ಬುಧವಾರ, ಫೆಬ್ರವರಿ 24, 2021

ಬೊಲ್ಮದಪ್ಪೆ ಭಕ್ತಿಗೀತೆ

ಬೊಲ್ಮದಪ್ಪೆನ್ ಸುಗಿಪುಗ

ಏತ್ ಪೊರ್ಲು ಅಮ್ಮ ಇರೆನ್ ಸುಗಿಪುನ ಬೇಲೆ
ಬೊಲ್ಮಡುಂತಿ ಇರೆನ ಇನಿತ ಕಾರ್ಣಿಕ ಲೀಲೆ..

ಕಲ್ಲುರ್ಟಿ ಕಲ್ಕುಡೆಂದ್ ತೋಜಿದ್ ಬತ್ತರ್
ಕಲ್ಲ್ ಪಾಡ್ದ್ ನಂಬಿನೈನ್ ತೋಜಾದ್ ಕೊರ್ಯರ್
ತಂತ್ರಿಲೆನ ಪೂಜೆಗಿನಿ ಲಕ್ ದ್ ಉಂತ್ಯರ್
ನಮನ್ ಮಾತ ಎಡ್ಡೆ ಮಲ್ಪರೆ ಬತ್ತ್ ಕುಲ್ದರ್...//

ಪತ್ತ್ ಜೋಕ್ಲು ಒಟ್ಟು ಸೇರ್ದ್ ಸುಗಿತೊಂದುಲ್ಲಯೇ
ಬ್ರಹ್ಮ ಕಲಶ ಮಲ್ತ್ ದಿನಿ ನಟ್ಟೊಂದುಲ್ಲಯೇ
ನಮನ್ ನಿಕುಲೆ ಕಾಪೊಡುಂದು ಕೇನೊಂದುಲ್ಲಯೇ
ಭಕ್ತಿ ದೀದ್ ಕಾಪುಲೆಂದ್ ಅಡ್ಡ ಬೂರ್ದಯೇ...
@ಪ್ರೇಮ್@
25.02.2021

ಮಂಗಳವಾರ, ಫೆಬ್ರವರಿ 23, 2021

Hi...Im Corona here...

Hello...Corona Virus Here...



Introduction

Though it is a history now the narration is on historical style. I am Prema, working as an assistant teacher in English.  I am not a story writer. I am an article writer and a poetess. So here I will try to write the ' A Story On The Experience Of Teachers As Corona Warriors' in the narrative form of writing. At the very outset I am thankfull to the staff and headmaster of our school, the co-ordinators and the Block Education Officer of our Taluk, the staff and DDPI of our district and state and central education boad including SSA for giving us, for all the  teachers a wonderful opportunity to share our memorable  experience of covid time in our own words in the literary form of a story. I am really grateful to you all. Read a Story On The Experience Of Teachers As Corona Warriors.


Hello..Corona Virus here..

    Hi..my name is Corona Virus. People all over the world, especially doctors call me as Covid-19. I'm not visible to anybody. I started my journey in the month of December 2019.  I walked by air and people to all the corners of this earth. People were afraid of me, groaned, moaned, took blood, saliva , nasal swab samples and many more! They searched for me each and everywhere under the microscope! They calculated my shape,  size, power, spreading speed, activities everything! But I never stopped moving! By airoplanes, trains, busses, public vehicles I moved rapidly from nose to nose to all human bodies! But silly people! They announced that I am in animals too! But basically man gave birth to me by his reseach in the  lab suddenly at China while searching for another virus.
   
     My spreading directly effected to all the students and  teachers. All the educational institutions were closed. Some  started online classes and even the students got confident on self learning by using modern technology. Karnataka governament launched  a  new scheme called 'Vidyagama'. In that high school and primary school teachers had to move to the students'  houses to teach them everyday. It was difficult to teach each lessons five-six times repeatedly  for them throghout the week. Their faces seemed very tired in the evenings like my warriors. During rainy season,  the autorikshaws and bikes, which they where travelling to village vidyagama centres were jammed in muddy water. Some had no public vehicles to move from place to place. Nobody could calculate their problems then. I felt like it would be better if the teachers too learn to move in the air like me in this  invisible form! 

      All the children were at home. But teachers were in the field. They were not only teaching, but also working in the gates, check-posts,checking the vehicles, note downing everybody's body temperature!  The younger generation and old people were taking care of themselves in my fear inside their homes. But the whole medical staff and  corona warriors were busy working for the patients to whom I attacked! Some teachers were walking for miles, some  became frightened! I've attacked some and some teachers died  because of me too! Don't neglect me! Don't be careless on me! You will loss your life forever! Be careful about me! Im new to the people's recognition, but an old virus! I am the  child of your own brain!

           So called the next generation, are very active!  But I made them lazies by continuous no work, addiction to a small electronic device called mobile phone, or a bit big screened computer, or television! Teachers started online classes by using all these devices! But the students are attracted by its games and videos too! Some of them stopped reading! But the students who had their parent's care and guidance are learnt a lot using this modern technology. Not only learning apps were used, but also knowledge gaining apps as well as video clippings were helped them to  gain knowledge. Lessons, scientific experiments, playing musical instruments, dance, music, preparing useful things out of waste things, art, literature, reading etc. They are learning more in their interesting area!
           
            The teachers became online teachers and started cutting, pasting, editing, videography, photography to conduct online classes . I helped the parents and teachers to be in touch for their children's education. Some parents helped financially to poor teachers! But the teachers were always active. They never want to live without their students! So they were in touch with their students everyday. The learning was continuing inside the four walls of homes instead of classrooms. 

     Even now too I am not stopped my journey! My story has grown a lot and my next generation is too arrived! People Be Careful! Cleanliness  is  important with social distance. All the best! I am beside you in this world!
@Prem@
19.02.2021

ಶನಿವಾರ, ಫೆಬ್ರವರಿ 20, 2021

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-71

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-71

ಜೀವನದ ಒಂದಲ್ಲ ಒಂದು ಕ್ಷಣದಲ್ಲಿ ಒಂಟಿತನ ನಮ್ಮನ್ನು ಕಾಡದೇ ಇರೋಲ್ಲ. ಪ್ರತಿಯೊಬ್ಬ ಮಾನವನಿಗೂ ಒಂಟಿತನ ಕಾಡಿಲ್ಲವೆಂದರೆ ಅವನು ಸ್ವಂತಿಕೆಯಿಂದ ಯೋಚನೆ ಮಾಡಲಾರನೆಂದೇ ಅರ್ಥವಲ್ಲವೇ? ಯಾರು ತಮ್ಮ ಬಗ್ಗೆ ತಾನು ಹಲವು ಗುರಿಗಳನ್ನು ಹೊಂದಿ ಅವುಗಳ ಕಾರ್ಯ ಸಾಧನೆಗೆ ಅಡಿಯಿಡುತ್ತಾನೆಯೋ, ಪರರ ಕಲ್ಮಶಯುಕ್ತ ಮಾತುಗಳನ್ನು ಕೇಳಿ ತಲೆ ಕೆಡಿಸಿಕೊಳ್ಳದೆ ತಾನೇ ತಾನಾಗಿ ಮುಂದೆ ಸಾಗುತ್ತಿರುವನೋ ಅವನಿಗೂ ಕೂಡಾ ತನ್ನ ಸಂತಸವನ್ನು ಹಂಚಿಕೊಳ್ಳಲು ತನ್ನ ಜೊತೆಗೆ ತನಗೆ ಯಾರಾದರೂ ಬೇಕೆಂದು ಅನ್ನಿಸದೇ ಇರದು. ಪರರನ್ನು ಅವಲಂಬಿಸುವುದು ದಾಸ್ಯದ ಸಂಕೇತವಾದರೂ, ಕುಟುಂಬ, ಸಂಸಾರ, ಗೆಳೆಯರನ್ನು, ತನಗೆ ಅನ್ನ ಕೊಡುತ್ತಿರುವವರನ್ನು ಅವಲಂಬಿಸಲೇ ಬೇಕಲ್ಲವೇ?
      ನಮ್ಮ ಏಳ್ಗೆಗೆ ಎಷ್ಟು ಜನ ಖುಷಿ ಪಡುತ್ತಾರೋ ಗೊತ್ತಿಲ್ಲ, ಆದರೆ ನಮ್ಮ ಏಳಿಗೆ, ಏರುತ್ತಿರುವ ಎತ್ತರವನ್ನು ಕಂಡು ಕರುಬುವವರಂತೂ ಅದಕ್ಕಿಂತ ಹೆಚ್ಚೇ ಇರುತ್ತಾರೆ. ಆ ಅವರದೇ  ಹೊಟ್ಟೆಯೊಳಗಿನ ಉರಿಯುತ್ತಿರುವ ಕಿಚ್ಚಿನ ಬಡಬಾಗ್ನಿ ಮಾತಿನ ರೂಪದಲ್ಲಿ ಹೊರಬರುತ್ತದೆ. ಅದರ ಉರಿಯಂತೂ ಊಹಿಸಲಸಾಧ್ಯ! ಅದು ಇಡೀ ಕುಟುಂಬವನ್ನೇ ಸುಟ್ಟು ಕಲುಷಿತವೂ, ಸರ್ವನಾಶವೂ ಮಾಡಬಲ್ಲುದು. ಕುಟುಂಬದೊಳಗಿನ ಜನರೇ ಹಣ, ಆಸ್ತಿ, ಹೆಸರಿಗಾಗಿ ತಮ್ಮ ಸದಸ್ಯನೊಬ್ಬನಿಗೆ ಮೋಸ ಮಾಡಿದಾಗ ಒಂಟಿತನವೇ ಲೇಸೆನಿಸುತ್ತದೆ. ಮಕ್ಕಳ ಗಲಾಟೆ, ಆಸ್ತಿ-ಹಣ-ಹೆಣ್ಣು-ಮಣ್ಣಿಗಾಗಿ ಪ್ರಾಣ ಬಿದ್ದಾಗಲೂ ಒಂಟಿತನ ಲೇಸೆನಿಸುವುದಿಲ್ಲವೇ?
     
     ಈಗಂತೂ ಬಿಡಿ, ಇರುವುದೆಲ್ಲವೂ ನ್ಯಾನೋ ಕುಟುಂಬಗಳೇ! ತಮ್ಮ ಮನೆಗಳಲ್ಲಿ ಜತೆಗೂಡಿ ಹಾಡುವ, ಕುಣಿದು ನಲಿಯುವ ಕಾಲ ಹೋಗಿ ತಾಯಿ ಅಡಿಗೆ ಮನೆಯೊಳಗೆ, ತಂದೆ ಮೊಬೈಲ್ ನೊಳಗೆ, ಮಗ ಕಂಪ್ಯೂಟರ್ ನೊಳಗೆ ಎನ್ನುವಂತಾಗಿದೆ ಜೀವನ! 

    ಒಂಟಿತನವೂ ಹಲವೆಡೆ ವರವೇ, ಶಾಪವಲ್ಲ, ಅಪಾರ ಸಾಧನೆ ನಿಮ್ಮದಾಗಬೇಕಾದರೆ, ಬದುಕಿನಲ್ಲಿ ನೀವು ಯಾರಿಗೂ ಕಾಯದೆ ಒಂಟಿಯಾಗಿಯೇ ಮುಂದುವರೆಯಬೇಕಿದೆ. ಪರರ ನಂಬಿದರೆ ಕೈ ಕೊಡುವವರೇ ಜಾಸ್ತಿ. ಕೇವಲ ನಿಮ್ಮನ್ನೇ ನೀವು ನಂಬಿದಾಗ ಮುಂದೆ ಹೋಗುವುದೇ ಹೆಚ್ಚು! ಆದ ಕಾರಣ ಗುರಿ ಸಾಧನೆಗೆ ಯಾರನ್ನೂ ಕಾಯದೆ ಒಂಟಿಯಾಗಿ ಮುಂದುವರೆಯಿರಿ. ಡಾ. ಎ.ಪಿ.ಜೆ.ಅಬ್ದುಲ್ ಕಲಾಮ್, ಸ್ವಾಮಿ ವಿವೇಕಾನಂದ,ಹಾಡುಗಾರ ವಿಜಯ್ ಪ್ರಕಾಶ್ ಇಂಥ ಸಾಧಕರೇ  ಉದಾಹರಣೆ ಅದಕ್ಕೆ. ನನ್ನ ಗೆಳೆಯರೂ ಬರಲೆಂದು ಕಾದವನ ಒಂಟಿಯಾಗಿ ಬಿಟ್ಟು ಗೆಳೆಯರು ಮುಂದೆ ಹೋಗಿರುತ್ತಾರೆ. 
    ಒಂಟಿತನದ ಸ್ವಾತಂತ್ರ್ಯಕ್ಕಾಗಿ ಹಾತೊರೆಯುತ್ತಿರುವ ಅದೆಷ್ಟೋ ಮನುಜರು ನಮ್ಮ ನಡುವೆಯೇ ಇದ್ದಾರೆ. ಒಮ್ಮೆ ಈ ಸಂಸಾರ ಬಂಧನದಿಂದ, ಕೂಪದಿಂದ ಹೊರ ಬರುವಂತಾದರೆ ಸಾಕೆಂದು ದೇವರಿಗೆ ಪ್ರಾರ್ಥನೆ ಸಲ್ಲಿಸುವವರೂ ಇದ್ದಾರೆ!
   
    ಆಕಸ್ಮಾತ್ ಬಯಸದೆಯೇ ಒಂಟಿತನ ಸಿಕ್ಕಿದ್ದರೂ, ನಾನು ಒಂಟಿಯೆಂದು ಕೊರಗದೆ, ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳದೆ ನಮ್ಮ ಗುರಿ ಸಾಧನೆಗಾಗಿ ಮುಂದುವರೆಯೋಣ. ನಮ್ಮ ಸ್ವಾತಂತ್ರ್ಯ ಹಲವರ ಜೀವನಕ್ಕೆ ಬೆಳಕಾಗಲಿ, ನೀವೇನಂತೀರಿ?
@ಪ್ರೇಮ್@
21.02.2021

ಬುಧವಾರ, ಫೆಬ್ರವರಿ 10, 2021

ಹಸಿರೆಲೆ

ಹಸಿರೆಲೆ

ಮರವನು ಹಸಿರಾಗಿರಿಸಿಹ ಅಡಿಗೆಯ ಮನೆಯದು ನಾನೇ
ವೃಕ್ಷಕೆ ಊಟವ ಒದಗಿಸೋ ಪಿತನಂತಹ ಕಾರ್ಯವ ಮಾಡುವೆ ನಾನೇ..

ವಾತಾವರಣದ ಬೆಳಕನು ಹೀರಿ ಪಿಷ್ಠವ ಮಾಡುವವ ನಾನೇ
ಸೂರ್ಯನ ಕಿರಣವ ಹೀರುತ ರುಚಿಕರ ಉಣಿಸನು ಉಣಿಸುವವ ನಾನೇ..

ಕೆಂಪನೆ ಹಳದಿ ಗಿಳಿ ಹಸಿರಿನ ಬಣ್ಣದಲೂ ಕಂಡು ಬರುವೆನು ನಾನು
ಪತ್ರ ಹರಿತ್ತು ಹೆಚ್ಚಾದೊಡೆ ಹಸಿರಾಗಿರುವವ ನಾನು .

ಸಣ್ಣಕೆ ಅಗಲಕೆ ಸಪೂರಕೆ ಉದ್ದಕೆ ವಿಧ ವಿಧ ಆಕಾರ ನನ್ನದು
ಗಿಡಕೂ ಮರಕೂ ಬಳ್ಳಿಗೂ ಪೊದೆಗೂ ಅಂದವ ಕೊಡುವ ಕೆಲಸ ನನ್ನದು..

ಮೊಗ್ಗಿಗೂ ಹೂವಿಗೂ ಮುಳ್ಳಿಗೂ ಕಾಂಡಕೂ ನನ್ನದೆ ಹಾಜರಿ ಪ್ರೀತಿ
ವಸಂತ ಋತುವಲಿ ಚಿಗುರುವ ಅಂದವು ಸರ್ವೆಡೆ ಕೇಳೆಯ ಖ್ಯಾತಿ!

ಅಂದಕೆ ಶೃಂಗಾರಕೆ ತಳಿರ  ತೋರಣಕೆ ನಾನೇ ಮೊದಲು ಸಿಗುವೆ..
ಮಾನವ ಮುಚ್ಚಲು ಆದಿಯ ಮನುಜಗೆ ನನ್ನದೆ ಅಲ್ಲವೆ ಅರಿವೆ?

ಹಲ್ಲನು ಉಜ್ಜಲು ಬೆಳಗಿನ ಕೆಲ ತಿಂಡಿಗೂ ನನ್ನುಪಯೋಗ ಬಹಳ
ಅಲಂಕಾರಕೆ ಬಳಸುವೆ ನನ್ನನು ತಂತ್ರಜ್ಞಾನ ಯುಗದಿ ವಿರಳ!

ಬಂಧು ಬಾಂಧವರ ಜೊತೆಯಲಿ ನನ್ನಲಿ  ಊಟವ ಮಾಡಲು ರುಚಿಯೇನು?!
ಕಂದು ಬಣ್ಣವ ಬರಿಸಿ ಕಡ್ಡಿಯ ಚುಚ್ಚುತ ಕಾಣಲು ಸೊಗಸೇನು!

ಕಾಡು ಮನುಜಗೆ ನನ್ನ ಸಂಘವದು ಬಹಳವೇ ಮುಖ್ಯ ಅಲ್ವೇನೋ?
ಕಾಡಲಿ ವಾಸಿಸೊ ಸಸ್ಯಾಹಾರಿಗೆ ನಾನಿರದೆ ಬದುಕೇ ಇಲ್ವೇನೋ!
@ಪ್ರೇಮ್@
10.02.2021

ಮಂಗಳವಾರ, ಫೆಬ್ರವರಿ 9, 2021

ಗಝಲ್

[6/4, 9:51 AM] Wr Siraj Ahmed Soraba: ಆತ್ಮೀಯರೇ ನಿಮ್ಮ ಗಜಲ್ ಭಾವನಾತ್ಮಕ ಚೆನ್ನಾಗಿದೆ ಆದರೆ
ಸೆಹ್ ಗಜಲ್ ನಿಯಮ ಹೊಂದಿಲ್ಲ ಒಂದು ಗಜಲ್ ಐದು ಅಥವಾ ಏಳು ದ್ವಿಪದಿಳಿಂದ ಮಾತನಾಡುತ್ತದೆ ಕೆಲವು ಗಜಲ್ ಗಳು ಹದಿನೈದು ಹದಿನಾರು ದ್ವಿಪದಿಗಳದ್ದೂ ಆಗಿರುತ್ತವೆ ಸೆಹ್ ಗಜಲ್ ಆಗಲು ಇಪ್ಪತ್ತೊಂದು ಶೇರ್ ಗಳಾದರೂ ಇರಬೇಕು ಅದರಲ್ಲಿ ಕೊನೆಯ
ಶೇರ್ ಅಂದರೆ ಏಳನೇ ದ್ವಿಪದಿ
ಮಕ್ತಾ ಆಗಿರುತ್ತದೆ ಕಾರಣ ಅದರಲ್ಲಿ ಕವಿಯ ಹೆಸರು ಅಥವಾ ಕಾವ್ಯನಾಮ ಇರುತ್ತದೆ
ಐವತ್ತೊಂದು ಶೇರ್ ಗಳ ಗಜಲ್ ಕೂಡ ಮೂರು ಮಕ್ತಾ ಇರುತ್ತದೆ

ತಾವು ಐದು ಶೇರ್ ಗಳಿಗೆ ಮಕ್ತಾ ಹಾಕಿದ್ದೀರಿ
ಇದರ ಬದಲಾಗಿ ಈ ಒಟ್ಟು ಹದಿನೈದು ಶೇರ್ ಗಳಲ್ಲಿ ಒಂದೇ ಮಕ್ತಾ ಸಾಕಾಗುತ್ತದೆ
ಇದು ಗಜಲ್ ಆಗುತ್ತದೆ

ಒಟ್ಟಾರೆ ಯಾವುದೇ ಸೆಹ್ಗಜಲ್
ಬರೆದರೂ ಅದರಲ್ಲಿ ಮೂರು
ಮತ್ಲಾ ಮತ್ತು ಮೂರು ಮಕ್ತಾ
ಇರುತ್ತವೆ ಕೆಲವು ಸೆಹ್ ಗಜಲ್
ಗಳು ಮೂವತ್ತೊಂದು ಶೇರ್ ಗಳಿಂದ ಮಾತನಾಡುತ್ತವೆ.ಇದರಲ್ಲಿಯೂ
ಮೂರು ಮತ್ಲಾ ಮೂರು ಮಕ್ತಾ
ಇರುತ್ತವೆ ಮೊದಲು ಸೆಹ್ ಗಜಲ್ ಗಳ ಬಗ್ಗೆ ತಿಳಿಯಿರಿ ನಂತರ ಬರೆದರೆ ತಮಗೆ ಇನ್ನೂ
ಹೆಚ್ಚಿನ ಜ್ಞಾನ ಸಿಗಬಹುದು
ಭಾವನೆಗಳಿಂದ ಕೂಡಿದ ಗಜಲ್
ಚೆನ್ನಾಗಿದೆ ಅಭಿನಂದನೆಗಳು

*ಯು ಸಿರಾಜ್ ಅಹಮದ್ ಸೊರಬ*
[6/4, 10:18 AM] Wr Amrithahasta Prakash: ಗಜಲ್ ಪಾಠ

ಗಜಲ್ ಕಲಿಯಲು ಆಸಕ್ತಿ ಇದ್ದವರಿಗಾಗಿ ಒಂದು ಪ್ರಯತ್ನ

ಗಜಲ್ ಮುಖ್ಯವಾಗಿ ಇರಬೇಕಾದ ಅಂಶಗಳು

*ದ್ವೀಪದಿ*
*ಮತ್ಲಾ*
*ರದೀಫ್*
*ಕಾಫಿಯ*
*ಷೇರುಗಳು*
*ಮಖ್ತ*
ಇಷ್ಟು ವಿಷಯಗಳು ನೆನಪಿರಬೇಕಾದ ಅಂಶಗಳು

*ದ್ವೀಪದಿ*- ಗಜಲ್ ಮುಖ್ಯವಾಗಿ ದ್ವೀಪದಿ ಗಳಲ್ಲಿ ಇರಬೇಕು.ಎರಡೆರಡು ಸಾಲುಗಳಲ್ಲಿ

*ಮತ್ಲಾ*- ಎಂದರೆ ಗಜಲ್ ನ ಮೊದಲ ಚರಣ. ಇದು ದ್ವೀಪದಿಯಲ್ಲಿದ್ದು ಇದರ ಎರಡು ಚರಣದ ಕೊನೆಯಲ್ಲಿ ಒಂದೇ ರೀತಿಯ ಪ್ರಾಸಗಳು ಬರಬೇಕು ಕಾಫಿಯ ದ ಕೊನೆಯ ಮತ್ತು ರದೀಫ್ ಪ್ರಾಸವಾಗಿದ್ದು ಮುಂದಿನ ಎಲ್ಲಾ ಷೇರುಗಳಲ್ಲಿ ಇದು ಕಡ್ಡಾಯವಾಗಿ ಬರಬೇಕು

*ರದೀಫ್*- ಇದು ಒಂದು ಪ್ರಾಸ . ಕಾಫಿಯ ದ ನಂತರ ಎಲ್ಲಾ ಷೇರು ಗಳಲ್ಲಿ  ಮತ್ತೆ ಮತ್ತೆ ಬರುವ ಪದ. ಇವು ಅರ್ಥವುಳ್ಳದಾಗಿದ್ದು ಗಜಲ್ ಗೆ ಮೆರಗು ನೀಡಲು ಸಹಕಾರಿ ರದೀಪ್ ಇಲ್ಲದೆ ಗಜಲ್ ಬರೆಯಬಹುದು ಆದರೆ ಹೆಚ್ಚ ಚಾಲ್ತಿ ಇರೋದು ರದೀಪ್ ಇರುವ ಗಜಲ್

*ಕಾಫಿಯ*- ಇದು ರದೀಪ್ ನ ಹಿಂದೆ ಬರುವ ಪದದ ಕೊನೆಯ ಅಕ್ಷರ. ಇಲ್ಲಿ ಇದಕ್ಕೆ ರವಿ ಎನ್ನುತ್ತಾರೆ ಇದು ಪ್ರಾಸವಾಗಿರುತ್ತದೆ ಆದರೆ ಕೊನೆಯ ಅಕ್ಷರ ಮಾತ್ರ ಒಂದೇ ಆಗಿರಬೇಕು ಕಾಫಿಯಾ ಯಾವಾಗಲು ಒಂದೇ ಆಗಿರಬಾರದು. ಉದಾ: ಬದುಕಿಸಿ, ಸಾಯಿಸಿ,ಬಯಸಿ ಹೀಗೆ ಇಲ್ಲಿ *ಸಿ*  ರವಿ ಆಗಿರುತ್ತದೆ ರವಿ ಇರುವ ಪದ ಕಾಫಿಯ ಆಗುತ್ತದೆ ಅವು ಬೇರೆ ಬೇರೆ ಆಗಿರಬೇಕು

*ಷೇರುಗಳು*- ಎಂದರೆ ದ್ವಿಪದಿಯಲ್ಲಿರುವ ಚರಣಗಳು

*ಮಖ್ತ*- ಇದು ಕೊನೆಯ ದ್ವಿಪದಿಗೆ ಮಖ್ತ ಎನ್ನುವರು. ಇಲ್ಲಿ ಕವಿ ತನ್ನ ಕಾವ್ಯ ನಾಮ ಅಥವಾ ಹೆಸರನ್ನು ಅಳವಡಿಸುವರು ಇದು ಕಡ್ಡಾಯ ಅಲ್ಲದಿದ್ದರು ಕವಿಯ ಜಾಣ್ಮೆ ತಿಳಿಯಲು ಹಾಗು ಗಜಲ್ ನ ಮೆರುಗು ಹೆಚ್ಚಿಸಲು ಸಹಕಾರಿ.

ಇಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಗಜಲ್ ರಚಿಸಬಹುದು
ಉದಾಹರಣೆಗೆ ಒಂದು ಗಜಲ್👇👇👇👇👇👇👇👇👇👇
*ಗಜಲ್*

ಜಗವೇ ನಲಿದಂತಿರುವುದು  ಬಂ *ದು ನೀ ಕೈ ಹಿಡಿದರೆ*
ನಿನ್ನವನಾಗಿ ಬಿಡುವೆ ನಾನಿಂ *ದು ನೀ ಕೈ ಹಿಡಿದರೆ*

ನೀ ಜೊತೆಯಿರುವ ಕ್ಷಣ ನನ್ನ ನಾ ಮರೆಯುವೆನು
ಏನೇ ಬರಲಿ ಗೆಲ್ಲುವೆ ದೈರ್ಯ ತಂ *ದು ನೀ ಕೈ ಹಿಡಿದರೆ*

ಬದುಕಿನಲಿ ನಿನ್ನ ಪ್ರೀತಿ ಸದಾ ಇದ್ದರೆ
ಹಿಮಾಲಯ ಹತ್ತಿ ಇಳಿಯುವೆ ಖುಷಿಯಲಿಂ *ದು ನೀ ಕೈ ಹಿಡಿದರೆ* 

ಗಾಳಿಯೇ ಇರಲಿ ನೆರೆಯೇ ಬರಲಿ
ಹೆದರುವುದಿಲ್ಲ ನಾನೆಂ *ದು ನೀ ಕೈ  ಹಿಡಿದರೆ*

ಯತಿ ಆಗಿ ಬಿಡುವೆ ನನ್ನ ಮರೆತು
ಇನ್ನೊಂದು ಮನದ ಹಿಂದೆ ನಡೆ *ದು ನೀ ಕೈ ಹಿಡಿದರೆ*

👆👆👆👆👆👆👆👆👆👆

ಇಲ್ಲಿ *ದು* ರವಿ ಆಗಿದೆ
*ದು* ಅಕ್ಷರ ಇರುವ ಶಬ್ದಗಳೆಲ್ಲ ಕಾಫಿಯ *ಬಂದು,ನಾನಿಂದು,ತಂದು,ಖಾಲಿಯಿಂದು,ನಾನೆಂದು,ದುಡಿದು* ಇವುಗಳು ಕಾಫಿಯ

ಇನ್ನು ರದೀಫ್ *ನೀ ಕೈ ಹಿಡಿದರೆ* ಇದು ರದೀಪ್ ಆಗಿರುತ್ತದೆ ಅಲ್ಲಿರುವ ೫ ಷೇರುಗಳಲ್ಲಿ ಇದು ಬಂದಿದೆ ಗಮನಿಸಬೇಕಾದ ಅಂಶ

ಮಖ್ತ- ಇದು ಕೊನೆಯ ದ್ವಿಪದಿ ಇಲ್ಲಿ ಕವಿಯ ಹೆಸರಿನ ಬಳಕೆ ಯಾಗಿದೆ *ಯತಿ* ಎಂದು


ಹೀಗೆ ಇಷ್ಟು ಅಂಶಗಳಲ್ಲಿ ನೆನಪಲ್ಲಿಟ್ಟರೆ ಗಜಲ್ ಬರೆಯುವುದು ಸುಲಭ.

ಇದು ಒಂದು ಪ್ರಕಾರ ಮಾತ್ರ ಹೆಚ್ಚು ಈ ಪ್ರಕಾರದಲ್ಲಿ ಬರೆಯುವುದು. ಅನೇಕ ಪ್ರಕಾರದ ಗಜಲ್ ಗಳಿವೆ

🙏🙏🙏🙏🙏🙏🙏🙏🙏
[6/4, 10:18 AM] Wr Amrithahasta Prakash: ಮೊದಲ ಪ್ಯಾರಾಕ್ಕೆ *ಮತ್ಲಾ* ಎನ್ನುತ್ತಾರೆ.
ಮೊದಲ ಪ್ಯಾರಾದಲ್ಲಿ ಎರಡು ಸಾರಿ ಕಾಫಿಯಾ ರಧೀಫ್ ಬರಬೇಕು
 
ಪ್ಯಾರಾ ಅಥವಾ ಚರಣಗಳನ್ನು *ಷೇರ್* ಎನ್ನುತ್ತಾರೆ

ಕೊನೆಯ ಚರಣವನ್ನು *ಮಕ್ತಾ* ಎನ್ನುತ್ತಾರೆ

ಚರಣದಲ್ಲಿ ಮೊದಲೆರಡು ಸಾಲು ಕೊನೆಯ ಸಾಲು ಬೇರೆ ಬೇರೆಯಾಗಿರಬೇಕು
ಅದಕ್ಕೆ *ದ್ವಿಪದಿ* ಎನ್ನುತ್ತಾರೆ


ಚರಣದ ಕೊನೆಯ ಪದ ಅಂದರೆ ಈ ಗಜ಼ಲ್ ನಲ್ಲಿ
ಗೆಳೆಯ ಎನ್ನುವ ಪದ *ರಧೀಫ್* ಎನ್ನುತ್ತಾರೆ

ಆತುರವೇಕೆ
ಬೇಸರವೇಕೆ
ಕಾತುರವೇಕೆ
ಅವಸರವೇಕೆ
ಸ್ವರವೇಕೆ
ನಿರಾಸೆಯೇಕೆ
ಈ ಪದಗಳಿಗೆ *ಕಾಫಿಯಾ* ಎನ್ನುತ್ತಾರೆ

*ಕೆ* ಅಕ್ಷರವನ್ನು *ರವಿ* ಎನ್ನುತ್ತಾರೆ

ಗೆಳೆಯ ಪದದ ಹಿಂದಿನ ಅಕ್ಷರ ಎಲ್ಲಾ ಚರಣಗಳಲ್ಲೂ ಒಂದೇ ಆಗಿರಬೇಕು
೫ ,೭,೯ ಚರಣ ಹೀಗೆ ಬೆಸ ಸಂಖ್ಯೆಯ ಚರಣ ಇರಬೇಕು
[6/4, 1:26 PM] Wr Siraj Ahmed Soraba: ಸರ್ ಮತ್ಲಾ ಎಂದರೆ ಇದರ
ನಿಜವಾದ ಅರ್ಥ ಉಗಮದ
ಸ್ಥಾನ ಅಂದೆ ಗಜಲ್ ಆರಂಭಗೊಳಿಸುವ ದ್ವಿಪದಿ
ಅಥವಾ ಶೇರ್

ಎರಡು ಚರಣಗಳು ಸೇರಿ
ಒಂದು ಶೇರ್ ಆಗುತ್ತದೆ
ಈ ಎರಡೂ ಚರಣಗಳಲ್ಲಿ
ರದೀಫ್ ಮತ್ತು ಕಾಫಿಯಗಳು
ಕ್ರಮಬಧ್ಧವಾಗಿ ಬರುತ್ತವೆ

ಚರಣ ಎಂದರೆ ಮಿಸ್ರ
ಒಂದು ಚರಣ ಅಥವಾ ವಾಕ್ಯ
ತನ್ನ ಪರಿಧಿಯಲ್ಲಿ ಸಂಪೂಣ೯ತೆ
ಪಡೆದುಕೊಂಡಿರಬೇಕು
ಅಥಾ೯ತ್ ಅಥ೯ ಮತ್ತು
ಸಂದೇಶವು ಪರಿಪೂಣ೯ತೆಯಿಂದ
ಎರಡನೇ ಚಾರಣಕ್ಕೆ ಸೇರಿಸಿಕೊಳ್ಳದೆ ಮತ್ತು ಎರಡನೇ ಚರಣಕ್ಕೆ ಪುಷ್ಠಿ ನೀಡುವಂತೆ ಬರಬೇಕು
ಇದಕ್ಕೆ ಮಿಸ್ರ ಎನ್ನುತ್ತಾರೆ

ರವಿಯಂದರೆ ಒಂದು ಗಜಲ್ನ
ಕಾಫಿಯ ಅಥವಾ ಒಳಪ್ರಾಸದ
ಕೊನೆಯ ಅಕ್ಷರ 
ಒಂದು ಗಜಲ್ ನಲ್ಲಿ ಕಾಫಿಯ
ಹೃದಯ ಮತ್ತು ಉಸಿರಾದರೆ
ರವಿ ಆ ಕಾಫಿಯಾದ ನೆಲೆಬೆಲೆ
ಹೆಚ್ಚಿಸುವಂತಹ ಬೇರಾಗಿರುತ್ತದೆ
ಕಾಫಿಯ ಕೊನೆಯ ಎಲ್ಲಾ
ಅಕ್ಷರಗಳು ಒಂದೇ ಆಗಿರಬೇಕು
ಗಜಲ್ ನಲ್ಲಿ ಹಲವು ಅಂಶಗಳಿವೆ
ನಾನಿನ್ನು ಅದರ ಬಗ್ಗೆ ತಿಳಿಸುತ್ತೇನೆ

ಮಕ್ತಾ ಬೆಹರ್ ಬಗ್ಗೆ ಹಂತ
ಹಂತವಾಗಿ ತಿಳಿಸುತ್ತೇನೆ
ಇನ್ನೂ ಸಮಗ್ರ ಮಾಹಿತಿ ಬೇಕೆಂದರೆ ನೂರ್ ಅಹಮದ್
ನಾಗನೂರ ಅವರ ಕೃತಿಗೆ
ನಾನು ಬರೆದ ಮುನ್ನುಡಿಯಲ್ಲಿದೆ
ಅದನ್ನು ಸಾಧ್ಯವಾದರೆ ಇಲ್ಲಿ
ಹಾಕುತ್ತೇನೆ ಗಜಲ್ ಗಳ ಬಗ್ಗೆ
ಮಾಹಿತಿ ನೀಡಿ ಕವಿಮನಗಳನ್ನು
ಹುರಿದುಂಬಿಸುವ ತಮ್ಮ ಕಾರ್ಯ ಶ್ಲಾಘನೀಯ ತಮಗೆ ಹೃತ್ಪೂರ್ವಕ ಅಭಿನಂದನೆಗಳು

*ಯು ಸಿರಾಜ್ ಅಹಮದ್ ಸೊರಬ*
[6/4, 1:52 PM] Wr Siraj Ahmed Soraba: Gmail noorahmed naganoor <noorhn6907@gmail.com>
(no subject)
Tabassum banu Tabbu <ttabbu210@gmail.com> Mon, Nov 11, 2019 at 5:35 AM
To: noorhn6907@gmail.com
*ಗಜಲ್ ಎಂದರೇನು*


ಗಜಲ್ ಒಂದು ಅರೇಬಿಕ್ ಪದ ಗಜಲ್ ಎಂದರೆ ಹೆಂಗಸರಿಂದ ಮಾತ ನಾಡುವುದು, ಆಳವಾದ ಭಾವನೆ, ಪ್ರೇಮಿಗಳ ಸಂವಾದ, ದಂಪತಿಗಳ ಮಾತುಕತೆ,ಭಾವುಕ ಜೀವಿಗಳ ಸೂಕ್ಷ ಸಂವೇದನೆ, ಪ್ರೇಮಿಗಳ ಜುಗಲ್ ಬಂದಿ.

                  ಗಜಲ್ ಎಂದರೆ ವಿರಹ ವೇದನೆ ಪ್ರೇಮ ನಿವೇದನೆ ಪ್ರೀತಿಸುವ ಹೃದಯಗಳ ಚಡಪಡಿಕೆ.ಜಿಂಕೆ ಅನುಭವಿಸುವ ಆತ೯ನಾದ ಬೇಟೆಗಾರನಿಂದ ತಪ್ಪಿಸಿಕೊಂಡು ಸ್ವತಂತ್ರವಾಗುವ ನೋವೆಂದು ಕ್ರಿ.ಶ.ಏಳನೆಯ ಶತಮಾನದಲ್ಲಿ ಶಮ್ಸ್ ಕೈಸ್ ರಾಜಿ ಗಜಲ್ ತಜ್ಞರು ಹೇಳಿರುತ್ತಾರೆ.


ಗಜಲುನ್,ಗಜಾಲ ,ಗಿಜಾಲ್ ಎಂಬ ಈ ಮೂರು ಪದಗಳಿಂದ ಗಜಲ್ ಪದ ಬಂದಿರಬಹುದು ಗಜಲುನ್ ಎಂದರೆ ಮೋಹಕ ಸನ್ನೆಗಳಿಂದ ಹೆಂಗಸರೊಡನೆ ಮಾತನಾಡುವುದು.ಗಜಾಲ ಇದು ಹೆಣ್ಣಿಗೆ ಹೋಲಿಸಿ ಇಡುವ ಹೆಸರು ಇದರ ಅರ್ಥವು ಜಿಂಕೆ ಕಣ್ಣಿನ ಆಕಷ೯ಕ ತೀಕ್ಷ್ಣ ಬುದ್ದಿಯ ಹೆಣ್ಣು, ಗಿಜಾಲ್ ಎಂದರೆ ಜಿಂಕೆಯಂದು ಅಥ೯ ಈ ಮೂರೂ ಪದಗಳು ಅರಬ್ಬೀ ಆಗಿದ್ದು *ಜ* ಎಂಬ ಅಕ್ಷರವು ಮೂರೂ ಪದಗಳಲ್ಲಿ ಕಾಣುತಿದೆ ಆದುದರಿಂದ ಗಜಲ್ ಅಥ೯ವು ಜಿಂಕೆಯಂದು ತೋರಿಸಲಿಕ್ಕಾಗಿ ವಿದ್ವಾಂಸರು ಇದನ್ನು ಜಿಂಕೆಯ ಆತ೯ನಾದವೆಂದು ಹೇಳಿದ್ದಾರೆ.


               ಗಜಲ್ ಗಳು ಒಂದೇ ವಿಷಯ ಒಂದೇ ತರಹದ ದೃಷ್ಟಿಕೋನ ಇಟ್ಟುಕೊಂಡು ಮಾತನಾಡದೇ ಸಾವಿರಾರು ಚಿಂತನೆಗಳಿಂದ ಹತ್ತು ಹಲವು ವಿಚಾರಗಳನ್ನು ಪ್ರತಿಪಾದಿಸುತ್ತವೆ.ಬದುಕಿನ ಎಲ್ಲಾ ರಂಗಗಳ ಹೂರಣದಿಂದ ಸಾಮಾಜಿಕ ಕಳಕಳಿ ಮತ್ತು ವಿಶ್ವಮಾನವತೆಯ ತುಡಿತದಿಂದ ಭೂತ ಭವಿಷ್ಯತ್ವತ೯ಮಾನಗಳ ಬೆಳಕಿನಿಂದ ಮಾತನಾಡುತ್ತವೆ ಶೋಷಿತರ ಮದಿ೯ತರ ದನಿ ಗರೀಬರ ಆಕ್ರಂದನ ಗತಿಹೀನರ ಕಷ್ಟಗಳು ನೋವುಗಳು ಕವಿಯ ಗಜಲ್ ಆಗಿರಬಹುದು. ಶೋಷಕರ ವಿರುದ್ಧ ಸಿಡಿದೆದ್ದು ಹಕ್ಕುಗಳಿಗಾಗಿ ಹೋರಾಡುವ ಪರಿಯು ಗಜಲ್ ಆಗಿರಬಹುದು ಶ್ರಮಿಕರಿಗೆ ತಕ್ಕ ಪಗಾರುಗಳನ್ನು ಕೊಡದೇ ರಕ್ತ ಹೀರಿಕೊಳ್ಳುವ ಕ್ರೂರಿಗಳ ಜಾಲಗಳಿಂದ ಹೊರ ಬಂದು ಬದುಕನ್ನು ರೂಪಿಸುವ ಇರಾದೆ ಗಜಲ್ ಆಗಬಹುದು ದ್ವೇಶಾಸೂಯೆಗಳ ಕುಳಗಳ ನಡುವೆ ಕಾಯಕದ ಬೀಜವು ಟಿಸಿಲೊಡೆದು ಗಿಡದಿ ಮರವಾಗಿ ಛಲದಿಂದ ಬೆಳೆದು ನೆರವಾಗಿ ನೆರಳಾಗಿ ಸದಭಿರುಚಿಯ ಫಲ ಪುಷ್ಪಗಳನ್ನು ಧಾರೆಯರೆಯುವ ಪರಿಯು ಗಜಲ್ ಆಗಬಹುದು.

ಪ್ರೇಯಸಿಯ ಮುಂಗುರುಳು ಜಿಂಕೆಯಂತಹ ಕಣ್ಣುಗಳು ಕಮಲದಂತಹ ಕೆನ್ನೆಗಳನ್ನು ಅವಳ ಅನನ್ಯ ಸೌಂದಯ೯ವು ಪ್ರಿಯತಮನ ನಾಲಿಗೆಯಿಂದ ಹೊರಹೊಮ್ಮುವ ನವಿರಾದ ಭಾವಗಳ ವಣ೯ನೆಯು ಕವಿಯ ಗಜಲ್ ಆಗಬಹುದು.ಎರಡು ಹೃದಯಗಳ ಸಂಗಮ ಎರಡು ಪ್ರೇಮಿಗಳ ಸಂತಸ‌ ನಲಿವು ಜೊತೆಗೆ ದೂರಾದ ಪ್ರೀತಿಯಿಂದ ಕೊರಗುವ ವಿರಹಿಗಳ ವೇದನೆ ಗಜಲ್ ಕಾವ್ಯದಲ್ಲಿ ಓದಬಹುದು.

             ಏಳನೇ ಶತಮಾನದ ಖಸೀದಾ,ಮಸ್ನವಿ, ಮಸಿ೯ಯಾ ಎಂಬ ಅರಬ್ಬೀ ಕಾವ್ಯ ಪ್ರಕಾರ ನಂತರ ಗಜಲ್ ಪ್ರಕಾರವಾಗಿ ನಿಗದಿತ ದ್ವಿಪಗಳಲ್ಲಿ‌ ರಚಿತವಾಗಿ ಗಮನ ಸೆಳೆಯಿತು.ಖಸೀದಾವು ಸುಮಾರು ಐವತ್ತು ನೂರು ದ್ವಿಪದಿಗಳಿಂದ ಕೂಡಿದ ಒಂದು ಸುದೀರ್ಘ ರಚನೆಯಾಗಿದೆ. ಇದನ್ನು ಅರೇಬಿಕ್ ಕವಿಗಳು ಬರೆದು ಹಾಡುತ್ತಿದ್ದರು.ಇಂತಹ ಕಾವ್ಯಗಳನ್ನು ಬರೆಯುವವರು ಈಗಲೂ ಇದ್ದಾರಾದರೂ ಇವು ಅರೇಬಿಕ್ ನಲ್ಲಿ ಹೆಚ್ಚು ನೆಲೆ ಬೆಲೆಗಳನ್ನು ದಕ್ಕಿಸಿಕೊಳ್ಳಲಿಲ್ಲ. ಅಂದು ಅರೇಬಿಕ್ ಭಾಷೆಯನ್ನು ಚೆನ್ನಾಗಿ ಬಲ್ಲವರಾಗಿದ್ದ ಸಾಕಷ್ಟು ಪಶಿ೯ಯನ್ ಕವಿಗಳು ಇದ್ದರು. ಹದಿಮೂರು ಹನ್ನೆರಡನೇ ಶತಮಾನದಲ್ಲಿ ಖಸೀದಾಗಳು ಗಜಲ್ ಗಳ ರೂಪ ಪಡೆದು ಇರಾನ್ ದೇಶವನ್ನು ಪ್ರವೇಶಿಸಿ ಅಲ್ಲಿನ ಒಂದು ಆಡುಭಾಷೆಯ ಜನಪದ ಕಾವ್ಯ ಪ್ರಕಾರವಾದ *ಚಾಮ* ಎಂಬ ಪ್ರಭಾವದಿಂದ ಗಜಲ್ ಎಂದು ಹೆಸರು ಪಡೆದು ಐದು ಏಳು ನಾಲ್ಕು ಎಂಟು ಹೆಚ್ಚೆಂದರೆ ಹದಿನೇಳು ಹೀಗೆ ಬೆಸಸಂಖ್ಯೆಯಲ್ಲೂ ಸಮಸಂಖ್ಯೆ ಯಲ್ಲೂ ಮಾತನಾಡುತ  ಜನರ ಮನ್ನಣೆಗಳಿಸುತ ಸಾಗಿದವು. ಆದರೆ ಫಾಸಿ೯ಯಲ್ಲಿ ಸಾಕಷ್ಟು ಬರಹಗಾರರಿದ್ದರೂ ಅದು ಅಲ್ಲಿ ಜನಪ್ರಿಯ ಮತ್ತು ಲೋಕಪ್ರಿಯ ಕಾವ್ಯವಾಗಲು ಸಾಧ್ಯವಾಗಲಿಲ್ಲ. ಕೇವಲ ಫಾಸಿ೯ ಭಾಷೆಗಷ್ಟೇ ಸೀಮಿತವಾಗಿದ್ದ ಗಜಲ್ ಕಾವ್ಯ ಭಾರತದ ಉದು೯ ಭಾಷೆಗೆ ಒಲಿದುಕೊಂಡು ಬಂದಾಗ ಅದರ ಸಮೃದ್ಧಿಯ ಸುವರ್ಣ ಯುಗವೊಂದು ಆರಂಭವಾಗಿ ಜಗತ್ತಿನ ಜನಮನಗಳ ನೆಚ್ಚಿನ ಕಾವ್ಯ ಪ್ರಕಾರವಾಗಿ ಜಗದ ಇತರೆ ಭಾಷೆಗಳಿಗೂ ಹರಡಿಕೊಂಡಿತು.


ಭಾರತದ ಸುಪ್ರಸಿದ್ಧ ಕವಿಗಳ ಸಂಪಕ೯ದಿಂದ ಸುಂದರವಾದ ಘನವೆತ್ತ ನವಿರಾದ ನಯವಾದ ಹಾಗೂ ಗಂಭೀರ ಹಾಗೂ ಎಲ್ಲಾ ವಗ೯ದ ಜನರೊಂದಿಗೆ ಬೆರೆತು ಅರಿತು ಮಾತನಾಡುವ ಸಾವತ್ರಿ೯ಕ ಕಾವ್ಯವಾಯಿತು. ಗಜಲ್ ಕಾವ್ಯವು ಜಗತ್ಪ್ರಸಿದ್ಧ ಕಾವ್ಯವೆನಿಸಿಕೊಳ್ಳಲು ಮುಖ್ಯ ಕಾರಣ ನಮ್ಮ ಭವ್ಯ ಭಾರತದ ದಿವ್ಯ ಸಂಸ್ಕೃತಿ ಸಂಸ್ಕಾರಗಳು. ಈ ದೇಶದ ಅಸಾಮಾನ್ಯ ಸ್ನೇಹ ಬಂಧುತ್ವ ಮಾತೃತ್ವ ಬಹುತ್ವದಲಿ ಭಾವೈಕ್ಯತೆ ವಿವಿಧತೆಯಲಿ ಸಮಾನತೆ ಮಾನವತೆ ಆಧ್ಯಾತ್ಮ ದಾಸೋಹ ಶೂನ್ಯ ಸಂಪಾದನೆ ಶರಣ ತತ್ವಗಳ ಸ್ಪಷ೯ಗಳಿಂದ ಗಜಲ್ ಕಾವ್ಯವು ಮನಮನೆಯ ಮಾತಾಗಿ ನೆಲೆಬೆಲೆಯನ್ನು ಕಂಡುಕೊಂಡಿತು. ಭಾರತದಲ್ಲಿರುವ ನಿಸಗ೯ ಸಿರಿ ಶಾಂತಿ ಧಾಮಗಳು ಮನಗಳಿಗೆ ಪ್ರಫುಲ್ಲತೆ ಕೊಡುವ ಪರಂಪರೆ ಖನಿಜ ಸಂಪತ್ತು ಶ್ರೀಗಂಧದ ಮರಗಳು ಅನನ್ಯ ತರುಲತೆಗಳ ಫಲಪುಷ್ಪಗಳು ನದಿ ಗುಡ್ಡ ಬೆಟ್ಟ ಸಾಗರಗಳ ಸೌಂದಯ೯ಗಳು ಭಕ್ತಿಭಾವ ದೇಶಾಭಿಮಾನ ಈ ಪುಣ್ಯ ನೆಲದ ಸೊಗಡುಗಳ ಸೊಡರುಗಳ ಮಹಾನ್ ಬೆಳಕು ಗಜಲ್ ಕಾರರನ್ನು ಅತೀಯಾಗಿ ಸೆಳೆದುಕೊಂಡಿತು. ಆದುದರಿಂದ ಉದು೯ ಕವಿಗಳು ಭಾರತದ ಹಿರಿಮೆ ಗರಿಮೆಗಳನ್ನು ಹಾಡಿ ಹೊಗಳಿದರು. ಭಾರತದ ಘನತೆ ಗೌರವ ಮಹಾನ್ ದೇಶದ ಕಲೆ ಸಾಹಿತ್ಯ ಅಖಂಡತೆಯ ಶಕ್ತಿಗೆ ಪ್ರಭಾವಿತರಾಗಿ ವಿಶ್ವ ಪ್ರಸಿದ್ಧ ಕವಿಗಳು ಹಿಂದೂಸ್ತಾವನನ್ನು ಧರೆಯ ಸ್ವಗ೯ವೆಂದರು. ಸ್ವಗೋ೯ದ್ಯಾನಗಳ ತವರು ಎಂದು ಹೊಗಳಿದರು. ಸಕಲ ದೇಶಗಳಿಗಿಂತ ಅತ್ಯುನ್ನತ ಶ್ರೇಷ್ಠ ಜ್ಯೇಷ್ಠ ದೇಶವೆಂದರೆ ಅದು ಹಿಂದುಸ್ತಾನವು ಮಾತ್ರ ಎಂದು ತಮ್ಮ ಗಜಲ್ ಗಳಲ್ಲಿ ಬರೆದುಕೊಂಡರು. ಹಾಗೆ ನೋಡಿದರೆ ಉದು೯ ಗಜಲ್ ಕಾರರು ಸಾವಿರಾರು ಇದ್ದಾರೆ. ಕೆಲವರ ಹೆಸರುಗಳನ್ನು ತಿಳಿದುಕೊಳ್ಳೋಣ. ಅಲ್ಲಾಮ ಇಕ್ಬಾಲ್, ಮೀರ್ ತಖಿ ಮೀರ್, ದಾಗ್ ದೆಹಲ್ವಿ ,ಮಿರ್ಜಾ ಗಾಲಿಬ್, ಅಮೀರ್ ಖುಸ್ರು, ಅಲ್ತಾಫ್ ಹುಸೇನ್ ಹಾಲಿ, ಜಿಗರ್ ಮುರಾದಾಬಾದಿ, ಜಾನ್ ಏಲಿಯಾ, ಮುನವ್ವರ್ ರಾಣಾ, ಸಿರಾಜ್ ಔರಂಗಾಬಾದಿ, ಇನ್ಷಾ ಮೊಹಾನಿ, ದುಶ್ಯಂತ್ ಕುಮಾರ್, ಜಿಗರ್ ಮುರಾದಾಬಾದಿ, ಫೈಜ್ ಅಹಮದ್ ಫೈಜ್, ಕೈಫಿ ಆಜ್ಮಿ ಹಸ್ರತ್ ಜೈಪುರಿ, ಗುಲ್ಜಾರ್ ಮಜ್ರೂಹ್ ಸುಲ್ತಾನ್ ಪುರಿ, ಶಕೀಲ್ ಬದಾಯೂನಿ ಜೋಶ್, ಮಲ್ಗಿಯಾ ಕುನ್ವರ್, ಪ್ರಕ್ಷುಬ್ಧ ರಾಜೇಂದ್ರ ರಹದಾರ್ ಬಶೀರ್, ಬದ್ರ್ ಫಿರೋಜ್ ಗೋರಖ್ಪುರಿ, ರಾಹತ್ ಇಂದೋರಿ, ಅಕ್ಬರ್ ಇಲ್ಹಾಬಾದಿ, ಹಮೀದ್ ಅಲ್ಮಾಸ್, ವಾಸೀಮ್ ಬರೇಲ್ವಿ, ಮಾಯಲ್ ಖೈರಾಬಾದಿ, ಸೇರಿದಂತೆ ಇನ್ನೂ ಹಲವಾರು ಕವಿಗಳು ಗಜಲ್ ಸಾಹಿತ್ಯವನ್ನು ಮೇರು ಮಟ್ಟಕ್ಕೆ ಏರಿಸಿ ತಮ್ಮ ದ್ವಿಪದಿಗಳನ್ನು ಜನರ ಮನ ಮಸ್ತಕಗಳಿಗೆ‌ ಮುಟ್ಟಿಸಿ ಚರಸ್ಮರಣೀಯರಾಗಿ ಗಜಲ್ ಲೋಕದಲ್ಲಿ ತಮ್ಮ ಹೆಸರು ಬರೆದರು.

               ಅರೇಬಿಕ್ ನಿಂದ ಫಾಸಿ೯ಗೆ  ಮತ್ತು ಫಾಸಿ೯ಯಿಂದ ಉದು೯ ಭಾಷೆಗೆ ಬಂದು ಅಲ್ಲಿಂದ ತನ್ನ ಮೃದುವಾದ ಭಾಷಾಪ್ರಯೋಗ ಮತ್ತು ಮಧುರವಾದ ಕಾವ್ಯದಿಂದ ಜಗತ್ತಿನಾದ್ಯಂತ ತನ್ನ ಬೇರುಗಳನ್ನು ಹರಡಿಸಿಕೊಂಡಿದೆ. ತನ್ನ ವಿಶೇಷವಾದ ಸುಂದರ ತೌಲನಿಕ ಭಾವನೆಗಳಿಂದ ಜನರನ್ನು ತನ್ನತ್ತ ಆಕಷಿ೯ಸಿತು ಭಾರತದ ಅನೇಕ ಭಾಷೆಗಳಲ್ಲಿ ಗಜಲ್ ಗಳನ್ನು ಬರೆಯುತ್ತಿದ್ದಾರೆ. ಹಿಂದಿ, ಬಂಗಾಳಿ, ಗುಜರಾತಿ,ಅಸ್ಸಾಮ್, ನೇಪಾಳಿ, ತೆಲಗು,ತಮಿಳು, ಮರಾಠಿ, ಪಂಜಾಬಿ,ರಾಜಸ್ಥಾನಿ, ಸೇರಿದಂತೆ ನಮ್ಮ ಕನಾ೯ಟಕದ್ದೇ ಭಾಷೆಯಾದ ತುಳುವಿನಲ್ಲೂ ಗಜಲ್ ಗಳನ್ನು ಬರೆಯಲಾಗುತ್ತಿದೆ.

               ಒಂದು ಹೆಮ್ಮೆಯ ವಿಷಯ ಎಂದರೆ ಗಜಲ್ ಕಾವ್ಯವು ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯಲ್ಲಿ ಒಂದು ಹೊಸ ಅಧ್ಯಾಯವನ್ನೇ ಪ್ರಾರಂಭಿಸಿದೆ. ನಮ್ಮ ಘನವೆತ್ತ ಸರಳ ಸುಂದರ ಮನೋಹರ ಭಾಷೆಯು ಕನ್ನಡ ಶತಶತಮಾನಗಳ ಇತಿಹಾಸ ಹೊಂದಿರುವ ಸುಶ್ರಾವ್ಯ ಮೃದು ಸುಲಲಿತವಾದ ಕನ್ನಡ ಭಾಷೆಯ ಹೊಸ ಹೊಸ ಗಜಲ್ ಕಾರರು ತಮ್ಮ ಸಾಹಿತ್ಯ ಕೃಷಿಯಲ್ಲಿ ಖುಷಿ ತೋರಿಸುತ್ತಿರುವುದು ಖುಷಿಯ ಸಂಗತಿಯಾಗಿದೆ.ನಮ್ಮಕನ್ನಡ ಸುವರ್ಣ ಭಾಷೆಯಲ್ಲಿ ಗಜಲ್ ಪರಂಪರೆಯ ಒಂದು ಸುವರ್ಣ ಯುಗವೇ ಪ್ರಾರಂಭವಾಗಿದ ಹಾಗೆ ಭಾಸವಾಗುತಿದೆ. ಕಾರಣ ಅನೇಕ ಯುವ ಮನಸುಗಳು ನೂರಾರು ಸಂಖ್ಯೆಯಲ್ಲಿ ಗಜಲ್ ಅಧ್ಯಯನ ಬರವಣೆಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಇಂತಹ ನವಿರಾದ ಗಜಲ್ ಕಾವ್ಯ ಕನ್ನಡಕ್ಕೆ ಪರಿಚಯಿಸಿದವರು ಹೆಂಬೇರಾಳು ಶಾಂತರಸನವರು. ಉದು೯ ಭಾಷೆಯನ್ನು ಚೆನ್ನಾಗಿ ಬಲ್ಲವರಾಗಿದ್ದ ಇವರು ಹಲವು ಉದು೯ ಕೃತಿಗಳನ್ನು ಕನ್ನಡಕ್ಕೆ ತಜು೯ಮೆ ಮಾಡಿದರು.ಮತ್ತು ಗಜಲ್ ಅಧ್ಯಯನ ನಡೆಸಿ ಅದರ ಲಕ್ಷಣಗಳನ್ನು ಅತೀ ಸೂಕ್ಷ್ಮಾತಿ ಸೂಕ್ಷ್ಮಸ್ವರೂಪದ ಗಜಲ್ ಸಂವೇದನೆಗಳನ್ನು ತಮ್ಮ ಕೃತಿಯಲ್ಲಿ ಪ್ರಕಟಿಸಿದರು. ಕನ್ನಡದಲ್ಲಿ ಪ್ರಪ್ರಥಮವಾಗಿ ಗಜಲ್ ಸಂಕಲನವನ್ನು ಪ್ರಕಟಿಸಿ ಲೋಕಾರ್ಪಣೆ ಮಾಡಿದವರು ಶಾಂತರಸರವರ ಮಗಳಾದ ಎಚ್ ಎಸ್ ಮುಕ್ತಾಯಕ್ಕರವರು ವಿಶೇಷವೆಂದರೆ ಇವರು ಕನ್ನಡ ಬಿಡಿ ದ್ವಿಪದಿಗಳನ್ನು ಕನ್ನಡದಲ್ಲಿ ಮೊದಲ ಬಾರಿಗೆ ಸಂಕ್ರಮಣ ಪ್ರಕಾಶನದಿಂದ ಪ್ರಕಟಿಸಿದ್ದಾರೆ. ಇಂದು ಗಜಲ್ ಸಾಹಿತ್ಯದ ಕೃಷಿ ಕನ್ನಡದಲ್ಲಿ ನಡೆಯುತ್ತಿರುವುದು ಈ ತಂದೆ ಮಗಳ ಯೋಗ್ದಾನದಿಂದಲೇ ಎಂದು ಹೇಳಬಹುದು ಮುಕ್ತಾಯಕ್ಕನವರ ನಂತರ ಅವರ ತಂದೆಯಾದ ಶಾಂತರಸರವರು ಪ್ರಕಟಿಸಿದರು. ಅದಕ್ಕಾಗಿಯೇ ಕನ್ನಡದ ಗಜಲ್ ಲೋಕದಲ್ಲಿ ಈ ತಂದೆ ಮಗಳು ಅವಿಸ್ಮರಣೀಯರಾಗಿದ್ದಾರೆ. ಇವರ ನಂತರ ಗಜಲ್ ಸಂಕಲನ ಕನ್ನಡದಲ್ಲಿ ಪ್ರಕಟಿಸಿದವರು ಜಂಬಣ್ಣ ಅಮರಚಿಂತ, ಕೆಬಿ ಬ್ಯಾಳಿ, ಚಿದಾನಂದ ಸಾಲಿ, ಅಕ್ಬರ್ ಆಲಿ ರುಮಾತೆ,ಸಾವನ್ ಕೆ,ಅಲ್ಲಾಗಿರಿರಾಜ್, ಆರೀಫ್ ರಾಜಾ, ಗಿರೀಶ ಜಕಾಪುರೆ, ಸುರೇಶ್ ನೆಗಳಗುಳಿ,ಪ್ರಭಾವತಿ ದೇಸಾಯಿ, ದೊಡ್ಡ ಕಲ್ಲಹಳ್ಳಿ ನಾರಾಯಣಪ್ಪ, ಶಿವಪ್ರಕಾಶ ಕುಂಬಾರ, ಈರಣ್ಣ ಬೆಂಗಾಲಿ,ಚಂದ್ರಶೇಖರ ಪೂಜಾರ, ಸ್ನೇಹಲತಾ ಗೌನಳ್ಳಿ, ದಸ್ತಗೀರ್ ಸಾಬ್ ದಿನ್ನಿ(ಸಂಗ್ರಹಿತ), ಸಿದ್ಧರಾಮ ಹೀರೇಮಠ, ಗಣೇಶ್ ಹೊಸ್ಮನೆ, ಗೋವಿಂದ ಹೆಗ್ಡೆ ಇವರೆಲ್ಲರ ಹಂದರದಲ್ಲಿ ಈಗ ನೂರಅಹ್ಮದ್ ನಾಗನೂರ ಗಜಲ್ ಕೃತಿ ಸೇರಲು ತಯಾರಾಗುತಿದೆ.

 

*ಗಜಲ್ ಅಂಶಗಳು*


ಮಿಸ್ರ, ಮತ್ಲಾ ,ಶೇರ್ ,ಕಾಫಿಯ,

ರವಿ, ರದೀಫ್ ,ಮಕ್ತಾ,ಬೆಹರ್ 


*ಮಿಸ್ರ* 


ಇದು ಒಂದು ಗಜಲ್ನ ಚರಣ ಅಥವಾ ವಾಕ್ಯವಾಗಿರುತ್ತದೆ ಕವಿಯು ಹೇಳಬೇಕಾದ ವಸ್ತು ವಿಷಯವು ಸಂಪೂರ್ಣ ವಾಕ್ಯ ಸಂದೇಶದೊಂದಿಗೆ ಅಥ೯ಪೂಣ೯ವಾಗಿ ಬಿಂಬಿತವಾಗುವ ಪಂಕ್ತಿಯನ್ನು ಮಿಸ್ರ ಎನ್ನುತ್ತಾರೆ. ಮೊದಲನೇ ವಾಕ್ಯ ತುಂಡರಿಸದೆ ಅಥವಾ ಎರಡನೇ ವಾಕ್ಯದ ಪದಗಳನ್ನು ಸೇರಿಸಿಕೊಳ್ಳದೇ ಮೊದಲನೇ ಚರಣದ ವಿಷಯ ಎರಡನೇ ಚರಣವು ಸೃಷ್ಟೀಕರಣ ಸುಸ್ಪಷ್ಟತೆಯಿಂದ ಹೇಳುತ್ತದೆ. ಉದಾಹರಣೆಗೆ ನೂರಹ್ಮದ್ ಅವರ ಈ ದ್ವಿಪದಿ ಗಮನಿಸಿ.


ನೋಡುವ ನೋಟವು ಬದುಕಿಗೆ ಧೋಕಾ ಆಗಬಹುದು

ಚಂದಿರನು ಸೃಷ್ಟಿಸುವ ತಂಪಲ್ಲಿ ದೃಷ್ಟಿ ಬೊಟ್ಟು ನೋಡು 


ಇಲ್ಲಿ ಗಮನಿಸಬೇಕಾದ ವಿಷಯ ಮೇಲಿನ ಚರಣ ಅಥವಾ ಪಂಕ್ತಿ ಸಂಪೂಣ೯ವಾಗಿದ್ದು ನೋಟದ ಬಗ್ಗೆ ಹೇಳುತ್ತಿದೆ. ಅದರ ಕೆಳಗಿನ ಪಂಕ್ತಿಯು ಅದಕ್ಕೆ ಪುಷ್ಟಿಯನ್ನು ನೀಡುತ್ತಾ‌ ದೃಷ್ಟಿಯ ಬಗ್ಗೆ ಹೇಳುತ್ತಿದೆ. ಹೀಗೆ ಒಂದು ವಾಕ್ಯ ತನ್ನ ನಿಗದಿತ ವಿಸ್ತೀಣ೯ದಲ್ಲಿಯೆ ತಾನು ಓದುಗನಿಗೆ ತಿಳಿಸುವ ವಿಷಯವನ್ನು ಬಿಂಬಿಸುವುದಕ್ಕೆ ಮಿಸ್ರವೆಂದು ಕರೆಯುವರು.


*ಮತ್ಲಾ*


ಇದು ಒಂದು ಗಜಲ್ನ ಆರಂಭಿಕ ದ್ವಿಪದಿಯಾಗಿದ್ದು ಮತ್ಲಾ ಇದರ ನಿಜವಾದ ಅಥ೯ವು ಉದಯ ಅಥವಾ ಪ್ರಾರಂಭವಾಗುತ್ತದೆ. ಇದರ ಎರಡೂ ಮಿಸ್ರ ಅಥವಾ ವಾಕ್ಯಗಳಲ್ಲಿ‌ ಕ್ರಮಬದ್ಧವಾಗಿ ರದೀಫ್ ಮತ್ತು ಕಾಫಿಯಗಳು ಬರಬೇಕು ಇದರಲ್ಲಿ ಗಮನಿಸ ಬೇಕಾದ ಅಂಶವೆಂದರೆ ಕಾಫಿಯ ಮತ್ತು ರದೀಫ್ ಗಳು ಎರಡೂ ವಾಕ್ಯಗಳಲ್ಲಿ ಸಮಾನ ತೂಕದಿಂಲೇ ಬರಬೇಕಾಗುತ್ತದೆ. ಅಂದರೆ ಮತ್ರಾಗಣದ ಸಮಾನ ಅನುಪಾತದಲ್ಲಿ ಬರುವುದರಿಂದ ಗಜಲ್ ಗಳಿಗೆ ಮೆರಗು ಬರುತ್ತದೆ ಉದಾಹರಣೆಗೆ ಈ ಕೃತಿಯ ಗಜಲ್ ಕಾರರ ಒಂದು ಮತ್ಲಾ ಹೇಗಿದೆ ನೋಡಿ.


ಉಡಿಯ ಸಂಸ್ಕೃತಿ ಜೋಗುಳ ತೊಟ್ಟಿಲಿನ ಗುಡಿಯು 

ಸೆರಗು ಸಮೃದ್ಧಿಯ ಪುಣ್ಯದಲಿ ಮೆಟ್ಟಿಲಿನ ಗುಡಿಯು 


ಕವಿಯ ಈ ಮೊದಲ ದ್ವಿಪದಿಯ ಎರಡೂ ವಾಕ್ಯಗಳಲ್ಲಿ ಸಮಾನ ತೂಕದ ಕಾಫಿಯ ರದೀಫ್ ಗಳು ಎಷ್ಟು ಸಮಂಜಸವಾಗಿ ಬಂದಿವೆ ಎಂಬುದನ್ನು ತಿಳಿದುಕೊಳ್ಳುವ ವಿಷಯವಾಗಿದೆ. 


ತೊಟ್ಟಿಲಿನ ಗುಡಿಯು

ಮೆಟ್ಟಿಲಿನ  ಗುಡಿಯು 


ಇವುಗಳಲ್ಲಿ ತೊಟ್ಟಿಲಿನ ಮೆಟ್ಟಿಲಿನ ಎಂಬುವುದು ಸಮಾನ ತೂಕದ ಕಾಫಿಯಾಗಳಾಗಿದ್ದು ಗುಡಿಯು ಗುಡಿಯು ಎಂಬುದು ರದೀಫ್ ಗಳಾಗಿವೆ. ಸಮಾನಾಂತರ ಸಾಲುಗಳಲ್ಲಿ ಕಡಿಮೆ ಪದಗಳ ಉಪಯೋಗಿಸಿ ಆಳವಾದ ಅಥ೯ ಸಂದೇಶಗಳಿಂದ ಕೂಡಿದ ತೂಕಬದ್ಧವಾದ ಎರಡೂ ಚರಣ ರದೀಫ್ ಕಾಫಿಯ ಹೊಂದಿದರೆ ಇದಕ್ಕೆ ಮತ್ಲಾ ಎನ್ನುತ್ತಾರೆ


 *ಶೇರ್*


ಇದೊಂದು ಗಜಲ್ನಲ್ಲಿ ಬರುವ ದ್ವಿಪದಿಯಾಗಿದೆ. ಎರಡು ವಾಕ್ಯ ಅಥವಾ ಮಿಸ್ರಗಳಿಂದ ಒಂದು ಶೇರ್ ಆಗುತ್ತದೆ. ಮೊದಲನೇ ಚರಣದಲ್ಲಿ ರದೀಫ್ ಕಾಫಿಯ ಇರುವುದಿಲ್ಲ.ಅದು ತನ್ನ ಪರಿಧಿ ಯಲ್ಲಿ ಸಂಪೂರ್ಣ ಅಥ೯ವನ್ನು ಕೊಡುವ ಸ್ವತಂತ್ರವಾಗಿ ಪೂರ್ಣ ವಾಕ್ಯ ವಾಗಿರುತ್ತದೆ. ಎರಡನೇ ಚರಣದಲ್ಲಿ ರದೀಫ್ ಮತ್ತು ಕಾಫಿಯಗಳು ಇರುತ್ತವೆ. ಈ ಕೃತಿಯ ಕವಿಯ ಒಂದು ದ್ವಿಪದಿಯನ್ನು ನೋಡೋಣ


ಮುಲಾಜಿಲ್ಲದೆ ಇನಾಮು ಕಂಬನಿ ದಯಪಾಲಿಸಿದೆ 

ಸುಖದ ಚೌಕಟ್ಟಿನ ನಶೆಯ ಬಟ್ಟಲನು ತೆರೆದು ಬಿಟ್ಟೆ 


ಈ ದ್ವಿಪದಿಯ ಮೊದಲ ವಾಕ್ಯ ಸ್ವತಂತ್ರವಾಗಿದ್ದು ಪರಿಧಿಯಲ್ಲಿ ಪೂರ್ಣ ಅಥ೯ ಸಂದೇಶವನ್ನು ಕೊಡುತಿದೆ. ಎರಡನೆಯ ವಾಕ್ಯ ತೆರೆದು ಎಂಬ ಕಾಫಿಯ ಮತ್ತು ಬಿಟ್ಟೆ ಎಂಬ ರದೀಫ್ ನಿಂದ ಮಾತನಾಡುತ್ತಿದೆ. ಹೀಗೆ ಒಂದು ಗಜಲ್ನ ದ್ವಿಪದಿಯನ್ನು ಶೇರ್ ಎಂದು ಕರೆಯುತ್ತಾರೆ


 *ಕಾಫಿಯಾ*


ಈ ಪದವು ಕಫೂ ಎಂಬ ಧಾತುವಿನಿಂದ ಉತ್ಪತ್ತಿಯಾಗಿದೆ. ಬೇರೆ ಬೇರೆ ಅಥ೯ ಸಂದೇಶ ಕೊಡುವ ಸ್ಥಾಯಿಯಲ್ಲದ ಅಕ್ಷರಗಳ ಗುಂಪಿನ ಒಂದು ಪ್ರಾಸಕ್ಕೆ ಕಾಫಿಯಾ ಎಂದು ಕರೆಯುತ್ತಾರೆ. ಕಾಫಿಯಾ ಎಂದರೆ ಹೋಗಲು ತಯಾರಾಗಿರುವ,ಬದಲಾಗಲು ತಯಾರಾಗಿರುವ ಪದವೆಂದು ಗಜಲ್ ಮೀಮಾಂಸಕರು ಹೇಳಿದ್ದಾರೆ.ಒಂದು ಗಜಲ್ನ ಎಲ್ಲ ದ್ವಿಪದಿಗಳಲ್ಲಿ ಸಮಾನ ಮಾತ್ರಾ ಅನುಪಾತದಲ್ಲಿ ಬದಲಾಗುತ್ತದೆ ಏಕೆಂದರೆ ಗಜಲ್ ಒಂದು ಹಾಡುಗಬ್ಬವೂ ಆಗಿರುತ್ತದೆ ಆದ ಕಾರಣ ಗಜಲ್ನ ಕಾಫಿಯಾ

ಕೂಡ ಬೆಹರ್(ಮಾಪನ) ಮಾತ್ರಾಗಣಕ್ಕೆ ಹೊಂದುತ್ತಾ ಬದಲಾಗುತ್ತದೆ. ಒಂದು ಗಜಲ್ ಪಕ್ವತೆ ಮತ್ತು ಗೇಯತೆ ಕಾಣಲು ಕಾಫಿಯಾ ಕೇಂದ್ರಬಿಂದು ಆಗಿದೆ ಇದನ್ನು ಗಜಲ್ನ ಹೃದಯ ಹಾಗೂ ಗಜಲ್ ಉಸಿರೆಂದು ಪರಿಣಿತರು ವ್ಯಾಖ್ಯಾನಿಸಿದ್ದಾರೆ ರದೀಫ್ ಇಲ್ಲದೇ ಗಜಲ್ ಆಗಬಹುದು ಆದರೆ ಕಾಫಿಯ ಇಲ್ಲದೇ 

ಗಜಲ್ ಖಂಡಿತವಾಗಿಯೂ ಆಗುವುದಿಲ್ಲವೆಂದು ಗಜಲ್ ಪರಿಣಿತರ ನಿಲುವಾಗಿದೆ.ಕವಿ ತನ್ನ ಗಜಲ್ ಹಾಡಲು ಸುಲಭ ಆಗುವಂತೆ ಮತ್ತು ಹಾಡಲು ಕಷ್ಟವಾಗದಂತೆ ರಚಿಸುವುದರ ಬಗ್ಗೆ ಗಮನ ಹರಿಸಿ ಕಾಫಿಯಗಳನ್ನು ಪ್ರಯೋಗಿಸುವ ಕಲೆ ಕರಗತ ಮಾಡಿಕೊಳ್ಳುತ್ತಾನೆ. ಇಂತಹ ಸ್ಥಾಯಿಯಲ್ಲದ ಪ್ರತಿ ದ್ವಿಪದಿಯಲ್ಲಿ ಬದಲಾಗುವ ಮತ್ತು ರದೀಫ್ ಹಿಂದೆ ಬರುವ ಅಕ್ಷರಗಳ ಗುಂಪಿಗೆ ಕಾಫಿಯಾ ಎಂದು ಕರೆಯುವರು ಇದರ ಲಕ್ಷಣಗಳನ್ನು ನೋಡಲು ಈ ಕೃತಿಯ ಕರ್ತೃ ನೂರ್ ಅವರ ಎರಡು ದ್ವಿಪದಿಗಳನ್ನು ನೋಡಿ.


ಬಿಡುವಿನ ವೇಳೆಯಲ್ಲಿ ಸಾಗರ ಕಿನಾರೆ ನೆನಪಾಗಿದೆ 

ಬಂದು ಹೋಗು ಅಲೆಯ ಹೆಜ್ಜೆ ನೋಡಿ ನಡೆದು ಬಿಟ್ಟೆ 


ಹೊಂಗೆಯ ಎಲೆಯಲ್ಲಿ ಹೆಸರ ಒಣಗಿಸಿದೆ ಏತಕೆ 

ನೆರಳಿನಲ್ಲಿ ಕಂಗಳು ತೊಯ್ದು ಕಾಣದೆ ನೆನೆದು ಬಿಟ್ಟೆ 


ಈ ಎರಡೂ ಸಮಾನ ತೂಕದ ದ್ವಿಪದಿಗಳಲ್ಲಿ ನಡೆದು,ನೆನೆದು ಎಂಬ ಕಾಫಿಯಗಳು ಸಮಾನ ಮಾತ್ರೆಗಳಲ್ಲಿ ಬದಲಾಗುತ್ತಾ ಬೇರೆ ಬೇರೆ ಅಥ೯ಗಳಿಂದ ಮಾತನಾಡುತ್ತಿವೆ. ಹಾಗೆಯೇ ರದೀಫ್ ಒಂದೇ ಅಕ್ಷರಗಳ ಪುನರಾವರ್ತಿತ ಪದ ಬಿಟ್ಟೆ ಬಿಟ್ಟೆ ಎಂಬುದು ಎರಡೂ ಶೇರ್ಗಳಲ್ಲಿ ಬಂದಿರುವುದನ್ನು ಕಾಣಬಹುದು ಹೀಗೆ ಸ್ಥಾಯಿಯಿಲ್ಲದ ಬೇರೆ ಬೇರೆ ಅಕ್ಷರಗಳ ಗುಂಪಿನ‌ ಪ್ರಾಸ ಒಂದು ಕಾಫಿಯಾ ಆಗುತ್ತದೆ.


 *ರವಿ*


ಕಾಫಿಯಾ ಗುಣ ಲಕ್ಷಣಗಳು ಮತ್ತು ಅದರ ಅಂಶವನ್ನು ಅಥೈ೯ಸುವ ನೆಲೆ ಬೆಲೆಯನ್ನು ಎತ್ತಿ ತೋರಿಸುವ ಕಾಫಿಯಾದ ಕೊನೆಯದಾದ ದಿಟವಾದ ಸ್ಥಿರವಾದ ಅಕ್ಷರವೇ ರವಿ. ಗಜಲ್ ಆಗಲು ಕಾಫಿಯಾ ಎಷ್ಟು ಮುಖ್ಯವೋ ಕಾಫಿಯ ಆಗಲು ರವಿಯು ಅಷ್ಟೇ ಮುಖ್ಯವಾಗಿದೆ ಒಂದು ಗಜಲ್ನ ಕೇಂದ್ರಬಿಂದು

ಉಸಿರು ಶ್ವಾಸಕೋಶದಂತೆ ಕಾಫಿಯಾ ಎಂಬ ಒಳಪ್ರಾಸವು ಕೆಲಸ ಮಾಡಿದರೆ ರವಿಯು ಗಟ್ಟಿಯಾದ ಬೇರಿನಂತೆ ಸತ್ವ ಶಕ್ತಿಯನ್ನು ನೀಡುತ ಅದನ್ನು  ಹುರಿದುಂಬಿಸುತ್ತದೆ.ಗಜಲ್ ವಿದ್ವಾಂಸರು ಆದಕ್ಕಾಗಿಯೇ ರವಿ‌ ಕಾಫಿಯಾದ ಬೇರು ಎಂದು

ವಾಖ್ಯಾನಿಸಿದ್ದಾರೆ. ರವಿಯ ಸ್ಥಾನವನ್ನು ನೋಡಲು ಕೆಲವು ಕಾಫಿಯಾಗಳನ್ನು ನೋಡಿ.


ಹಂದರ,ಚಂದಿರ,ಮಂದಿರ ಸುಂದರ, ಇವುಗಳಲ್ಲಿ ಪ್ರತಿ ಪದದ ಕೊನೆಯ ಅಕ್ಷರವಾದ *ರ* ಬಂದಿರುವುದನ್ನು ತಾವು

ಕಾಣಬಹುದು. ಹೀಗೆ ಒಳಪ್ರಾಸವಾದ ಕಾಫಿಯಾ ಕೊನೆಯ ಅಕ್ಷರವನ್ನು ರವಿಯಂದು ಕರೆಯುವರು.


*ರದೀಫ್*


ಗಜಲ್ ಕಾವ್ಯದಲ್ಲಿ ಬರುವಒಂದೇ ತರಹದ ಅಕ್ಷರಗಳ ಗುಂಪಾಗಿದ್ದು ಕಾಫಿಯಾದ ಮುಂದೆ ಬರುವ ಪದವಾಗಿದೆ. ಇದು ಎಲ್ಲಾ ದ್ವಿಪದಿಗಳಲ್ಲಿ ಪುನರಾವರ್ತಿತವಾಗಿ ಬಂದು

ಗಜಲ್ ಕಾಂತಿ ಮತ್ತು ರಮ್ಯತೆ ಸೌಂದರಯ೯ಗಳನ್ನು ಹೆಚ್ಚಿಸಿ ಲಯ ತಾಳಗಳಿಗೆ ಹೊಂದುತ ಗಜಲ್ ಹಾಡುಗಬ್ಬವಾಗಲು ಸಹಕರಿಸುತ್ತದೆ. ಮುರದ್ದಫ್ ಗಜಲ್ ಆಗಲು ರದೀಫ್ ಬೇಕೇ ಬೇಕು ಆದರೆ ಗೈರ್ ಮುರದ್ದಫ್ ಗಜಲ್ ಗಳಿಗೆ (ರದೀಫ್ ರಹಿತ) ಇದರ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಗೈರ್ ಮುರದ್ದಫ್ ಗಜಲ್ ಗಳು ಕಾಫಿಯಾ ಮೇಲೆ ಅವಲಂಬಿತವಾಗಿವೆ.ಈ ಹಿಂದೆ ತಮಗೆ ತಿಳಿಸಿದಂತೆ ರದೀಫ್ ಇಲ್ಲದೇ ಗಜಲ್ ಆಗಬಹುದು ಕಾಫಿಯಾ ಇಲ್ಲದೇ ಗಜಲ್ ಆಗುವುದಿಲ್ಲ. ಆದರೆ ಗಜಲ್ ಕಾರರ ಪ್ರಕಾರ ರದೀಫ್ ಇದ್ದರೆ ಒಂದು ಪರಿಪೂರ್ಣ ಸುಂದರ ಮುರದ್ದಫ್ ಗಜಲ್ ಆಗಿ ಬೆಲೆ ಗೇಯತೆ ಪಡೆಯುತ್ತದೆ. ಇಂತಹ ಒಂದೇ ಮಾದರಿಯ ಅಕ್ಷರಗಳ ಸಮೂಹದ ಪುನರಾವರ್ತಿತ ಪದವನ್ನು ರದೀಫ್ ಎನ್ನುತ್ತಾರೆ.


*ಮಕ್ತಾ*


ಇದರ ಅರ್ಥ ಮುಕ್ತಾಯ ಮತ್ತು ಸಂಪೂಣ೯ಗೊಳಿಸುವುದು. ಮತ್ಲಾ ಎಂಬ ಸೂಯೋ೯ದಯ ಆರಂಭವಾಗಿ ಮಕ್ತಾ ಎಂಬ ಸೂಯಾ೯ಸ್ತದೊಂದಿಗೆ ಪೂರ್ಣಗೊಳ್ಳುತ್ತದೆ. ಒಂದುಗಜಲ್ನ ಕೊನೆಯ ದ್ವಿಪದಿಯಲ್ಲಿ ಕವಿಯ ಹೆಸರು ಅಥವಾ ಕಾವ್ಯನಾಮ ಇರುತ್ತದೆ.ಅದು ಕೊನೆ ದ್ವಿಪದಿ ಮೊದಲ ಅಥವಾ ಎರಡನೇ ಚರಣದಲ್ಲಿ ಬರಬಹುದು.ಇದಕ್ಕೆ ಉದು೯ವಿನಲ್ಲಿ *ತಖಲ್ಲುಸ್* ಎನ್ನುತ್ತಾರೆ (ಅಂಕಿತ ನಾಮ) ಮಕ್ತಾ ಇಲ್ಲದಿದ್ದರೂ ಗಜಲ್ ಆಗಬಹುದು. ಅನಿವಾರ್ಯ ಅಲ್ಲದಿದ್ದರೂ ಇದರಿಂದ ಗಜಲ್ನ ಗಟ್ಟಿತನ ಮತ್ತು ಕವಿಯ ಸ್ವಂತಿಕೆ ಮನದಾಳದ ಆಶಯ ಭಾವತೀವ್ರತೆಗಳ ಪರಿಣಾಮವು ಓದುಗರ ಮನಮುಟ್ಟುತ್ತದೆ. ಗಜಲ್ ಭಿನ್ನವಾದ ವಿಷೇಷತೆ ಪಡೆದುಕೊಂಡು ವಾಚಕರ ಓದುಗರ ಸಭಿಕರ ಸಂಬಂಧ ಕೊಂಡಿಯಿಂದ ಗಜಲ್ ಕಾರನು ಪುಳಕಿತಗೊಂಡು ನವಚೈತನ್ಯ ಪಡೆಯುತ್ತಾನೆ.ಸಾರಸ್ವತದ ಸಧಭಿರುಚಿಯಿಂದ ಕವಿಯ ಹೆಸರು ಓದುಗರ ಮನದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಇಂತಹ ಗಜಲ್ನ ಕೊನೆಯ

ದ್ವಿಪದಿಯನ್ನು ಮಕ್ತಾ ಎಂದು ಕರೆಯುವ ವಾಡಿಕೆಯಾಗಿದೆ.


 *ಬೆಹರ್*


ಒಂದು ಸಂಪೂರ್ಣ ಗಜಲ್ನ ಚರಣ ಅಥವಾ ದ್ವಿಪದಿಗಳನ್ನು ಮಾತ್ರಾಗಣಗಳ ಮೂಲಕ ಅಳೆಯುವಂತಹ ಪಾರದಶ೯ಕ ಸಾಧನವನ್ನು ಬೆಹರ್ ಎಂದು ಕರೆಯುತ್ತಾರೆ. ಒಂದು ಗಜಲ್ ಹಾಡುವುದಕ್ಕೆ ಹೊಂದಿಕೊಳ್ಳಲು ಲಯ ತಾಳಗಳಿಗೆ ಸಮಂಜಸ ರೀತಿಯಲ್ಲಿ ಒಲಿದುಕೊಳ್ಳಲು ಮಾತ್ರಾಗಣಗಳ ಅವಶ್ಯಕತೆ ಮುಖ್ಯವಾಗಿರುತ್ತದೆ ಎಂದು ಗಜಲ್ ಪರಿಣಿತರು ಹೇಳಿದ್ದಾರೆ. ಇಂತಹ ಮಾಪನ ಅಥವಾ ಮೀಟರ್ ಗಳಿಗೆ ಬೆಹರ್ ಎಂಬ ಹೆಸರು ಬಂದಿದೆ.ಆದರೆ ಕನ್ನಡ ಗಜಲ್ ಗಳಿಗೆ ಈ ಉದು೯ ಬೆಹರ್ ಗಳು ಹೊಂದುವುದಿಲ್ಲ ನಮ್ಮ ಸುಂದರವಾದ ಕನ್ನಡ

ಭಾಷೆಗೊಲಿಯುವ ಮಾತ್ರಾಗಣಗಳ ಸಹಾಯದಿಂದ ಕನ್ನಡ ಗಜಲ್ ರಚಿಸಬಹುದೆಂದು ಹೇಳಲಾಗಿದೆ. ಉದು೯ವಿನಲ್ಲಿ ಮೂವತ್ತೆರಡು ಬೆಹರ್ ಗಳಿವೆಯಾದರೂ ಈಗ ಪ್ರಚಲಿತವಾಗಿರುವುದು ಹತ್ತೊಂಬತ್ತು ಬೆಹರ್ ಗಳು. ಈ ಹತ್ತೊಂಬತ್ತು ಬೆಹರ್ ಗಳು ಮೂರು ಭಾಗಗಳಲ್ಲಿ ವಿಂಗಡಿಸಿ ಹೇಳಲಾಗಿದೆ.ಛೋಟಿ ಬೆಹರ್(ಸಣ್ಣ ಮಾಪನ)ದಮಿ೯ಯಾನಿ ಬೆಹರ್ (ಮಧ್ಯಮ ಮಾಪನ)ಬಡೀಬೆಹರ್(ದೊಡ್ಡ ಮಾಪನ) ಎಂದು ವಿಶ್ಲೇಶಿಸಲಾಗಿದೆ. ಆದರೆ ಅನೇಕ ವಿಶ್ವಪ್ರಸಿದ್ಧ ಗಜಲ್ ಕಾರರು ಬೆಹರ್ ಇಲ್ಲದ ಗಜಲ್ ಗಳನ್ನು ರಚಿಸಿ ರುಚಿಸಿ ಓದುಗರ ಸಾಹಿತ್ಯಾಭಿಮಾನಿಗಳ ಗಮನ ಸೆಳೆದಿದ್ದಾರೆ. ಕಾಲ ಕಾಲಕ್ಕೆ ತಕ್ಕಂತೆ ಕವಿಗಳು ಹೊಸ ಹೊಸ ಆವಿಷ್ಕಾರಗಳನ್ನು ಗಜಲ್ ಪ್ರಕಾರಗಳಲ್ಲಿ ಮಾಡುತ ಭಿನ್ನ ಭಿನ್ನ ಪ್ರಯತ್ನಗಳಿಂದ ಗಜಲ್ ಸಾಹಿತ್ಯವನ್ನು ಸರಳ ರೀತಿಯಲ್ಲಿ ಮನದಟ್ಟುವಾಗುವ ಹಾಗೆ ಸೃಷ್ಟೀಕರಣದೊಂದಿಗೆ ಬರೆಯುತ್ತಾ ಬಂದರು.ಗಜಲ್ ಸಾಹಿತ್ಯವು ಜನರ ಲೋಕಪ್ರಿಯ ಹಾಗೂ ಸರಳ ಸುಂದರ ಮನಕೆ ಮುಟ್ಟುವ ಕಾವ್ಯವಾಗಿ ಛಾಪು ಒತ್ತುತ ಮುನ್ನಡೆಯುತಿದೆ. ಆರಂಭಿಕ ನಿಯಮಗಳ ಪ್ರಕಾರ

ಮೂಲ ಗಜಲ್ ಗಳು ಮುರದ್ದಫ್ ಗಜಲ್ ಪರಿಧಿಯಲ್ಲಿ "ಮುಸಲ್ ಸಲ್"
ಮತ್ತು "ಗೈರ್ ಮುಸಲ್ ಸಲ್"
ಗಜಲ್ ಗಳೆಂಬ

ಎರಡು ಪ್ರಕಾರಗಳು ಮಾತ್ರ ಇದ್ದವು ಎಂದು ಅಧ್ಯಯನದ ಮೂಲಕ ತಿಳಿಯುತ್ತದೆ. ನಂತರ ಬಂದ ಕವಿಗಳು ಗಜಲ್

ಪ್ರಕಾರಗಳನ್ನು ಕಂಡು ಹಿಡಿದು ಬರೆಯುತ್ತಾ ಹೋದರು. ಕೆಲವರು ಹದಿಮೂರು ಕೆಲವರು ಹದಿನೇಳು ಇನ್ನೂ ಕೆಲವರು ಇಪ್ಪತ್ತೆರಡು ಪ್ರಕಾರಗಳಿವೆ ಎಂದು ಹೇಳುತ್ತಾರೆ.ಇಂತಿಷ್ಟೇ ಗಜಲ್ ಪ್ರಕಾರಗಳಿವೆಯಂದು ನಿಖರವಾಗಿ ಹೇಳಲಾಗದಿದ್ದರೂ ಉದು೯ ಹಿಂದೆ ಫಾಸಿ೯ ಕನ್ನಡ ಗಜಲ್ ಕಾರರ ಮಾಹಿತಿಯನ್ನು ಆಧರಿಸಿ ಹತ್ತೊಂಬತ್ತು ಪ್ರಕಾರ ಗಜಲ್ ಗಳನ್ನು ಓದುಗರ ಮುಂದಿಡಲು ಬಯಸುತ್ತೇನೆ.


೧  ಮುರದ್ದಫ್ ಗಜಲ್

೨  ಗೈರ್ ಮುರದ್ದಫ್ ಗಜಲ್

೩  ಮುಸಲ್ ಸಲ್ ಗಜಲ್

೪  ಗೈರ್ ಮುಸಲ್ ಸಲ್ ಗಜಲ್

೫‌  ಆಜಾದ್ ಗಜಲ್

೬  ಜುಲ್ ಕಾಫಿಯ ಗಜಲ್

೭  ಸೆಹ್ ಗಜಲ್

೮  ಹುಸ್ನ್-ಎ-ಮತ್ಲಾ ಗಜಲ್

೯  ಮತ್ಲಾ-ಎ-ಸಾನಿ ಗಜಲ್

೧೦  ಆಂಟಿ ಗಜಲ್

೧೧  ಫನ್ನಿ ಗಜಲ್

೧೨  ನಜರಿ ಗಜಲ್

೧೩  ಸಿಯಾಸಿ ಗಜಲ್

೧೪  ಝೆನ್ ಗಜಲ್

೧೫  ಜಿನ್ ಸಿ ಗಜಲ್

೧೬  ಸೂಫಿ ಗಜಲ್

೧೭  ರಿಖ್ತಾ ಗಜಲ್

೧೮  ತರಹಿ ಗಜಲ್

೧೯  ಜದೀದ್ ಗಜಲ್


*ಮುರದ್ದಫ್ ಗಜಲ್*


ಗಜಲ್ನ ಎಲ್ಲಾ ನಿಯಮಗಳಿಂದ ಪ್ರತಿಯೊಂದು ದ್ವಿಪದಿಯಲ್ಲಿ ಕ್ರಮಬದ್ಧವಾಗಿ ಸಮಾನ ತೂಕ ಸಮಾನ ಮಾತ್ರಾಗಣದಿಂದ ಪುನರಾವರ್ತಿತ ಪದ ರದೀಫ್ ಮತ್ತು ಒಳಪ್ರಾಸ ಕಾಫಿಯಾಗಳು ಹೊಂದಿರುವ ಗಜಲ್ ಗಳಿಗೆ ಮುರದ್ದಫ್ ಗಜಲ್ ಗಳೆಂದು ಕರೆಯುತ್ತಾರೆ. ಲಯ ಶೃಂಗಾರ ರೂಪಕ ಪ್ರತಿಮೆ ಸುಂದರ ಭಾವನೆಗಳಿಂದ ಮಾತನಾಡುವ ಮತ್ತು ರದೀಫ್ ಕಾಫಿಯಾಗಳನ್ನು ಹೊಂದಿದಂತಹ ಗಜಲ್ ಗಳು ಮುರದ್ದಫ್ ಗಜಲ್ ಗಳಾಗಿವೆ. ಈ ಗಜಲ್ ಗಳಿಗೆ ಮುಅದ್ದಸ್ ಗಜಲ್ ಗಳೆಂದೂ ಕರೆಯುತ್ತಾರೆ


*ಗೈರ್ ಮುರದ್ದಫ್*


ಇದರಲ್ಲಿ ರದೀಫ್ ಇರುವುದಿಲ್ಲ ಆದರೆ ಒಂದು ಮುರದ್ದಫ್ ಗಜಲ್ ನಲ್ಲಿ ಇರುವ ಎಲ್ಲಾ ನಿಯಮಗಳು ಇರುತ್ತವೆ.ಗೈರ್ ಮುರದ್ದಫ್ ಗಜಲ್ ಗಳಿಗೆ ಮುಕಪ್ಫ ಗಜಲ್ ಎಂತಲೂ ಕರೆಯುತ್ತಾರೆ.ಮುಕಪ್ಫ ಎಂದರೆ ಕಾಫಿಯಾಗಳ ಮೇಲೆ ಹೆಚ್ಚು ಅವಲಂಬಿತವಾದ ಗಜಲ್ ಗಳು ಕನ್ನಡ ಗಜಲ್ ಕಾರರು ಇದಕ್ಕೆ ಕಾಫಿಯಾನ ಎಂದು ಕರೆದಿದ್ದಾರೆ ರದೀಫ್ ಪುನರಾವರ್ತಿತ ಪದ ಇಲ್ಲದಿರುವುದರಿಂದ ಇವುಗಳಿಗೆ ಗೈರ್ ಮುರದ್ದಫ್ ಎನ್ನುವರು.


*ಮುಸಲ್ ಸಲ್ ಗಜಲ್*


ಮುಸಲ್ ಸಲ್ ಎಂದರೆ ಒಂದೇ ವಿಷಯದ ಬಗ್ಗೆ ಪ್ರಸ್ತಾಪ ಮಾಡಿ ಬರೆಯುವುದೆಂದಥ೯.ಇದರ ಉದು೯ ತಜು೯ಮೆ ಸುಸಂಗತ ಈ ಗಜಲ್ನ ಎಲ್ಲಾ ದ್ವಿಪದಿಗಳು ಒಂದೇ ವಿಷಯವನ್ನು ಕೇಂದ್ರ ವಾಗಿಟ್ಟುಕೊಂಡು ಅದರ ಬಗ್ಗೆ ಭಾವನಾತ್ಮಕವಾಗಿ ಹೇಳುತ್ತಾ ಹೋಗುತ್ತದೆ.ಇದರಲ್ಲಿಯೂ ಎಲ್ಲಾ ಗಜಲ್ ನಿಯಮಗಳು ಪಾಲನೆಯಾಗುತ್ತವೆ.ಇಂತಹ ಗಜಲ್ ಗಳಿಗೆ ಮುಸಲ್ ಸಲ್ ಗಜಲ್ ಗಳೆಂದು ಕರೆಯುತ್ತಾರೆ. ಒಂದೇ ಬಗೆಯ ಹೂವುಗಳನ್ನು ಪೋಣಿಸಿದ ಮಾಲೆಯ ಹಾಗೆ ಮುಸಲ್ ಸಲ್ ಗಜಲ್ ಎಂಬ ಕಾವ್ಯಮಾಲೆಯಾಗಿದೆ.


*ಗೈರ್ ಮುಸಲ್ ಸಲ್ ಗಜಲ್*


ಈ ಗಜಲ್ನ ಎಲ್ಲಾ ದ್ವಿಪದಿಗಳು ಮೂಲ ನಿಯಮಗಳೊಂದಿಗೆ ಬೇರೆ ಬೇರೆ ವಿಷಯಗಳಿಂದ ಸಂದೇಶಗಳಿಂದ ಓದುಗರನ್ನು ಸೆಳೆಯುತ್ತವೆ.ಒಂದು ದ್ವಿಪದಿ ಹೃದಯದ ಬಗ್ಗೆ ಹೇಳಿದರೆ ಮತ್ತೊಂದು ದ್ವಿಪದಿಯು ಪ್ರೇಮದ ಬಗ್ಗೆ ಹೇಳುತ್ತದೆ ಒಂದು ಹೂವಿನ ಬಗ್ಗೆ ಹೇಳಿದರೆ ಮತ್ತೊಂದು ಮುಳ್ಳಿನ ಬಗ್ಗೆ ಪರಿಸರ ಭೂಮಿಯ ಬಗ್ಗೆ ಹೀಗೆ ಬೇರೆ ಬೇರೆ ವಿಷಯಗಳನ್ನು ಬಿಂಬಿಸುತ್ತಾ ಹೋಗುತ್ತದೆ. ಆದರೆ ಒಂದು ದ್ವಿಪದಿಯು ಮತ್ತೊಂದು ದ್ವಿಪದಿಗೆ ಹೊಂದಿಕೊಂಡು ಸೃಷ್ಟೀಕಣದೊಂದಿಗೆ ಹೇಳುತ್ತದೆ. ಬಗೆ ಬಗೆಯ ಹೂವುಗಳನ್ನು ಪೋಣಿಸಿ ಒಂದು ಸುಂದರವಾದ ಮಾಲೆ ಮಾಡಿದ ಹಾಗೆ ರಚಿತವಾಗುವ ಗಜಲ್ ಗಳಿಗೆ ಗೈರ್ ಮುಸಲ್ಸಲ್ ಗಜಲ್ ಎನ್ನವರು.


 *ಆಜಾದ್ ಗಜಲ್*


ಇದು ಹೆಸರೇ ಸೂಚಿಸಿದ ಹಾಗೆ ಸ್ವತಂತ್ರವಾದ ಗಜಲ್ ಆಗಿದೆ. ಇದರಲ್ಲಿ ಚರಣಗಳು ಸಮನಾಗಿ ಇರುವುದಿಲ್ಲ. ಮೇಲಿನ ಚರಣ ಅಥವಾ ವಾಕ್ಯ ಉದ್ದವಾಗಿದ್ದರೆ ಕೆಳಗಿನ ಚರಣವು ಗಿಡ್ಡವಾಗಿ ಇರುತ್ತದೆ. ಈ ಗಜಲ್ ಬೆಹರ್ (ಮಾಪನ) ನಿಯಮಕ್ಕೆ ಒಳ ಪಡುವುದಿಲ್ಲ.ಉಳಿದ ಎಲ್ಲಾ ಮೂಲ ಗಜಲ್ ನಿಯಮಗಳು ಇರುತ್ತವೆ.ಅಂದರೆ ಕಾಫಿಯ ರದೀಫ್ ಮಿಸ್ರ ಶೇರ್ ಮಾತ್ಲಾ ಮಕ್ತಾ ರವಿಗಳು ಕಡ್ಡಾಯವಾಗಿ ಇರಲೇಬೇಕು.ಇದರಲ್ಲಿ ಮಾತ್ರಾ ಗಣದ ನಿಯಮ ಮಾತ್ರ ಸಡಿಲ ಗೊಳಿಸಿ ಕವಿಯು ಗಜಲ್ ರಚಿಸುತ್ತಾನೆ.ಒಂದು ಸಾಲಿನಲ್ಲಿ ಹತ್ತು ಮಾತ್ರೆಗಳಿದ್ದರೆ ಒಂದು ಸಾಲಿನಲ್ಲಿ ಇಪ್ಪತ್ತು ಮಾತ್ರೆಗಳು ಹದಿನೈದು ಹದಿನೆಂಟು ಮತ್ತು ಇಪ್ಪತ್ತೆರಡು ಹೀಗೆ ಅಂತರದಿಂದ ಕೂಡಿರುತ್ತವೆ.ಆಜಾದ್ ಗಜಲ್ ಎಂದ ಕೂಡಲೇ ಕೆಲವರು ಕಾಫಿಯಾ ಬಳಸದೆ ಬರೆಯುವ ವಾಡಿಕೆಯನ್ನು ರೂಢಿಸಿಕೊಂಡು ಗಜಲ್ ರಚಿಸುತ್ತಾರೆ.ಆದರೆ ಇದು ಗಜಲ್ ಆಗುವುದಿಲ್ಲ ಒಂದು ಕವಿತೆ ಅಥವಾ ಪದ್ಯ ಆಗುತ್ತದೆ.ಕಾಫಿಯಾ ಇಲ್ಲದೆ ಬರೆಯುವುದು ಒಂದು ಹೊಸ

ಪ್ರಯೋಗವೆಂದು ಕೆಲವರ ಅಭಿಪ್ರಾಯವಾದರೂ ಇದು ಗಜಲ್ ಆಗುವುದೇ ಇಲ್ಲವೆಂದು ಹಲವಾರು ನುರಿತ ಗಜಲ್ ಪಾಮರರ ಮತ್ತು ಮೂಲ ಗಜಲ್ ಕಾರರ ಹಾಗೂ ಗಜಲ್ ಮೀಮಾಂಸಕರ ಸ್ಪಷ್ಟೀಕರಣ. ಸಾಲುಗಳು ಸಮಾನವಾಗಿದೆ ಉದ್ದ ಗಿಡ್ಡವಾಗಿ ರಚಿತವಾಗುವ ಗಜಲ್ ಗಳಿಗೆ ಆಜಾದ್ ಗಜಲ್ ಎಂದು ಕರೆಯುತ್ತಾರೆ.


 *ಜುಲ್‌ ಕಾಫಿಯ ಗಜಲ್*


ಜುಲ್ ಕಾಫಿಯಾ ಎಂದರೆ ಎರಡೆರಡು ಕಾಫಿಯಗಳನ್ನು ಅಳವಡಿಸಿ ಬರೆಯುವುದು. ಜುಲ್ ಎಂದರೆ ದ್ವಿತೀಯ ಎಂಬ ಅಥ೯ ಬರುತ್ತದೆ.ಒಬ್ಬ ಪಳಗಿದ ಗಜಲ್ ಕಾರ ಪದಗಳ ಮೇಲೆ ಹಿಡಿತವಿಟ್ಟುಕೊಂಡು ಒಂದು ಗಜಲ್ ನಲ್ಲಿ ಎರಡೆರಡು ಕಾಫಿಯಾಗಳನ್ನು ಬರೆಯುತ್ತಾನೆ. ಒಂದು ಕಾಫಿಯಾದ ಮುಂದೆ ಮತ್ತೊಂದು ಕಾಫಿಯಾ ಬರುವ ಗಜಲ್ ಗಳನ್ನು ಜುಲ್ ಕಾಫಿಯಾ ಗಜಲ್ ಗಳೆಂದು ಕರೆಯುತ್ತಾರೆ.


*ಸೆಹ್ ಗಜಲ್*


ಸೆಹ್ ಎಂಬ ಉದು೯ ಪದದ ಅಥ೯ ಸಹಿಸು ಸೈರಿಸು ಎಂದು ಬರುತ್ತದೆ.ಒಂದು ಗಜಲ್ ತನ್ನ ಜೊತೆಗೆ ಮೂರು ನಾಲ್ಕುಗಜಲ್ ಗಳನ್ನು ಸೇರಿಸಿಕೊಂಡು ಒಂದೇ ಗಜಲ್ ಆಗಿ ಪರಿವರ್ತನೆಯಾಗಿ ಹೋಗುತ್ತದೆ.ಇದು ಏಳನೆಯ ಶತಮಾನದಲ್ಲಿ ರಚಿತವಾದ "ಖಸೀದಾ" ಮಾದರಿಯನ್ನು ಅವಲಂಬಿಸಿದೆ ಎನ್ನಬಹುದು, ಏಕೆಂದರೆ ಖಸೀದಾ ಪ್ರಕಾರವೇ ಗಜಲ್ ಪ್ರಕಾರವಾಗಿ ಮಿತ ದ್ವಿಪದಿಗಳಲ್ಲಿ ಪರಿವತ೯ನೆ ಯಾಗಿದೆ. ಖಸೀದಾ ಐವತ್ತು ನೂರು ಜೋಡಿಗಳ ಸುದೀರ್ಘ ಕಾವ್ಯವಾಗಿದೆ.ಹಾಗೆಯೇ ಸೆಹ್ ಗಜಲ್ ಕೂಡ ಮೂವತ್ತಾರು ಮೂವತ್ತೈದು ಐವತ್ತು ಐವತ್ಮೂರು ದ್ವಿಪದಿಗಳ ಗಜಲ್ ಆಗಿದೆ ಕೆಲವರು ಏಳು ಶೇರ್ ಗಳ ನಂತರ ಮತ್ತೊಂದು ಮತ್ಲಾ ಸೇರಿಸಿ ಬರೆದರೆ ಇನ್ನೂ ಕೆಲವರು ಹದಿನೇಳು ಶೇರ್ ಗಳ ನಂತರ ಮತ್ಲಾ ಸೇರಿಸಿ ಬರೆದು ಅದಕ್ಕೆ ತಕ್ಕಂತೆ ದ್ವಿಪದಿಗಳನ್ನು ಸೇರಿಸಿ ಗಜಲ್ ರಚಿಸುವರು.ಒಂದು ಸೆಹ್ ಗಜಲ್ ನಲ್ಲಿ ಮೂರು ಮತ್ಲಾಗಳಿದ್ದರೆ ಮೂರು ಮಕ್ತಾಗಳು ಇರುತ್ತವೆ. ಏಕೆಂದರೆ ಮೂರು ನಾಲ್ಕು ಗಜಲ್ಗಳು ಸೇರಿ ಒಂದು ಗಜಲ್ ಆಗುತ್ತದೆ. ಇಂತಹ ಗಜಲ್ಗಳಿಗೆ ಸೆಹ್ ಗಜಲ್ ಎನ್ನವರು.


 *ಹುಸ್ನ್-ಎ-ಮತ್ಲಾ ಗಜಲ್*


ಹುಸ್ನ್ ಎಂದರೆ ಸೌಂದರ್ಯ ಅಥಾ೯ತ್ ಒಂದು ಗಜಲ್ನ ಅಂದ ಚೆಂದ ರಮ್ಯತೆಯನ್ನು ಹೆಚ್ಚಿಸುವ ಮತ್ಲಾ ಆಗಿದೆ ಒಂದು ಗಜಲ್ನ ಮೊದಲ ದ್ವಿಪದಿ ಮತ್ಲಾ ಆಗಿದ್ದು ಎರನೇ ದ್ವಿಪದಿ ಕೂಡ ಸಮತೋಲಿತ ಕಾಫಿಯಾ ರದೀಫ್ ಗಳಿಂದ ಮತ್ಲಾ ಆಗಿ ಕಂಗೊಳಿಸಿದರೆ ಅಂತಹ ಗಜಲ್ ಗಳಿಗೆ ಹುಸ್ನ್-ಎ-ಮತ್ಲಾ ಗಜಲ್ ಎಂದು ಕರೆಯುತ್ತಾರೆ.


*ಮತ್ಲಾ-ಎ-ಸಾನಿ ಗಜಲ್*


ಒಂದು ಗಜಲ್ ನಲ್ಲಿ ಎಲ್ಲಾ ನಿಯಮಗಳೊದಿಗೆ ಆರಂಭದ ಮೂರೂ ದ್ವಿಪದಿಗಳು ಮತ್ಲಾ ಆಗಿದ್ದರೆ ಇಂತಹ ಗಜಲ್ಗಳು ಮತ್ಲಾ-ಎ-ಸಾನಿ ಆಗಿರುತ್ತವೆ. ಮತ್ಲಾ-ಎ-ಸಾನಿ ಎಂದರೆ ನಂತರ ಅಥವಾ ಹಿಂದೆ ಬರುವ ಸಾಟಿಯಿಲ್ಲದ ಅನನ್ಯವಾದ ಮತ್ಲಾ ಆಗಿದೆ ಸಾನಿ ಎಂಬ ಪದಕ್ಕೆ ಎರಡು ಅಥ೯ಗಳುಂಟು ಒಬ್ಬನ ಅಪ್ರತಿಮ ಕಾವ್ಯಶಕ್ತಿಗೆ ಅಭಿಮಾನಿಗಳು ಸಾಹಿತ್ಯದ ಪ್ರೇಮಿಗಳು ತನ್ನ ನೆಚ್ಚಿನ ಕವಿ ಗಜಲ್ ಕಾರನ ಪ್ರತಿಭೆಯನ್ನು ಸಾಟಿಯಿಲ್ಲದ ಲಾಜವಾಬ್ (ಉತ್ತರವಿಲ್ಲದ) ಎಂದು

ಒಪ್ಪಿಕೊಳ್ಳುತ್ತಾರೆ.ಮತ್ತೊಂದು ಅಥ೯ದಲ್ಲಿ ಸಾನಿ ಎಂದರೆ ನಂತರ ಅಥವಾ ಹಿಂದೆ ಬರುವ ಎಂದಾಗಿದೆ.ಈ ಗಜಲ್ ಲಕ್ಷಣ ರೂಪ ರೇಶೆಗಳಲ್ಲಿ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಇದರ ಎಲ್ಲಾ ದ್ವಿಪದಿಗಳೂ ಸಂಪೂರ್ಣ ಮತ್ಲಾ ಆಗಿಯೂ ಅಥವಾ ಮೊದಲ ದ್ವಿತೀಯ ಎರಡೂ ದ್ವಿಪದಿಗಳು ಮತ್ಲಾ ಆಗಿ ಮೂರನೇ ದ್ವಿಪದಿ ಕೂಡ ಮತ್ಲಾ ಆಗಿರಬಹುದು. ಇಂತಹ ಗಜಲ್ ಗಳನ್ನು ಮತ್ಲಾ-ಎ-ಸಾನಿ ಗಜಲ್ ಎಂದು ಕರೆಯುವರು.


*ಆಂಟಿ ಗಜಲ್*


ಇದೊಂದು ಲಾವಣಿಯ ರೂಪದಲಿ ಬಿಂಬಿತವಾಗುವ ಗಜಲ್ ದೇಶ ಭಕ್ತಿ ನೆಲದ ಸೊಗಡನ್ನು ವೀರಪುರುಷ ವೀರವನಿತೆಯರ ಮಹತ್ವವನ್ನು ಸಾರುವ ಮೂಲಕ ಗಜಲ್ ಹೇಳುತ್ತದೆ. ಭಾರತೀಯರ ಆಚಾರ ವಿಚಾರ ಅನುಭವ ಮತ್ತು ಆನುಭಾವದ ತತ್ವಸಾರ ತತ್ವ ಪದಗಳ ಶಕ್ತಿ, ಶರಣರ ತತ್ವ, ಸೂಫಿ ಉನ್ಮಾದ, ಜಾನಪದೀಯ ಅಭಿರುಚಿ, ಆಧ್ಯಾತ್ಮಿಕ ಸ್ಪಷ೯ದಿಂದ, ವಿಭಿನ್ನವಾಗಿ ಉನ್ನತ ಸ್ಥಾನ ಪಡೆದು ತನ್ನ ದೃಢ ಹೆಜ್ಜೆಗಳನ್ನು ಇಡುತ್ತಾ ವಿಸ್ತರಿಸುತ್ತಾ ಸಾಗಿತು. ಜನಮನಗಳಲ್ಲಿ ಸ್ಥಾನ ಗಳಿಸಿತು. ಈ ಗಜಲ್ನ ಕೆಲವು ರೂಪಕಗಳು ಹೋಲಿಕೆಗಳು ಕೆಲವೊಮ್ಮೆ ಒಗಟುಗಳ ರೂಪದಲ್ಲಿರುತ್ತವೆ. ಸುಲಭದಲ್ಲಿ ತಿಳಿಯುವುದಿಲ್ಲ ಆದರೆ ಅದನ್ನು ಆಳವಾಗಿ ನಿಧಾನಿಸಿ ಅವಲೋಕಿಸಿದಾಗ ಅದರಲ್ಲಿರುವ ಒಳಾಥ೯ಗಳು

ಗೂಡಾಥ೯ಗಳು ಹಿತೋಪದೇಶ ಆತ್ಮಾನುಲ್ಲಾಸ ಫೀನೆಕ್ಸ್ ನಂತೆ ಗೋಚರಿಸಿ ಓದುಗರ‌ ಮನ ಗೆಲ್ಲುತ್ತವೆ. ಈ ಗಜಲ್ನ ಕೆಲವು ಚರಣ ಅಥವಾ ದ್ವಿಪದಿಗಳು ಅಥ೯ಹೀನ ವ್ಯರ್ಥ ಮಾತುಗಳ ಹಾಗೆ ಕಾಣುತ್ತವೆ. ಆದರೆ ಸರಿಯಾಗಿ ಅವಲೋಕಿಸಿ ವಿಚಾರದ ಸುಧೆಯಲ್ಲಿಳಿದು ಕೂಲಂಕಷವಾಗಿ ಪರಾಮರ್ಶೆ

ಮಾಡಿಕೊಂಡಾಗ ಒಂದು ಅದ್ಭುತವಾದ ಸಂಪೂರ್ಣ ಅಥ೯ದ ಬದುಕಿಗೆ ಪೂರಕವಾದ ಅಸಾಮಾನ್ಯ ಗಜಲ್ ಎಂದು ಗೋಚರವಾಗುತ್ತದೆ.ಇಂತಹ ಗಜಲ್ ಗಳನ್ನು ಆಂಟಿ ಗಜಲ್ ಎಂದು ಕರೆಯುತ್ತಾರೆ.


 *ಫನ್ನಿ ಗಜಲ್*


ಹೆಸರೇ ಸೂಚಿಸುವಂತೆ ಇದು ಒಂದು ಹೊಸ ಪ್ರಕಾರದ ಹಾಸ್ಯ ಮಿಶ್ರಿತವಾದ ಗಜಲ್ ಆಗಿದೆ. ಓದುಗರಿಗೆ ವಿನೋದವನ್ನು ಕೊಡುವ ಭಾಷೆಯಲ್ಲಿ ಗಜಲ್ನ ದ್ವಿಪದಿಗಳು ರಚನೆಯಾಗುತ್ತವೆ. ಉದು೯ವಿನಲ್ಲಿ ಇದನ್ನು ಮಜಾಕಿಯಾ ಗಜಲ್ ಎಂದು ಕರೆಯುತ್ತಾರೆ. ಮಜಾಕಿಯಾ ಎಂದರೆ ನಗೆಯುಕ್ಕಿಸುವ ಹಾಸ್ಯ ಭರಿತವಾದ ವಿಷಯ.ಸಂದಭ೯ ಹಾಗೂ ಕಾಲ ಕಾಲಕ್ಕೆ ತಕ್ಕಂತೆ ಜ್ವಲಂತ ಸಮಸ್ಯೆಗಳನ್ನು ವಿಡಂಬನಾತ್ಮಕ ರೀತಿಯಲ್ಲಿ ಹೇಳುವಂಥದ್ದು. ಕನ್ನಡದಲ್ಲಿ ಚುಟುಕುಗಳಿದ್ದ ಹಾಗೆ ಇದು ಗಜಲ್ ನಲ್ಲಿ ದ್ವಿಪದಿಯಿಂದಲೇ ಮಾತನಾಡುತ್ತದೆ.ಗಂಭೀರ ಆಳವಾದ ವಿಷಯಗಳನ್ನು ಒಳಗೊಂಡಿದ್ದು ಚಾಟಿ ಏಟಿನ ಹಾಗೆ ಸಂದೇಶವನ್ನು ರವಾನಿಸಿ ತನ್ನ ಬೆಲೆಯನ್ನು ತಿಳಿಸಿ ಹಾಸ್ಯ ಮತ್ತು ನಗೆಯನ್ನು ಕೊಡುವ ಇಂತಹ ಗಜಲ್ ಗಳಿಗೆ ಫನ್ನಿ ಗಜಲ್ ಎಂದು ಕರೆಯುತ್ತಾರೆ.


*ನಜರಿ ಗಜಲ್*


ನಜರ್ ಎಂದರೆ ದೃಷ್ಟಿ ನಜರಿ ಎಂದರೆ ದೃಷ್ಟಿಕೋನ. ಇಂತಹ ಗಜಲ್ ಗಳು‌ ಓದುಗರ ಭಾವನೆ ಆಸಕ್ತಿಯನ್ನು ಕೇಂದ್ರೀಕೃತವಾಗಿ ಇಟ್ಟುಕೊಂಡು ಮನಸುಗಳಿಗೆ ಎಟುಕುವಂತೆ ನೇರವಾಗಿ ಓದಿಸಿಕೊಂಡು ಹೋಗುತ್ತದೆ. ಹಾಗೆಯೇ ಇದೊಂದು ಗದ್ಯದ ಶೈಲಿಯನ್ನು ಅವಲಂಭಿಸಿದರೂ ಕಾವ್ಯದ ಸೊಬಗನ್ನು ನೀಡುತ್ತದೆ ಗಜಲ್ ಕಾರನ ಭಾವ ಮತ್ತು ಓದುಗರ ಚಿತ್ತವನ್ನು ಒಂದೇ ಕಡೆ ಇಡುವಂತೆ ಮಾಡುತ್ತದೆ. ಘಟನೆಗಳು ಕಣ್ಣೆದುರು ನಡೆದ ಹಾಗೆ ಬರೆಯುವುದು ಇದರ ವಿಷೇಷತೆಯಾಗಿದೆ. ಛಂದೋ ಬದ್ಧವಾಗಿರದ ಗದ್ಯ ಶೈಲಿಯ ಈ ಗಜಲ್ ಓದುಗ ದೊರೆಗಳ ಮತ್ತು ಬರಹಗಾರರ ನಡುವೆ ಸಂಪಕ೯ವನ್ನು ಕಲ್ಪಿಸಿ ಒಂದೇ ಹಂದರದಲ್ಲಿ ಬೆಸೆಯುತ್ತದೆ. ಇಂತಹ ಗಜಲ್ ಗಳನ್ನು ನಜರಿ ಗಜಲ್ ಗಳೆಂದು ಕರೆಯುತ್ತಾರೆ.


 *ಸಿಯಾಸಿ ಗಜಲ್*


ಸಿಯಾಸತ್ ಎಂಬ ಉದು೯ ಪದದ ಅರ್ಥ ರಾಜಕೀಯ ಸಿಯಾಸಿ ಗಜಲ್ ಎಂದರೆ ರಾಜಕೀಯ ವಿಚಾರಗಳ ಬಗ್ಗೆ ಚಿಂತನೆ ನಡೆಸುವಂಥಹ ಗಜಲ್ ಪ್ರಸಕ್ತ ಕಾಲಘಟ್ಟ ಸಾಂದರ್ಭಿಕ ಚಿತ್ರಣ ರಾಜಕೀಯ ಸ್ಥಿತಿಗತಿಗಳ ಪ್ರತಿಬಿಂಬಿಸುವ ಕಾವ್ಯ ಪ್ರಕಾರ ಈ ಪ್ರಕಾರವು ಬೆಳೆದು ಬಂದ ರೀತಿಯು ಸ್ವಾತಂತ್ರ್ಯ ಸಂಗ್ರಾಮ ಅವಧಿಯಲ್ಲಿ ಒಂದು ಮೈಲಿಗಲ್ಲಾಗಿತ್ತೆಂದು ನುರಿತ ಗಜಲ್ ಇತಿಹಾಸಕಾರರ ಅಭಿಪ್ರಾಯ.ಅಂದಿನ ಗಜಲ್ ಕಾವ್ಯವು ಸ್ವಾತಂತ್ರ್ಯ ಹೋರಾಟಗಾರರಿಗೆ ದೇಶಪ್ರೇಮ ದೇಶಭಕ್ತಿಯ ನವಚೈತನ್ಯವನ್ನು ಕೊಡುವ ಪ್ರೇರಕ ಶಕ್ತಿಯಾಗಿತ್ತೆಂದು ಹೇಳಲಾಗಿದೆ. ದೇಶದ ಐಕ್ಯತೆ ಕಾಪಾಡುತ ಪ್ರಜೆಗಳನ್ನು ಜಾಗೃತಗೊಳಿಸಿ ರಾಜಕೀಯದ ಚಲನ ವಲನಗಳನು ಅರಿವು ಮೂಡಿಸುತ ದೇಶವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ಪ್ರಜೆಗಳನ್ನು ಒಟ್ಟುಗೂಡಿಸುವ ಮುಖ್ಯ ಉದ್ದೇಶವಾಗಿತ್ತು.ಇಂತಹ ಚಿಂತನೆಗಳುಳ್ಳ ಗಜಲ್ ಗಳಿಗೆ ಸಿಯಾಸಿ ಗಜಲ್ ಎನ್ನುವರು.


*ಝೆನ್ ಗಜಲ್*


ಬೌದ್ಧ ಧರ್ಮದ ತತ್ವ ಸಿದ್ಧಾಂತ ನಂಬಿಕೆಗಳನ್ನು ಆಧ್ಯಾತ್ಮಿಕ ಸಂದೇಶಗಳಿಂದ ತಿಳಿ ಹೇಳುವ ಗಜಲ್ ಆಗಿದೆ. ಬೌದ್ದ ಅನುಯಾಯಿಗಳು ನೇಪಾಳ ಕಾಶ್ಮೀರ ಮತ್ತು ಉತ್ತರ ಭಾರತದಲ್ಲಿ ಹೆಚ್ಚಾಗಿ ಕಂಡು ಬಂದಿದ್ದರಿಂದ ಬೌದ್ಧರ ಕೊಡುಗೆ ಇಂತಹ ಗಜಲ್ ಗಳಲ್ಲಿ ವ್ಯಕ್ತವಾಗಿವೆ. ಬೌದ್ಧಿಕ ಪ್ರೀತಿ ರೀತಿ ನೀತಿ ರಿವಾಜು ಬದುಕಿನ ತತ್ವಸಾರವನ್ನು ಅನುಭಾವದ ಮೂಲಕ ಸಾರುವ ಗುಣಲಕ್ಷಣ ಹೊಂದಿರುವ ಗಜಲ್ ಆಗಿದೆ.ಝೆನ್ ಎಂಬುದು ಒಂದು ಧಮ೯ವಲ್ಲ ಇದೊಂದು ಪ್ರದೇಶ ಈ ಗಜಲ್ ಗಳ ಎಲ್ಲಾ ಶೇರ್ ಗಳು ಝೆನ್ ವಿಚಾರ ಧಾರೆಗಳ ಆಧ್ಯಾತ್ಮಿಕ ವಾಸನೆಯಲ್ಲಿ ಅದರ ಆಳವನ್ನು ಭಿತ್ತರಿಸುತ್ತವೆ.ಆಧ್ಯಾತ್ಮಿಕತೆ ಅರಿತು ನುರಿತು ಅನುಭವದ ಉನ್ಮಾದ ಮತ್ತು ಉತ್ಸುಕತೆಯ ಶಕ್ತಿಯನ್ನುಕಾಣುವಂತೆ ಮಾಡುವ ಮತ್ತು ಝೆನ್ ಎಂದರೆ ಶೂನ್ಯ ಸಾರ ಪ್ರೀತಿ ಪ್ರೇಮ ನೈತಿಕ ಮೌಲ್ಯಗಳ ವಸಂತ ಕಾಲಕ್ಕೆ ಹೋಲಿಸಿ ಗಜಲ್ ಕಾರರು ಬರೆದಿದ್ದಾರೆ. ಇದರಲ್ಲಿ ಮಾನವರನ್ನು ಮಾನವೀಯ ಮೌಲ್ಯಗಳ ಕಡೆಗೆ ವಾಲಿಸುವ ಮತ್ತು ಶಾಂತಿ ಮಾಗ೯ದಿಂದ ಮನಗಳನ್ನು ಮುಟ್ಟುವ ಈ ಗಜಲ್ ಗಳ ಮುಖ್ಯ ಉದ್ದೇಶವಾಗಿದೆ. ದಾಸರು, ಸಂತ ಶರಣರು,ವಚನಕಾರರು, ಸೂಫಿಗಳು, ಮಾನವತೆ ನೈತಿಕತೆ ಶೂನ್ಯ ಸಂಪಾದನೆಯ ಚಿಂತನೆ ಮೌಲ್ಯಗಳಿಂದ ಯಶಸ್ವಿಯಾಗಿ ಬೆಳಗಿದರು.ಶಾಂತಿ ನೆಮ್ಮದಿ ಸ್ನೇಹ ಸಮತೆ ಸದ್ಭಾವನೆಗಳ  ಸಂದೇಶವನ್ನು ದ್ವಿಪದಿಗಳಲ್ಲಿ ಬರೆಯಲ್ಪಡುವಂಥ ಗಜಲ್ ಗಳನ್ನು ಝೆನ್ ಗಜಲ್ ಎಂದು ಕರೆಯುತ್ತಾರೆ.


*ಜಿನ್ ಸಿ ಗಜಲ್*


ಇದು ಲೈಂಗಿಕ ವಿಷಯಗಳ ಬಗ್ಗೆ ಮಾತನಾಡುವ ಗಜಲ್ ಎಂದು ಹೇಳಲಾಗಿದೆ. ಆದರೂ ಇಂತಹ ಗಜಲ್ ಗಳನ್ನು ಬರೆಯುವಾಗ ಕವಿಯು ಒಂದು ಸಭ್ಯತೆಯ ದಾಯರೆಯಲ್ಲಿ ಬರೆಯುವುದು ಅವಶ್ಯಕವಾಗಿದೆ. ಅಶ್ಲೀಲ ಮತ್ತು ಅಸಭ್ಯ ಪದಗಳನ್ನು ಬಳಸದೆ ಹೆಣ್ಣಿನ ಸೌಂದರ್ಯ ರಂಗು ರೂಪಗಳನ್ನು ಅಥವಾ  ಪ್ರೇಮಿಯು ಪ್ರೇಯಸಿಯ‌ ವಣ೯ನೆಯನ್ನು ಪ್ರಿಯತಮೆ ಪ್ರಿಯಕರನ ಪ್ರೇಮವನ್ನು ಪ್ರತಿಮೆ ಶೃಂಗಾರ ರೂಪಕ ಅಲಂಕಾರಗಳನ್ನು ಬಳಸಿ ಬರೆಯುವ ಗಜಲ್ ಗಳಾಗಿವೆ. ಮೋಹಕ ಮನೋಹರ ಮಾದಕ ಭಾಷೆಯಿಂದ ನವಿರಾದ ಭಾವ ಲಯಗಳನ್ನಿಟ್ಟು ಬರೆಯುವುದು ಇಂತಹ ಶೃಂಗಾರ ಕಾವ್ಯ ಪ್ರಕಾರವನ್ನು ಖಲೀಲ್ ಗಿಬ್ರಾನ್ ಮತ್ತು ಫ್ರಾಯ್ಡ್ ಗಳಂತಹ ಹೆಸರಾಂತ ಕವಿಗಳು ಕಾಮ ಮತ್ತು ಲೈಂಗಿಕ ವಿಚಾರಗಳನ್ನು ಆಧಾರವಾಗಿಟ್ಟು ಕೊಂಡು ಬರೆದಿದ್ದಾರೆ. ಸಮಾಜದ ಓರೆಕೋರೆಗಳನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ. ಇಂತಹ ಗಜಲ್ ಗಳನ್ನು ಜಿನ್ ಸಿ ಗಜಲ್ ಗಳೆಂದು ಕರೆಯುತ್ತಾರೆ.


*ಸೂಫಿ ಗಜಲ್*


ಪ್ರೇಮ ಮತ್ತು ಭಕ್ತಿ ಆಧ್ಯಾತ್ಮದ ತಳಹದಿಯ ಮೇಲೆ ಜಗತ್ತು ತಿರುಗುತಿದೆ ಎಂಬ ಸತ್ಯವನ್ನು ಪ್ರತಿಪಾದಿಸುವಂತಹ ಪರಸ್ಪರ 

ಪ್ರೀತಿ ಸ್ನೇಹ ಮಾನವತೆಯ ಮೌಲ್ಯಗಳನ್ನು ಎತ್ತಿ ಹಿಡಿಯುವ

ಶೇರ್ ಗಳನ್ನು ಈ ಗಜಲ್ ಉದ್ದಕ್ಕೂ ಕಾಣಬಹುದಾಗಿದೆ.


ಎಲ್ಲರನ್ನೂ ತಮ್ಮವರೆಂದು 

ಮಾನವರನ್ನು ಮಾನವರೆಂದು 


ಕಾಣುವ ವಿಶ್ವಮಾನವತೆಯ ಸಂದೇಶಗಳನ್ನು ಸಾರುವಂತಹ 

ಅನುಭವ ಅನುಭಾವದಿಂದ ಆಧ್ಯಾತ್ಮಿಕ ಬೆಳಕನ್ನು ಚೆಲ್ಲುವ

ಗಜಲ್ ಗಳನ್ನು ಸೂಫಿ ಗಜಲ್ ಗಳೆಂದು ಕರೆಯಲಾಗುತ್ತದೆ.

ಇವುಗಳನ್ನು ಸಭಾ ಗಜಲ್ ಗಳು ಎನ್ನುವ ವಾಡಿಕೆಯೂ ಇದೆ.

ಫಾಸಿ೯ಯಿಂದ ಉದು೯ವಿಗೆ ಬಂದ ನಂತರವೂ ತನ್ನ ಕಲಾತ್ಮಕ ಸೌಂದಯ೯ವನ್ನು ಮೂಲ ಸ್ವರೂಪವನ್ನು ಈ ಗಜಲ್ ಗಳು ಕಾಪಾಡಿಕೊಂಡು ಭಾರತೀಯ ಚಿಂತನೆಗಳಿಂದ ಡೆಕ್ಕನ್ ಭಾಗದಲ್ಲಿ ಹೆಚ್ಚು ಪ್ರಭಾವಿತವಾದವು.ಜಾನಪದ ಶೈಲಿಯಲ್ಲಿ ಬರೆಯುವಂಥ ವಲಿ ದಖನಿ,ಸಿರಾಜುದ್ ದೌಲ್ ಮುಂತಾದ ಸೂಫಿ ಕವಿಗಳು ಬೆಳಕಿಗೆ ಬಂದರು.ತದನಂತರ ಸುಪ್ರಸಿದ್ಧ ಬಹುಭಾಷಾ ಕವಿ ಅಮೀರ್ ಖುಸ್ರು (ಕ್ರಿ.ಶ೧೯೩೦ )ಇವರು ಭಾರತದ ಕಾವ್ಯಾತ್ಮಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಫಾಸಿ೯ಯಿಂದ ಉದು೯ವಿಗೆ ಈ ಗಜಲ್ ಪ್ರಕಾರವನ್ನು ತಂದರು.

ಆ ಕಾಲದಲ್ಲಿ ರಾಜಮನೆತನದ ಭಾಷೆಯು ಪಶಿ೯ಯನ್ ಆಗಿತ್ತು

ಆದ್ದರಿಂದ ಇದು ಉದು೯ವಿನ ಮೇಲೆ ಪ್ರಭಾವ ಬೀರಿತು.ಈ ಸಾಹಿತ್ಯವು ಜಗದ‌ ಉದ್ದಕ್ಕೂ ಹರಡಿಕೊಂಡಿತು.ಇದರ ನಂತರ

ಮಿಜಾ೯ ಗಾಲಿಬ್ ಅಲ್ಲಾಮ ಇಕ್ಬಾಲ್ ಮೌಲಾನ ರೂಮಿ ಹಫೀಜ್ ಇನ್ನೂ ಅನೇಕ ದಿಗ್ಗಜ ಕವಿಗಳಿಂದ ಸೂಫಿ ಗಜಲ್ ಗಳು ನೆಲೆಕಂಡುಕೊಂಡವು. ಪ್ರೀತಿಪಾತ್ರರಿಗೆ ದೈವವೇ ಒಂದು ರೂಪಕವಾಗಿ ಕವಿಯು ಭಕ್ತಿ ಭಾವ ಆಧ್ಯಾತ್ಮಿಕತೆಯ ದಾಸನು ಆಗಿ ಪ್ರೀತಿ ರೀತಿ ನೀತಿಯಿಂದ ದೈವಾನುರಾಗದ ಭಾವವನ್ನು ಪರಕಾಯ ಪ್ರವೇಶವಾಗಿ ಕಾಣುವಂತಹ ಸ್ಥಿತಿಯಾಗಿದೆ. ಇಂತಹ ಕವಿಗಳು  ಇಷ್ಕ್-ಹಕೀಕಿ (ದೈವಿಕ ಪ್ರೀತಿ) ಇಷ್ಕ್-ಮಜಾಜಿ(ಐಹಿಕ ಪ್ರೀತಿ) ಈ ಎರಡೂ ಅಂಶಗಳನ್ನು ತಮ್ಮ ಗಜಲ್ ಗಳಲ್ಲಿ ತಂದು ಒಂದು ಅನನ್ಯ ಮನೋಹರ ಕಾವ್ಯ ಪ್ರಕಾರವನ್ನು ಲೋಕಕೆ ಕೊಡುಗೆಯಾಗಿ ನೀಡಿದರು. ವಿಶ್ವ ಭ್ರಾತೃತ್ವ ವಿಶ್ವಮಾನವತೆ ವಿಶ್ವಶಾಂತಿಗಾಗಿ ಹಾತೊರೆದು ಆಧ್ಯಾತ್ಮಿಕ ವಿಚಾರಧಾರೆಗಳಿಗೆ ಆಹ್ವಾನ ನೀಡುವ ಇಂತಹಾ ಗಜಲ್ ಗಳು ಹಾಡುಗಬ್ಬಗಳಾಗಿ  ಜನರ ಮನ ಮಸ್ತಕಗಳಲ್ಲಿ ನೆಲೆ ನಿಂತವು. ಇಂತಹ ಗಜಲ್ ಗಳಿಗೆ ಸೂಫಿ ಗಜಲ್ ಗಳೆಂದು ಕರೆಯುತ್ತಾರೆ.


 *ರೀಖ್ತ ಗಜಲ್*


ಇದು ಫಾಸಿ೯ ಅರೇಬಿಕ್ ಮತ್ತು ನಾಗರಿ ಭಾಷೆಗಳ ಮಿಶ್ರಿತ ಕಾವ್ಯ ಪ್ರಕಾರವಾಗಿದ್ದು ಉದು೯,ಹಿಂದಿ  ಪ್ರಾರಂಭಿಕ ಹಂತದ ಗಜಲ್ ಎಂದು ಹೇಳಲಾಗಿದೆ.ಭಾರತದ ಆಡುಭಾಷೆಯಾಗಿದ್ದ ಅಂದಿನ ಖರೀಬೋಲಿಯಲ್ಲಿ ಸ್ಥಾನಾಂತರ  ಹೊಂದಿ ನಂತರ ಉದು೯ವಿನಲಿ ರೂಪಾಂತರವಾಯಿತೆಂದು ಗಜಲ್ ಚರಿತಾಕಾರರು ತಿಳಿಸಿದ್ದಾರೆ. ರೀಖ್ತ ಎಂಬ ಪದ ಉದು೯ವಿನ ರಖ್ತಾ ಅಥವಾ  ರಖ್ನಾ ಅಥ೯ದಲ್ಲಿ ಹೇಳಲಾಗಿದೆ ಅಂದರೆ ವಿಷಯವನ್ನು ಇಡುವುದು ಪ್ರಸ್ತುತಪಡಿಸು ಎಂದು ಅಥ೯ ಬರುತ್ತದೆ.ಇದಕ್ಕೆ ಮತ್ತೊಂದು ಅಥ೯ದಲ್ಲಿ ಪತನ ಅಥವಾ ಆಗಿಹೋದ ಕಾವ್ಯ ಎಂದು ಹೇಳಲಾಗಿದೆ.ಏಕೆಂದರೆ ಒಂದು ಸಮಯದವರಿಗೆ  ಮಾತ್ರ ಇದನ್ನು ಬರೆಯಲಾಗಿದೆ ಎಂದು ಹೇಳುತ್ತಾರೆ.ರೀಖ್ತ ಇದು ಅಪ್ಪಟ ಹೆಂಗಸರ ಭಾಷೆ ಅವರ‌ ಸಂಭಾಷಣೆಯ ರೀತಿಯಲ್ಲಿ ಗ್ರಹಿಕೆಗೆ ಬರುವ ಪ್ರಕಾರವಾಗಿದೆ ಇದರ ವ್ಯವಕರಣಿಕ ರೂಪವು ಸ್ತ್ರೀ ಸಮಕ್ಷ ರೀಖ್ತಿಯಾಗಿದೆ. ಹದಿನೆಂಟನೇ ಶತಾಬ್ಧಿಯ ಕವಿ  "ಸಾದಾತ್ ಯಾರ್ ಖಾನ್ ರಂಗೀನ್"ಅವರು ಮಹಿಳೆಯರ ಮಾತುಕತೆ ಸಂವಾದಗಳನ್ನು ಪ್ರತಿಬಿಂಬಿಸುವ ಶೈಲಿಯಲ್ಲಿ ಬರೆದಿದ್ದರು ಎನ್ನಲಾಗಿದೆ. ಉದು೯ ಸಾಹಿತ್ಯದ ವಿದ್ವಾನ ಸಿ.ಎಂ ನಯೀಮ್ ಅವರ ಪ್ರಕಾರ ಅಂದಿನ ಸುಪ್ರಸಿದ್ಧ ಲಖನೌ ಕವಿಗಳಾಗಿದ್ದ "ಇನ್ಷಾಅಲ್ಲಾಖಾನ್ ಇನ್ಷಾ"

ಅವರು ಈ ತರಹದ ರೀಖ್ತ  ಗಜಲ್ ಗಳನ್ನು ಹೆಚ್ಚಾಗಿ ಬರೆದಿದ್ದರು ಎನ್ನಲಾಗಿದೆ.ಹೀಗೆ ಮಹಿಳೆಯರ ಮಾತುಕತೆ ಸಂಭಾಷಣೆಗಳನ್ನು ಬಿಂಬಿತ ಗೊಳಿಸುವ ಗಜಲ್ ಗಳಿಗೆ

ರೀಖ್ತ ಗಜಲ್ ಗಳೆನ್ನುವರು.


 *ತರಹಿ ಗಜಲ್*


ತರಹಿ ಎಂದರೆ ತರಹ ಧಾಟಿ ಶೈಲಿ ಎಂಬ ಅಥ೯ ಬರುತ್ತದೆ.

ಅಂದರೆ ಒಬ್ಬರ ಜಮೀನಿನಲ್ಲಿ ಮತ್ತೊಬ್ಬರು ತಮ್ಮ ಕೃಷಿ

ಅಥವಾ ಗದ್ದೆ ಮಾಡುವುದು ಎಂದಥ೯.ತರಹಿ ಗಜಲ್

ಬರೆಯುವ ಕವಿಯು ತನಗಿಷ್ಟದ ಬೇರೊಬ್ಬ ಕವಿಯ ಗಜಲ್ನ

ಒಂದು ಮತ್ಲಾ ಅಥವಾ ಮಿಸ್ರ ಆರಿಸಿಕೊಂಡು ಮೂಲ ಕವಿಯ

ಮಾದರಿಯಲ್ಲೇ ಬರೆಯುತ್ತಾನೆ. ಪುನರಾವರ್ತಿತ ಪದ ರದೀಫ್

ಮತ್ತು ಮತ್ಲಾ ಅಥವಾ ಮಿಸ್ರ ಹೊರತುಪಡಿಸಿ ಉಳಿದ ಎಲ್ಲಾ ಪದಗಳು ವಿಷಯ ವಸ್ತು ತರಹಿ ಗಜಲ್ ಕಾರನದ್ದಾಗಿರುತ್ತದೆ. ಇಂತಹ ಗಜಲ್ ಗಳನ್ನು ತರಹಿ ಗಜಲ್ ಗಳೆಂದು ಕರೆಯುವರು.


 *ಜದೀದ್ ಗಜಲ್*


ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳದೇ ಲಯ‌ ಭಾವ ಗಳೊಂದಿಗೆ ಹೊಸತನವನ್ನು.ಪಡೆದುಕೊಂಡು ಸಾಂದರ್ಭಿಕ ಸನ್ನಿವೇಶಗಳನ್ನು ನವನವೀನ.ಸಂಶೋಧನೆಗಳೊಂದಿಗೆ ರೂಪಕ ಪ್ರತಿಮೆ ಹೋಲಿಕೆಗಳಿಂದ ಭಿತ್ತರಿಸಲ್ಪಡುವ ಗಜಲ್ ಗಳಿಗೆ ಜದೀದ್ ಗಜಲ್ ಗಳೆಂದು ಕರೆಯಲಾಗುತ್ತದೆ. ಈ ಗಜಲ್ ಗಳ‌ ಕೆಲವು ಶೇರ್ ಗಳಲ್ಲಿ ಆಂಟಿ‌ ಮತ್ತು ಫನ್ನಿ ಗಜಲ್ ಗಳ ಝಲಕ್ ಅಡಗಿದೆ ಎಂದು ಹೇಳಲಾಗಿದೆ..ಜದೀದ್ ಎಂಬ ಉದು೯ ಪದದ

ಅಥ೯ ಹೊಸತು ಅಥವಾ  ಆಧುನಿಕ ಎಂದಾಗಿದೆ. ಖ್ಯಾತ ಉದು೯ ಗಜಲ್ ವಿದ್ವಾನ ರಶೀದ್ ಅಹಮದ್ ಸಿದ್ದೀಖಿ

ಯಿವರು "ಜದೀದ್ ಉದು೯ ಗಜಲ್" ಎಂಬ ಸಮಗ್ರ ಕೃತಿಯನ್ನು ಪ್ರಕಟಿಸಿದ್ದಾರೆ.ಇಂತಹ ಗಜಲ್ ಗಳ ಬಗ್ಗೆ ಇನ್ನೂ ಅನೇಕ ವಿದ್ವಾಂಸರು ಕೃತಿಗಳನ್ನು ಪ್ರಕಟಿಸಿದ್ದಾರೆ. ಸ್ವಾತಂತ್ರ್ಯ ಪೂವ೯ದ ಆಂಗ್ಲರ ಆಳ್ವಿಕೆಯ ಕಾಲ ಘಟ್ಟದಲ್ಲಿ ಈ ಗಜಲ್ ಗಳ ಆರಂಭವಾಯಿತೆಂದು ಹೇಳಲಾಗಿದೆ. ಇದರ ತಳಹದಿಯನ್ನು ಹಾಕಿದವರು ಖ್ಯಾತ ಗಜಲ್ ಕಾರರಾಗಿದ್ದ ಅಲ್ತಾಫ್ ಹುಸೇನ್ ಹಾಲಿಯವರು ಈ ಗಜಲ್ ಗಳನ್ನು ಬರೆದ  ನುರಿತ ಗಜಲ್ ಕಾರರು ಅಲ್ಲಾಮ ಇಕ್ಬಾಲ್, ಅಸ್ಗರ್ ಫಾನಿ, ಅಸ್ಗರ್ ಗೌಂಡವಿ, ಜಿಗರ್ ಮುರಾದಾಬಾದಿ,ಮೀರಾ, ಖಲೀಲುರ್ರಹಮಾನ್ ಆಜ್ಮಿ, ನಾಸಿರ್ ಖಾಜ್ಮಿ,ಫಿರಾಖ್ ಗೋರಖ್ಪುರಿ, ಅಕ್ಬರ್ ಇಲ್ಹಾಬಾದಿ, ಫಾನಿ ಬದಾಯೂನಿ, ಇನ್ನೂ ಹಲವಾರು ಕವಿಗಳು ಜದೀದ್ ಗಜಲ್ ಗಳನ್ನು ಬರೆದ ಉಲ್ಲೇಖವಿದೆ. ಇಂತಹ ಗಜಲ್ ಗಳಲ್ಲಿ ಏಕತಾನತೆ,ಜಗದ ಜ್ವಲಂತ ಸಮಸ್ಯೆಗಳು, ಜನಜೀವನ, ಬದುಕಿನ ರಂಗಗಳು, ಕತ್ತಲೆ, ರಾತ್ರಿ,ಕಾಡು, ಊರು, ಬರಡು, ಭೂಮಿ,ಆಕಾಶ,ಸೂರ್ಯ, ಚಂದ್ರ,ಒಂಟಿದಾರಿಗಳು,ಮರ, ಎಲೆ, ಕೊಂಬೆ, ಕಲ್ಲು, ಮುಳ್ಳು, ಹೂವು,ತೋಟ, ಸಂಜೆ,ಹಗಲು, ಗೋಡೆ,ಕಿಡಕಿ,ಬಾಗಿಲು,ಮನೆ, ಕೇರಿ, ಸಮುದ್ರ, ಬಿರುಗಾಳಿ, ವಿರಹ,ವೇದನೆ,ಬಡತನ,ಹಕ್ಕಿ,ಪಾರಿವಾಳ,ಬಡತನ,ಹೃದಯ,ಬದುಕು ಬರಹದಂತಹ ಹಲವಾರು ವಿಷಯಗಳನ್ನು ಕವಿಯು ತನ್ನ

ಭಾವನೆಗಳಿಗೆ ಹೋಲಿಸಿಕೊಂಡು ಬರೆಯುತ್ತಾನೆ, ಸೂಕ್ಷ ಸಂವೇದನೆಗಳಿಂದ ಪ್ರಸಕ್ತ ಘಟನೆಗಳನ್ನು ನವನವೀನ  ಶೈಲಿಯಲ್ಲಿ ಆಧುನಿಕತೆಯ ಸ್ಪಷ೯ದಿಂದ ಬರೆಯುವ

ಗಜಲ್ ಗಳನ್ನು ಜದೀದ್ ಗಜಲ್ ಗಳೆಂದು ಕರೆಯುತ್ತಾರೆ. ಇನ್ನು
 ಈ ಕೃತಿಯ ಗಜಲ್ ಗಳ ಬಗ್ಗೆ ಹೇಳುವುದಾದರೆ ಈ ಯುವ ಪ್ರತಿಭೆಯಲ್ಲಿ ಆಳವಾದ ಚಿಂತನೆ ಗ್ರಹಿಸುವ ಶಕ್ತಿ ಅಧ್ಯಯನದ ತುಡಿತ ಹಾಗೂ ಪಾತ್ರದೊಳಗೆ ಇಳಿದುಬರೆಯುವಂತಹ ಗಟ್ಟಿತನವಿದೆ.ನೂರ್ ಅಹಮದ್ ಅವರ ಗಜಲ್ ಗಳಲ್ಲಿ ಇಷ್ಕ್-ಎ-ಹಕೀಕಿ  (ದೈವ ಪ್ರೇಮ) ಇಷ್ಕ್-ಮಜಾಜಿ(ಲೌಕಿಕ ಪ್ರೇಮ) ವಯೋಸಹಜತೆಯಿಂದ ಕೂಡಿದ ಪ್ರೀತಿ ಪ್ರೇಮ ಮೋಹ ಅನುರಾಗ ವಿರಹ ವೇದನೆ ಇದರ ಜೊತೆಗೆ ದೇಶಪ್ರೇಮ ನಾಡಾಭಿಮಾನ ನೆಲದ ಭಾವ ಮಾನವೀಯ ಮೌಲ್ಯ ನೈತಿಕ ಉನ್ಮಾದಗಳ ಸೂಫಿ ಸ್ಪಷ೯ ಹೀಗೆ ಹಲವು ಹೂರಣಗಳಿವೆ

ಇವರ ಗಜಲ್ ಗಳು ವಿವಿಧ ವಿಷಯಗಳಿಂದ ಓದುಗ ದೊರೆ

ವಾಚಕರ ಮನ ಮುಟ್ಟುವಂತಿವೆ ನೂರ್ ಅಹಮದ್ ಅವರ

ಗಜಲ್ ಕೃಷಿಯು ಸಮೃದ್ಧಿ ಸಮಥ೯ತೆಯೊಂದಿಗೆ ಸಾಗಲೆಂದು‌ ಹಾರೈಸುತ್ತೇನೆ.


*ಯು ಸಿರಾಜ್ ಅಹಮದ್ ಸೊರಬ*

ಸಾಹಿತಿ ಗಜಲ್ ಕವಿ

ಅಧ್ಯಕ್ಷರು - ಬೆಳಕು ಸಾಹಿತ್ಯಿಕ 

ಸಾಂಸ್ಕೃತಿಕ ಶೈಕ್ಷಣಿಕ ಟ್ರಸ್ಟ್(ರಿ)

ಬೆಂಗಳೂರು ಗ್ರಾಮಾಂತರ ಜಿಲ್ಲೆ

ನೆಲಮಂಗಲ

ಸದಸ್ಯರು - ಕನಾ೯ಟಕ ಗಜಲ್ 

ಅಕಾಡೆಮಿ (ರಿ)

ಬೆಂಗಳೂರು ಗ್ರಾಮಾಂತರ ಜಿಲ್ಲೆ

ನೆಲಮಂಗಲ

ಮೂಗೇ ಇಲದಿದ್ದರೆ?

ಲಘು ಬರಹ

ಮೂಗೇ ಇಲ್ಲದಿರುತ್ತಿದ್ದರೆ...

     ಈ ಮೂಗು ಇದೆಯಲ್ಲ, ಬದುಕಲು ಬೇಕಾದ ಅತ್ಯಗತ್ಯದ ಅಂಗವಲ್ಲವೇ? ಊಟ ಮಾಡದೆ ಹಲವಾರು ದಿನ ಬದುಕಬಲ್ಲಿರಿ, ಉಸಿರಾಡದೆ? ಬದುಕಲು ಸಾಧ್ಯವೇ ಇಲ್ಲ! ಊಹಿಸಲೂ ಆಗದು, ಅಲ್ಲವೇ?
    ಮೂಗು ಮುಖಕ್ಕೊಂದು ಆಕಾರವನ್ನೂ ಕೊಡುತ್ತದೆ, ಮಾನವನ ಮುಖವನ್ನೊಮ್ಮೆ ಮೂಗೇ ಇಲ್ಲದಿರುತ್ತಿದ್ದರೆ ಯೋಚಿಸಿ? ಕವಿಗಳು ಹೇಗೆ 'ನಾಸಿಕವು ಸಂಪಿಗೆಯಂತೆ' ಎಂದು ವರ್ಣಿಸುತ್ತಿದ್ದರು? ಮೂಗೇ ಮಹಾನ್ ಎಂದಾಯ್ತಲ್ಲವೇ?
      ಅಷ್ಟೇ ಏಕೆ, ಕಾಳಿದಾಸನ ಕತೆ ನೆನಪಿಲ್ಲವೇ? ಮುಗ್ದನಾದ ಅವನ ಮುಂದೆ ಕಾಳಿ ಮಾತೆ ತನ್ನ ಹತ್ತು ತಲೆಗಳ ಹೊತ್ತು ಬಂದಾಗ ನಕ್ಕನಂತೆ! ಕಾರಣ "ನಮಗಿರುವುದು ಒಂದೇ ಮೂಗು, ಶೀತವಾದರೆ ಅದನ್ನೇ ತಡೆಯಲಾಗದು, ನಿನ್ನ ಹತ್ತು ಮೂಗನ್ನು ಅದು ಹೇಗೆ ಸಂಭಾಳಿಸುವೆ ದೇವೀ? ಅದಕ್ಕೆ ನಗು ಬಂತು" ಎಂದನಂತೆ! ಬಹುಶಃ ರಾವಣನ ಪರಿಸ್ಥಿತಿಯೂ ಇದೇ ಆಗಿರಬಹುದು.

    ನಿಮ್ಮನ್ನು ಗುರುತಿಸುವಾಗಲೂ ಜನ ಉದ್ದ ಮೂಗಿನವ, ಚಟ್ಟೆ ಮೂಗಿನವ, ವಕ್ರ ಮೂಗಿನವ, ಚಪ್ಪಟೆ ಮೂಗಿನವ ಎಂದು ಗುರುತಿಸಲೂ ಬಹುದು! ಮೂಗು ತೂರಿಸಲು ಎಲ್ಲೂ ಎಂದೂ ಹೋಗದಿದ್ದರೆ ಒಳಿತು! ಮೂಗು ಮುರಿಯುವವರು, ಮೂಗು ಸವರುವವರು, ಮೂಗು ಸ್ವಚ್ಛಮಾಡುವವರು ಅನೇಕರು ಸಿಗುತ್ತಾರೆ! ಕೊರೋನ ಆವರಿಸಿದ ಮೇಲೆ ಅವರೆಲ್ಲರಿಗೂ ಸಮಸ್ಯೆಯೇ! ಕಾರಣ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. 
    ಮೂಗು ಮುಚ್ಚಿಕೊಂಡು ಹೋಗುವುದರಿಂದ ಹಲವಾರು ಏಕಕೋಶ ಜೀವಿಗಳು ನಿಮ್ಮ ಶ್ವಾಸ ಕೋಶದೊಳಗೆ ಹೋಗಲಾಗದೆ ಸಾವನ್ನಪ್ಪುತ್ತಿರುವುದೂ, ನಿಮಗೆ ಶೀತಬಾಧೆಯು ಕಡಿಮೆಯಾಗಿರುವುದೂ ಕಂಡು ಬಂದಿದೆ! 
    ಮೂಗಿನ ಬಗ್ಗೆ ಬರೆಯುತ್ತಾ ಹೋದರೆ ರಾಮಾಯಣದಂತೆ ಮೂಗಾಯಣವಾಗಿ, ನೀವು ಮೂಗು ಮುರಿಯುವ ಮೊದಲೇ ನನ್ನ ಲೇಖನಿಯ ಮೂಗನ್ನು ಬದಿಗೆ ಸರಿಸುವುದು ಒಳಿತಲ್ಲವೇ? ನೀವೇನಂತೀರಿ?
@ಪ್ರೇಮ್@
09.09.2020