ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -150
ಇಂದು ಸಂಭವಿಸುತ್ತಿರುವ ಎಲ್ಲಾ ಪ್ರಾಕೃತಿಕ ವಿಕೋಪಗಳು ಮಾನವನ ಕೊಡುಗೆಯೇ? ಮಾನವನಿಂದಾಗಿಯೇ ಎಲ್ಲಾ ಪ್ರಾಣಿ ಪಕ್ಷಿ, ಹುಳ ಹುಪ್ಪಟೆ ಕೀಟ ಜನತುಗಳಿಗೆ ತೊಂದರೆ ಆಗುತ್ತಿದೆ. ಅವುಗಳು ತಾಳಿಕೊಳ್ಳಲು ಆಗದ ಮಟ್ಟಕ್ಕೆ ಪ್ರಕೃತಿಯನ್ನು ಬದಲಾಯಿಸಿ ಬಿಟ್ಟಿದ್ದಾನೆ ಮಾನವ. ಕೆಲವೊಂದು ಪ್ರಾಣಿ, ಪಕ್ಷಿಗಳು ಈ ಭೂಮಿಯ ಮೇಲೆ ಬದುಕಲು ಸಾಧ್ಯವೇ ಇಲ್ಲ. ಜಲ ಮಾಲಿನ್ಯದಲ್ಲಿ ನಿತ್ಯ ನೀರಿನಲ್ಲಿ ಸಾಯುತ್ತಿರುವ ಜಲಜೀವಿಗಳ ಸಂಖ್ಯೆ ಲೆಖ್ಖಕ್ಕೇ ಸಿಗದು.
ಮಾನವ ತನಗೆ ತಾನೇ ಹೇಳಿಕೊಳ್ಳುವ ಮಾತೆಂದರೆ ತಾನು ಉನ್ನತ ಮಟ್ಟದ, ಬುದ್ಧಿ ಇರುವ ಪ್ರಾಣಿ ಎಂದು. ಆದರೆ ಮಾಡುವ ಕಾರ್ಯ ಮಾತ್ರ ಯಾವ ಪ್ರಾಣಿಯೂ ಮಾಡದ, ಪರ ಪ್ರಾಣಿಗಳಿಗೆ ನೋವು ಕೊಡುವ, ಸಾಯಿಸುವ ಕಾರ್ಯ. ಇಂತಹ ಹಲವಾರು ಘಟನೆಗಳಿಗೆ ಮಾನವನ ಕೀಳು ಮಟ್ಟದ ಕೆಲಸಗಳೇ ಕಾರಣ. ಇವು ಪ್ರಕೃತಿ ವಿಕೋಪವನ್ನೂ ತರುತ್ತವೆ.
ಎಲ್ಲಾ ಪ್ರಾಣಿಗಳೂ ಆಹಾರ, ನಿದ್ದೆ, ಸಂತಾನೋತ್ಪತ್ತಿ ಮತ್ತು ಬದುಕಲು ಹೋರಾಡುತ್ತವೆ, ಸಿಟ್ಟಿಗೆ ಒಳಗಾಗುತ್ತವೆ, ಕಚ್ಚುತ್ತವೆ, ಹೆದರಿಸುತ್ತವೆ, ಓಡಿಸುತ್ತವೆ. ಆದರೆ ಮಾನವನ ಹೋರಾಟವೇ ಬೇರೆ. ನ್ಯಾಯಕ್ಕಾಗಿ, ಹಣಕ್ಕಾಗಿ, ಹೆಣ್ಣಿಗಾಗಿ, ಹಲವಾರು ತಲೆಮಾರುಗಳ ವರೆಗೆ ಕುಳಿತು ತಿನ್ನುವ ಆಸ್ತಿಗಾಗಿ, ಶೋಕಿಗಾಗಿ! ಕಷ್ಟ ಪಟ್ಟರೆ ತಾನೆ ದುಃಖದ ಬೆಲೆ ಗೊತ್ತಾಗುವುದು? ಈಗಿನ ಕಾಲದ ಯುವಕರ ಮನಸ್ಥಿತಿ ಹೇಗಿದೆ ಎಂದರೆ ಯಾರಾದರೂ ನೆಂಟರ, ಗೆಳೆಯರ, ಬಂಧುಗಳ ಮನೆಗೆ ಹೋಗುವಾಗ ಅಲ್ಲಿನ ಮಕ್ಕಳಿಗೆ, ಹಿರಿಯರಿಗೆ ಒಂಚೂರು ತಿಂಡಿ ತೆಗೆದುಕೊಂಡು ಹೋಗುವ ಪರಿಪಾಠವೂ ಅವರಿಗೆ ಇಲ್ಲ. ಇದನ್ನು ಅತಿಯಾದ ಮುದ್ದಿನಿಂದ ಪೋಷಕರು ಅವರಲ್ಲಿ ಬೆಳೆಸಿಲ್ಲವೋ, ಮನೆ, ಕಚೇರಿ ಇಷ್ಟೇ ಪ್ರಪಂಚವೋ, ತಾನಿರುವ ಮನೆಗೆ ಏನಾದರೂ ತೆಗೆದುಕೊಂಡು ಹೋದರೆ ಏನೇನ್ನೂವರೋ ಎಂಬ ಭಯವೋ ಗೊತ್ತಾಗದು! ಹೊರಗಿನ, ಬೇಕರಿ ತಿಂಡಿ ತಿಂದರೆ ಆರೋಗ್ಯ ಹಾಳಾಗುತ್ತದೆ, ಹಾಗಾಗಿ ಹೊರಗೆ ಚಾಟ್ಸ್, ಚೈನೀಸ್ ಫುಡ್ ತಿನ್ನುವ ನಮ್ಮ
ಮಕ್ಕಳಿರುವಾಗ ತಿಂಡಿ, ಮಹಿಳೆಯರು ಇರುವಾಗ ಬಟ್ಟೆ, ಪಾತ್ರೆ, ಮೇಕ್ ಅಪ್ ಐಟಂ ಇವೆಲ್ಲ ನಾವು ಹೋದ ಮನೆಗೆ ತೆಗೆದುಕೊಂಡು ಹೋಗುವುದು ಸರ್ವೇ ಸಾಮಾನ್ಯ.ಆದರೆ ಈಗಿನ ಜನರೇಷನ್ ತೀರಾ ವಿರುದ್ಧ. ಹೆಚ್ಚು ತಿನ್ನಲ್ಲ. ಬ್ರೆಡ್, ಬನ್ ಅವರಿಷ್ಟದ ಊಟ. ಎರಡು ಸಣ್ಣ ಚಪಾತಿ, ಎರಡೇ ಇಡ್ಲಿ. ಹೀಗೆ..ಆದರೆ ಹೊಟ್ಟೆ ತುಂಬ ತಿಂದು ಬೆಳೆದವರು ನಾವು. ನಮಗೆ ಹಸಿವು ತಡೆಯಲು ನಮ್ಮ ಈ ಜೆನರೇಷನ್ ಗ್ಯಾಪ್ . ಎಲ್ಲರ ಬದುಕಲ್ಲೂ ಇದೆ. ಅಮ್ಮ ಒಳ್ಳೆಯ ಮಹಿಳೆ, ಮುಗ್ದೆ. ಮಗನಿಗೆ ಪ್ರತಿಯೊಂದು ವಿಷಯವನ್ನೂ ತಿಳಿ ಹೇಳಿ ಹೇಳಿ ಸಾಕಾಗಿ ಹೋಗುತ್ತದೆ. ಆದರೆ ಅಮ್ಮ ಅಲ್ವಾ..ಹೇಗೋ ಬೈದು ಹೇಳಿ ಸಹಿಸಿಕೊಳ್ಳುತ್ತಾನೆ. "ಇವರ ಗುಣವೇ ಹೀಗೆ, ಏನೂ ಮಾಡಲು ಆಗದು " ಅಂದುಕೊಳ್ಳುತ್ತಾನೆ.
ನಮ್ಮ ಪಕ್ಕದ ಮನೆಯ ಸಂತು ಅಂತೂ ಇಂಜಿನಿಯರಿಂಗ್ ಆದ ಕೂಡಲೇ ಅಮ್ಮನಿಗೆ ಹೇಳಿದ್ದ, "ನಾನು ಮದುವೆ ಆದರೆ ನನ್ನ ಮಡದಿಯನ್ನು ಕರೆತಂದು ನಿನ್ನ ಜೊತೆಗೆ ಬಿಡಲಾರೆ. ಅದಕ್ಕೆ ನನಗೊಂದು ಮನೆ ಬೇಕು. ನೀನು ಅಮ್ಮ, ಅವಳು ನಂಬಿ ಬಂದ ಹೆಂಡತಿ. ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಬಂದರೆ ನಾ ಒಂದೇ ಕಡೆ ತಿರುಗಲು ಕಷ್ಟ. ನೀವಿಬ್ಬರೂ ಕಿತ್ತಾಡಿಕೊಂಡರೆ ಮಧ್ಯೆ ನಾನು ಯಾರ ಕಡೆ ಮಾತಾಡಲಿ? ಅದಕ್ಕೆ ನಾ ತಿಂಗಳಿಗೊಮ್ಮೆ ನೆಂಟರ ತರಹ ಬಂದು ಹೋಗುವೆ " ದೂರಾಲೋಚನೆ. ಇದೆ ಅಲ್ಲವೇ ಜನರೇಷನ್ ಗ್ಯಾಪ್! ತಾಯಿಗಾಗಿ, ತಂದೆಗಾಗಿ ಮಡದಿಯನ್ನು ಬಿಟ್ಟವರು ಅನೇಕ ಮಂದಿ. ಮಡದಿಗಾಗಿ, ಗಂಡನಿಗಾಗಿ ಹೆತ್ತವರನ್ನು ತೊರೆಯುವವರೂ ಕೆಲವರು.
ಕಾಲ ಬದಲಾಗದು. ಜನರ ಮನಸ್ಸಿನ ಭಾವನೆಗಳು ಬದಲಾಗಿವೆ. ಬಸ್ಸಿನ ಬದಲು ಕಾರುಗಳು ಬಂದು ಮನಸ್ಸುಗಳೂ ಸಣ್ಣದಾಗಿವೆ. ಪರರ ಜೊತೆ ಹೊಂದಾಣಿಕೆ ಮಾಡಿಕೊಂಡು ಬಾಳುವ ಗುಣ ಈಗಿಲ್ಲ. ನಾನು, ನನ್ನ ಮಕ್ಕಳು, ನನ್ನ ಕುಟುಂಬ ಅಷ್ಟೇ. ಅಕ್ಕ ತಂಗಿಯರಿಗೆ ಆಸ್ತಿಯಲ್ಲಿ ಪಾಲು ಕೊಡಬೇಕಾಗುತ್ತದೆ ಎಂದು ಅವರನ್ನು ಬಡಿಗೆಯಲ್ಲಿ ಬಡಿದು ಅವರ ಕಾಲು ಮುರಿದು ತವರು ಮನೆಗೆ ಅವರು ಬಾರದ ಹಾಗೆ ಕಾರ್ಯ ಅಣ್ಣ ಅತ್ತಿಗೆಯರು ಇರುವ ಈ ಕಾಲ. ಇನ್ನು ಪರಿಸರ ಬಿಟ್ಟಾರೆಯೇ. ತಾವು ಉಗಿಯಲು, ತಿಂದು ಬೇಡದ್ದ ಬಿಸಾಕಲು, ಪ್ಲಾಸ್ಟಿಕ್ ಬಾಟಲಿಗಳ ಎಸೆಯಲು ಭೂಮಿ. ಮತ್ತೆ ಅದನ್ನು ದುಡ್ಡು ಕೊಟ್ಟು ಕೊಳ್ಳುವುದು, ಮಾರುವುದು . ಭೂುಮಿ ತಾಯಿ ನೋವುಂಡ ಹಡೆದವ್ವನಂತೆ. ಅವಳಿಗೆ ಮತ್ತೂ ಮಕ್ಕಳಿಂದ ನೋವೇ.
ಇನ್ನು ಇದನ್ನು ಸರಿ ಮಾಡುವವರು ಯಾರು? ಬುದ್ದಿವಂತ ಮಾನವನೇ ಮಾಡಿದ ದುಷ್ಟ ಕಾರ್ಯಕ್ಕೆ ಪರರು ಸರಿ ಮಾಡಲುಂಟೆ? ಅಲ್ಲವೇ? ನೀವೇನಂತೀರಿ?
@ಹನಿಬಿಂದು@
17.09.2022
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ