ಭಾವಗೀತೆ
ನನ್ನೊಲವಿಗೆ...
ನನ್ನೊಲವ ಹೃದಯ ಗುಡಿಯಲಿ
ಬಚ್ಚಿಟ್ಟು ನಿನ್ನ ಪೂಜಿಸುತಿರುವೆ
ಪ್ರತಿದಿನ ಪ್ರತಿಕ್ಷಣ ಇನಿಯಾ
ನೀ ಬರುವೆಯೆಂಬ ಭಾವದಿ
ನೀ ಜೊತೆಯಲಿರುವೆಯೆಂಬ ಮನದಿ...
ಬಳಿಯಲಿರದಿದ್ದರೂ ದೇಹ
ನೀ ಬಳಿಯಿರುವೆ ಪ್ರೀತಿಯಲಿ ಸದಾ
ಬದುಕಿಗಾಧಾರ ನಿನ್ನೊಲವೆಂದೂ
ನಾನಿರುವೆ ನಿನಗಾಗಿ ಎಂದೆಂದೂ..
ಮನದ ಮಾತುಗಳೊಂದೆ
ಮೌನ ಭಾಷೆಯೂ ಒಂದೆ
ಒಲವಿನಲಿ ನಲಿವು ಗೆಲುವೊಂದೇ
ನೀ ಜೊತೆಯಿರೆ ನಾನೆಂದೂ ಮುಂದೆ
ಒಡಲ ಪ್ರೇಮವದು ಸದಾ
ನನ್ನೊಡನಿರುವುದು, ನಾ ಫಿದಾ
ನಿನ್ನ ಅಮೂಲ್ಯ ಪ್ರೀತಿರತ್ನಕೆ
ಬೇರೂರಿರುವೆ ಮನದಾಳಕೆ..
@ಪ್ರೇಮ್@
08.12.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ