ಹಣದ ಹೊಳೆ ಹರಿದಾಗ
ಹಣದ ಹೊಳೆ ಹರಿದಾಗ
ಹೆಣವು ಬಂದು ಕರೆವುದು
ಮನದ ಭಾವ ಬೆಳಗುವುದು
ಕಾಣದ ಕನಸು ಬರುವುದು
ಜನರ ಭಾವ ಬದಲಾಗುವುದು
ಗುಣದ ಬಣ್ಣ ಬಯಲಾಗುವುದು
ಕಣ್ಣ ಕಾಂತಿ ಹೆಚ್ಚುವುದು
ನಿನ್ನ ನನ್ನ ಎನುವುದು
ತನ್ನತನವ ಮರೆವುದು
ಸಣ್ಣತನವು ಬೆಳೆವುದು
ರನ್ನ ವಜ್ರ ಬರುವುದು
ಹೆಣ್ಣ ಗುಂಪು ಹೆಚ್ಚುವುದು
ಮಣ್ಣ ಪರಿಮಳ ದೂರಾಗುವುದು
ಭಿನ್ನ ಭಾವ ಉದುರುವುದು
ಹೊನ್ನ ಆಲೋಚನೆ ಮೊಳೆವುದು
ಪಿನ್ನು ಕೂಡ ನಲಿವುದು
@ಹನಿಬಿಂದು@
24.09 2024
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ