ದಶಕ -128
ಕೋಳಿಯ ಕೂಗಿಗೆ ಏಳುವ ನಮಗೆ
ಗೂಳಿಯ ಹಾಗೆ ತಿನ್ನಲು ಬೇಕು!!
ಧೂಳದು ಕಾಲಿಗೆ ಮೆತ್ತಲೇ ಬಾರದು!
ಶಾಲೆಯ ಕಲಿಕೆ, ಜೀವನ ಪಾಠವೂ ಬೇಕು
ಹಾಲಿಗೆ ಹಸುವು, ಧೈರ್ಯಕೆ ನಾಯಿಯು
ಮುದ್ಧಿಗೆ ಬೆಕ್ಕು, ಮದ್ದಿಗೆ ಇಲಿಯೂ
ತಿರುಗಲು ಕುದುರೆ, ಮೆರವಣಿಗೆಗೆ ಆನೆ
ಸಾಮಾನು ಹೊರಿಸಲು ಕತ್ತೆಯೂ ಬೇಕು
ಪ್ರಾಣಿ ಪಕ್ಷಿಗಳ ಸಹಾಯ ಪಡೆದು
ಏತಕೆ ಅವುಗಳ ಸಾಯಿಸ ಬೇಕು?
@ಹನಿಬಿಂದು@
04.02.2025
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ