ಭಾವಗೀತೆ
ನಾನೂ ಕೆಲಸ ಮಾಡುವೆ
ಬಟ್ಟೆ ಒಗೆದು ಪಾತ್ರೆ ತೊಳೆದು
ನಾನೂ ಅಡುಗೆ ಮಾಡುವೆ
ಅಕ್ಕಿ ರುಬ್ಬಿ ಸಾಮಾನು ಅರೆದು
ಇಡ್ಲಿ ಸಾಂಬಾರ್ ಬಡಿಸುವೆ
ಅಮ್ಮ ನಿನ್ನ ಜೊತೆಗೆ ಸೇರಿ
ಮುದ್ದು ಹಾಡು ಹಾಡುವೆ
ತಮ್ಮ ತಂಗಿ ಬರಲಿ ಬೇಗ
ಲಲ್ಲೆಗರೆದು ಕಾಡುವೆ
ಕಲ್ಲು ತಿರುವಿ ಖಾರ ಕಡೆದು
ಹಿಟ್ಟು ತಯಾರು ಮಾಡುವೆ
ಉದ್ದು ಅರೆದು ಕಲಸಿ ಇಟ್ಟು
ವಡೆಯ ಬಿಸಿ ಮಾಡುವೆ
ನಾನು ನಿನಗೆ ಸಹಾಯ ಮಾಡಿ
ಕೆಲಸ ಸುಲಭ ಮಾಡುವೆ
ಕಾರ್ಯವಲ್ಲ ನನಗೆ ನೀಡು
ಅಮ್ಮ ಸಾಕಿ ಸಲಹುವೆ
@ಹನಿಬಿಂದು@
25.11.2024
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ