ಮಂಗಳವಾರ, ಮಾರ್ಚ್ 8, 2022

ಭಯವೇಕೆ ಶಿವನಿರಲು

ಭಯವೇಕೆ ಶಿವನಿರಲು

ಭಯವೇಕೆ ಶಿವನಿರಲು ತನುವಿನಲಿ ಲಿಂಗ ರೂಪದಲಿ
ಮುನಿಸೇಕೆ ಆ ದೇವನಲಿ ಕಾಣದಂತಿಹನು ಎನುತಲಿ!

ಹರನಿರಲು ಪೊರೆವವರು ಅದಾರು ಬೇಕಾಗಿದೆ
ವರವಿತ್ತು ಕಾಯುವನು ಹಗಲಿರುಳು ಎನ್ನದೆ
ತನುಮನದಿ ಬೆರೆತು ಹರಸುವನು ಅನವರತ
ಅನುದಿನವು ಬಕುತರನು ನೋಡುವನು ನಗುನಗುತ!

ಬೇಕು ಬೇಡಗಳ ಪಟ್ಟಿಯನು ತಾನೇ ತಯಾರಿಸುವನು
ವರಗಳ ಮಳೆಯನು ಸುರಿದು ತಾ ಸಲಹುವನು
ಕರುಣೆಯ ಸ್ಪರ್ಶವನು ನೀಡಿ ಮರೆಯದಿರುವವನು
ಮಾತೆಯಂತೆ ಕಾಣುತಲಿ ಅಪ್ಪುಗೆಯ ನೀಡುವನು

ನನ್ನದು ನಿನ್ನದು ಎನ್ನಲೇನು ಇದೆ ಬುವಿಯಲಿ
ತನ್ನದು ತಾನೇ ಎನ್ನಲು ಎಲ್ಲಿದೆ ಜಗದಲಿ?
ಬರುವಲೂ ಏನಿಲ್ಲ, ಹೋಗುವಾಗ ಏನೂ ಇಲ್ಲ
ಬಿಟ್ಟು ಹೋಗುವುದು ಬರಿಯ ಪ್ರೀತಿ ನೀತಿ ಎಲ್ಲ
@ಪ್ರೇಮ್@
08.03.2022

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ