ಮಂಗಳವಾರ, ಮೇ 20, 2025

ಬೇಸರವಾಗುತ್ತಿದೆ

ಜನರ ಮೇಲೆ ಬೇಸರವಾಗುತ್ತಿದೆ... 
ಮನಸ್ಸಿನ ಒಳಗೆ ಅದೇಕೋ 
ಯಾರಲ್ಲೂ ಹೇಳಿಕೊಳ್ಳಲಾಗದ
ಕರುಳು ಕಿತ್ತ ನೋವಾಗುತ್ತಿದೆ..

ಯಾರಲ್ಲಿ ಹೇಳುವುದು ಸಂಕಟ
ಯಾರಲ್ಲಿ ತೋಡಿಕೊಳ್ಳುವುದು ನೋವು? 
ಗಂಡಸರು ಕೆಟ್ಟವರೆ? 
ಎಲ್ಲಾ ಗಂಡಸರೂ ಒಳ್ಳೆಯವರೇ? 
ಅಜ್ಜ ಅಪ್ಪ ಮಾವ ಒಳ್ಳೆಯವರಾಗಿರಲಿಲ್ಲವೇ?
ಅಣ್ಣ, ತಮ್ಮ, ಕಸಿನ್ ಒಳ್ಳೆಯವರಲ್ಲವೇ?
ಗೆಳೆಯರು, ಸ್ನೇಹಿತರ ಸ್ನೇಹಿತರು ಕೆಟ್ಟವರೆ!

ಅತ್ತೆ ನಾದಿನಿ ಒರಗಿತ್ತಿ ಎಲ್ಲರೂ ಒಳ್ಳೆಯವರೇ?
ಹೆಂಗಸರು ಕೆಟ್ಟವರಿಲ್ಲವೇ 
ಆದರೂ....

ಎಲ್ಲೋ ಕಂಡೂ ಕಾಣದ ನೋವು
ಗಂಡಸರೆಂದರೆ ಭಯ ಅಭಯ
ನಂಬುವುದು ಹೇಗೆ...
ಕುಡುಕರೇ.... ಕೆಡುಕರೇ... ಕಟುಕರೆ..
ಉತ್ತರ ಯಾರಲ್ಲಿದೆ,?
ಉತ್ತರಿಸುವವರು ಯಾರು?

ಅವರ ಸಾಕಿ ಬೆಳೆಸಿದ 
ಅಮ್ಮ ಕೆಟ್ಟವಳೇ ?
ಹುಟ್ಟಿಸಿದ ಅಪ್ಪ ಕೆಟ್ಟವನೆ?
ಬುದ್ಧಿ ಹೇಳಿ ತಿದ್ದಿದ ಅಜ್ಜಿ ಅಜ್ಜ?
ಜೊತೆಗೆ ಹುಟ್ಟಿದವರು?

ಮತ್ತ ಹೆಚ್ಚಿಸಲು ಉಂಡ ಗಾಂಜಾ
ಸಿಗರೇಟು, ಬೀಡಿ ಇರಬಹುದೇ?
ಮತ್ತೇರಲು ಕುಡಿದ ಮಾಡಿರೆ ಕೆಡುಕು ಮಾಡಿತೇ?
ಮತ್ತೆ ಮತ್ತೆ ಮದವೇರಲೂ 
ಹೇಗೆ ಸಾಧ್ಯವಾಯ್ತು
ಹೆಣ್ಣು ಮಕ್ಕಳ ಮೇಲೆ ಕರುಣೆಯೇ ಇಲ್ಲವಾಯ್ತೆ!

ಹೆಣ್ಣೆಂದರೆ ವಸ್ತುವೇ?
ಭೋಗದ ಕಸವೇ?
ಮನೆಯ ಕೆಲಸದಾಕೆಯೇ!
ತಾಯಿಯನ್ನು ಹೊರತು ಪರರೆಲ್ಲ ಕೆಟ್ಟವರೇ 
ಕೆಟ್ಟವರನ್ನೆಲ್ಲ ಸಾಯಿಸುವುದಾದರೆ
ಅದೆಷ್ಟು ಕಟುಕ, ಕೊಲೆಗಾರರಿಲ್ಲ ಜಗದಲಿ
ದೇಶದಲ್ಲಿ, ರಾಜ್ಯದಲ್ಲಿ, ಧರೆಯಲಿ

ಆ ಮಗುವಿನ ದೇಹ ಯಾರಿಗೆ ನೋವು ಕೊಟ್ಟಿತ್ತು!
ಸಾಯಿಸುವ ಪಾಪ ತಾನು ಏನು ಮಾಡಿತ್ತು!
ಹೆಣ್ಣಾಗಿ ಹುಟ್ಟಿದ್ದೇ ಶಾಪವಾಯ್ತೆ
ಅವರ ಕೈಗೆ ಸಿಕ್ಕಿ ಹಾಕಿಕೊಂಡದ್ದಾದರೂ ಹೇಗೆ
ಅಮ್ಮನೇಕೆ ಅವಳನ್ನು ಒಬ್ಬಳನ್ನೇ ಹೊರಗೆ ಬಿಟ್ಟರು
ತಿರುಗಾಡಲು ಆಕೆ ಒಬ್ಬಳೆ ಹೋಗಿದ್ದಳೆ?

ಛೆ ಎಲ್ಲಾ ಪ್ರಶ್ನೆಗಳೇ..
ಉತ್ತರ ಹುಡುಕುವುದು ಎಂತು 
ಯಾರಲ್ಲಿದೇ ಉತ್ತರ
ಸಾಯಿಸಿದವರೂ ಮಾನವರೆ
ಸತ್ತವರೂ ಮಾನವರೇ
ಮಾನವತೆ ಇಲ್ಲದ ಮಾನವರು
ತಪ್ಪು ಯಾರದೋ
ಶಿಕ್ಷೆ ಇನ್ಯಾರಿಗೋ
ನೋವು ಮತ್ಯಾರಿಗೋ..
ಜಗದ ವಿಸ್ಮಯ...
ಅಸಹಾಯಕ ಬಾಳು ನಮ್ಮದು..
@ಹನಿಬಿಂದು@
17.05.2025

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ