ಗುರುವಾರ, ಜನವರಿ 29, 2026

ರವೆ ಪುಂಡಿ

ರವೆ ಪುಂಡಿ
ಚಿಕ್ಕಮಗಳೂರಿನ ಬೆಳಗ್ಗಿನ ತಿಂಡಿಗೆ ಮಾಡುವ, ಬೇಗ ಆಗುವ , ಎಣ್ಣೆ ಉಪಯೋಗ ಇಲ್ಲದ ಆರೋಗ್ಯಕರ ತಿಂಡಿ. 
ಬೇಕಾಗುವ ವಸ್ತುಗಳು
1. ನೀರು
2. ಬಾಂಬೆ ರವೆ/ಅಕ್ಕಿ ರವೆ
3. ಉಪ್ಪು

ವಿಧಾನ: 
1. ಒಂದೂವರೆ ಗ್ಲಾಸ್ ನೀರಿಗೆ ಒಂದು ಗ್ಲಾಸ್ ರವೆ ಅಳತೆಯಲ್ಲಿ ನೀರು ಕುದಿಯಲು ಇಡಬೇಕು. 
2. ಕುದಿದ ನೀರಿಗೆ 1 ಗ್ಲಾಸ್ ರವೆಯನ್ನು ಸ್ವಲ್ಪ ಸ್ವಲ್ಪವಾಗಿ ಉದುರಿಸಿ, ಗಂಟಾಗದ ಹಾಗೆ ನೋಡಿಕೊಳ್ಳಬೇಕು. 
3. ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು.
4. ಕಡಿಮೆ ಉರಿಯಲ್ಲಿ ಮಗುಚುತ್ತಾ ಗಟ್ಟಿಯಾಗುವವರೆಗೆ ಇದ್ದು ನಂತರ ಪಾತ್ರೆ ಸ್ಟವ್ನಿಂದ  ಕೆಳಗಿಳಿಸಬೇಕು.
5. ಇಡ್ಲಿ ಪಾತ್ರೆಯಲ್ಲಿ ನೀರಿಟ್ಟು ನೀರು ಕುದಿದ ಕೂಡಲೇ ಅದರ ಅಟ್ಟಿ ಇಟ್ಟು, ಪುಂಡಿ ಮಾಡುತ್ತಾ ಅದರ ಒಳಗೆ ಹಾಕಿ 10 ನಿಮಿಷ ಬೇಯಿಸಬೇಕು. ನಮ್ಮ ರವೆ ಪುಂಡಿ ರೆಡಿ. 
6. ಬೇಕಾದರೆ ಇದಕ್ಕೆ ಕ್ಯಾರೆಟ್ ತುರಿ, ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ನೀರುಳ್ಳಿ ಹುರಿದು ಸೇರಿಸಿಕೊಳ್ಳಬಹುದು. 
@ಹನಿಬಿಂದು@
29.01.2026

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ