ಭಾವ
ಭಾವ ಮಂದಿರದಲ್ಲಿ ನಿನ್ನೊಲವ ಧ್ಯಾನ
ಏಕಾಗಿ ಬೇಕು
ನಾವೆಯೊಳಗೆ ಕುಳಿತು ಬರೆಯುವ ಕವನ
ತಾನಾಗಿಯೇ ಬರಬೇಕು
ಹಗಲು ಇರುಳಿನಲಿ ತವಕಿಸುವ ಪರಿ
ಹೇಗೆ ತಿಳಿಯಬೇಕು
ಮುಗ್ಗಲು ಬದಲಿಸುತ್ತಾ ಅತ್ತೊಮ್ಮೆ ಇತ್ತೊಮ್ಮೆ ಸುತ್ತುವ ನೋವ
ಹೇಗೆ ಹೇಳಬೇಕು
ಬುಗುರಿಯಂತೆ ತಿರುಗುತ್ತಾ ಮನದೊಳಗೆ ನಗುತ್ತಾ
ಅಳುವನೆಂತು ಮರೆಯಬೇಕು
ಹಾಡು ಹಕ್ಕಿಗೆ ಇಲ್ಲಿ ಸ್ವರ ಬದಲಾಗಿ ಹೋಗಿದೆ
ಭಾವವೆಲ್ಲಿ ಹೊರ ಹೊಮ್ಮಬೇಕು
ರವಿಯಿಲ್ಲದ ಇರುಳಿನಲಿ ಬೆಳದಿಂಗಳ ಬೆಳಕ
ಪ್ರತಿ ದಿನ ಹೇಗೆ ಹುಡಕಬೇಕು
ಅತ್ತಿತ್ತ ಓಡುತ್ತ ಸುತ್ತಲೂ ಹುಡುಕುತ್ತ
ನಾನೆತ್ತ ಸಾಗಬೇಕು
@ ಹನಿಬಿಂದು@
14.12.2025
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ