ಬರಬೇಕು (ವಿಡಂಬನೆ)
ಬರಬೇಕು ಬರಬೇಕು ನಮ್ಮನೆಗೆ ತಾವು
ಬರುವಾಗ ಕಳೆಯಲಿ ಒಂದಷ್ಟು ನೋವು
ಸಹಾಯ ನೀಡಲು ಮುಂದೆ ಬರಬೇಕು
ವಿಹಾರ ಹೋಗಲೂ ಸಹಕರಿಸಬೇಕು
ಸಹವಾಸ ದೋಷದಲಿ ನಾವ್ ಬೆಳೆಯಬೇಕು
ಮಹಾಜನಗಳಂತೆ ನಾವ್ ಗಳಿಸಬೇಕು
ಬರುವಾಗ ತಿಂಡಿ ತೀರ್ಥ ಸಿಹಿ ತರಲು ಮರೆಯದಿರಿ
ಹೋಗುತ್ತ ಮಕ್ಕಳಿಗೆ ಧನ ದಾನ ತೊರೆಯದಿರಿ
ಹಿರಿಯರಿಗೆ ಮದ್ದಿಗೆ ಕೈಲೊಂದಿಷ್ಟು ಇರಲಿ
ಕಿರಿಯರ ಓದಿಗೆ ಸಹಾಯ ಆಗುವಂತಿರಲಿ
ಆಗಾಗ ಬರುತ್ತಿರಿ ನಮ್ಮನೆಗೆ ನೀವು
ಬರುವಾಗ ಖಾಲಿ ಕೈ ತರದಿರಿ ತಾವು
ಹೊಸದೇನೂ ಇಲ್ಲ ಸ್ನೇಹ ತೊರೆಯದಿರಿ
ಹಳೆಯ ನೋವನು ಮರೆತು ನಮ್ಮನ್ನು ಕರೆಯುತಿರಿ..
@ಹನಿಬಿಂದು@
07.07.2024
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ