ಏಕಾಗಿ
ಕನಸನು ಕಾಣುತ ಎಲ್ಲೋ ನೋಡುತ
ಚಿಂತಿಸುತ್ತಿರುವೆ ಏಕಾಗಿ?
ಯಾರಿಗೊ ಕಾಯುತ ಏನನೋ ಹುಡುಕುತ
ಕುಳಿತಿರುವೆ ನೀ ಏಕಾಗಿ?
ಏಕಾಂಗಿಯಾಗಿ ಆಲೋಚನೆಯೂ
ನಲ್ಲೆಯ ನೆನಪೇ ನಿನಗಿಂದು?
ಮೋಡದ ಆಟವ ನೋಡಲು ಹೊರಗಡೆ
ಬರಬಾರದೇ ನೀನಿಂದು?
ವಿರಹವ ತಾಳದೆ ಕನಸನು ಕಾಣುತ
ಸುಮ್ಮನೆ ಕುಳಿತಿಹೆ ಏಕಾಗಿ?
ಓಡುತ ಹೋಗಿ ನಲ್ಲೆಯ ನೋಡಿ
ಮೋಡಿಯ ಮಾಡೋ ಏಕಾಂಗಿ!
@ಹನಿಬಿಂದು@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ