ಚುಟುಕು -1
ಆಂತರ್ಯ
ಅರವತ್ತಾದರೆ ಏನು ಮನಸು ಕುಗ್ಗಿಲ್ಲ
ಅನುಭವದ ಮೂಟೆ ಕಟ್ಟಿಕೊಂಡಿರುವೆ
ನಗುವಿಗಂತೂ ಕೊರತೆ ಇದೆಯೆಂಬುದಿಲ್ಲ
ಮಕ್ಕಳು ಮರಿ ಜೊತೆ ಹೊಂದಿಕೊಂಡಿರುವೆ
ಚುಟುಕು -2
ಫಲ
ಮಣ್ಣು ಅಗೆದೆ ಒಳ್ಳೆಯ ಮಣ್ಣು ಸಿಕ್ಕಿತು
ಮತ್ತೂ ಅಗೆದೆ ಶುದ್ಧೋದಕ ಸಿಕ್ಕಿತು
ಇನ್ನೂ ಅಗೆಯುತ್ತಲೇ ಇರಲು ತೊಡಗಿದೆ
ಫಲವತ್ತಾದ ಆರೋಗ್ಯ ನನಗಾಗಿ ಸಿಕ್ಕಿತು..
ಚುಟುಕು -3
ಬಂತು
ಆಷಾಢ ಬಂತು ಹಿರಿಯರ ನೆನೆಯುತ್ತಾ
ಶ್ರಾವಣವು ಬಂತು ಹಬ್ಬಗಳ ತರುತ್ತಾ
ಮಳೆಯೂ ಬಂತು ಗುಡ್ಡಗಳ ಬೀಳಿಸುತ್ತಾ
ನಾವೂ (ಸತ್ತು) ಬದುಕಿಹೆವು ಮರಗಳ ಉರುಳಿಸುತ್ತಾ...
ಚುಟುಕು -4
ಪರಿಸ್ಥಿತಿ
ಮುತ್ತಜ್ಜಿ ಬಂದರು ಮತ್ತೆ ತಿರುಗಿ ಹೋದರು
ಅಜ್ಜಿ ಬಂದಿದ್ದರು ವಾಪಸ್ ಹೋದರು
ತಾಯಿ ಬಂದಿದ್ದಾರೆ ಮರಗಳ ನೆಟ್ಟಿಹರು
ನಾ ಮನೆ ಕಟ್ಟಲು ಮರ ಹುಡುಕುತಿಹೆ...
ಚುಟುಕು -5
ಬರೆ
ಅವರು ಮಹಾ ಬರಹಗಾರರು ನಿತ್ಯ
ಬರೆಯುವುದು ಮಾತ್ರ, ಓದುವುದಿಲ್ಲ ಸತ್ಯ
ಕಾರಣ ಅವರಿಗೆ ತಿಳಿದುಹುದು ಎಂದಿಗೂ
ಅವರು ಬರೆದುದು ಅರ್ಥವಾಗಲಿಕ್ಕಿಲ್ಲ ಯಾರಿಗೂ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ