ಪರಶಿವ ನಿನ್ನನು ಪರಿ ಪರಿಯಲಿ ಬೇಡುವೆ
ಪರಿಶೀಲಿಸ ಬೇಡವೋ ನನ್ನ
ಪರದೆಯ ಹಿಂದೆ ಮುಂದೆಯೂ ಒಂದೇ
ಪರಪಂಚದಿ ನಾ ಒಂದೇ..
ಪರೀಕ್ಷೆಯ ಕಷ್ಟದಿ ಒಡ್ಡದಿರೂ ನೀ
ಪಾರ್ವತಿ ಪತಿಯೇ ಕೇಳು
ಪ್ರಸಾದ ನಿನ್ನದು ನಾ ಕಲಿಕಾರ್ಥಿ
ತಡೆ ನೀ ನನ್ನಯ ಬೀಳು
ಪ್ರಾರ್ಥನೆ ಮಾಡುವೆ ನಿತ್ಯವೂ ಹೀಗೆ
ಪ್ರೀತಿಯಲಿ ನನ್ನ ಹರಸು
ಪ್ರೇರಕ ಶಕ್ತಿಯ ನೀಡಿ ಕಾಪಾಡುತ
ಪ್ರೇರಣೆ ನೀಡುತ ಕಲಿಸು
ಪುರದಲೂ ಸ್ವರದಲೂ ಪತ್ರಿಕೆಯಲ್ಲೂ
ಪ್ರಚಾರ ಪ್ರಿಯನು ನಾನಲ್ಲ
ಪರಿಸರ ಕಾಪಾಡೋ ಪರಿಚಯ ಮಾಡಿಸು
ಪ್ರಕೃತಿಯೊಡನೆ ಬೆರೆಯ ಬೇಕಲ್ಲ..
@ಹನಿಬಿಂದು@
28.11.2024
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ