ನಿನ್ನ ನೋಟ (ಭಾವಗೀತೆ)
ಚೆಲುವೆ ನಿನ್ನ ಓರೆ ನೋಟ
ಅಂತರಾಳ ತಲುಪಿದೆ!
ಕಣ್ಣ ಕಣ್ಣ ರಂಗಗಿನಾಟ
ಪಿಸುಮಾತನು ಮರೆಸಿದೆ//
ಕಣ್ಣ ತುದಿಯ ತುಂಟ ನೋಟ
ನೂರು ಮಾತು ಹೇಳಿದೆ!
ಮನದ ಮಾತು ಮೌನವಾಗಿ
ಹೃದಯದಲ್ಲಿ ಕುಳಿತಿದೆ//
ಭಾವನೆಗಳು ಉಕ್ಕಿ ಉಕ್ಕಿ
ಮನವು ಹಗುರವಾಗಿದೆ!
ನನ್ನ ಜೀವಕ್ಕೊಂದು ಜೀವ
ಸಿಕ್ಕ ಖುಷಿಯು ಆಗಿದೆ//
ಮೌನದಲ್ಲೂ ನೂರು ಮಾತು
ಬದುಕು ಸೊಗಸು ಅನಿಸಿದೆ!
ಬಾಳಿನಲ್ಲಿ ನನಗೆ ನೀನು
ನಿನಗೆ ನಾನೆ ಎನಿಸಿದೆ//
@ಪ್ರೇಮ್@
2.1.2018
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ