ಇಷ್ಟೇ
ನಾನು ಬದುಕಿನಲ್ಲಿ ತುಂಬಾ ನೊಂದಿರುವ ಹೆಣ್ಣು
ಕಂಡಿದ್ದು ಬರೀ ನೋವೇ
ಕಷ್ಟ ಕಷ್ಟದ ಮುಳ್ಳಿನ ಹಾದಿ
ನನಗೆ ಬೇಕಾದದ್ದು ಸ್ವಲ್ಪ ಸಂತೋಷ
ಒಂದಿಷ್ಟು ಹಿಡಿ ಪ್ರೀತಿ
ಅದನ್ನು ನಾನು ಎಲ್ಲರಿಂದ ಬಯಸಲು ಸಾಧ್ಯ ಇಲ್ಲ
ಆರೋಗ್ಯ ಸಮಸ್ಯೆ ಜವಾಬ್ದಾರಿಗಳ ಸವಾರಿ
ಒತ್ತಡ ನಿರ್ವಹಣೆಗೆ ಬೇಕಾದ ಮದ್ದು
ಇದೆಲ್ಲಕ್ಕೂ ಬದುಕಲ್ಲಿ ಯಾರು ಜೊತೆ ಆಗುತ್ತಾರೋ
ಅವರನ್ನು ದೇವರ ಪ್ರಸಾದ ಎಂದು ಸ್ವೀಕರಿಸಿದ ಹೆಣ್ಣು ನಾನು
ಪ್ರಸಾದ ಒಮ್ಮೆ ಮಾತ್ರ ಸ್ವೀಕರಿಸಲು ಸಾಧ್ಯ ಅಲ್ಲವೇ..
ಹಾಗಾಗಿ ನನ್ನ ಹೃದಯದಲ್ಲಿ ನೋವಿದೆ ಆದರೆ
ಮೋಸ ವಂಚನೆ ತಿರಸ್ಕಾರ ಎಂದಿಗೂ ಇಲ್ಲ
ನನ್ನ ಬದುಕು ದೇವರ ಜೊತೆಗೆ
ನಾನು ಕಷ್ಟ ಸುಖ ಹಂಚಿಕೊಳ್ಳುವುದು ಕೂಡ ಆ ದೇವರ ಜೊತೆಗೆ
ಏನಾದರೂ ಬೇಡುವುದು ಸಹ
ಬದುಕಿನಲ್ಲಿ ದೇವರು ಒಳ್ಳೆಯವರನ್ನೆ ಕೊಡುತ್ತಾರೆ ಅಂದುಕೊಂಡು ಸ್ವೀಕರಿಸಿ ಮೋಸ ಹೋದವಳು ನಾನು
ಒಮ್ಮೆ ಪಡೆದ ನೋವಿಗೆ ಔಷಧಿಗಳ ಮಾಡುವುದೇ ಕೆಲಸ
ಹಾಗಾಗಿ ಮತ್ತೆ ಕೋಮಕ್ಕೆ ಹೋಗಲಾರೆ
ಹೋದರೂ ಬದುಕುವ ಶಕ್ತಿ ನನಗಿಲ್ಲ
ತುಂಬಾ ನಾಜೂಕಿನ ಬದುಕು ಇದು
ಒಮ್ಮೆ ಒಬ್ಬರಿಗೆ ಮಾತು ಕೊಟ್ಟ ಮೇಲೆ ನಿಭಾಯಿಸುವುದು ಧರ್ಮ
ಆದರೆ ಕುಡುಕರ ಜೊತೆ ಮತ್ತು ಸಂಶಯ ಪಿಶಾಚಿಗಳ ಜೊತೆ ಬಾಳು ಸಾಧ್ಯ ಇಲ್ಲ ಎಂದು ಹತ್ತು ವರ್ಷಗಳ ಕಷ್ಟ ನೋವು ಹಾಗೂ ಕಣ್ಣೀರಿನಲ್ಲಿ ಅರಿತೆ
ಮತ್ತೆ ನನಗೆ ಬೇಕಾದದ್ದು ಇಷ್ಟೇ
ಒಂದಷ್ಟು ಖುಷಿ
ಒಂದು ಹಿಡಿ ಪ್ರೀತಿ
@HoneyBindu@