ಸೋಮವಾರ, ಜನವರಿ 13, 2025

ಭಾವಗೀತೆ - ಬದುಕು

ಭಾವಗೀತೆ - ಬದುಕು
ಒಂಟಿ ಮರವೂ ನೆರಳಿನೊಡನೆ 
ಜಂಟಿ ಎಂದು ಬದುಕಬಹುದು
ತಂಟೆ ಮಾಡದೇನೆ ಹಲವು
ದಾರಿಯಲ್ಲಿ ಸಾಗಬಹುದು

ಹೊಸತು ಕಲಿಕೆ ನವೀನ ಓದು
ಹವ್ಯಾಸದೊಡನೆ ವೇಗ ಓಟ
ಮೊಸರ ಹಾಗೆ ನೊಂದು ಬೆಂದು
ಬೆಣ್ಣೆ ಕೊಡುವ ಮನದ ಆಟ

ಮಾನ ಮರ್ಯಾದೆ ಒಳ್ಳೆ ನಡತೆ
ನೋಡೋ ಜನರ ಹಿರಿಯ ಅಳತೆ
ನೆರಳ ಕೊಟ್ಟರೂನು ಜನಕೆ
ಅರ್ಥ ಬೇರೆ ಬಾಯ ನಲಿಕೆ

ತೈಲ ಉರಿವ ಬತ್ತಿಯಂತೆ 
ದೀಪ ಹಲವು ಬಾಳಿಗೆ
ಗೈರು ಹಾಜರೆಲ್ಲೊ ಅಲ್ಲಿ
ಒಳಗೊಳಗಿನ ಈ ಬದುಕಿಗೆ
@ಹನಿಬಿಂದು@
13.101.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ