ಗಝಲ್
ಹೊಸ ವರುಷ ನವ ಸಂವತ್ಸರ ತರುವುದೇ ಹಿತವ?
ಹೊಸತನ ಹೊಸ ಮನ ಮೂಡಿಸಿಕೊಳ್ಳುವುದೇ ತವಕವ?
ಗಝಲ್
ಬಾಳಿನಲಿ ಕಣ್ಣಿಗೆ ಕಾಣದ ಮಾರಿಯು ಆಡಿಹುದು ಆಟವ
ಇರುಳಿನಲಿಹ ಮಾನವನ ಕಣ್ಣು ಹುಡುಕುವುದೇ ಸುಖವ?
ರಾಸಾಯನಿಕಗಳ ತಿಂದುಂಡು ಕೊಬ್ಬಿಬೆಳೆಯುತಿಹ ದೇಹವಿದು
ಕಷಾಯಗಳ ಕುದಿದಾದರೂ ಸಹಿಸಿ ಕೊಳ್ಳುವುದೇ ನೋವ?
ಮದ್ದಾನೆಗಳಂತೆ ಬೆಳೆಯುತ್ತಾ ನುಂಗುವರು ಸರ್ವರ ಧನವ
ಕದ್ದೆ ಬದುಕಲು ಕಲಿತ ಜ್ಞಾನಿಯ ಕಣ್ಣು ತೆರೆದಿಡುವುದೇ ನಿಜವ?
ಹಸಿರ ನಾಶ ಮಾಡುವ ಪರಿಯ ಕಡಿಮೆಗೊಳಿಸಿ ಗಿಡನೆದುವನೆ?
ಪಚ್ಚೆ - ಪೈರಿನ ಪ್ರೇಮವನು ಮತ್ತೆ ಕಾಣುವುದೇ ನೇಸರವ?
@ಪ್ರೇಮ್@
13.04.2021
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ