ಶುಕ್ರವಾರ, ಜನವರಿ 31, 2025

ದಶಕ -125

ದಶಕ -125

 ತಪ್ಪೆಂದು ತಪ್ಪನ್ನು ಒಪ್ಪಿಕೊಳ್ಳಲು ಬಾರದು
ಗಂಡನೊಡನೆ ಒಪ್ಪಿದರೆ ಮರ್ಯಾದೆ ಉಳಿಯದು
ತಂದೆಯೊಡನೆ ತಪ್ಪಿಸಿಕೊಳ್ಳಲು  ಆಸೆ ಪಡುವುದು 
ಅಮ್ಮನೊಡನೆ ಹಟಮಾರಿ ಸ್ವಭಾವ ಎಂದೂ ಬಿಡದು!

ಮಕ್ಕಳೊಡನೆ ಚಿಕ್ಕವನಾಗಲು ಮನಸ್ಸು ಬಾರದು
ಸಕ್ಕರೆಯ ಬಂಧುಗಳೊಡನೆ ಸದಾ ಕುಗ್ಗ ಬಾರದು
ಮಿಕ್ಕವರ ಗುಂಪಿನಲ್ಲಿ ನನಗೆ ನಾನೆ ತಗ್ಗ ಕೂಡದು
ಸಿಕ್ಕ ಸಿಕ್ಕವರ ಜೊತೆಯಲ್ಲಿ ಬಗ್ಗುವ ಇರಾದೆಯಿರದು

ತಪ್ಪಾಗಿಹ ತಪ್ಪನ್ನು ಕ್ಷಮಿಸೆನ್ನಲು ಅದೇನು ಗಾಬರಿ, ಭಯ?
ತುಪ್ಪದಂತೆ ತಪ್ಪೊಪ್ಪಿಕೊಂಡರೆ ಮನ ನಿರ್ಮಲದಭಯ!
@ಹನಿಬಿಂದು@
24.01.2025

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ