ಭಜನೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಭಜನೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಸೆಪ್ಟೆಂಬರ್ 12, 2019

1206. ಗಣಪಗೆ ವಂದನೆ

ಕವನ
ಗಣಪಗೆ ವಂದನೆ

ಆನೆಯ ಮುಖದ ಗಣಪಗೆ ವಂದಿಪೆ,
ಕಾಯುತ ಹರಸೋ ಎನ್ನುತ ಬೇಡುವೆ//
ನಂಬಿದ ಜನರನು ಬಿಡದೆಯೆ ಹರಸುವೆ,
ಕಾಯುವ ದೇವನು ನೀನೇ ಎನುವೆ//

ಪಾರ್ವತಿ ಸುತನೆ ಮೊದಲು ವಂದಿಪನೆ,
ದಾರಿಯ ತೋರೋ ಹರನ ಪುತ್ರನೇ.
ಕಾವನು ನೀನೇ ವರವನು ಕೊಡುತ
ಜಾಣನ ಮಾಡು ಬುದ್ಧಿಯ ನೀಡುತ!//

ಏಕದಂತನೆಂಬ ಹೆಸರು ಹೊತ್ತವನೆ
ಗೌರಿ ಪುತ್ರ ಗಜಾನನ ಗಜವದನನೇ
ಮೂಷಿಕ ವಾಹನ ಮೋದಕ ಹಸ್ತನೇ
ಸರ್ವ ವಂದಿತನೇ..ಚಾಮರ ಕರ್ಣನೇ//

ಬಾರೋ ಗಣಪ ಮುಖವನು ತೋರೋ,
ಮಾಡುವ ಕಾರ್ಯದ ವಿಘ್ನವ ಕಳೆಯೋ,
ಮನೆ ಮನವೆಲ್ಲವ ಬೆಳಗುತ ನಡೆಯೋ,
ನಮ್ಮಯ ಹೃದಯದಿ ಭಕ್ತಿಯ ಬೆಳೆಯೋ...//

@ಪ್ರೇಮ್@