ಮಂಗಳವಾರ, ಮಾರ್ಚ್ 17, 2020

ವಿಮರ್ಷೆಗಳು-3

[10/12/2019, 12:45 PM] Wr Manjula B K: ಪ್ರೇಮ್ ಅವರನ್ನು ಗರಿಗೆದರಲಿ 

ಜೀವನದಲ್ಲಿ ಬಯಕೆ ಮತ್ತು ಗುರಿಗಳು ಮುಖ್ಯವಾದ ಸಂಗತಿ. ಅದಕ್ಕೆ ತನ್ನದೇ ಆದ ಒಂದು ವಸ್ತು ಸ್ಥಿತಿ ಇರಬೇಕು. 

ಆ ಗುರಿಗಳು ಮತ್ತು ಬಯಕೆಗಳು ಮತ್ತೆ ಗರಿಗೆದರಲಿ ಬದುಕಲ್ಲಿ ಎನ್ನುವ ಸಂದೇಶದ ಜೊತೆಗೆ ರೂಪಿತವಾದ ಕವಿತೆ ಸೊಗಸು. 

ಮಂಜುಳಾ
[10/15/2019, 4:55 PM] Wr Vara Lakshmi Amma: ಪ್ರೇಮ್  ಅವರ ಪಯಣ

 ಪ್ರಾಸಬಧ್ಧವಾದ  ಕವನ,  ನಾಲ್ಕು  ದಿನದ ಬಾಳು,  ಅಶಾಶ್ವತವಿದು,  ಇರುವಾಗ ಹಕ್ಕಿಯಂತೆ  ಹಾರಿ, ವಿಶಾಲ ಗಗನ,  ಅಂಕೆ ಶಂಕೆ ಇಲ್ಲ,   ಕಾಲನ ಕರೆ ಬಂದಾಗ  ಮುಗಿಯುವ ಪಯಣದಲ್ಲಿ ವಿರಸದಿ ಮನ ಮುದುಡಿದ,  ಸರಸ ಸಂತೋಷದಿಂದ ಬದುಕಬೇಕು ಎನ್ನುತ್ತಾರೆ ಕವಯತ್ರಿ.  ಸರಳ ಶಬ್ದಗಳಲ್ಲಿ ಜೀವನದ ಪಯಣವನ್ನು ವರ್ಣಿಸಿದ್ದಾರೆ🙏
[10/22/2019, 5:52 PM] Wr Dinesh Sir: ☘ *ನಮಸ್ಕಾರಗಳು*🙏

*ಕವಿ*   :- ಮಹೇಶ್ ಕುಮಾರ್ ಸರ್

*ಕವಿತೆ* :- ನೀನು ನೀನಾಗಿರು.

ಕವಿತೆ ರಚಿಸಲು ನೀಡಿದ ಪದ "ನಿರಾಳ" ನಿಮ್ಮ ಕವಿತೆಯಲ್ಲಿ ಬಳಕೆಯಾಗಿದೆ.

ಕವಿತೆಯ ಕುರಿತು,
 
           :- ತುಂಬಾ ಸೊಗಸಾದ ಕವಿತೆ. ತನ್ನೊಡಲ ತುಂಬ ಸದಾಶಯಗಳನ್ನೆ ಹೊತ್ತು ಹಣತೆ ಕತ್ತಲನ್ನು ತಳ್ಳಿ ಬೆಳಗುವಂತೆ  ಸನ್ಮಾರ್ಗದೆಡೆ ಸಾಗಲು ದಿಕ್ಕು ತೋರುತ್ತಿದೆ. ಪ್ರತೀ ಸಾಲುಗಳೂ ಅರ್ಥಪೂರ್ಣವಾಗಿದ್ದು " ಅಕ್ಷರವೆಂಬ ಆಯುಧವು, ಲೇಖನಿ ಎಂಬ ಖಡ್ಗವು ಇರುವಾಗ ನೆತ್ತರನ್ನೇಕೆ ಹರಿಸುವೆ." ಎಂಬುದು ತುಂಬ ಚೆಂದ. ಉತ್ತಮರ ಸಂಗದಿ ನೀನೂ ಉತ್ತಮನಾಗಿ ಸಾಗು ಎನ್ನುತ್ತ ಕವಿತೆ ಮಿಂಚಿದೆ..

🌿 *ಕವಿತೆ ಸೊಗಸಾಗಿದೆ*

🌿 *ಅರ್ಥಪೂರ್ಣವಾಗಿದೆ*

🌿 *ಅದ್ಭುತವಾಗಿದೆ*

ಸದಾ ಹೀಗೆಯೆ ಬರೆಯುತ್ತಿರಿ ನಿಮ್ಮ ಸಾಹಿತ್ಯ ಸೇವೆಗೆ, ನಾಡು ನುಡಿ ರಕ್ಷಣೆಯ ಕಾರ್ಯಕ್ಕೆ ಸದಾ ಯಶಸ್ಸು ಸಿಗಲಿ.ಕೀರ್ತಿ ನಿಮಗೊಲಿಯಲಿ.

*ಹೃತ್ಪೂರ್ವಕ ಧನ್ಯವಾದಗಳು* ಚೆಂದದ ಕವಿತೆಯೊಂದ ಓದಿಸಿದ್ದಕ್ಕೆ.

☘ *ಶುಭವಾಗಲಿ*☘
                      ದಿನಾ..


.
[10/23/2019, 10:07 AM] Wr Nagamma: ಪ್ರೇಮ್ ಜೀ..🙏🏼💐

ನಾನು..

ನನನನನ...ಪದ ಸರಮಾಲೆ..ಬದುಕ ಮಜಲಿನ...ಸಹಜ ನೋಟದ....

ಸರಳ ಸುಂದರ ಕವನಕ್ಕೆ..

ಧನ್ಯವಾದಗಳು.
ಎಸ್.ನಾಗಮ್ಮ🙏🏼🌹
[10/23/2019, 12:05 PM] Wr Vara Lakshmi Amma: ಪ್ರೇಮ್ ಅವರ  ನಾನು
 ನಮ್ಮಲ್ಲಿರುವ ಅನೇಕ ಗುಣಗಳು, ನಮಗಲ್ಲದೇ ಬೇರೆಯವರು ತಿಳಿಯಲು. 
 ಇಂಥ ಒಂದು ಆತ್ಮಾವಲೋಕನ ಕವನ ರಚಿಸಿದ್ದಾರೆ ಪ್ರೇಮ ಅವರು.
  ನಮ್ಮ ಬಾಳಿನ ನಾಳೆಗೆ ನಾವೇ ನಾವಿಕರು, ನಡೆಸುವ ಸ್ಥೈರ್ಯವಿರಬೇಕು.   ಪ್ರಾಸಬಧ್ಧವಾದ ಕವನ🙏
[11/4/2019, 10:19 AM] Wr Champu: ಪ್ರೇಮ ಅವರ ಗಜ಼ಲ್ 

ಸಾಮಾಜದ ಜನರ ಮುಖವಾಡ ಕಳಚಿಡುವ ಗಜ಼ಲ್..

ಬಹಳ ಅಮೋಘವಾಗಿ ಒಡಮೂಡಿದೆ...

ಇಲ್ಲಿ ಗಮಿಸಬಹುದು
ಸಾಕಿ ಇಲ್ಲಿ ದೋಸ್ತನಾಗುವ ಪರಿ 

ಇವತ್ತು ವಿಹದ ವೇದನೆಯ ವಿಷಯ ಇರುವುದು ತಾವೂ ಗಮನಿಸಿಲ್ಲಂತ ಅನಿಸುತ್ತೆ


ಚಂದದ ಗಜ಼ಲ್ ಓದಿಸಿದ ತಮಗೆ ಧನ್ಯವಾದಗಳು ಸರ್👏👏👏👏
[11/4/2019, 6:56 PM] Wr Champu: ಇಂತ ಗಜ಼ಲ್ ಇವತ್ತ ಬೇಕಿತ್ತರಿ..‌ಶರಣು ಶರಣಾರ್ಥಿ ಅಡ್ಡ ಬಿದ್ದೆ ಬುದ್ಧಿ...👏👏👏👏👏👏
[11/4/2019, 6:59 PM] Wr Shiv Karnandi: ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಒಂದು ಕವಿತೆಯ ಸಾಲು *ಮರೆಯೋ ಮಾತು ಮರೆತುಬಿಡು* ಈ ಗಜಲ್ ಓದಿದಾಗ ನೆನಪಾಯಿತು....ಭಾವತೀರ್ವತೆಯಿಂದ ಮೂಡಿಬಂದ ಗಜಲ್ ಅದ್ಬುತವಾಗಿದೆ👏🏻👏🏻👏🏻👏🏻👏🏻👏🏻👏🏻👏🏻👏🏻👏🏻
[11/5/2019, 5:05 PM] Wr Vani Bhandari: *ನಮಸ್ತೇ*
🙏🏻🙏🏻🙏🏻

*ಪ್ರೇಮ್ ಅವರ ಗಜಲ್*

*ಅರಿವಿನ ಹೃದಯವ ಅರಿಯದೆ ಇದ್ದಾಗ ಉಂಟಾಗುವ ಭಾವಗಳ ತಳಮಳದ ಚಿಂತನೆ*

          ಹೆಣ್ಣಿನ ನೋವಿನ ಆರ್ತನಾದವು ಮಡಗಟ್ಟಿ ನಿಂತಂತೆ ಇದೆ, ಬಹುಶಃ ಇ ಜಗದಲಿ ಕೆಲವೊಂದು ಹೇಳಲಾಗದ ನೋವುಗಳಿವೆ ಎಂದರೆ ಅದು ಹೆಣ್ಣಿನ ಒಳಮನದ ತಾಕಲಾಟವು ಕಾಣುವುದು.

ಇನ್ನುಳಿದಂತೆ,,,,

👉 *ಸುಂದರವಾದ ಗಜಲ್*
👉 *ಗಜಲ್ ನಿಯಮ ಪಾಲನೆ ಆಗಿದೆ*
👉 *ಭಾವನೆಗಳ ಏರಿಳಿತಗಳನ್ನು ಸಮಾನಾಗಿ ಮೂಡಿಸಿ*
👉 *ಶೇರ್ಗಳನ್ನು ಸಮಾಂತರವಾಗಿ‌ ಮೂಡಿಸಿದಾಗ ಗಜಲ್ ನೋಡಲು ಸುಂದರ*
👉 *ಸುಂದರವಾದ ಸೊಗಸಾದ ಗಜಲ್*

*ಹೀಗೆ ಸದಾ ಬರೆಯುತ್ತಾ ಇರಿ, ಯಶಸ್ಸು ನಿಮ್ಮದಾಗಲಿ*

*ಧನ್ಯವಾದಗಳೊಂದಿಗೆ*

                         *✍ವಾಣಿ ಭಂಡಾರಿ*
[11/6/2019, 8 AM] Wr Yathish Kamaje: *ಪ್ರೇಮ್ ರವರ ಗಜಲ್*

ಭಗ್ನ ಪ್ರೇಮಿಯ ಮನದಾಳದ ನೋವು
ಗಜಲ್ ನಿಯಮದಂತಿದೆ.

ಮಳೆಬಿಲ,ನದಿ ನೀರು, ಬೀಸುಗಾಳಿ ನಮ್ಮ ಪ್ರೀತಿಗೆ ಸಾಕ್ಷಿಯಲ್ಲವೇ?
ಮಳೆಗಾಲದಿ ಒಬ್ಬಳೇ ಕುಳಿತು ಬೇಸರಿಸದಿರಲಿ ಹೇಗೆ ಜಾನು?
👆ಇಲ್ಲಿ ಮಳೆಗಾಲದಲ್ಲಿ ಮಾತ್ರ ನೆನಪಾಗುವುದೇ..!?
ಎಲ್ಲಾ ದಿನದಲ್ಲೂ ಕಾಲದಲ್ಲೂ ಅವನದೇ ನೆನಪು ಅನ್ನುವಂತಿರಬೇಕು.
ಆ ಸೂರ್ಯ,ಬಾನು,ಚಂದ್ರ,ಮೋಡ,ನಕ್ಷತ್ರ,ಗಾಳಿ,ನೀರು ನಮ್ಮ ಪ್ರೀತಿಗೆ ಸಾಕ್ಷಿಯಲ್ಲವೇ.
ಎಂದು ಹೇಳಬಹುದಿತ್ತು ಎನಿಸಿತು.

'ಹರವ ಹರಿಸಲಿ' ಇದು ಅರ್ಥವಾಗಲಿಲ್ಲ.

ತಪ್ಪಿದ್ದರೆ ಮನ್ನಿಸಿ
[11/7/2019, 8:29 AM] Wr Champu: ಪ್ರೇಮ ಅವರ ಜಾನು ಆರಾಧ್ಯ ಗುರುಗಳ...ಸಖಿ..

ಒಂದೇ ದಾರಿಯಲ್ಲಿ ನಡೆಯುವ ಗಜ಼ಲ್'ಗಳು..

ಜಾನುವಿನ ನೋವು ಇಲ್ಲಿ ಸಖಿಯ ನೋವಾಗಿದೆ ದೂರವಾದ ಮನಸ್ಸನ್ನು ಇರ್ವ ಮನಸ್ಸುಗಳು..ಹಂಬಲಿಸುತ್ತಿವೆ

ಅಲ್ಲದೆ ಪ್ರತಿಮೆಗಳು ಸರಳ ಸುಂದರವಾಗಿ ಮೂಡಿಬಂದಿವೆ..ಇರ್ವರಿಗೂ ಬಳಗದ ಪರವಾಗಿ ಅಭಿನಂದನೆಗಳು..

👏👏👏👏👏
[11/12/2019, 3:22 PM] Wr Shakunthala Dalera: ೫. *ಪ್ರೇಮ್ ಸಹೋದರಿಗೆ ವಂದನೆಗಳು.*🙏
ತಮ್ಮ ಗಜಲ್ನಲ್ಲಿ ಪ್ರಾಣಿಗೂ ಮತ್ತು ಮನುಷ್ಯರಿಗಿರುವ ಅವಿನಾಭಾವದ  ಸಹಸಂಬಂಧ ಚೆನ್ನಾಗಿ ಮೂಡಿಬಂದಿದೆ. ಕವಿಭಾವ ಸೂಪರ್.ಕುಕೂರ್ ಶಬ್ದ ಮನಸೆಳೆಯಿತು. ಆತ್ಮೀಯ ಅನಂತ ವಂದನೆಗಳು.👏👏👏👏💐💐💐💐
[11/18/2019, 7:15 AM] Wr Chandayya: @ ಪ್ರೇಮ್ 
ಬದುಕು ಬೆಳಗುವ ಸ್ಪೂರ್ತಿಯಾದ ಪ್ರಿಯಕರನ ಸೇರುವ ಕ್ಷಣ ಚಂದ... 
ರೂಪಕಗಳ ಸೃಷ್ಟಿಯೇ  ಗಝಲ್ ನ ಮುಖ್ಯ ಅಂಶ ಎಂಬುದು ನನ್ನ ವಯಕ್ತಿಕ ಅನಿಸಿಕೆ...  ಎಲ್ಲರೂ ವಾವ್ ವಾವ್ ಎನ್ನುವಂತ ರೂಪಕಗಳ ಬಳಕೆಯತ್ತ ಕಣ್ಣಾಯಿಸಿರೆ  ಮಸ್ತ್ ಇರುತ್ತೆ...  


ಧನ್ಯವಾದಗಳು 

 *ಚಂದ್ರಯ್ಯ ಚಪ್ಪರದಳ್ಳಿಮಠ*
[11/26/2019, 11:04 AM] Wr Mangala Kambi: (6)ಪ್ರೇಮ್ ಅವರ ಗಜಲ್ ಕುರಿತು....

ಬೇರ್ಪಟ್ಟ ಸಂಗಾತಿಯನ್ನು ಗಗನ ಕುಸುಮವೆಂದು ಭಾವಿಸುವ ಹಾಗೂ ಸಮಾಧಾನ ಮಾಡಿಕೊಂಡು ಪ್ರೀತಿಗಾಗಿ ಪರಿತಪಿಸುವ ಪರಿ ಚೆನ್ನಾಗಿದೆ.
ಧನ್ಯವಾದಗಳು...

ಮಂಗಳಾ ಕೆಂಡದಮಠ
[11/27/2019, 5:21 PM] Wr Dinesh Sir: 🙏🙏

*ಪ್ರಕಾರ ಗಜ಼ಲ್* 
~~~~~~~~~~

ರಚನೆಕಾರರು :-  *ಪ್ರೇಮ್ ರವರು*

ಗಜ಼ಲ್ ನಿಯಮಾನುಸಾರ ಇದ್ದು  ಚೆಂದವಿದೆ.

🍀 ಸೊಗಸಾದ ಗಜ಼ಲ್. ಒಲವ ಸವಿ ಭಾವವಿದೆ. ಚೆಂದದ ಶೇರ್ ಗಳು ಗಜ಼ಲ್ ಗೆ ಸುಂದರ ಮೆರುಗನ್ನಿತ್ತಿವೆ.

"ಬಾನೆತ್ತರ ಹಾರಲು ಮನ ಗರಿಗೆದರುತ ತವಕಿಸುತಲಿದೆ ಅಂತರಂಗದ ದಿನನನ"👌


*ಉತ್ತಮ ಗಜ಼ಲ್ ಒಂದ ಓದಿಸಿದ ತಮಗೆ ಧನ್ಯವಾದಗಳು*🙏🙏

🍀
ಶುಭವಾಗಲಿ. ಸದಾ ಯಶಸ್ಸು ನಿಮಗೆ  ಸಿಗಲಿ💐💐👍👍

.
[12/4/2019, 11:03 AM] Wr Manjula B K: ಪ್ರೇಮ ಅವರ ಕಲಿಯಬೇಕಿದೆ 

ನಾವು ಕಲಿತಿರುವುದು ಬಹಳಷ್ಟು. ಕಲಿಯಬೇಕಾದದು ಸಾವಿರ ಪಟ್ಟು. 

ಎಲ್ಲ ಕಲಿತಿರುವೆ ಎನ್ನುವ ಮದಕಿಂತ ಏನು ಒಳ್ಳೆಯದನ್ನು ಕಲಿಯಬೇಕಿದೆ ಎನ್ನುವುದು ಮುಖ್ಯ ಎಂಬುವುದು ಉತ್ತಮ ಸಂದೇಶ. 

ಮಂಜುಳಾ. ಬಿ. ಕೆ
[12/4/2019, 5:53 PM] Wr Kumar Chalawadi: " ಪ್ರೇಮ್" ರವರ 'ಕಲಿಯಬೇಕಿದೆ' ಕವನ ಮನನೀಯವಾಗಿದೆ! ಎಲ್ಲ ಅನಿಷ್ಟ , ಅಪಸವ್ಯಗಳ ಆಗರವಾದ ಮನುಜನ, ಮನದ ಒಳಕೋಟಿಯನ್ನು ಚೆನ್ನಾಗಿ ಅಭಿವ್ಯಕ್ತಿಸಿರುವಿರಿ! " ಮತ್ತೆ ನಾನು ಕಲಿಯಬೇಕಿದೆ, ಹೄದಯಗಳ ಜೋಡಿಸುವದನು" ತುಂಬಾ ಕಳ- ಕಳಿಯ ಭಾವನೆ ತೋರಿಸಿರುವಿರಿ. ಈ ಭಾವನೆಯನ್ನು ಎಲ್ಲರೂ ಅನುಸರಿಸಬೇಕಿದೆ! ಸುಂದರ ರಚನೆ👌
[12/9/2019, 4:16 PM] +91 97408 87580: ಪ್ರೇಮ್ ಸರ್ 
ನಮಸ್ಥೆ

ಭ್ರಾಂತಿ ಎನ್ನುವ ಪರಧಿಯೊಳಗೆ ಎಳೆಯ 
ಮಕ್ಕಳನ್ನ ಅರ್ಥ ಮಾಡಿಕೊಳ್ಳದೇ
ಬರಿ ದಂಡನೆಯ ಕಡೆಗೆ
ಶಿಕ್ಷಣ ಕೊಡಬೇಡಿ ಎಂದು ಹೇಳುವ ಮೂಲಕ ಮಕ್ಕಳ ಬಗೆಗಿನ ಅವರ ಕಾಳಜಿ ಬಿಂಬಿತವಾಗುತ್ತದೆ.
ಮಕ್ಕಳೆಂದರೆ ತೋಟದಿ ಅರಳುವ ಬಣ್ಣ ಬಣ್ಣದ ಹೂಗಳು
ಹೊಸುಕದೆ ಹೊಸ ಬದುಕು ನೀಡಿ ಎನ್ನುವ ಆಶಯ ತಮ್ಮ ಕವಿತೆಯಲ್ಲಿ ಎದ್ದು ಕಾಣುತ್ತದೆ
ಸೊಗಸಾಗಿದೆ
🙏🙏🙏🙏🙏
[12/11/2019, 2:51 PM] Wr Sreemati Joshi: ಸೋಲದಿರು
ಸಾಲುತಿಲ್ಲ ನೀನು ನೀಡಿದ ಪ್ರೀತಿಯ ಸಾಲ
ಸಾಲದಾಗಿದೆಯೆನಗೆ ನಿನ್ನ ಹೃದಯದ ಜಾಗ
ಸಾಲು ಸಾಲು ಇರಲು ಬೇಕು ಗಮನದ ಕಾಲ
ಸಾಲಿನೊಳಗೆ ಹುದುಗಬೇಕು ನಿನ್ನಯ ಪಾಲು..
*ಪ್ರೀತಿಯನ್ನೇ ಸಾಲ ವಾಗಿಸಿ ಬಿಟ್ಟಿದ್ದೀರಿ ಹೃದಯದಲ್ಲಿ ಜಾಗವೂ ಜಾಗ*🤣🤣
ಸಾಲುಗಳಲಿ ಬರೆಯಲಾರೆ ಪ್ರೀತಿಯ ಪದರ
ಸಾಲಿನಲ್ಲಿ ನಿಲ್ಲಲಾರೆ, ನೀನಿರದಿರೆ ಬರ!
*ಅವಳ ಪ್ರೀತಿಯ ಪವರ್ ಅಂದ್ರೆ ಹಾಗೆ*
ಸೋತ ಮನಕೆ ಸಾಲು ಖುಷಿಯ ತಂದಿಹೆ ನೀನು
ಗೆದ್ದ ಹಿಗ್ಗು ದೈತ್ಯವಾಗೆ ತಣಿಸಿದೆ ನೀನು.
*ಸೋತ ಮನಕೆ ಖುಷಿಯ ತರುವುದೇ ಪ್ರೀತಿ ಅನುರಾಗ. ಆಗ ಗೆಲುವು ಖಚಿತ ಸೂಪರ್ ಸಾಲು*
6ನಾನೆ ನೀನು ನೀನೆ ನಾನು ಒಂದೆ ಸಾಲಲಿ
ನೀನು ಇರದೆ ಕ್ಷಣಕ್ಷಣವು ನೋವು ಬಾಳಲಿ..
*ಪ್ರೀತಿ ಬೆರೆತ ಬಾಳಿನಲ್ಲಿ  ದೇಹ 2 ಜೀವ ಒಂದು ಎನ್ನುಬಿಎಂಸಿಎ ಭಾವ ನೈಸ್*
ಸೋಲು ಗೆಲುವು ಎರಡು ಇಹುದು ಪ್ರತಿ ಹೆಜ್ಜೇಲಿ
ಸೋತ ಮನವು ಗೆಲ್ಲಬಹುದು ಮುಂದೆ ದಾರೀಲಿ..
*ಸಮರಸವೇ ಜೀವನದ ಭಾಗ* 
ಪ್ರೇಮವೆಂದರೇನು ಎಂದು ಅರಿತೆ ಬದುಕಲಿ
ನೀನು ಬಂದು ಮನದ ಕುಣಿತ ದಿನವು ನಲಿವಲಿ..
*ಪ್ರೇಮವು ಅವಳು ಬಂದ ಮೇಲೆ ಅರಿವಿಗೆ ಬಂತು ಅನ್ನುವ ಆಶಯ ಅವಳ ಮೇಲೆ ಇಟ್ಟ ನಂಬಿಕೆ*
ಸೋತು ಗೆಲುವ ಸಾಹಸವು ಇಹುದು ಜಗದಲಿ
ಸೋಲಲಾರೆನೆನುವ ಮಾತು ಬೇಕು ಜನರಲಿ..

ಸೋಲ ಸಾಲು ಬರಲು ಸನಿಹ ಕುಗ್ಗ ಬಾರದು
ಸೋಲು ಇಂದು ಕಡೆಯದಲ್ಲ, ಗೆಲುವಿಗೂ ಹಿಗ್ಗಬಾರದು..ಸುಖ *ಸುಖ ಸಮನಾಗಿ ಸ್ವೀಕರಿಸುವ ಆಶಯ*
ಸೋತು ಸೋಲು ಸೋಲ ಸಾಲು ಓಡಲಿ
ಗೆಲುವ ಸಾಲು ಸೋತ ಬಳಿಕ ಬಂದು ಸೇರಲಿ..

ಸೋಲಿಗಾಗಿ ಅಂಜಬೇಡ ಸೋಲು ಸೋಲಲಿ
ಗೆಲುವಿನಿಂದ ಬೀಗಬೇಡ ಮುಂದೆ ಬಾಳಲಿ..
*ಒಟ್ಟಾರೆ ಕವಿ ಭಾವ ಸೂಪರ್ಬ್. ಆದರೂ ಸ್ವಲ್ಪ ಗಡಿ ಬಿಡಿ ಯಲ್ಲಿ ಬರೆದ ಹಾಗಿದೆ. ನಿಮ್ಮ ಹಿಂದಿನ ಕವನಗಳಿಗೆ ಹೋಲಿಕೆ ಮಾಡಿದಾಗ*
@ಪ್ರೇಮ್@
11.12.2019
[12/31/2019, 7:21 PM] Wr Vani Bhandari: *ನಮಸ್ತೇ*
🙏🏻🙏🏻🙏🏻

         *ಪ್ರೇಮ ಅವರ ಭಾವಗೀತೆ*

        *ಮುರುಳಿಯ ಗಾನಕ್ಕೆ ಮನಸೋಲದವರುಂಟೆ* *ಮಾದವನ ಇಲವ ಗಾನಕ್ಕೆ ಮನಸೋತು ಕಾಯುವ ರಾಧೆಯ ಭಾವ*

             ಮಾದವನ ಕೊಳಲು ಗಾನದಿಂದ ಮನದ ತುಮುಲಗಳನ್ನು ಬೇರೆ ಮಾಡಿಕೊಳ್ಳಬೇಕಾದ ಕವಿಭಾವ ಚಿತ್ರಣ ಚೂಪರ್.

       ನಮ್ಮ ನಂಬಿಕೆಯೆಂಬ ಪ್ರೀತಿ ಅಚಲವಾಗಿರುವ ಮಾದವನೇಗೆ ಮೋಸ ಮಾಡಲು ಸಾಧ್ಯ.

ಅತಿಯಾದ ತುಡಿತ ಮಿಡಿತಗಳ ನಾದಲೋಲವು ಮೈಮನಗಳಲ್ಲಿ ತೇಲಿ,, ಮುಕುಂದನ ಗಾನದ ಗಾಳಿ ಸದಾ ಸುಳಿಯಲಿ ಎಂಬ ಮನದ ಭಾವ ಸೊಗಸಾಗಿದೆ.

ಜಗದಲಿ ಮನುಷ್ಯ ಪ್ರೀತಿಗಿಂತ ಅಲೌಕಿಕವಾದ ಪ್ರೇಮವೇ ಶಾಶ್ವತವಾದ ಪ್ರೇಮವಾಗಿದೆ .ಮಾನವ ಅಂತಹ ಪ್ರೀತಿಯ ಜೊತೆ ಸೇರಲು ಬಯಸಿದರೆ ಸದಾ ತನ್ಮಯ ಭಾವದೊಳಗೆ ಶಾಂತತೆಯಿಂದ ಸಂತೃಪ್ತರಾಗಬಹುದು.

*ಇನ್ನುಳಿದಂತೆ,,,,,*

👉ಚಂದದ ಭಾವದ ಹೂರಣ 

👉ಸರಳ ಪದಗಳ ನರ್ತನ.

👉ಗೇಯತೆಯೊಳಗೆ ಮೀಡಿದ ಭಾವತೀವ್ರತೆ.

👉ಕೊನೆಯ ಸಾಲು ಗಮನಿಸಿ *ಬರುವಿಗಾಗಿ* ಹೀಗೆ ಮಾಡಿ ಪಾ.
👉ಉಳಿದಂತೆ ಚಂದದ ಗೀತೆ, ಸರಳ ಸುಂದರ.


*ನಿತ್ಯ ಬರೆಯಿರಿ ಜಿ,,, ಸಾಹಿತ್ಯ ಯಾನಕ್ಕೆ ಶುಭವಾಗಲಿ ತಮಗೆ ಯಶಸ್ಸು ಸಿಗಲಿ*

*ಧನ್ಯವಾದಗಳೊಂದಿಗೆ*

                     *✍ವಾಣಿ ಭಂಡಾರಿ*
[1/2, 4:02 PM] Nybr Pramila: *ಇಂದು ನಾಳೆಗಳೊಡನೆ*

ಪ್ರೇಮ್ ಜಿ ಯವರ ಭಾವ ಗೀತೆ.... 

ಗೀತೆಯ ಆರಂಭವೆ ವಾವ್ ಎನ್ನುವ ಹಾಗಿದೆ. 

ನಾಳೆಗಳ ನಾಳೆಯಲಿ 
ಇಂದೇಕೆ ಬದುಕುವಿರಿ
ಇಂದಿನೈಸಿರಿ ಸೊಬಗ
ಇಂದೇ ಅನುಭವಿಸಿ....

ವಾವ್... ಎಂಥಹ  ಸೊಗಸಾದ ಸಾಲುಗಳು.

ನಾಳೆಗೆ  ನಾಳೆಗೆ  ಎಂದು ಎಲ್ಲವನ್ನು ಮಂಡೆ ಬಿಸಿ ಮಾಡಿಕೊಂಡು ದಿನ ಹಾಳು ಮಾಡಿ ಕೊಳ್ಳುವುದಕ್ಕಿಂತ 
ಇಂದು ಚಂದದಿಂದ ಬದುಕಿ ಬಿಡಬೇಕು.

ಇಂದು ಇಂದಿಗೆ ನಾಳೆ ನಾಳೆಗೆ 
ಇಂದು ನಮ್ಮದೇ ಚಿಂತೆ ಯಾತಕೆ..ಅಲ್ವ??? 

ತುಂಬಾ ಚಂದ ಬರೆದಿರುವಿರಿ ಜಿ 
ಶುಭವಾಗಲಿ, 

ನಿಮ್ಮ  ಸಾಹಿತ್ಯ ಯಾನ ಹೀಗೆ ಮುಂದುವರಿಯಲಿ🌹🌹🌹🌹
[1/8, 9:11 AM] Wr Siraj Ahmed Soraba: ಚಿತ್ರಕ್ಕೆ ಹೊಂದುವಂತೆ ಬರೆದಿರುವ ಸೊಗಸಾದ ಬರುಹ ತಮಗೆ ಅನಂತಾನಂತ ಅಭಿನಂದನೆಗಳು
[1/8, 9:26 AM] Wr Kumar Chalawadi: @ಪ್ರೇಮ್@ ರವರ ಹನಿ ಚೆನ್ನಾಗಿದೆ! ಸಮಯದ ಜೊತೆ ನಾವೆಲ್ಲ ನಾಗಾಲೋಟದಲ್ಲಿ ಓಡುತ್ತಲೇ ಇದ್ದೇವೆ! 
ತಾಳ್ಮೆ ಇಲ್ಲವೇ ಇಲ್ಲ! ಸರಿಯಾಗಿ ಸಾಗಿದರೆ ಬಾಳು ಸುಂದರ! ಸಂಯಮ ಮೀರಿದರೆ ಬದುಕೆಲ್ಲ ಬರೀ ಗೋಳು! ಚೆಂದದ ಹನಿ👌
[1/8, 10:18 AM] Wr Vinuta Kicchikeri: ಬೇಕು

ಓಡುತಿರುವ ಯುಗದಲಿ
ಸಮಯದೊಡನೆ ಓಡುವೆ
ಬೇಕಾಗಿದೆ ಸಂಯಮ ಸಹನೆ
ಎಲ್ಲಿಹುದು ಜನಕೆ ಕರುಣೆ?
@ಪ್ರೇಮ್@
08.01.2020


ಪ್ರೇಮ್ ಜೀ🙏

ನಿಜ ಜೀ ನಾವು ಎಲ್ಲರೂ ಓಡುತ್ತಿದ್ದಾರೆ ನಾವು ಓಡುತ್ತಿದ್ದೇವೆ.ಕೇಳಿದರೆ.
ಕುಳಿತು ಮಾತಾಡಲೂ ಸಮಯವಿಲ್ಲ ನಮ್ಮ ಕೈಯಲ್ಲಿ..
ಅದಕ್ಕಿಂತ ಹೆಚ್ಚಾಗಿ ತಾಳ್ಮೆಯಿಲ್ಲ ಮನದಲ್ಲಿ..ಯಾರೋ ಅಪಘಾತವಾಗಿ ಬಿದ್ದರೆ ಅವರನ್ನು ಉಪಚರಿಸುವದರ ಬದಲು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಆತುರ...
ಕರುಣೆಗೆ ಅರ್ಥವನ್ನೇ ಮರೆಯುತ್ತಿದ್ದೇವೆ...
ಅರ್ಥಪೂರ್ಣ ಹನಿ

ಧನ್ಯವಾದಗಳು💐
ವಿನುತಾ ಕಿಚ್ಚಿಕೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ