ಸೋಮವಾರ, ಡಿಸೆಂಬರ್ 9, 2019

1289. ಜೀ-ವನ

ಜೀ-ವನ

ವನವಿದು ಬದುಕು ಹಸಿರಿನ ಆಗರ
ನಗುವಲು ನೋವು ಕ್ಷಣಗಳ ಸಾಗರ.
ಮನಗಳ ಮಿಲನ ಭಾವದ ಜನನ
ಮಿದುಳಿಗು ಹೃದಯಕೂ ತಂತಾನೆ ತನನ

ಗೊಂದಲ ಗೋಪುರ ನಲಿವುದೋ ನಿಲುವುದೋ
ನಿಂತರೆ ದೂಕು ಕುಂತರೆ ಎಳೆತವುದು
ದೇವನ ಗಡಿಗೆಲಿ ಸರ್ವರೂ ಸಮಾನರು..

ಜಗಳವು ಸಣ್ಣ ವಿಷಯದ ಕುರಿತು
ಅಳುವದು ಬರುವುದು ಜತೆಯಲೆ ಬೆರೆತು
ತೊಳಲಾಟದ ಗಳಿಗೆಯು ಹೋಗುವೆ ಮೊಳೆತು..

ಹೊಸತು ಹಳತರ ಸಮಾಗಮ ಇಲ್ಲಿ
ಕಷ್ಟದಿ ದಿನಗಳ ಸಾಗಿಸುವುದ ಕಲಿ
ಹಣವೆಂಬ ನೋಟಿಗೆ ಬೆಲೆಯಿಹುದಿಲ್ಲಿ..

ಮನುಷ್ಯತ್ವ ಕಲಿತರೆ ಏರುವೆ ನೀನು
ಸಹಾಯದಿ ಬದುಕಲು ಜೀವನ ಜೇನು
ಹಿಗ್ಗದೆ ಕುಗ್ಗದೆ ನೆಮ್ಮದಿ ಕಾಣು..
@ಪ್ರೇಮ್@
10.12.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ