ಮನದ ಬಾಗಿಲು ತೆರೆ
ಮನದ ಕಪ್ಪು ಕತ್ತಲೆ ಕಳೆದು,
ಬಾಗಿಲ ತಟ್ಟಿ ತೆರೆಯೆ ಬೆಳೆದು,
ಕನಕನ ಕಿಂಡಿಯ ರೂಪದಿ ನಿಂತ
ಎದೆ ಕದವ ಬಿಡಿಸಿ ನಾವೇ ಸ್ವಂತ....
ಕಾಣದ ಕೈಗಳು ಎದೆ ಬಾಗಿಲ ತಟ್ಟಿ,
ಬೆಳಕ ಓಡಿಸಿ,ಇರುಳ ನಿಶೆಯ ಮೆಟ್ಟಿ,
ನಿಜ ಜೀವನದ ದಾಹವ ತೀರಿಸಿ,
ದೇಹಕೆ,ಮನಕೆ ಗೆಲುವನು ಹರಸಿ...
ಮನವೇ ಮರ್ಕಟ ಹೋರಾಟ ಸಂತತ,
ನಾ ಮೆಚ್ಚಲು ನಾ ದುಡಿಯುವೆನನವರತ,
ದೇವರು ಕೊಡುವನು ಕಷ್ಟವ ಪಟ್ಟರೆ,
ನೆರಳೂ ಜತೆ ಬರದು ಸುಮ್ಮನೆ ಇದ್ದರೆ...
ಹೃದಯದ ಮಾತು ಎದೆಕದ ತಟ್ಟಲಿ,
ಮೆದುಳಿನ ಧ್ಯಾನವ ಮೈಮನ ಹಿಡಿಯಲಿ,
ತಾನೇ ತನ್ನಯ ದಾರಿಯ ಹುಡುಕುತ,
ಜೀವನ ದಾರಿಯ ಸೇರುವ ಧಾವಂತ....
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ