ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-221
ಯಾವುದೇ ಕಲಿಕೆಯು ಕೂಡ ಇಷ್ಟಪಟ್ಟು ಸಂತಸದಿಂದ ಕಲಿಯಬೇಕೇ ಹೊರತು ಸ್ಪರ್ಧೆಗಾಗಿ ಕಲಿಯುವುದು ಅದು ಉತ್ತಮ ಕಲಿಕೆಯಾಗಿ ಪರಿಣಮಿಸುವುದಿಲ್ಲ. ಬದಲಾಗಿ ಮಗು ಜೀವನ ಪೂರ್ತಿ ಸ್ಪರ್ಧಿಯಾಗಿ ಬದುಕಬೇಕಾಗುತ್ತದೆ. ಇದು ನನ್ನ ಅನಿಸಿಕೆ. ಇಂದಿನ ಶಿಕ್ಷಣ ಕ್ರಮವು ಎಲ್ಲ ವಿದ್ಯಾರ್ಥಿಗಳನ್ನು ಕೂಡ ಸ್ಪರ್ಧಿಗಳ ರೀತಿಯಲ್ಲಿ ಬೆಳೆಸುತ್ತಾ ಜೀವನದುದ್ದಕ್ಕೂ ಅವರು ಸ್ಪರ್ಧೆಯಲ್ಲೇ ಬೆಳೆಸುವ ಹಾಗೆ ಮಾಡುತ್ತದೆ ಎಂದು ನನ್ನ ಅನಿಸಿಕೆ. ಜೀವನದುದ್ದಕ್ಕೂ ಮಗುವೊಂದು ತಾನು ಇತರರಿಗಿಂತ ಮುಂದೆ ಸಾಗಬೇಕು ತನ್ನ ಜೊತೆಗಿರುವವರಿಗಿಂತ ನಾನು ಮಾಡಿದ ಕಾರ್ಯವೇ ಉತ್ತಮವಾಗಬೇಕು ಹೀಗೆ ಸ್ಪರ್ಧೆಯಾಗಿಯೇ ಬೆಳೆಯುತ್ತಾ ಬಂದರೆ ಅವನ ಜೀವನದಲ್ಲಿ ಅವನು ಕಾಣುವ ಸುಖವಾದರೂ ಏನು? ಒಂದನೇ ತರಗತಿಯಿಂದ ಪಿಯುಸಿ ಅವರಿಗೆ ಅಂಕಗಳಿಗಾಗಿ ಸ್ಪರ್ಧೆ, ನಡು ನಡುವೆ ವಿವಿಧ ಆಟೋಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗಾಗಿ ಸ್ಪರ್ಧೆ, ಮನೆಯಲ್ಲಿ ಇತರ ಮಕ್ಕಳೊಂದಿಗೆ ಪೈಪೋಟಿ! ಹಾಗಾದರೆ ಜೀವನದ ಸವಿಯನ್ನು ಸವಿಯುವುದು ಯಾವಾಗ? ನೀವು ಹೇಳಬಹುದು ಇದು ಯಾಂತ್ರಿಕರು ಯುಗ ವೈಜ್ಞಾನಿಕ ಯುಗ ಹಾಗೂ ಸ್ಪರ್ಧೆಗಳ ಯುಗವೆಂದು. ಆದರೆ ಮನುಷ್ಯನ ಜನ್ಮವು ಒಂದಿಷ್ಟು ವರ್ಷ ಮಾತ್ರ. ಹತ್ತು ವರ್ಷಗಳು ಅವನ ಸ್ಪರ್ಧೆಗಳಲ್ಲಿಯೇ ಬದುಕಿದರೆ, ಸಮಾಜ,ಕುಟುಂಬ, ಕುಟುಂಬದಲ್ಲಿರುವ ಸಂತೋಷ, ನೆಮ್ಮದಿ ಇವುಗಳೆಲ್ಲ ಹೇಗೆ ಸಾಧ್ಯ? ನಾವು ನಮ್ಮ ಬಂಧುಗಳ ಮದುವೆಯಂತೆ ಹೋಗುತ್ತಿದ್ದೇವೆ ಎಂದಾದರೆ ನಾನು ಡಾಕ್ಟರ್ ನಾನು ಇಂಜಿನಿಯರ್ ನಾನು ಶಿಕ್ಷಕ ನಾನು ಮೆಕ್ಯಾನಿಕ್ ಇವನ್ನೆಲ್ಲ ಬದಿಗಿಟ್ಟು ಬಂಧುವಾಗಿ ನಮ್ಮ ಉತ್ತಮ ಸಮಯವನ್ನು ಅವರಿಗೆ ಕೊಟ್ಟು ನಮ್ಮ ಮಾನಸಿಕ ಸಂತೋಷವನ್ನು ಅವರ ಜೊತೆಗಿದ್ದು ಅವರ ಸಂತೋಷದಲ್ಲಿ ನಾವು ಕೂಡ ಪಾಲು ಪಡೆಯಲು ಹೋಗುತ್ತವೆ. ಅಲ್ಲಿ ಜೀವನದ ಯಾವ ಸ್ಪರ್ಧೆಗಳು ಇಲ್ಲ . ಬದಲಾಗಿ ಮಾನವ ಬದುಕಿನ ಒಂದು ಮುಖ ಅಷ್ಟೇ. ಅಲ್ಲಿ ಸಿಗುವ ಸಂತೋಷ ಖುಷಿ ಬದುಕಿನಲ್ಲಿ ಮತ್ತೆಂದೂ ನಾವು ಪಡೆಯಲಾರೆವು. ಹಾಗೆಯೇ ಜಾತ್ರೆ ಕೋಲ ಮನೆಯಲ್ಲಿನ ಪೂಜೆಗಳು ಇವುಗಳಲ್ಲಿ ಸಿಗುವ ಮಾನಸಿಕ ನೆಮ್ಮದಿಯು ಸ್ಪರ್ಧೆಗಳಲ್ಲಿ ಸಿಗಲಾರದು. ಒಂದು ವೇಳೆ ಬದುಕಿನಲ್ಲಿ ಸ್ಪರ್ಧೆ ಕಲಿಕೆ ಅಥವಾ ಸ್ಪರ್ಧೆ ಮುಖ್ಯ ಎನ್ನುವುದಾದರೆ ಯಾರು ಕೂಡಾ ದೇವಾಲಯಗಳಿಗೆ ಹೋಗಿ ಪೂಜೆ ಮಾಡಿ ಬರುತ್ತಿರಲಿಲ್ಲ ಅಥವಾ ಪ್ರಾರ್ಥನೆಗೂ ಹೋಗುತ್ತಿರಲಿಲ್ಲ. ಮಾನವನ ಬದುಕಿನಲ್ಲಿ ಅವನ ಬದುಕಿಗಾಗಿ ಒಂದಷ್ಟು ಹಣವನ್ನು ಗಳಿಸುವುದು ತುಂಬಾ ಮುಖ್ಯ. ಆದರೆ ಅದಕ್ಕಿಂತಲೂ ಮುಖ್ಯ ಮಾನಸಿಕ ನೆಮ್ಮದಿ. ನೆಮ್ಮದಿ ಇಲ್ಲದೆ ಇತ್ತು ಎಷ್ಟು ದುಡಿದರು ಏನು ಫಲ? ದುಡಿದ ದುಡ್ಡನ್ನೆಲ್ಲ ಆಸ್ಪತ್ರೆಗೆ ಹಾಕಬೇಕಾದ ಅನಿವಾರ್ಯ ಕಾರಣ ಮಾನಸಿಕ ನೆಮ್ಮದಿ ಇಲ್ಲದವನಿಗೆ ಬರುತ್ತದೆ. ಆದುದರಿಂದಲೇ ಇತ್ತೀಚಿನ ದಿನಗಳಲ್ಲಿ ಮಠ, ಧ್ಯಾನ, ಯೋಗ ಮೊದಲಾದವು ತುಂಬಾ ಹೆಸರುವಾಸಿಯಾಗಿವೆ. ಕರೋನಾದ ಸಮಯದಲ್ಲಿ ಮನುಷ್ಯರು ಮದ್ದು ಕುಡಿದುದಕ್ಕಿಂತ ಹೆಚ್ಚು ಕಷಾಯ ಕುಡಿದಿದ್ದಾರೆ. ಕಾರಣ ನೆಮ್ಮದಿ.
ಇತ್ತೀಚೆಗೆ ವಿದ್ಯಾರ್ಥಿಗಳು ಹಾಗೂ ಹಿರಿಯರು ಮಾನಸಿಕ ನೆಮ್ಮದಿಯನ್ನು ಹುಡುಕಿಕೊಂಡು ಬದುಕುತ್ತಿದ್ದಾರೆ. ಅದಕ್ಕೆ ಇಂಜಿನಿಯರಿಂಗ್ ಮಾಡಿದ ಅಥವಾ ಎಂಬಿಎ ಮಾಡಿದ, ದೊಡ್ಡ ದೊಡ್ಡ ನಗರಗಳಲ್ಲಿ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಂತಹ ಹಲವಾರು ಜನರು ಅಲ್ಲಿನ ಐದಂಕಿ ಸಂಬಳದ ಕೆಲಸವನ್ನು ಬಿಟ್ಟು ಮನಸ್ಸಿಗೆ ನೆಮ್ಮದಿಯಾಗಿ ನಾವು ಹಳ್ಳಿಗಳಲ್ಲಿ ಬದುಕುತ್ತೇವೆ ಎಂದು ಹಳ್ಳಿಯದ್ದ ಮುಖ ಮಾಡಿ ಕೃಷಿಯನ್ನು ಅವಲಂಬಿಸಿಕೊಂಡು ಬದುಕುತ್ತಿದ್ದಾರೆ. ಅದರಲ್ಲೂ ಕೂಡ ಸಾರ್ಥಕತೆ ಕಂಡು ಉತ್ತಮವಾದ ಜೀವನವನ್ನು ನಡೆಸುತ್ತಿದ್ದಾರೆ. ಅಂದರೆ ಮನುಷ್ಯ ಕೊನೆಯದಾಗಿ ಹಣಕ್ಕಿಂತಲೂ ಹೆಚ್ಚಾಗಿ ಮಾನಸಿಕ ನೆಮ್ಮದಿಗೆ ಬೆಲೆ ಕೊಡುತ್ತಾನೆ ಎಂದು ಅರ್ಥ ಅಲ್ಲವೇ?
ತನ್ನ ಹೆಸರಿನ ಮುಂದೆ ಹಲವಾರು ಡಿಗ್ರಿಗಳಿವೆ, ಎಲ್ಲಾ ಪದವಿಗಳನ್ನು ಮೊದಲ ರಾಂಕ್ ಪಡೆದೆ ಉತ್ತೀರ್ಣನಾಗಿದ್ದಾನೆ ಎಂದಿದ್ದರೂ ಕೂಡ ಅವನು ಮಾನಸಿಕವಾಗಿ ಇನ್ನೊಬ್ಬರ ಜೊತೆ ಹೊಂದಾಣಿಕೆಯಿಂದ ಬಾಳಿ ಬದುಕಲು ಸಾಧ್ಯವಿಲ್ಲ ಎಂದಾದರೆ ಎಲ್ಲವೂ ಯಾವ ಪ್ರಯೋಜನಕ್ಕೆ ಬರುತ್ತದೆ? ಅವನಿಗೆ ಹಲವಾರು ಜನರೊಡನೆ ಬೆರೆತು ಅವರಿಗೆ ಬೇಕಾದ ಹಾಗೆ ಹಾಗೂ ತನಗೆ ಬೇಕಾದ ಹಾಗೆ ಅವರೊಂದಿಗೆ ಹೊಂದಿಕೊಂಡು ಬದುಕುವಂತಹ ಕಲಿಕೆ ಕೊಡಬೇಕಾಗುತ್ತದೆ ಅಲ್ಲವೇ? ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ನೆಮ್ಮದಿ ಇದ್ದರೆ ಮಾತ್ರ ಬದುಕು ಸಂತ ಸಮಯವಾಗಿ ಇರುತ್ತದೆ. ಆ ನೆಮ್ಮದಿ ಇಲ್ಲದ ಬದುಕು ಸ್ಪರ್ಧೆಯಾಗಿಯೇ ಉಳಿದರೆ ಬದುಕು ನರಕವಾಗಿ ಹೋಗುತ್ತದೆ. ಅದಕ್ಕಾಗಿ ಹಲವಾರು ಪಾಶ್ಚಾತ್ಯರು ಇಂದು ಭಾರತದ ಕಡೆಗೆ ಮುಖ ಮಾಡಿ ಇಲ್ಲಿನ ಧ್ಯಾನ ಯೋಗಗಳನ್ನು ಕಲಿತು ಮಾನಸಿಕ ನೆಮ್ಮದಿಯನ್ನು ಹುಡುಕುತ್ತಿದ್ದಾರೆ. ವಿವಿಧ ಸ್ವಾಮೀಜಿಗಳು ನಡೆಸುವ ಭಜನೆ ಸತ್ಸಂಗ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಮನುಷ್ಯನ ಪಂಚೇಂದ್ರಿಯಗಳ ಜೊತೆ ಇರುವ ಆರನೆಯ ಇಂದ್ರಿಯ ಎಂದರೆ ಅದು ಮನಸ್ಸು ಮತ್ತು ಆ ಮನಸ್ಸನ್ನು ನಾವು ಆರೋಗ್ಯ ರಹಿತವಾಗಿ ಇಟ್ಟುಕೊಳ್ಳುವುದು ಅತ್ಯವಶ್ಯಕ. ಅದಕ್ಕಾಗಿ ನಮಗೆ ಸ್ಪರ್ಧೆಯಿಂದ ಕಲಿಯುವ ವಿದ್ಯಾ ಬದಲಾಗಿ ಮಾನಸಿಕ ಸಂತೋಷ ನೀಡುವ ವಿದ್ಯ ಬೇಕಾಗಿದೆ. ಗುರುಕುಲ ಪದ್ಧತಿಯಲ್ಲಿ ಕಲಿಸುತ್ತಿದ್ದಂತಹ ವಿವಿಧ ವ್ಯಕ್ತಿಗಳು ಸಂತಸವನ್ನು ನೀಡುತ್ತಿದ್ದವು. ಈಗಿನ ಗಣಿತ ಮತ್ತು ವಿಜ್ಞಾನದ ಹೇರಿಕೆಯು ಮಕ್ಕಳ ಮೇಲೆ ಯಾವ ಪರಿಣಾಮ ಬೀರಿದೆ ಎಂದರೇನು? ಮಕ್ಕಳಿಗೆ ಶಾಲೆಯಿಂದ ಹೊರಗುಳಿಯುವುದೆಂದರೆ ಬಹಳ ಇಷ್ಟ ಅಲ್ಲದೆ ಮಾನಸಿಕ ಹೊರೆ. ಹೊರಗೆ ಬಂದು ಆಟ ಆಡುವಂತಿಲ್ಲ ಬೇರೆ ತರ ಮಕ್ಕಳು ಬೆರೆಯುವಂತಿಲ್ಲ ಪ್ರತಿ ಕ್ಷಣವೂ ನಮ್ಮ ಕೂಗು ಒಂದೇ ಕಲಿ ಓದು ಬರೆ. ಇಷ್ಟೆಲ್ಲಾ ಆದಮೇಲೆ ಒಳ್ಳೆಯ ಕಡೆ ಕೆಲಸ ಸಿಕ್ಕಿದರೆ ಸಂತೋಷ ಇಲ್ಲದಿದ್ದರೆ ಅವನ ಬದುಕು ಮತ್ತು ಬೇಸರವೇ ಆಗಿ ಹೋಗುತ್ತದೆ. ಉತ್ತಮ ಕೆಲಸ ಸಿಕ್ಕಿದರು ಕೂಡ ಉತ್ತಮ ಬಾಳ ಸಂಗಾತಿ ಅಥವಾ ಬಹಳ ಸಂಗಾತಿಯೊಂದಿಗೆ ಸಂಬಂಧವೂ ಚೆನ್ನಾಗಿರಲಿಲ್ಲವೆಂದಾದರೆ ಎಷ್ಟು ದುಡಿದರು ಏನು ಪ್ರಯೋಜನ ಮತ್ತು ಬಾಳು ಹೊರಡಲಾಗಿ ಹೋಗುತ್ತದೆ. ಆಗ ನಾನು ಮತ್ತೆ ಮಾನಸಿಕ ನೆಮ್ಮದಿಗಾಗಿ ಹುಡುಕಾಟ ತೊಡಗುತ್ತಾನೆ.
ಇಂದು ಸಮಾಜದಲ್ಲಿ ಬದುಕುವವರು ಹೆಚ್ಚಿನವರು ವಿದ್ಯಾವಂತರೇ ಆಗಿದ್ದಾರೆ. ಆದರೆ ಅವರು ಸ್ಪರ್ಧೆಯಲ್ಲಿ ಕಲಿತವರು ಅಲ್ಲ, ಬದಲಾಗಿ ನಾವು ಕಲಿತಿದ್ದೇವೆ ಎಂದು ಗೊಟ್ಟಿರದೆ ತನ್ನಷ್ಟಕ್ಕೆ ತಮ್ಮ ಗುರಿ ಸಾಧನೆಗಾಗಿ ಕಲಿತವರು. ಹಿಂದಿನ ಶಿಕ್ಷಣ ಮಟ್ಟ ಅವರನ್ನು ಹೇಗೆ ಬೆಳೆಸಿದೆ ಎಂದರೆ ಹಿರಿಯರಿಗೆ ಕೊಡ ಬೇಕಾದ ಗೌರವ, ನಡೆ ನುಡಿ, ನಾಲ್ಕು ಜನರ ಜೊತೆ ಬೆರೆತು ಬಾಳುವ ಪಾಠ ಕಲಿಸಿದೆ. ಇಂದು ಹಾಗಲ್ಲ, ಮಗ ಇಂಜಿನಿಯರ್ ಆಗಿದ್ದರೂ ಕೂಡಾ ಮನೆಗೆ ಬಂದ ಬಂಧುಗಳ ಜೊತೆ ಅವನು ಕಂಪ್ಯೂಟರ್ ಬಿಟ್ಟು ಹೊರ ಬಂದು ಮಾತನಾಡುವುದು ಎಂದರೆ ಮುಖ್ಯ ಮಂತ್ರಿಗಳು ತಮ್ಮ ಆಫೀಸ್ ಬಿಟ್ಟು ಹೊರ ಬಂದು ಸಾಮಾನ್ಯ ಜನರ ಜೊತೆ ಮುಕ್ತ ಮಾತುಕತೆ ನಡೆಸಿದ ಹಾಗೆ. ಮಾತನಾಡದೆ ಅವರಿಗೆ ಯಾವ ಭಾಷೆಯೂ ಸರಿಯಾಗಿ ಬರುವುದೂ ಇಲ್ಲ. ಸಂಸ್ಕೃತಿ ಎಲ್ಲಾ ಬದಿಗೆಯೆ ಬಿಡಿ, ಇನ್ನು ಹುಡುಗಿ ಆಗಿದ್ದರೆ ಉತ್ತಮ ಬಟ್ಟೆ ಧರಿಸುತ್ತಾಳೆ ಎಂದರೆ ಗ್ರೇಟ್!
ಸಂಸ್ಕೃತಿ ಉಳಿಯಲಿ, ಭಾಷೆ, ಭಾವನೆ ಬೆಳೆಯಲಿ. ಕಲಿಕೆ ಖುಷಿಯಿಂದ ಸಾಗಲಿ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
27.01.2024
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ