ಭಾನುವಾರ, ಜನವರಿ 12, 2025

ದಶಕ -121

ದಶಕ -121

ಮಾನವತೆ ಸತ್ತಿಹುದು ದಾನವರ ಜಗದೊಳಗೆ
ಕಾಣಿಸರು ಸತ್ಯ, ಧರ್ಮ, ನ್ಯಾಯ ನೀತಿಯೊಳಗೆ
ಬೇಕು ಈಗ ಇಂದೇ ಎಲ್ಲ, ಬೆಲೆಯೆಂಬುದಿಲ್ಲ ನಾಳೆಗೆ 
ಪರರತ್ತ ಕೀಳಾಗಿ ಹರಿದಿಹುದು ಹರಿತದ ನಾಲಗೆ!

ಸತ್ಯ ಸುಳ್ಳಿನ ನಡುವೆ ಸೆಣಸುತಿಹ ಈ ಬಾಳ್ವೆ
ಪಥ್ಯ ಮಾಡಲು ಬೇಡ ರುಚಿಯೇ ದೈವ ಆಸೆಗೆ
ಇಲ್ಲ ತಾಳ್ಮೆ, ಧರ್ಮದ ಆಚರಣೆ, ಎಲ್ಲವೂ ನಾವೇ
ಕೆಟ್ಟತನಕೆ ಬರಲಿಹುದು ಒಂದು ದಿನ ಕೊಳಕು ಸಾವೇ

ಇನ್ನಾದರೂ ಒಂದು ಚೂರು ಪುಣ್ಯ ಸಂಪಾದಿಸೋಣ
ಸತ್ಯ ನ್ಯಾಯ ಧರ್ಮದ ಬಾಳಿಗೆ ನಿತ್ಯ ಶರಣಾಗೋಣ
@ಹನಿಬಿಂದು@
13.01.2025

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ