ಶುಕ್ರವಾರ, ಏಪ್ರಿಲ್ 5, 2024

ಎಲ್ಲರೂ

ಎಲ್ಲರೂ

ಬದುಕೆಂದರೆ ಹೀಗೆಯೇ..
ಎಲ್ಲರದ್ದೂ ಒಂಥರಾ ಮುಖವಾಡ..
ಮಗುವಿಗೆ ಹೇಳಲಾಗುತ್ತಿದೆಯೇ ಆಕೆ ದುಡಿಯುವ ' ವೇಶ್ಯೆ ' ಎಂಬ ಕಾಯಕದ ಬಗ್ಗೆ?
ಮಡದಿಗೆ ತಿಳಿಸಬಹುದೆ "ನಿನ್ನಲಿ ನಾ ಸಂತುಷ್ಟನಲ್ಲ, ನನ್ನ ಪ್ರಿಯತಮೆಯೇ ನನಗೆಲ್ಲ" ಅಂತ? 

ತಂದೆಗೆ ಈಗಲೇ ಅದು ಹೇಗೆ ತಾನೇ ಹೇಳಲು ಸಾಧ್ಯ... 'ಆಕೆಯೇ ನನ್ನ ಬಾಳ ಸ್ನೇಹಿತೆ ' ಎಂದು?
ತಂಗಿಯ ಕಾಲೇಜಿನ ಫೀಸು ಕಟ್ಟಲು ಲಾರಿಯಿಂದ ಸಾಮಾನು ಇಳಿಸಿ ಹಮಾಲಿ ಕೆಲಸ ಮಾಡಿದ್ದನ್ನು ಹೇಗೆ ಹೇಳುವುದು?

ತಮ್ಮನ ಕಲಿಕೆಗಾಗಿ ತಾನು ಕಲಿತು ಅವನಿಗೆ ಕಳಿಸಿದ್ದು ಅವನಿಗೆ ಗೊತ್ತಾದರೆ ಮರ್ಯಾದೆ ಪ್ರಶ್ನೆ. 
ಗೆಳತಿಯ ಗೆಳೆಯ ಕರೆ ಮಾಡಿ ಅವಳ ಬಗ್ಗೆ ಕೇಳಿದ್ದನ್ನು ಅವಳಿಗೆ ಹೇಳಿದರೆ ತಪ್ಪಾಗುತ್ತದೆ..

ಇನ್ನು ಸಮಾಜ ಎಂಬ ದೊಡ್ಡ ಶತ್ರುಗಳ ಮಿತ್ರ, ಮಿತ್ರರ ಶತ್ರು...
ಅದೇ ಆ ನಾಲ್ಕು ಜನ..
ಅವರ ಮುಂದೆ "ನಾವು ಚೆನ್ನಾಗಿದ್ದೇೆವೆ" ಎಂದು ನಾವು ತೋರಿಸಲೇ ಬೇಕಲ್ಲವೇ?

ಅದಕ್ಕಾಗಿಯೇ ಬದುಕೆಂಬ ಈ ಮುಖವಾಡ..
ಇಲ್ಲಿ ಎಲ್ಲವೂ ಮುಖವಾಡಗಳೆ..
ಒಳಗೊಂದು..ಹೊರಗೊಂದು..
@ಹನಿಬಿಂದು@
06.04.2024

1 ಕಾಮೆಂಟ್‌: