ಶುಕ್ರವಾರ, ಮಾರ್ಚ್ 4, 2022

ದಶಕ -49

ದಶಕ -49
ಕರ್ಣನ ಪಾತ್ರವೇಕೆ ನಮಗೆ ಇಷ್ಟವಾಗುತ್ತದೆ?
ವಿಷಯ ಅದೆಷ್ಟು ಆಳ, ಅದೆಂಥ ಸುಲಭ!
ಎಲ್ಲವೂ ಇದ್ದು ಏನೂ ಇಲ್ಲದ ಹಾಗೆ!
ಎಲ್ಲಾ ಅರಿತಿದ್ದರೂ ಉಪಯೋಗ ಇಲ್ಲದಂತೆ!

ರಾಜನಾದರೂ ರಾಜನಲ್ಲ, ಅರಮನೆಯಿದ್ದರು ತನಗಲ್ಲ
ಗೆಳೆಯನಾದರೂ ಒಳ್ಳೆಯವನಿಗಲ್ಲ! ಅಮ್ಮನಿದ್ದರೂ ಅನಾಥ!
ಕಲಿತ ವಿದ್ಯೆಗೆ ಬೆಲೆ ದೊರಕಿಲ್ಲ, ದೇವನ ಕರುಣೆ ಇಲ್ಲ!
ಸೂರ್ಯ ಪುತ್ರನಾದರೂ ಹೇಳಿ ಕೊಳ್ಳುವಂತಿಲ್ಲ!

ಇದ್ದೂ ಇಲ್ಲದ ಬಾಳು ಬಾಳಿದವನಿಗೇ ಗೊತ್ತು!
ಕೊಟ್ಟ ಮಾತು ತಪ್ಪದವನ ಕಷ್ಟ ಯಾರಿಗೆ ಗೊತ್ತು!
@ಪ್ರೇಮ್@
04.03.2022

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ