ಗುರುವಾರ, ಆಗಸ್ಟ್ 1, 2024

ಕವನ

ಒಂದಾಗಿ ಬಾಳೋಣ 

ಭಾರತ ಮಾತೆಯ ಹೆಮ್ಮೆಯ ಕುಡಿಗಳು
ಹೆದರದೆ  ಬೆದರದೆ ಬಾಳೋಣ
ಜಾತಿ ಧರ್ಮಗಳ ಮೇಲು ಕೀಳುಗಳ
ಮರೆಯುತ  ಹರುಷದಿ ನಲಿಯೋಣ//

ಹಸಿರ ಪರಿಸರ ಉಳಿಸುತ ನಿತ್ಯವು
ಕಾಡನು ಕಡಿಯದೆ ಬೆಳೆ ಬೆಳೆಸಿ
ಪ್ಲಾಸ್ಟಿಕ್ ಫೈಬರ್ ಎಸೆಯದೆ ಧರೆಗೆ
ಹಸಿ ಕಸ ಒಣ ಕಸ ಬೇರ್ಪಡಿಸಿ//

 ಸಹಕಾರ ಬೇಡಲು ನೋವಿಗೆ ಸ್ಪಂದಿಸಿ
ಸಹಾಯ ಹಸ್ತವ ಚಾಚೋಣ 
ಎದುರಿಗೆ ಬಂದರೆ ಕೋವಿಯ ಹಿಡಿದು
ಶಾಂತಿಯ ಮಂತ್ರವ ಕಲಿಸೋಣ//

ಹಿರಿಯರ ದಾರಿಯ ನೆನೆಯುತ ಸಾಗಿ
ಗೌರವ ನಮನದಿ ಬಾಗೋಣ 
ಹಿರಿ ಕಿರಿಯರಲಿ ಜ್ಞಾನವ ಹಂಚುತ
ಹೊಂದಾಣಿಕೆಯಲಿ  ಸಾಗೋಣ..

ಪ್ರೀತಿಯ ಸರ್ವೆಡೆ ಹಂಚುತ ನಾವು
ನಾಡಿನ ಸಂಸ್ಕೃತಿ ಉಳಿಸೋಣ
ಸಕಲ ಭಾಷೆಗಳ ಗೌರವಿಸುತಲಿ 
ಸರ್ವ ಸಮಾನತೆ ಸಾರೋಣ//
@ಹನಿಬಿಂದು@
24.07.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ