣಗಳಲ್ಲಿ ಮುಂದು ಮೂಗುತಿ
ಮುತ್ತೈದೆ ಮೂಗಿಗೆ ಮುತ್ತಿನಂಥ ಮನ್ನುಡಿಯೀವ ಬಿಂದು
ವೃತ್ತಾಕಾರ, ಕಡ್ಡಿ, ಓರೆಯಾಕಾರದಲೂ ಇರುವುದು ಮೂಗುತಿ
ತಾಯಿಯ ಪ್ರೇಮದ ಸಂಕೇತದಂತಿರುವುದು ಇದು
ಬಾಯಿಯ ಮೇಲಿನ ಮೂಗಲಿ ಕುಳಿತಿಹುದು ಮೂಗುತಿ.
@ಪ್ರೇಮ್@
14.12.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ