ಬುಧವಾರ, ಅಕ್ಟೋಬರ್ 2, 2024

ಸರಿಪಡಿಸೋಣ

ಸರಿಪಡಿಸೋಣ

ಕುಡಿತವು ಮಾರಕ ಚಟ ಎಂದಿದ್ದರೂ
ಕುಡಿತದ ದಾಸರು ನಾವು
ಹೆಣ್ಣಿನ ದೇಹ ಮನಸನು ತಿಳಿಯದೆ
ಆಟವ ಆಡುವ ನೋವು!

ಗಾಂಜಾ ಸಿಗರೇಟು ಅಫೀಮು ಕೆಟ್ಟದು
ಜನರೇ ಕೊಳ್ಳೋದಲ್ವ?
ನಾಯಿ ಬೆಕ್ಕು ನರಿಯೂ ಮುಟ್ಟದು 
ಕೊಳಕು ಮಾನವ ಅನ್ನಿಸೋದಿಲ್ವ!

)ಜನರ ಆಹಾರಕೆ  ವಿಷವನು ಸುರಿದು
ಜನರೇ ಸಾಯೋದು ಏಕೆ?
ತಾಯಿ ತಂದೆ ಬಂಧುಗಳ ಕೊಂದ 
ಆಸ್ತಿಯ ಬದುಕದು ಸಾಕೆ?

ಆರೋಗ್ಯ ಭಾಗ್ಯ ಬೇಕು ಎಂದರೂ
ನಿದ್ದೆ ಆಹಾರ ಸರಿ ಇದೆಯೇ?
ತಿಳಿದ ಹಿರಿಯರು ಬುದ್ಧಿ ಹೇಳಿದರೆ
ಕೇಳುವ ವ್ಯವಧಾನ ಬಂದಿದೆಯೇ?

ಚಿಕ್ಕವ ದೊಡ್ಡವ ಎನ್ನದೆ ಮೊಬೈಲ್
ಗೀಳಿನ ಕಾಟ ಹೋಗಿದೆಯೇ?
ಕಣ್ಣು ಕಿವಿ ನರ ಕೈ ಕಾಲು
ಅಂಗದ ಮಹತ್ವ ತಿಳಿದಿದೆಯೇ?

ರಾತ್ರಿ ಹಗಲು ದುಡಿಯುವ ನಮಗೆ
ಸಂಬಳ ಹಣ ಸಾಕಾಗುವುದೇ?
ದರೋಡೆ ಲೂಟಿ ಲಂಚದ  ಹಣವು
ಒಳ್ಳೆಯ ಕಾರ್ಯಕೆ ಹೋಗುವುದೇ?

ಮರಗಳ ಕಡಿದು ರಸ್ತೆಯ ಮಾಡಿ
ವಿಧ ವಿಧ ರಂಗಿನ ಮನೆ ಕಟ್ಟಿ
ಸ್ವರಗಳ ಸಾಯಿಸಿ ಪರಿಸರ ಕೊಂದು 
ಬದುಕುವ ಅಡಿಪಾಯ ಏನ್ ಗಟ್ಟಿ?
@ಹನಿಬಿಂದು@
01.10.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ