ಸೋಮವಾರ, ಏಪ್ರಿಲ್ 26, 2021

ವ್ಯಾಪಾರ - ಕವನ

ವ್ಯಾಪಾರ

ಬೇವ ಬೆಳೆದು ಮಾವು ಉಣ್ಣಲಾದೀತೇ?
ಹಾಗಲವ ಅಟ್ಟು ಸಿಹಿಯ ಹುಡುಕಲಾದೀತೆ?
ಕಲ್ಲ ಮೇಲೆ ಕುಳಿತು ಹತ್ತಿಯ ಮೃದುತನವ ಬಯಸಲಾದೀತೆ?
ಕಪ್ಪು ಶಾಯಿಯಲಿ ಬರೆದು ಬಣ್ಣದ ಚಿತ್ರ ಬೇಕೆನಲು ಸಿಕ್ಕೀತೇ?

ಕಳ್ಳಿಯ ಹೂವನು ಮಲ್ಲಿಗೆಯೆನಲಾದೀತೆ?
ಹಣವ ಕೊಡದೆ ಅಂಗಡಿಯಲಿ ಸಾಮಾನು ಖರೀದಿಸಲಾದೀತೆ?
ತುಂಡರಿಸಿದ ಹೂವಿನ ದಳಗಳ ಮತ್ತೆ ಒಟ್ಟುಗೂಡಿಸಲಾದೀತೆ?
ಕಣ್ಣೀರ ಸುರಿಸದೆ ಭವದಲಿ ಬದುಕಲು ಆದೀತೆ?

ತನ್ನಂತೆ ಪರರು ಇರಬೇಕೆಂಬ ಒತ್ತಡ ಹಾಕಲಾದೀತೆ?
ಕಹಿ ಕೊಟ್ಟು ಸಿಹಿಯ ಹಿಂಪಡೆಯಲಾದೀತೆ?
ಮನದ ಭಾವಗಳ ಬರಲೇ ಬೇಡಿರೆನುತ ತಡೆಹಿಡಿಯಲಾದೀತೆ?
ಕನಸಿನ ಅರಮನೆಯ ನನಸಲಿ ಹಿಡಿದು ನಿಲ್ಲಿಸಲಾದೀತೆ?

ಪಾಪ ಕೊಟ್ಟು ಪುಣ್ಯ ಪಡೆಯಲಾದೀತೆ?
ಕೆಟ್ಟ ಮಾತುಗಳ ಕೊಟ್ಟು ಸಿಹಿ ನುಡಿಗಳ ನಿರೀಕ್ಷೆ ಮಾಡಲಾದೀತೆ?
ಶಾಪ ಕೊಟ್ಟು ಕೋಪ ತಣಿಸಲಾದೀತೆ?
ನೋವು ನೀಡಿ ಪ್ರೀತಿ ಪಡೆಯಲಾದೀತೆ?

ಜಗದಿ ಕೊಡು ಕೊಳ್ಳುವುದೇ ಬದುಕು ಮಾನವ
ನೂರು ಕೊಟ್ಟರೆ ಒಂದು ಪಡೆಯುವೆ ಒಳಿತ
ಹತ್ತು ಕೊಟ್ಟೊಡೆ ಸಾವಿರ ಹಿಂಪಡೆಯುವೆ ಕೆಡುಕ
ಸಿಹಿಯ ಕೊಟ್ಟು ಸವಿಯ ಪಡೆಯೋ ಜೀವವೇ...
@ಪ್ರೇಮ್@
23.04.2021

An Appeal

Ha ...yes... I have no any rights to ask about your personal matter. It's your own lifestyle and it's your life. You have all the freedom to live as you wish. Nobody are disturbing you in your freedom and living style. But...


    In the short and cute journey of my life the name of you is unfortunately added for some instance. Being in a respectful post and being a human I respect you, not only because you are an officer, but you have  good nature which I have observed. I respect personally for that.But....
   
   I respect you and I don't expect the same from you that you should also respect me! And I wish all others should talk not only in front of you, but behind you also positively on you. But...

   More than three people in different situations spoke negatively on you. I don't know wheather you treat me as your friend or as your enemy, no tension for that!But...

I want you to be good. As you have signed in my life I am your well wisher, believe it or not, nothing harms me! But..

  I want your life to be good. I want to see you in  still high level! Ofcourse I have no any use from it! But.....

Your name is written in the pages of my diary. That's all. Being a human to a human I joked only because I have a great dream about your future life. As teachers we have great dreams of our own for all our students. We have nothing personal use in it! As you know. But...

I am bit different from others. Otherwise you would have erase my name from your eyes!  I don't know whether I have touched your heart or not, but I have a great selfless dream on you..But...

   Unfortunately you are not in my life. If you would be there in my life I would have enjoy the holidays in Switzerland or Malaysia. I might have taken you to the world. But..

   You may not have that much of luck.Never mind. Still you can grow. You will have a great future. You have got a wonderful family, fabulous friends, great staff, respectful job. Nothing is impossible to you and my blessings for you with god to you will be there for you ever because I ever remember your helping nature. But..

Not only that much. You have a good heart. For such people I wish good forever. You may angry on you. But I will never angry on you because I am a debtor to you. I have not yet paid for your help in my need. That point is always in my mind. Shortly I will pay for you but your helping hand intime was valuable and I can't pay for it. But..

Only the wishes for you is I want you and your life to be good and great. Nothing else, nothing more. Drinking is common in the society. But a hero never drinks with the villon or side actors remember! You have to reach a high dream, so I have teased you! The eyes outside in this society observe us each and every time. Be careful. You may drinking in your own money, but you are in public service. But..

I have many more works to do!  Still I am typing you a long message because you may get thousands of teachers in your life. But

I am unique and single, special. Only because I am not like others! I am never a selfish! I tested you many times for your purity of heart. Many times you failed! That's why I created a wall between us! You can't live like me! But I can live like you! It's a challenge! Because I have come from zero! But

Remember. This will be the last and final message of me from my side. Now onwards I stop caring for you and your life. You may not need it ofcourse! If anybody talk negatively on you I escape from there thinking it's none of my business. I won't inform you at all. Because who am I to do all those for you, as you said! You may change your mind, dress and friends again and again! All the best. Live as you wish. God bless you ever. I was in your life. But not now and in future. Take care. Have a good future life. 
@Prem@
27.04.2021

ಗುರುವಾರ, ಏಪ್ರಿಲ್ 22, 2021

ಭಕ್ತಿಗೀತೆ- ನೀನೇ ನೀನು

ನೀನೇ ನೀನು

ವಿರಹದುರಿಯ ಕಂಡೆ ನಾನು
ನಿನ್ನ ಪಾದಧೂಳ ಮರೆತು
ಭಕ್ತಿ ಪಾತ್ರೆಯನ್ನು ತೊರೆದು
ಶಕ್ತಿ ಗಳಿಸೋ ತಂತ್ರ ಹೂಡಿ...

ಪರಮ ನೀನು ಈಗ ತಿಳಿದೆ
ವರವ ನೀಡೋ ಎನುತ ಬೇಡಿದೆ
ಮರವ ಬೆಳೆಸೋ ಕಾಯಕ ಹಿಡಿದೆ
ಕರವ ಪಿಡಿಯೋ ಸತ್ಯ ನುಡಿದೆ...

ಬೇಸರವನು ಭಯದಿ ಓಡಿಸಲಾರೆ
ನೇಸರ ರೂಪನೆ ಮರೆತು ನಾ ಇರಲಾರೆ
ಕಾಸನು ಮಾಡುತ ನಿನ್ನಯ ಮರೆತೆ
ಮೋಸದ ವ್ಯಾಪಾರದಿ ವಿರಹದಿ ಬೆಂದೆ..

ಸತ್ಯ ನೀನು ನಿತ್ಯ ನೀನು
ಶಾಂತಿ ನೀನು ಭಕ್ತಿ ನೀನು
ಭಾವ ನೀನು ಉಸಿರು ನೀನು
ಭೋಗ ನೀನು ಭಾಗ್ಯ ನೀನು..
@ಪ್ರೇಮ್@
22.04.2021

ಬುಧವಾರ, ಏಪ್ರಿಲ್ 21, 2021

ಭಕ್ತಿಗೀತೆ- ರಾಮ ಕಾಯೋ

ರಾಮ ಕಾಯೋ..

ಬದುಕು ನಡೆಸೋ ಜ್ಞಾನ ನೀಡೋ
ಶ್ರೀ ರಾಮಚಂದ್ರ ನಿನ್ನದು
ಕರುಣೆ ನೀಡಿ ಕಾಯೋ ಮನದಿ
ಶಕ್ತಿ ತುಂಬಿ ನಿನ್ನದು...

ಎಲ್ಲೋ ಏನೋ ನನ್ನೆ ನಾನು
ಅರಿಯದೇನೆ ಇರುವೆನು
ಇಲ್ಲೇ ನಮ್ಮ ಜೊತೆಯಲ್ಲಿರುವ
ನಿನ್ನ ನಾನು ಮರೆಯೆನು..

ಸಿದ್ಧಿ ಬುದ್ಧಿ ನೀಡಿ ನಮಗೆ
ವೃದ್ಧಿಯನ್ನು ನೀಡೆಯಾ?
ಗೆದ್ದು ಬರುವ ಕಾರ್ಯವನ್ನು
ಮಾಡೆ ಮನವ ನೀಡೆಯಾ?

ಧೈರ್ಯ ರೀತಿ ನೀತಿ ಕೀರ್ತಿ ಭಕ್ತಿಯನ್ನು ಹೆಚ್ಚಿಸು
ಸ್ಥೈರ್ಯ ಸ್ಪೂರ್ತಿ ಶಾಂತಿ ಪ್ರೀತಿ
ಶಕ್ತಿಯನ್ನು ಮೆರೆಯಿಸು...

ಕೂಲಿಯಂತೆ ಕೆಲಸ ಮಾಡಿ
ರಾಜನಂಥ ಬದುಕು ನೀಡಿ
ಮನದ ಗುಡಿಯ ಶುದ್ಧ ಮಾಡಿ
ಸಹಾಯ ಮಾಡೋ ಗುಣವ ನೀಡಿ..
@ಪ್ರೇಮ್@
20.04.2021

ಶನಿವಾರ, ಏಪ್ರಿಲ್ 17, 2021

ಮಕ್ಕಳ ಕತೆ

ಸುನೀಲನ ಕಾರು

ಅಂದು ಸುನಿಲನ ಸಡಗರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.  ಕೊರೋನ ಎಂಬ ಕಾಣದ ವೈರಸ್ ನಿಂದಾಗಿ ಎಲ್ಲರೂ ಸಾಯುವ ಶೀತ ಜ್ವರ ಬರುತ್ತದೆ ಎಂದು ಟಿವಿಯಲ್ಲಿ ಅದನ್ನೇ ತೋರಿಸುತ್ತಿದ್ದರು. ತಕ್ಷಣ ಶಾಲೆಗೆಲ್ಲ ರಜೆ ಘೋಷಣೆ ಮಾಡಿದರು. ಬಳಿಕ ಪರೀಕ್ಷೆ ಇಲ್ಲದೇನೆ ಎಲ್ಲ ಮಕ್ಕಳೂ ಪಾಸ್ ಎಂದು ಮುಂದಿನ ತರಗತಿಯ ಪುಸ್ತಕ, ಬಟ್ಟೆ, ಅಕ್ಕಿ, ಬೇಳೆ, ಹಾಲಿನ ಪುಡಿ ಕೊಟ್ಟರು. ಮುಂದೆ ನಮಗೆ ಶಾಲೆಗೆ ಹೋಗಲಿಕ್ಕೆ ಸಿಗಲೇ ಇಲ್ಲ. ಅದುವರೆಗೂ ರಜೆ ಸಿಕ್ಕಿದರೆ ಖುಷಿ ಪಡುತ್ತಿದ್ದ ನಮಗೆ ಆಡಿ ಆಡಿ ಬೇಸರವಾಯಿತು. ಅಜ್ಜಿ ಮನೆ, ಚಿಕ್ಕಮ್ಮನ ಮನೆಗೆ, ಮಾವನ ಮನೆಗೆ, ಜಾತ್ರೆಗೆ ಎಲ್ಲಾ ಹೋಗಿ ಬಂದು ಆಯಿತು. 

   ಆಗ ಶಿಕ್ಷಕರೇ ನಮ್ಮ ಮನೆಗೆ ಬರಲಾರಂಭಿಸಿದರು. ಸ್ವಲ್ಪ ಸಂತಾಸವಾದರೂ ಬೇಸರವೂ ಆಯಿತು. ಶಾಲೆಗೆ ಹೋಗುವ, ತರಗತಿಯ ಮಜವೇ ಬೇರೆ!ಎಲ್ಲವನ್ನೂ ಮಿಸ್ ಮಾಡಿಕೊಳ್ಳ ತೊಡಗಿದೆವು.
  
ಇದ್ದಕ್ಕಿದ್ದಂತೆ ಅರ್ಧ ದಿನ ಶಾಲೆ ಎಂಬ ವಿಷಯ ಕೇಳಿ ಸಂತಸವಾದರೂ ಇದುವರೆಗೂ ಶಾಲೆಯಿಲ್ಲಾಂತ ತಡವಾಗಿ ಎದ್ದು ಈಗ ಬೇಗ ಏಳಲು ಬೇಸರವೂ ಆಯಿತು. ಅಮ್ಮ ಮಾಡಿ ಕೊಟ್ಟದ್ದನ್ನು ತಿಂದು, ಟಿವಿ, ಮೊಬೈಲ್ ನೋಡಿ ಸೋಮಾರಿತನವನ್ನು ರಾಶಿ ಹಾಕಿಕೊಂಡು ಕುಳಿತಿದ್ದ ನಮಗೆ ಉದಾಸೀನ ಪ್ರಾರಂಭವಾಯಿತು. ಅದರಲ್ಲೂ ಹಾಜರಿ ಕಡ್ಡಾಯ ಇಲ್ಲ ಎಂದಾಗ "ವಾರಕ್ಕೆ ಎರಡೊ ಮೂರೋ ದಿನ ಹೋಗೋಣ" ಎಂದು ನಾವೆಲ್ಲ ಮಾತಾಡಿಕೊಂಡು ಆಯಿತು. "ನಾವು ಶಾಲೆಗೆ ಹೋಗದೆ ಇದ್ದರೆ ಟೀಚರನ್ನು ನಮ್ಮಮನೆಗೆಲ್ಲ  ಕಳಿಸುತ್ತಾರೆ. ಪಾಪ ಅವರ ಕಷ್ಟ. ನೋಡಲು ಆಗದು. ಹಾಗಾಗಿ ನಾವೇ ಹೋಗೋಣ" ಎಂದು ಗೆಳೆಯರಿಗೆ ಎಲ್ಲರಿಗೂ ಹೇಳಿದಾಗ ಅವರು ಒಪ್ಪಿದರೂ ಮಂಜುನಾಥ ಮಾತ್ರ ಒಪ್ಪಲೆ ಇಲ್ಲ. "ಬೇಕಾದರೆ ಟೀಚರ್ ನಮ್ಮಮನೆಗೇ ದಿನಾ ಬಂದು ಹೇಳಿ ಕೊಡಲಿ. ನಾನು ಶಾಲೆಗೆ ಹೋಗುವುದಿಲ್ಲ. ನನ್ನ ನಾಯಿ ಮರಿ, ಕೋಳಿ, ಬೆಕ್ಕು ಇವುಗಳನ್ನೆಲ್ಲ ನೋಡಿ ಕೊಳ್ಳೋರು ಯಾರು? ನನ್ನ ಮೊಬೈಲ್ ಆಟದಲ್ಲಿ 5000 ಸ್ಕೋರ್ ಆಗಬೇಕಿದೆ. ಶಾಲೆ ಬೋರ್. ಅಲ್ಲಿ ಏನಿದೆ? ಪಾಠ, ಪರೀಕ್ಷೆ, ಮನೆ ಕೆಲಸ, ಪ್ರಾಜೆಕ್ಟ್, ಗುಡಿಸುವುದು, ಕ್ಲೀನ್ ಮಾಡುವುದು ಅಷ್ಟೆ. ಅದು ಯಾರಿಗೆ ಬೇಕು.." ಎಂದು ಮನೆಯಲ್ಲೇ ಉಳಿದ. ಟೀಚರ್ ಅವನ ಮನೆಗೆ ಬಂದು ಬಂದು ಬೇಸರವಾಗಿ ಪೊಲೀಸ್ ಗೆ ಹೇಳಿ ಸುಮ್ಮನಾದರು. 

ನಾವೆಲ್ಲ ಶಾಲೆಗೆ ದಿನ ಬಿಟ್ಟು ದಿನ ಹೋಗಿ ಕಲಿಯಲು ತೊಡಗಿರುವಾಗ ಮತ್ತೆ ಕೊರೋನ ಸೋಂಕು ಜಾಸ್ತಿ ಆಗುತ್ತಿದೆ ಎಂದು ರಜೆ ಕೊಟ್ಟರು. ಅಂತೂ ಇಂತೂ ಗೆಳೆಯರನ್ನು ಕರೆಯಲಾಗಿದೆ ಸೇರಲಾಗದೆ ಬೇಜಾರಗಿದ್ದ. ನಮಗೆ ಹುಟ್ಟು ಹಬ್ಬ ಹೊಸ ಹುರುಪು ಕೊಟ್ಟಿತು.

ಎಲ್ಲ ಮಕ್ಕಳೂ, ಗೆಳೆಯರೂ, ನೆಂಟರನ್ನು ಕರೆಯಲಾಯಿತು. ಹುಟ್ಟು ಹಬ್ಬದ ದಿನ ಮಾಸ್ಕ್, ಸ್ಯಾನಿಟೈಸರ್ ಇಡಲಾಯಿತು. ಮನೆಯ ಹೊರಗೆ ಅಂಗಳಕ್ಕೆ ಪೆಂಡಾಲ್ ಹಾಕಲಾಯಿತು. ದೊಡ್ಡ ಕೇಕ್ ತಂದು ದೀಪ ಹಚ್ಚಿ ಕತ್ತರಿಸಿ ಆಯಿತು. ಬಂದವರೆಲ್ಲ ಬೇರೆ ಬೇರೆ ಗಿಫ್ಟ್ ತಂದಿದ್ದರು. ಅದರಲ್ಲಿ ಆಟದ ಸಾಮನುಗಳಾದ ಜೆಸಿಬಿ, ಇಟ್ಯಾಚಿ, ಲಾರಿ, ಟಿಪರ್, ಬಟ್ಟೆ, ಬೆಲ್ಟ್ ಹೀಗೆ ಅನೇಕ ವಸ್ತುಗಳು ಇದ್ದವು. ಅದರಲ್ಲಿ ಅವನ ದುಬೈ ಅಂಕಲ್ ಸತೀಶ್ ತಂದ ಕಾರು ಅವನ ಗಮನ ಸೆಳೆಯಿತು. ಪುಟ್ಟ ಕಾರು. ಅದನ್ನು ತೋರಿಸಿ ಅಂಕಲ್ ಹೇಳಿದರು ಸುನೀಲ್ 123 ಎಂದರೆ ಈ ಕಾರು ದೊಡ್ಡದಾಗುವುದು. ಮತ್ತೆ ಸುನೀಲ್ 123 ಗೋ ಎಂದರೆ ಹೋಗುವುದು. ಸುನೀಲ್123 ಸ್ಟಾಪ್ ಎಂದರೆ ನಿಲ್ಲುವುದು....ಹೀಗೆ. ಎಲ್ಲ ಕೇಳಿದ ಬಳಿಕ ಪ್ರಯೋಗ ಮಾಡಿ, ಅವನಿಗೆ ತೋರಿಸಿ ಸ್ವಲ್ಪ ದೂರ ಕರೆದುಕೊಂಡು ಹೋದರು. ಆದರೆ ಅಣ್ಣ ಅಥವಾ ಅಪ್ಪ ಜೊತೆಯಲ್ಲಿ ಇದ್ದರೆ ಮಾತ್ರ ಅದು ಓದುವುದು ಎಂದರು. ತನ್ನ ಗೆಳೆಯರನ್ನೆಲ್ಲ ಕೂರಿಸಿ ಪ್ರಯೋಗಿಸಿದಾಗ ಅದು ಹೊರಡದೆ ಅಣ್ಣ ಅಥವಾ ಅಪ್ಪ ಇದ್ದಾಗ ಮಾತ್ರ ಹೋಗುತ್ತಿತ್ತು.

  ಶಾಲೆಗೆ ರಜೆಯಾದ ಕಾರಣ ಮನೆಯವರೆಲ್ಲ ಸೇರಿ ಬೀಚ್ ಗೆ ಹೋಗೋಣ ಎಂದುಕೊಂಡರು. ಆದರೆ ಮತ್ತೆ ಲಾಕ್ ಡೌನ್, ಸೀಲ್ ಡೌನ್ ಘೋಷಣೆ ಆದ ಕಾರಣ ಎಲ್ಲರೂ ಮನೆಯಲ್ಲೇ ಉಳಿಯಬೇಕಾಯಿತು. ಸುನೀಲನ ಕಾರು ಮನೆಗೆ ಸಾಮಾನು ತರಲಷ್ಟೇ ಸೀಮಿತವಾಯಿತು.
@ಪ್ರೇಮ್@
18.04.2021

ಕುಸುಮ ಷಟ್ಪದಿ

ಕುಸುಮ
ಕುಸುಮವನು ಬರೆಯುತಿಹೆ
ಪಸರಿಸುತ ನಾಡಿನಲಿ
ಕೆಸುವಿನಲಿ ಜಾರುತಿಹ ಮಳೆನೀರ ತೆರ...
ಹಸನಾದ ಹನಿಯಂತೆ
ಕೊಸರಾಟ ಮರೆತಂತೆ
ಬಸವನಾ ತಿರುಗಾಟ ದಿನದಂತೆಯೆ

ಬಿಸಿಲಲ್ಲಿ ಹೊರಟಂತೆ
ಕಸಿವಿಸಿಯು ಬರದಂತೆ
ಉಸಿರಾಟ ತಾನಾಗೆ ಹೊರಟಂತೆಯೆ.
ಪದಗಳನು ಹುಡುಕುತ್ತ
ಬದಲಾಗಿ ಹೆದರುತ್ತ
ಸದ್ದಿರದೆ ಗಾಲಿಯಲಿ ತೇಳುತಲಿಯೆ.
@ಪ್ರೇಮ್@
17.04.2021

ಗಝಲ್

ಗಝಲ್

ಹೊಸ ವರುಷ ನವ ಸಂವತ್ಸರ ತರುವುದೇ ಹಿತವ?
ಹೊಸತನ ಹೊಸ ಮನ ಮೂಡಿಸಿಕೊಳ್ಳುವುದೇ ತವಕವ?

ಗಝಲ್

ಬಾಳಿನಲಿ ಕಣ್ಣಿಗೆ ಕಾಣದ ಮಾರಿಯು ಆಡಿಹುದು ಆಟವ
ಇರುಳಿನಲಿಹ ಮಾನವನ ಕಣ್ಣು ಹುಡುಕುವುದೇ ಸುಖವ?

ರಾಸಾಯನಿಕಗಳ ತಿಂದುಂಡು ಕೊಬ್ಬಿಬೆಳೆಯುತಿಹ ದೇಹವಿದು
ಕಷಾಯಗಳ ಕುದಿದಾದರೂ ಸಹಿಸಿ ಕೊಳ್ಳುವುದೇ ನೋವ?

ಮದ್ದಾನೆಗಳಂತೆ ಬೆಳೆಯುತ್ತಾ ನುಂಗುವರು ಸರ್ವರ ಧನವ
ಕದ್ದೆ ಬದುಕಲು ಕಲಿತ ಜ್ಞಾನಿಯ ಕಣ್ಣು ತೆರೆದಿಡುವುದೇ ನಿಜವ?

ಹಸಿರ ನಾಶ ಮಾಡುವ ಪರಿಯ ಕಡಿಮೆಗೊಳಿಸಿ ಗಿಡನೆದುವನೆ?
ಪಚ್ಚೆ - ಪೈರಿನ ಪ್ರೇಮವನು ಮತ್ತೆ ಕಾಣುವುದೇ ನೇಸರವ?
@ಪ್ರೇಮ್@
13.04.2021

ಚುಟುಕು

ಚುಟುಕು

ವಸಂತ

ದೀಪದಂತೆ ಬೆಳಗುತಿರಲಿ ರೂಪ ಬದಿಗೆ ಸರಿಯುತಿರಲಿ
ಸೋಪಿನಂತೆ ಜಾರದಿರಲಿ ಬದುಕ ನಾವೆ ಸಾಗುತಿರಲಿ
ತೋಪಿನಲ್ಲು ವಸಂತ ಮಾಸ ತರುತಲಿಹುದು ಹಸಿರ ಚಿಗುರು
ಕೋಗಿಲೆಯ ಕಂಠದಂತೆ ಮಾಮರದ ಸಾಲು ಬಸಿರು..
@ಪ್ರೇಮ್@
16.04.2021

ಭಕ್ತಿಗೀತೆ - ನಮಿಸುವೆನು

ಭಕ್ತಿಗೀತೆ

ನಮಿಸುವೆನು

ನಮಿಸುವೆನು ನಮಿಸುವೆನು
ನವನೀತದೊಡೆಯನಿಗೆ
ನಯವಂಚನೆಯ ನರನಿಂದ
ನೂರಂಗುಲ ಎಸೆವವಗೆ

ನಮಿಸುವೆನು ನಮಿಸುವೆನು
ನಿತ್ಯ ಪೂಜೆಯ ಪಡೆವ
ನರಕೋಟಿ ನಾರಾಯಣನಿಗೆ
ನೀಡಿಹನು   ವರಗಳನು
ತನ್ನಯಾ ಭಕುತರಿಗೆ

ನಮಿಸುವೆನು ನಮಿಸುವೆನು
ನೋವನ್ನು ಕಳೆಯುವವ
ನಾರದನ ನೆನೆವವನ
ನಿಜವನ್ನೇ ಅರುಹುವವ
ನೂರ್ಕೋಟಿ ಜನತೆಯೇ
ನೆನೆವಂತ ನಿಜ ವದನ..

ನಮಿಸುವೆನು ನಮಿಸುವೆನು
ನೇರವಾಗಿ ಬರುತಲಿಹ
ನೈಜತೆ ನಿಜ ಮೂರುತಿಗೆ
ಕೃಷ್ಣ ಮಾಧವನೆಂಬ
ನಯನ ಮನೋಹರನಿಗೆ....
@ಪ್ರೇಮ್@
17.04.2021

ಶುಕ್ರವಾರ, ಏಪ್ರಿಲ್ 16, 2021

ನ್ಯಾನೋ ಕಥೆ

ನ್ಯಾನೋ ಕತೆ

ಅವನ್ಯಾರೋ

ನನ್ನ ಬಾಳು ಬರಿದಾಗಿತ್ತು. ಅವನು ಬಂದನು. ಬಾಳ ಸ್ನೇಹಿತ ಕಿರಣ್ ನನ್ನು ಅದಾಗಲೇ ಕಳೆದುಕೊಂಡು ಆಗಿತ್ತು. ಬೇರೆ ಯಾರನ್ನೂ ಅವನ ಸ್ಥಾನದಲ್ಲಿ ಕುಳ್ಳಿರಿಸಲು ಮನಸ್ಸು ಒಪ್ಪಲಿಲ್ಲ.  ಪವನ್ ಕಿರಣ್ ನಂತೆ ಇರಲಿಲ್ಲ. ಬೇರೆಯೇ ಸ್ವಭಾವ. ತುಂಬಾ ಇಷ್ಟವಾದ. ಸ್ನೇಹಿತನಾಗಿ ಸ್ವೀಕರಿಸಿದೆ. ಕಷ್ಟ ಸುಖ ಹಂಚಿಕೊಂಡೆವು. ಪರಸ್ಪರ ಸಹಕಾರ, ಸಹಾಯ, ಮಿಡಿಯುವ ಹೃದಯ ಸ್ನೇಹಿತರಿಂದ ಅಲ್ಲದೆ ಮತ್ತೆ ಯಾರಿಂದ ಸಾಧ್ಯ?
@ಪ್ರೇಮ್@
14.04.2021

ಶಿಲೆಗಳು...

ಶಿಲೆಗಳು ಸಂಗೀತ ಹಾಡಿವೇ


ಹಾಡಿದೆ ಹಾಡಿವೆ ಶಿಲೆಗಳು ಸಂಗೀತ ಹಾಡಿದೆ
ನುಡಿದಿದೆ ನುಡಿದಿದೆ ಇತಿಹಾಸವನು ನುಡಿದಿದೆ//

ರಾಜರ ಕಾರ್ಯಕೆ ಪೌರುಷ ಸ್ಥೈರ್ಯಕೆ ನಾನಾದೆ
ನೋಡಲು ಬನ್ನಿರಿ ನನ್ನಯ ಧೈರ್ಯವ ಎನ್ನುತ್ತಿದೆ
ಸವಿಯನು ಆಡಿ ನೆಮ್ಮದಿ ನೀಡಿ
ಧೈರ್ಯವ ತುಂಬುತ ಮನದಲಿ ಹೀಗೇ...ಹಾಡಿದೆ..//


ಕಲ್ಲನು ಕೊರೆದು ಕನ್ನಡಿ ಮಾಡಿ
ಅಂದವ ತುಂಬಿ ಜೋಡಿಸಿ ಕೂಡಿ
ನಗುತಲಿ ನಿಂತಿಹ ದರ್ಪಣ ಸುಂದರಿ ನಾನಾದೆ..
ನೋಡಿರಿ ನನ್ನಯ ಅಂದದ ಚೆಲುವನು ನೀವಾಗಿ...ಹಾಡಿದೆ...//

ರಾಣಿಯ ನೃತ್ಯ ನೋಡಲು ಬೇಕು
ರಾಜನ ಬುದ್ಧಿ ಕಲಿಯಲು ಬೇಕು
ಪ್ರಜೆಗಳ ಹಿತವದು ರಾಜರ ಧರ್ಮವು ನೀ ಕೇಳು...
ಎಲ್ಲಕು ದೇವರ ಭಕ್ತಿಯೇ ಎಂದಿಗೂ ಮೇಲೂ...ಹಾಡಿದೆ...//
@ಪ್ರೇಮ್@
25.03.2021

ಶನಿವಾರ, ಏಪ್ರಿಲ್ 10, 2021

ಗೆಳೆಯರೆಂದರೆ..

ಗೆಳೆಯರೆಂದರೆ

ಗೆಳೆಯರೆಂದರೆ ಹೀಗೆಯೇ...
ಸದಾ ಹರಟೆ..ನಗು..ಕುಹಕ..ಸಕಲ..
ಒಂದಷ್ಟು ಸಲಹೆ..ಸಾಂತ್ವನ..ಜಗಳ..
ಯಾರನ್ನೂ ಕೇಳದ ಹಾಗೆ ಸಲುಗೆ..
ಪ್ರೀತಿಯ ಅಪ್ಪುಗೆ..ಮುಖದಿ ಕಿರು ನಗೆ..

ಗೆಳೆಯರೆಂದರೆ ಹೀಗೆಯೇ..
ಮಾತು ಮುತ್ತಿನ ಹಾಗೆ..
ಕೆಲಸ ಪುಟವಿಟ್ಟ ಹಾಗೆ..
ಸೋಮಾರಿತನದ ಪರಮಾವಧಿ
ಅಲ್ಲೂ ಕೆಲ ಕಾಲ ನೆಮ್ಮದಿ..

ಗೆಳೆಯರೆಂದರೆ ಹಾಗೆಯೇ..
ನಿದ್ದೆಯಲ್ಲೂ ನೆನೆಯುವ ಹಾಗೆ
ಅರ್ಧ ರಾತ್ರಿಯಲಿ ಎಬ್ಬಿಸಿದ ಬೇಗೆ..
ವಾರ್ಷಿಕೋತ್ಸವದ ಶುಭಾಶಯ ಹೇಳುವಂತೆ
ಹುಟ್ಟು ಹಬ್ಬದ ದಿನ ಮುಖಕ್ಕೆ ಕೇಕ್ ಮೆತ್ತುವಂತೆ
'ಬಡ್ಡೆ ಕಿಕ್' ಎಂದು ಸರಿಯಾಗಿ ಒದೆಯುವಂತೆ..

ಗೆಳೆಯರೆಂದರೆ ಹಾಗೆಯೇ..
ಬಟ್ಟೆ ಊಟಗಳಲಿ ಬೇಧವಿಲ್ಲದ ಹಾಗೆ
ತಟ್ಟೆ ಹಿಡಿದರೂ ಒಟ್ಟಿಗಿರುವ ಹಾಗೆ
ಕಷ್ಟ ಸುಖಗಳಲಿ ಕೈ ಹಿಡಿವ ಹಾಗೆ
ನಷ್ಟವಾದರೂ ಭರಿಸಿ ಸರಿದೂಗಿಸುವ ಹಾಗೆ..

ಗೆಳೆಯರೆಂದರೆ ಹಾಗೆಯೇ..
ಮನದ ಭಾವನೆಗಳ ಅರಿತವರು
ಬನದಲೂ ಜೊತೆಯಾಗಿ ಬರುವವರು
ಕನಸ ಸಾಮ್ರಾಜ್ಯದಲ್ಲಿ ಜೋಡಿಯಾದವರು
ಮನಸಿಟ್ಟು ಸಹಾಯಕ್ಕೆ ಬಂದವರು
ಜತನದಿಂದ ಎಲ್ಲವ ಕಕ್ಕಿಸಿದವರು!

ಗೆಳೆಯರೆಂದರೆ ಹಾಗೆಯೇ..
ನೂರು ವರುಷವೂ ಮರೆಯದವರು
ನೆನಪುಗಳ ಆಗಾಗ ಕೆದಕುವವರು
ಕೋಳಿ ಹಾಗೆ ಮನವ ಒಕ್ಕುವವರು
ಕಷ್ಟ ಸುಖವ ಹಂಚಿಕೊಂಡವರು
ದುಖದಲ್ಲು ನಗೆ ಉಕ್ಕಿಸುವವವರು
ಕೈಯ ಹಿಡಿದು ಮೇಲೆ ಎತ್ತುವವರು..

ಗೆಳೆಯರೆಂದರೆ ಹಾಗೆಯೇ
ಕೇಳದೆಯೇ ಬಳಸುವವರು
ಹೇಳದೆಯೇ ಅರಿತು ಕೊಳ್ಳುವವರು
ನೀರ ನಡುವೆ ತಂದು ನಿಲ್ಲಿಸುವವರು
ಶಕ್ತಿ ಮೀರಿ ಕೈ ಹಿಡಿದು ನಡೆಸುವವರು
ಬದುಕಿನ ಅವಿಭಾಜ್ಯ ಅಂಗ ಇವರು...

ಗೆಳೆಯರೆಂದರೆ ಹಾಗೆಯೇ..
ಜಾತಿ ಮತವ ಅರಿಯದವರು
ಹೃದಯ ಗುಡಿಯಲಿ ನೆಲೆಸಿದವರು
ಮನ ಮಂದಿರದಿ ಆಡುವವರು
ಕಣ ಕಣದಲು ಅರಿತು ಬೆರೆತವರು
ಹಣದಲು ಸಹಾಯ ಮಾಡುವವರು

ಗೆಳೆಯರೆಂದರೆ ಹಾಗೆಯೇ...
ನಮ್ಮ ತಿನಿಸು ಸವಿಯುವವರು
ಮೋಜು ಮಸ್ತಿ ಮಾಡುವವರು
ರಕ್ತ ಸಂಬಂಧಿ ಅಲ್ಲದವರು
ನಮ್ಮ ಬಿಟ್ಟಿರಲಾರದವರು...
@ಪ್ರೇಮ್@
11.04 2021