ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ
ಸ್ತ್ರೀಯರನ್ನು ಕೀಳಾಗಿ ಕಾಣುವ ಕಾಮ ಪಿಪಾಸುಗಳಿಗೆ ಹೀಗೊಂದು ಬಹಿರಂಗ ಪತ್ರ...
'ಅಣ್ಣಾ' ಎಂಬುದು ಅದೆಷ್ಟು ಪ್ರೀತಿಯ ಪದ! ಕರಗದವರಿಲ್ಲ ಅದಕ್ಕೆ! ಎಂಥ ಹುಡುಗನೂ ಸಹಾಯಕ್ಕೆ ಬರುತ್ತಾನೆ ಆ ಕೂಗಿಗೆ ಅವನು ನಿಜವಾದ ಮನುಷ್ಯನಾಗಿದ್ದರೆ! ಪ್ರೀತಿಸುವ ನಾಟಕವಾಡಿ ತನ್ನ ಪ್ರೇಯಸಿಯನ್ನು ಕರೆದುಕೊಂಡು ಹೋಗಿ ತನ್ನ ಗೆಳೆಯರಿಗೆ 'ದಾನ' ಮಾಡುವಷ್ಟು ಕೀಳು ಮಟ್ಟದ ಹುಡುಗರೂ ಈಗಿನ ಕೀಲದಲ್ಲಿ ಇದ್ದಾರೆ ಎನ್ನುವ ಸುದ್ದಿ ಕೇಳಿದಾಗಲಂತೂ ಇಂತವರನ್ನು ಕೊಚ್ಚಿ ಕೊಚ್ಚಿ ಜೈಲಿಗೆ ಹೋದರೂ ತಪ್ಪಿಲ್ಲ ಎಂದು ಯಾವ ಹೆಣ್ಣಿಗಾದರೂ ಅನ್ನಿಸದೇ ಇರುವುದೇ?
ತಾನು ಮದುವೆಯಾಗುವುದು ತನ್ನ ಹಾಗೂ ತನ್ನ ಕೈ ಹಿಡಿದವಳ ಬಾಳನ್ನು ಉದ್ದಾರ ಮಾಡಲಿಕ್ಕಾಗಿ. ತಾನೇ ಕಷ್ಟ ಕೊಟ್ಟು ಹೆಂಡತಿ ದುಡಿದು ತಂದ ಹಣವನ್ನೂ ತನ್ನ ಕುಡಿತಕ್ಕಾಗಿ ಬಳಸಿ ಅವಳನ್ನು ಹಿಂಸಿಸುವ ಪ್ರಚಂಡ ಪಾಪಿಗೆ ಯಾವ ಶಿಕ್ಷೆ ಕೊಟ್ಟರೂ ತಪ್ಪೇ?
ತನ್ನ ಹೆಂಡತಿ ದಿನಾಲೂ ಸಿಕ್ಕ ಸಿಕ್ಕವರ ಬೈಕ್ ನಲ್ಲಿ ಓಡಾಡುತ್ತಿದ್ದರೂ, ಸಂಜೆ ಕೆಲಸ ಮುಗಿಸಿ, ಪ್ರಿಯತಮನ ಜೊತೆಗೆ ಕ್ರೀಮ್ ಪಾರ್ಲರ್ ,ಶಾಪಿಂಗ್ ಅಂತ ಸುತ್ತಿ ಸಂಜೆ ಮನೆಗೆ ಬರುವಾಗ ಮನೆಯಲ್ಲೆ ಇದ್ದು ಅವಳಿಗೆ ಕಾಫಿ-ತಿಂಡಿ ಮಾಡಿ ಕೊಟ್ಟು,ಅವಳ ಬಟ್ಟೆ ಒಗೆದು, ಪಾತ್ರೆ ತೊಳೆದು ತಿನ್ನಿಸಿ ಮಲಗಿಸಿದ ಬಳಿಕ, ಹಗಲಿಡೀ ದುಡಿದು ಬಳಲಿ ಬಂದ ಪಕ್ಕದ ಮನೆಯ ಒಂಟಿ ಮಹಿಳೆಯರು ಏನು ಮಾಡುತ್ತಾರೆ,ಹೇಗಿರುತ್ತಾರೆ ಎಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು, ಕಿಟಕಿ ಪರದೆ ಎತ್ತಿಕೊಂಡು ಇಣುಕುವ ಹೆಣ್ಣಿಗ ಪ್ರಾಣಿಗೆ ಬಳೆ ತೊಡಿಸಿ, ಸೀರೆ ಉಡಿಸಿ ಊರಲ್ಲಿ ಮೆರವಣಿಗೆ ಮಾಡಿಸಿ ಪ್ರತಿ ಹೆಣ್ಣಿನಿಂದ ಕಲ್ಲು ಹೊಡೆಸಬೇಕೆನಿಸುವುದು ತಪ್ಪೇ?
ಮನೆ,ಸಂಸಾರ,ತಂದೆ-ತಾಯಿ,ಒಡ ಹುಟ್ಟಿದವರನ್ನೂ ಬಿಟ್ಟು 'ನನ್ನ ಜೀವನ,ನನ್ನ ಕುಟುಂಬ,ನನ್ನ ಗಂಡ' ಎಂದು ಬಂದು ಕುಟುಂಬಕ್ಕಾಗಿ ಹಗಲಿರುಳು ದುಡಿದು, ಸುಂದರ ಕುಟುಂಬದ ಕನಸು ಕಟ್ಟುತ್ತಾ ಖುಷಿ ಪಡುವವಳಿಗೆ ಯಾರೋ ಗೆಳೆಯರ ಕರೆ ಬಂದಾಗ ಸಂಶಯದ ದೃಷ್ಟಿಯಲ್ಲಿ ನೋಡುವವನನ್ನು ಹಾಗೆಯೇ ನುಂಗಿ ನೀರು ಕುಡಿದು, ಕರಗಿಸಿ,ಹುಟ್ಟೇ ಇಲ್ಲ ಅನ್ನಿಸಿಬಿಡಬೇಕೆನಿಸುವುದು ಸರಿಯಲ್ಲವೇ?
ಯಾವುದೇ ಹೆಣ್ಣು 'ತನ್ನ ಗಂಡ,ತನ್ನ ಮನೆ,ಪುಟ್ಟ ಸಂಸಾರ, ಗಂಡನೊಡನೆ ಸುತ್ತಾಟ, ಗಿಫ್ಟ್, ಮುದ್ದು ಮಕ್ಕಳು, ನೆಮ್ಮದಿ, ಚಿನ್ನ,ಸೀರೆ,ಗಂಡ-ತನಗೆ ಒಳ್ಳೆ ಹೆಸರು,ಸನ್ಮಾನ... ಹೀಗೆ ಕನಸು ಕಾಣುತ್ತಾ ಹೋಗುವಳೇ ಹೊರತು ಕುಟುಂಬದ ಹೊರಗಿಲ್ಲ ಆಲೋಚನೆ.
ಹೆಣ್ಣಿನ ಪುಟ್ಟ ಪುಟ್ಟ ಆಸೆಗಳನ್ನು ಈಡೇರಿಸಿ,ಸಂತಸವಾಗಿಡಲಾರದ ಗಂಡ, ಕುಡುಕ, ಸಂಸಾರದ ಜವಾಬ್ದಾರಿಯಿಲ್ಲದವ, ಪಕ್ಕದ ಮನೆಯತ್ತ ದೃಷ್ಟಿ ನೆಟ್ಟವ, ಹೆಣ್ಣನ್ನು ಹಾಳು ಮಾಡುವ ಕಟುಕ, ಸಣ್ಣ ಮಕ್ಕಳನ್ನು ಲೈಂಗಿಕ ಅತ್ಯಾಚಾರಕ್ಕಾಗಿ ಬಳಸಿಕೊಳ್ಳುವವ, ಚಿಕ್ಕ ಪುಟ್ಟ ಹೆಣ್ಣು ಮಕ್ಕಳ ಕೆನ್ನೆ ಹಿಂಡಿ ಮಜಾ ತಗೊಳ್ಳುವ 'ನೆಂಟ 'ಎನ್ನಿಸಿ ಕೊಂಡವ, ತನ್ನ ದಾಹಕ್ಕಾಗಿ ಬಡ ಹೆಣ್ಣುಮಕ್ಕಳನ್ನು ಬಳಸಿಕೊಳ್ಳುವ ದುಡ್ಡಿನವ, ಹೆಣ್ಣು ಮಕ್ಕಳನ್ನು ಮಾರಿ ತಾನು ಸಂಪಾದಿಸಿಕೊಳ್ಳುವ ಕಟುಕ ಇಂಥವರನ್ನೆಲ್ಲ ಸಾಲಾಗಿ ನಿಲ್ಲಿಸಿ ನೇಣು ಹಾಕಿದರೆ ತಪ್ಪಿದೆಯೇ? ನೀವೇನಂತೀರಿ?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ