ಗೆಳೆಯರ ದಿನದ ಪ್ರಯುಕ್ತ
ಗಝಲ್
ಅಂಧಕಾರದ ಲೋಕದಲಿರುವ ಕುರುಡನಿಗೆ ಜಾರಿ ಕಾಣಿಸುವವ ಗೆಳೆಯ
ಮದ ಮೋಹ ಮತ್ಸರವ ತೊಡೆದು ಹಾಕಿಸುವವ ಗೆಳೆಯ
ಮಾನಿನಿಯ ಮರೆಯಲು ಸಹಕರಿಸಿ ಜೀವಕ್ಕೆ ದಾರಿ ತೋರುವವ
ಮೋಹ ಪಾಶದಿ ಸಿಲುಕಿದವನಿಗೆ ಮುಕ್ತಿ ಕರುಣಿಸುವವ ಗೆಳೆಯ
ಮಂಕು ಬುದ್ಧಿಗೆ ನೀರು, ಆಹಾರ ಹಾಕಿ ಸರಿಮಾಡುವವ
ಮಂದಾರದ ಮನದಲಿ ಸಹಕಾರ ನೀಡಿ ರಕ್ಷಿಸುವವ ಗೆಳೆಯ
ನಾವಿಕನಿಲ್ಲದ ಹಡಗಿನಲಿ ಒಬ್ಬಂಟಿಗನಾಗಿ ಚಲಿಸುವವನಿಗೆ ಜೊತೆಯಾದವ
ನಗರ ಹಳ್ಳಿಯಲೂ ನಂಬಿಗನಾಗಿದ್ದು, ನಗೆಗಡಲಲಿ ತೇಲಿಸುವವ ಗೆಳೆಯ!
ನೋವುಂಡ ಮನಕೆ ನಲಿವಿನ ಸಾಂತ್ವನದ ಕಷಾಯ ನೀಡುವವ
ನರಕದಂಥ ಬದುಕಲಿ ಸದಾ ನಾಕದಂದದಿ ಬದುಕಿಸುವವ ಗೆಳೆಯ
ನೀರಿನಂಥ ಪರಿಶುದ್ಧ ಸಂಬಂಧ, ಸಕ್ಕರೆಯಂಥ ಸಿಹಿಗುಣದವ
ನಿರ್ವಿಕಾರ ಭಗವಂತನ ಮತ್ತೊಂದು ರೂಪವಾಗಿ ಬಂದವ ಗೆಳೆಯ.
ನಾದ ಹೊಮ್ಮಿಸಿ, ನೆರಳು ನೀಡಿ ನಿಜದಿ ಸಲಹುವವ
ನಂಜಿನುರಿಯಲು ನಾಚಿ ನೀರಾಗಿಸಿ ನೂಲು ತೆಗೆವವ ಗೆಳೆಯ!
ನೇಪಥ್ಯಕೆ ಸರಿದಿಹ ಹಲ ಸಂಬಂಧಗಳ ಒಂದುಗೂಡಿಸುವವ
ತನ್ನ ನೇರ ನುಡಿಯಿಂದ ಪ್ರೀತಿ ಪಡೆಯುವವ ಗೆಳೆಯ..
@ಪ್ರೇಮ್@
02.08.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ