ಶನಿವಾರ, ಜುಲೈ 11, 2026

ಬೇಸರದ ಕವಿತೆ


ಶೀರ್ಷಿಕೆ: ಬೇಸರದ ಕವಿತೆ

 ಮಿನುಗುತ ಬಂದೆ ಒಲವನು ತಂದೆ 
ಮಿನ ಮಿನ ಎನುತಲಿ ನೀ ಬಳಿ ನಿಂದೆ 
ಬದುಕಲಿ ಬಂದೆ ಸದಾ ಸಡದಿರವೆಂದೆ 
ಸರಸರ ದೂರಕೆ ನಡೆಯಲು ನಾನೊಂದೆ//

ಮೌನವ ಹರಿಸುತ ಮಾತನು ಮರೆಯುತ 
ಪದದಲಿ ನೋವದು ಬಹಳವಿಹುದೆಂದೆ 
ಕಂದನ ಹಾಗೆಯೇ ಅಂದುಕೊಂಡೆನಗೆ 
 ಮಂದದಿ ಕೆಣಕುತ ಬೇಲಿಯ ಹಾರಿದೆ//

ಉಳಿದೆಯ ಗೆಳೆತನ ಮೋಡದ ಒಳಗೆ
ಸೆಳೆದೆಯ ಮನವನು ಮೋಸದ ಬಳಿಗೆ
ಕರೆದೆಯ ನಲಿವಿನ ನಾಳಿನ ಕಡೆಗೆ
ಸುಳಿದೆಯ ಬಳಿಯಲಿ ನೂತನ ಹೆಡಿಗೆ//

ತೋರಿದೆ ಜಾಗರೂಕತೆ ಇರಬೇಕೆನುತಲಿ 
ಮಾರಿದೆ ನಗುವಿನ ಮೂಟೆಯ ಜೊತೆಯಲಿ
ಬಾಳದು ಬೆಂಗಾಡು ಆಗಿದೆ ಇಂದು
ಬರೆದಿಹೆ ಕವನವ ಬಹಳವೇ ನೊಂದು//
@ಹನಿಬಿಂದು@
11.07.2026

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ