ಗುರುವಾರ, ನವೆಂಬರ್ 21, 2019

1286. ಹಾಸ್ಯಕವನ-ತಲೆನೋವು

ಇವೆಲ್ಲಾ ತಲೆನೋವೇ..

ಮನೆಗೆ ನೆಂಟರು ಬರುವರೆಂದರೆ ತಲೆನೋವೇ..
ಹತ್ತಿರದ ಬಂಧುಗಳ ಮದುವೆಯೆಂದರೂ ತಲೆನೋನವೇ..

ತಲೆಗೆ ಸಂಸಾರದ ಭಾರ ಬೀಳಲು ತಲೆನೋವು
ಮಕ್ಕಳು ಓದಲು ಹಿಂದೆ ಬೀಳಲು ತಲೆನೋವು
ಮಡದಿಯು ತವರು ಮನೆಗೆ ಓಡಲು ತಲೆನೋವು
ಗುಡಿ ಮಂದಿರದಲಿ ಮಹಾನ್ ಪೂಜೆಯು ತಲೆನೋವು!

ಆಫೀಸಲ್ಲಿ ಕೆಲಸ ಅತಿ ಹೆಚ್ಚಾಗಲು ತಲೆನೋವು
ಮನೆಯಲಿ ಹೆಂಡತಿಗೆ ಕೋಪ ಬರಲು ತಲೆನೋವು
ಮಾವ ಆಸ್ತಿ ಕೊಡದಿರೆ ಮತ್ತಷ್ಟು ತಲೆನೋವು
ಅತ್ತೆ ಮಗಳ ನೋಡಲು ಬಂದರೆ ಅಳಿಯಗೆ ತಲೆನೋವು

ಹೆಣ್ಣು ನೋಡಲು ಹೋದರೆ ಗೆಳತಿಗೆ ತಲೆನೋವು
ಗಂಡು ನೋಡಲು ಬಂದರೆ ಪ್ರಿಯಕರನ ನೆನೆದು ತಲೆನೋವು
ತಂದೆ ಗೆಳತಿಯೊಂದಿಗಿರುವುದ ನೋಡಿದೊಡೆ ತಲೆನೋವು
ಮೊಬೈಲ್ ಸೀಕ್ರೆಟ್ ತಂಗಿ ನೋಡಲು ತಲೆನೋವು
ಪಕ್ಕದ ಮನೆಯಾಂಟಿ ಸಿನಿಮಾ ಥಿಯೇಟರಲಿ ಸಿಗಲು ತಲೆನೋವು

ಅಂಕಲ್ ಗೆ ಕಾಲೇಜೋದುವ ಮಗಳಿರಲು ತಲೆನೋವು
ಆಂಟಿಗೆ ತನ್ನ ಕೂದಲುದ್ದ ಬಂದರೆ ತಲೆನೋವು
ಮನೆಯಲಿ ಕಾರ್ಯಕ್ರಮವಿರಲು ತಲೆನೋವು

ಗದ್ದೆಯಲಿ ಹಸಿರು  ಬೆಳೆ ಬರದಿರಲು ತಲೆನೋವು
ತೋಟಕ್ಕೆ ಹುಳ ಬರಲು ಮತ್ತೆ ತಲೆನೋವು
ಜ್ವರ ಬಂದು ಸುಸ್ತಾಗೆ ಬಹುದೊಡ್ಡ ತಲೆನೋವು
ಮಾವನ ಮಗಳಿಗೆ ಕೊಟ್ಟ ಪತ್ರ ಮಾವ ನೋಡೆ ತಲೆನೋವು
ಅತ್ತೆ ಅಮ್ಮ ಹೆಂಡತಿ ಒಟ್ಟಾದರೆ ಮಹಾನ್ ತಲೆನೋವು

ತಲೆಯೇ ಇಲ್ಲದಿದ್ದರೂ ತಲೆಯೊಳಗೇನಿಲ್ಲದಿರಲು ತಲೆನೋವು
ವಿಧಿ ಮಾತ ಕೇಳದಿರಲು ಬರಬರುತ ತಲೆನೋವು
ವಯಸಾಗುವುದ ನೆನೆನೆನೆದು ಏರುತ್ತದೆ ತಲೆನೋವು
ಅಂದುಕೊಂಡ ಕೆಲಸವಾಗದಿರಲು ತಲೆನೋವು.
@ಪ್ರೇಮ್@
19.11.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ