ಕ್ಷಣ
ಮೊಗೆ ಮೊಗೆದು ಇರಿಸಿರುವೆ
ಎದೆಯ ಬಟ್ಟಲಿನೊಳಗೆ
ತುಂಬಿ ತುಳುಕುತಿರುವ ಪ್ರೇಮೋದಕ
ನಗೆ ನಗೆಯಲೆ ಬಂದು
ಸೊಗವ ಬಯಸುತಲಿ
ಬಾಳಿನೊಲವಾಗಿ ಗೆಲುವೀವ ಪಾಕ
ಸಗ್ಗಕಿಂತಲು ಮಿಗಿಲು
ನುಗ್ಗಿ ಬಂದಿಹ ಮುದ್ದು
ಉಕ್ಕುಕ್ಕಿ ಧುಮುಕಿದ ಜಲಪಾತ
ಬಗ್ಗು ಬಡಿದಿಹುದಿಂದು
ದ್ವೇಷ ಅಸೂಯೆಯನು
ಸೊಕ್ಕಿ ಬಂದಿಹ ಶುದ್ಧ ಮೋಹಪಾತ
ಝರಿಯಾಗಿ ಹರಿದು
ಮನವೆಲ್ಲ ತಂಪು
ಸುರಪಾನ ಸವಿದಂತೆ ಮತ್ತು
ಮರಿಯ ಮುಖ ನೋಡಿ
ನೋವ ಮರೆವಂತೆ ತಾಯಿ
ಸಗ್ಗದರಮನೆಯ ಹೂ ಮುತ್ತು..
@ಹನಿಬಿಂದು@
22.02.2024
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ