ಭಾವಗೀತೆ
ನೆನಪು
ಮರೆತು ನೀನು ನನ್ನ ಮನವ
ನಡೆದೆ ನೆನಪನುಳಿಸುತ
ಬೆರೆತು ಹಾಲು ಜೇನಿನಂತೆ
ಅಲ್ಪ ಸಮಯ ಕಳೆಯುತ
ನಾನು ನೀನು ಒಂದೇ ಎಂದು
ಜಗವು ಸಾರುತ್ತಿದ್ದಿತು
ದೃಷ್ಟಿ ಬಿತ್ತೋ ಏನೋ ನಮ್ಮ
ಸ್ವಚ್ಚ ಪ್ರೀತಿ ಬೆಳೆಯುತ
ಕಷ್ಟದಲ್ಲು ಹೆಗಲು ಕೊಟ್ಟು
ನೆರವು ನೀಡುತ್ತಿದ್ದೆವು
ಇಷ್ಟಪಟ್ಟ ವಸ್ತುವೆಲ್ಲ
ತಿಂದು ನಲಿಯುತ್ತಿದ್ದೆವು
ನೋವು ಬಹಳ ವಿರಹದಲ್ಲಿ
ಬೆಂದು ಬೇಯುತಿರುವೆನು
ಸಾಲು ಸಾಲು ಸೋಲು ಬಂದು
ಒಂಟಿಯಾಗಿ ಅಳುವೆನು
ದೇವನಲ್ಲಿ ಮೊರೆಯನಿಟ್ಟು
ಬರುವಿಗಾಗಿ ಬೇಡಿಕೆ
ಕಾವನೆಂಬ ಬಿರುಸಿನಲ್ಲಿ
ಉಸಿರ ಸಹಿತ ಕೋರಿಕೆ..
@ಹನಿಬಿಂದು@
05.04.2024
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ