ಮಂಗಳವಾರ, ಮಾರ್ಚ್ 17, 2020

ವಿಮರ್ಷೆಗಳು-5

[7/14/2019, 11:34 AM] Nybr Pramila: *ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ*

*ಪ್ರೇಮ ಮೇಡಂ ಜೀ ಯವರ ಬರವಣಿಗೆಯ ಕುರಿತು ಒಂದಿಷ್ಟು ಮಾತುಗಳು...*

*ಪಟಪಟನೆ ಸುರಿಯುವ ಮಳೆ ಮೈ ಮನಸನ್ನೆಲ್ಲ ತಣ್ಣಗೆ ಮಾಡುತ್ತದೆ ಅನಿಸಿದಾಗ ನಾ ಚಿಕ್ಕವರಿದ್ದಾಗ ಅಮ್ಮ ಒಲೆಯ ಮುಂದೆಯೇ ಕೂತು ಆ ಹಸಿಸೌದೆಯನ್ನೇ ಒಲೆಗೆ ತುರುಕಿಸಿ ಬೆಂಕಿಯ ಜೊತೆ ಕೊಂಚ ಹೊಗೆ ಕೂಡ ಬರ್ತಿದ್ದ ಆ ದಿನಗಳು ಕಣ್ಮುಂದೆ ಬಂತು. ಆದರೂ ಅಮ್ಮ ಮಾಡ್ತಿದ್ದ ಆ ನೀರು ದೋಸೆ, ಹೆಂಚು ಮೇಲೆ ತಟ್ಟಿದ ಅಕ್ಕಿ ರೊಟ್ಟಿಯ ರುಚಿಯ ಬೇರೆ. ನಿಮ್ಮ ಬರವಣಿಗೆ ನನ್ನ ಆ ಬಾಲ್ಯದ ದಿನಗಳನ್ನು ನೆನಪಿಸಿತು. ಹೌದು ಈಗ ಒಲೆಯಿಲ್ಲ, ಅದರಲ್ಲಿ ಕಣ್ಣೀರು ಸುರಿಸ್ತಾ ಅಡುಗೆ ಮಾಡೋ ತಾಳ್ಮೆಯಂತೂ ನನ್ನಂತ ತಾಯಿಯರಿಗೆ ಇಲ್ಲವೇ ಇಲ್ಲ, ಆದರೂ ನಿಂತೋ ಕುಂತೋ ಮಗನಿಗಾಗಿ ಗ್ಯಾಸ್ನಲ್ಲಿ ಅಡುಗೆ ಮಾಡಿ ಮಗನ ಜೊತೆ ಲಾಗ ಹೊಡೆಯೋ ಆ ಕ್ಷಣ ಇದ್ಯಲ್ಲ, ಅದರ ಮಜಾನೇ ಬೇರೆ*

*ನಿಜ, ಹೆತ್ತವರಿಗೆ ಹೆಗ್ಗಣವೂ ಮುದ್ದು. ಯಾವ ತರದ ಅಂಗವೈಕಲ್ಯವಿದ್ದರೂ ತಾಯಿಯಾದವಳಿಗೆ ಆ ಮಕ್ಕಳು ಸೂರ್ಯ ಚಂದ್ರರೆ. ಅಂತಹ ದೈಹಿಕ* *ನ್ಯೂನತೆಗಳಿರುವ ಅದೆಷ್ಟೋ ಜನ ಅಪ್ರತಿಮ ಸಾಧನೆಗೈದು ಇತಿಹಾಸದಲ್ಲಿ ಸೇರಿ ಹೋಗಿ ದೇಹವಳಿದರೂ ಮಾಸದ ನೆನಪಾಗಿ ಉಳಿಯುತ್ತಾರೆ. ಅಂಥಹ ವಿಶೇಷ ಚೇತನರ ಬಗ್ಗೆ ಬರೆದ ನಿಮ್ಮ ಬರವಣಿಗೆ ಸಾಧಕರಿಗೆ* *ಮಾರ್ಗದರ್ಶನವಾಗುತ್ತದೆ, ಪ್ರೇರಣೆಯಾಗುತ್ತದೆ.* 
*ದೇಹದ ಓರೆಕೋರೆಗಳಿಂದ ಮನುಷ್ಯನ ವ್ಯಕ್ತಿತ್ವವನ್ನು ಅಳೆಯಬಾರದು, ಆ ಓರೆಕೋರೆಗಳು ಸಾಧನೆಗೆಂದೂ ಅಡ್ಡಿಬರಲಾರವು.*

*ಸೂಪರ್ ಮೇಡಂ, ಅದ್ಭುತ ಪ್ರೇರಣದಾಯಕ ಬರವಣಿಗೆ.* 
*ಶುಭವಾಗಲಿ, ಸದಾ ಹೀಗೇ ಬರಿತಾ ಇರಿ, ಸಾಹಿತ್ಯಲೋಕದಲಿ ಸದಾ ನಿಮಗೆ ಯಶಸ್ಸು ಸಿಗಲಿ.* 

*ಶುಭಹಾರೈಕೆಗಳೊಂದಿಗೆ*

*ಪ್ರಮೀಳಾ ರಾಜ್*
[7/15/2019, 6:48 AM] Nybr Pramila: 🌹🌹🌹🌹🌹🌹🌹
*ಶುಭೋದಯ ಪ್ರೇಮ ಮೇಡಂ ಜೀ*
🙏🙏🙏🙏🙏🙏🙏🙏
*ಮುಂಜಾನೆ ಸಮಯದಿ ಕಡಲ ತಡಿಯ ಮಕ್ಕಳೆಲ್ಲ ಬಲೆಯ ಹಿಡಿದು ಮೀನು ಹಿಡಿಯುತ್ತಾ ಖುಷಿಪಡುವ ಸುಂದರ ದೃಶ್ಯ.*
*ಕಾಯಕವೇ ಕೈಲಾಸ, ಮುಂಜಾನೆಯಲೇ ಕಾಯಕದಲ್ಲಿ ತೊಡಗುವುದು ಆರೋಗ್ಯಕ್ಕೆ ಉತ್ತಮ ಎಂಬ ಸಂದೇಶದೊಂದಿಗೆ ನೀರು ಕಲುಷಿತಗೊಳಿಸದಿರೋಣ ಎಂಬ ಸುಂದರ ಸಂದೇಶ ಹೊತ್ತ ಕವನ ಚೆನ್ನಾಗಿದೆ*
👌👌👌👌👌👌👌👌
*ಶುಭವಾಗಲಿ, ಶುಭದಿನ*
💐💐💐💐💐💐💐
[7/15/2019, 12:45 PM] Wr Mahendr: *ಜಯಲಕ್ಷ್ಮಿ ಮೇಡಂ*
ತಮ್ಮ ಚೆಲುವೆಯ ವರ್ಣನೆಯ ಕವನವು ಚೆನ್ನಾಗಿದೆ ಇಲ್ಲಿ   ಸೂರ್ಯನ ಕಿರಣಗಳು ಇಬ್ಬನಿಯ ಮೇಲೆ ಬಿದ್ದಾಗ ನಿಜಕ್ಕೂ ಸೂರ್ಯನಿಗಿಂತಲೂ ವರ್ಣರಂಜಿತವಾಗಿ ಕಾಣುತ್ತದೆ ಅಂತಹ ಸೌಂದರ್ಯಕ್ಕೆ ರವಿ ನಾಚಲೇ ಬೇಕು ಇಲ್ಲಿ ಸಂಕೋಚ ಬಿಟ್ಟು
ಅಂತಹಾ ಅಪ್ಸರೆಯ ಸೆರೆಯಾಗಿಹ ಕವಿತೆ ಉತ್ತಮವಾಗಿದೆ.👍🏻💐💐

*@ಪ್ರೇಮ್@* ಮೇಡಂ ಅವರು ತಮ್ಮ ಹಾಡಿನ ಮೂಲಕ ಬೆಳಗಾಯಿತು ಏಳಿ ಕಾಯಕ ಮಾಡೋಣ ಬನ್ನಿ ಎನ್ನುತ್ತಾ ಮೀನುಗಾರಿಗೆ ಕರೆ ನೀಡಿದ್ದಾರೆ ಹಾಗೂ ಅವರಲ್ಲಿ ಪ್ರೋತ್ಸಾಹ ಉತ್ಸಾಹ ನೀಡುವ ಪ್ರಯತ್ನ ಶ್ಲಾಘನೀಯ ಮತ್ತು ಕಾಯಕ ತತ್ವವನ್ನು ಹೇಳಿದ್ದೀರಿ ಕಾಯಕವೇ ದೇವರು ಅದನ್ನು ಅಂದ್ರೆ ಆ ಸ್ಥಳವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎನ್ನುವ ಸಲಹೆ ನುಡಿಗಳು ಅರ್ಥ ಪೂರ್ಣವಾಗಿ ತಮ್ಮ ಕವನದಲ್ಲಿ ಮೂಡಿ ಬಂದಿದೆ ಉತ್ತಮ ಕವಿತೆ ಮೇಡಂ👍🏻👍🏻💐💐

*ಶಿವ ಪ್ರಸಾದ್ ಆರಾಧ್ಯ* ಅವರು ತಮ್ಮ ಕವಿತೆಗಳ ಸಾಲುಗಳನ್ನು ಜಗದಲ್ಲಿ ಇರುವ ಅನೇಕ ಸಾಮಾಜಿಕ ಮತ್ತು ವೈಯಕ್ತಿಕ ಸಮಸ್ಯೆಗಳನ್ನು ನಿವಾರಿಸಲು ರವಿಯನ್ನು ಕೂಗಿ ಕರೆದಿದ್ದು ಚೆನ್ನಾಗಿದೆ ರವಿಯ ಬೆಳಕಿನಿಂದ ಸಮಸ್ಯೆಯ ಕತ್ತಲು ನಿಜಕ್ಕೂ ಓಡಲಿ 
ತಮ್ಮ ಈ ಕಳಕಳಿಯ ಕಾವ್ಯಕ್ಕೆ ಅಭಿನಂದನೆಗಳು👍🏻👍🏻

    ✍🏻 ಮಹೇಂದ್ರ ಕುರ್ಡಿ
[7/16/2019, 7:25 AM] Wr Shivaprasad Aradhya: ಪ್ರೇಮರವರ ಭಾವಗೀತೆ ಭಾವನಾತ್ಮಕ.ಹಾಡುವ ಧಾಟಿಗೊಲಿವ ರಚನೆ. ನಿತ್ಯ ಮುಂಜಾನೆ ಬೇಗನೆ ಬರೆವ ಪ್ರೇಮ ಮತ್ತು ಜಯಲಕ್ಷ್ಮಿ ಇಬ್ಬರು ಕಾವ್ಯ ಮಾತೆಯರು ಇವರು.ಬಹಳ ಚೆನ್ನಾಗಿ ಬರೆಯುತ್ತಾರೆ

. ಶುಭವಾಗಲಿ ಶಿವಪ್ರಸಾದ್ ಆರಾಧ್ಯ
[7/16/2019, 7:36 AM] Wr Shivaprasad Aradhya: ಪ್ರೇಮರ ಭಾವಗೀತೆ

ಹಾಡಿನ ಹಂಬಲ

ಕಂಚಿನ ಕಂಠದ ಮಿಂಚಿನ ಮಾಲೆ 
ನಿನ್ನಯ ರಾಗವ ಕೇಳಿಸೆಯಾ?
ವಂಚಿತ ಮನದ ಹಿಂದೋಡುವ ಬಾಲರಿಗೆ
ನಿನ್ನಯ ಜ್ಞಾನವ ಕಲಿಸುವೆಯಾ?//

ಇಲ್ಲಿ ಬಾಲರ ತೆಗೆದರೆ ಗೇಯತೆವಲಭ್ಯ.ಹಿಂದೋಡುವವರಿಗೆ ಸಾಕಾಗುವುದು.ಮಕ್ಕಳ ಮನಸ್ಸು ಮಾತ್ರವಲ್ಲ ಎಲ್ಲರಿಗೂ ಸಹ ಇದು ಅನ್ವಯ.

ಕೋಲ್ಮಿಂಚಿನ ತುದಿಗೆ ರಾಗವ ಕಟ್ಟಿ
ನೂಪುರದಿ ಅದ ಎಳೆಯುವೆಯಾ?
ಮನದ ಸಾಗರದಿ ಏಳಲಿ ಅಲೆಗಳು
ದಡಕೆ ತಂದಪ್ಪಳಿಸಿ ಓಡಿಸೆಯಾ?//

ವಾವ್ ಇದಪ್ಪಾ ಭಾವಗೀತೆಯ ಸಾಲು ಅದೇನು ರಚನೆ ಭಾವ ಅಬ್ಬಬ್ಬಾ ಭಲೆ ಭಲೇ

ಪದರ ಪದರವಾದ ರಾಗ  ತರಂಗದಿ
ಮೈಮನವೆಲ್ಲ ನವಿರೇಳಿಸ ಬಾ,
ಹಾಡಿ ರಾಗ ಲಯ ತಾಳದ ನಡುವಲಿ
ಮುಳುಗಿ ಹೋಗುವಂತೆ ಹಾಡಲು ಬಾ..//

ಇಲ್ಲಿ ಮುಳುಗಿ ಹೋಗುವಂತೆ ಬೇಡ  ಮುಳುಗಲು ಸಾಕು

ಮೋಡ ರಾಶಿಗೆಲ್ಲ ಗುಡುಗಲು ಹೇಳಿ
ವರ್ಷ ಧಾರೆಯನು ಸುರಿಸುವೆಯಾ!
ಹಾಡ ಮೋಡದಲಿ ನೆಮ್ಮದಿ ಕಾಣುತ
ಮನಕೆ ಮಳೆಯ ತಂದು ಹರಸುವೆಯಾ!//

ಹಾಡ ಮೋಡದಲಿ ಬೇಡ ಮೋಡದ ಹಾಡಲಿ ಹಾಕಿ ಅಥವಾ ಹಾಡುವ ಮೋಡದಿ ಮಾಡಿ


@ಪ್ರೇಮ್@ ಮೇಡಂ ನವರು ಹೀಗೇ ಬರೆಯಲಿ ನಮಗೂ ಕಲಿಸಲಿ.ವಿಮರ್ಶೆ ಒಬತಬನ ಅನಿಸಿಕೆ.ಬೇಡದಿರೆ ತಳ್ಳಿ ಹಾಕಿ.ಅಗತ್ಯವೆನಿದರೆ ಸ್ವೀಕರಿಸಿ ಅಭಿನಂದನೆಗಳು
16.07.2019

ಶಿವಪ್ರಸಾದ್ ಆರಾಧ್ಯ ನೆಲಮಂಗಲ
[7/16/2019, 9:05 AM] Wr Siddesh: *ಪ್ರೇಮ್ ಮೆಡಮ್ ಅವರ ಹಾಡಿನ ಹಂಬಲ*

ಕಂಚಿನ ಕಂಠದ ಮಿಂಚಿನ ಮಾಲೆ ನಿನ್ನಯ ರಾಗವ ಕೇಳಿಸೆಯಾ !!! 

👌👌👌

ಸುಂದರ ಸಾಲುಗಳು ಮೆಡಮ್
[7/16/2019, 12:57 PM] Wr Kshama Raghuram: *ಪ್ರೇಮ್  ಮೇಡಂ  ಅವರ  ಹಾಡಿನ ಹಂಬಲ...*

ಆರಂಭ ದಿಂದ  ಅ಼ಂತ್ಯದವರೆಗೂ  ಕಂಚಿನ  ಕಂಠದ  ಮಿಂಚಿನ ಬಾಲೆ ಹಾಡಿದ್ದು   ಸುಂದರವಾಗಿ  ಮೂಡಿದೆ....
ಪ್ರತಿಯೊಂದು  ಚರಣಗಳು..,.ಪ್ರತಿಯೊಂದು  ಸಾಲುಗಳು  ಸೊಗಸಾಗಿದೆ....
ಉತ್ತಮ   ಭಾವಭಿವ್ಯಕ್ತಿಯ  ಉತ್ತಮ  ಭಾವಗೀತೆ.... 
ಕಂಚಿನ ಕಂಠದ  ಗಾಯಕರಿಗೆ
ಈ  ಗೀತೆಯನ್ನು ಹಾಡಲು ತಿಳಿಸಿದರೆ....ಗೀತೆ  ಪ್ರಸಿದ್ದಿಯಾಗುವುದರಲ್ಲಿ  ಸಂದೇಹವೇ  ಇಲ್ಲ....

ಅಭಿನ಼ಂದನೆಗಳು  ಮೇಡಂ...ನಮಸ್ಕಾರ .💐

ಕ್ಷಮಾ  ರಘುರಾಮ್
[7/16/2019, 7:25 PM] Wr Vani Bhandari: *ನಮಸ್ತೆ*
🙏🏻🙏🏻🙏🏻
*ಪ್ರೇಮ ಅವರ ಹಾಡುವ ಹಂಬಲ*

       ಮೇಡಂ ಸೂಪರ್ ಆಗಿದೆ ಹಾಡಿನ ಹಂಬಲ.

👉 ಹಾಡಿನ ಹಂಬಲವನ್ನೂ ಹೀಗೂ ಕವಿ ಹೇಳಬಹುದು ಎಂಬುದನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ.

👉ಕೋಲ್ಮಿಂಚಿನ ತುದಿಗೆ ರಾಗ ಕಟ್ಟಿ ನೂಪುರದಿ ಎಳೆವೆಯಾ?? ಆಹಾ!! ಕವಿ ಕಲ್ಪನೆ ಎಷ್ಟು ಸೊಗಸಾಗಿದೆ.
ನಿಜಕ್ಕೂ ಇಷ್ಡವಾಯ್ತು ಮೇಡಂ ಜಿ.

👉ಒಂದೊಂದು ಪದವು ಮಣಿಮುತ್ತುಗಳ ಎರಕ ಹೊಯ್ದಂತೆ ಬಹು ಸುಂದರವಾಗಿ ಕಾಣುವುದು.

👉ಸರಳ ಸುಂದರ ಪದಗಳ ನಡುವೆ ಸುಂದರ ಭಾವ ಹೊಂದಿದೆ, 

ಹೀಗೆ ಸದಾ ಬರೆಯುವ ನಿಮಗೆ ಯಶಸ್ಸು ಸಿಗಲಿ ಶುಭವಾಗಲಿ ಜಿ.

*ಧನ್ಯವಾದಗಳೊಂದಿಗೆ*,,


                    *✍ವಾಣಿ ಭಂಡಾರಿ*
[7/17/2019, 7:03 AM] Wr Shivaprasad Aradhya: ಪ್ರೇಮರವರ ಭಾವಗೀತೆ ರತ್ನನ ಪದಗಳ ಧಾಟಿಯಲ್ಲಿ ಹೊಸ ಛಾಪು ಮೂಡಿಸಿದೆ.ಸುಂದರ ಸರಸಮಯ ಸಾಲುಗಳ ಗ್ರಾಮ್ಯ ಸೊಗಡಿನ ಅನಾವರಣ ಸರಸ ಸಲ್ಲಾಪ .ಉತ್ತಮ ಭಾವಗಳಿಗೆ ಅಭಿನಂದನೆಗಳು ಪ್ರೇಮ.

ಶಿವಪ್ರಸಾದ್ ಆರಾಧ್ಯ
[7/17/2019, 9:49 AM] Wr Sham Prasad Bhat: *ಪ್ರೇಮ್*
*ಕೇಳೇ ನನ್ ಹಾಡ*

ನನ್ನ ಶಕ್ತಿಗನುಗುಣವಾಗಿ ನಿನ್ನ ಪ್ರೀತಿಸ್ತೀನಿ.ಇರುವುದರಲ್ಲಿ ತೃಪ್ತಿ ಪಡ್ತಿನಿ ಎಂಬ ಆಶಯ ..ಜೊತೆಗೆ ಸ್ವಲ್ಪ ಹಾಸ್ಯ ದ ಸ್ಪರ್ಶ...ಚೆನ್ನಾಗಿದೆ.

ಜನಪದ ಸೊಗಡು ತುಂಬಿ
ಭಾವಗೀತೆಯ ಸೊಗಡು ಸ್ವಲ್ಪ ಕ್ಷೀಣಿಸಿತು ಅನಿಸಿತು.

ಉತ್ತಮ ಪ್ರಯತ್ನ

ಧನ್ಯವಾದಗಳು

*ಶ್ಯಾಮ್ ಪ್ರಸಾದ್*
[7/17/2019, 10:45 AM] Wr Sham Prasad Bhat: ಸರಿ ಬಿಡಿ...ರತ್ನನ ಪದಗಳನ್ನು ಕೇಳಿರುವೆ.ನನ್ನ ಅನಿಸಿಕೆ ಅಷ್ಟೇ.. ದಯವಿಟ್ಟು ತಪ್ಪಾಗಿದ್ದರೆ ಕ್ಷಮಿಸಿಬಿಡಿ.

ಮುನಿಸಿ ತರವೇ ಮುಗುದೇ
ಓ ನನ್ನ ಚೇತನ
ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೇ
ಇವೆಲ್ಲಾ ಗೀತೆಗಳು ನನಗಿಷ್ಟ..ಹಾಗಾಗಿ ನನಗೆ ಹಾಗನಿಸಿರಬಹುದು..ದಯವಿಟ್ಟು ಮಗದೊಮ್ಮೆ ಕ್ಷಮಿಸಿಬಿಡಿ ಸಹೋದರಿ.
[7/18/2019, 7:18 AM] Wr Siddesh: *ಬಾನಿನಾಟ*
*ಪ್ರೇಮ್ ಮೆಡಮ್*   

🙏🙏🙏


ಇರುಳಲ್ಲಿ ಚಂದಿರ ಬರುವ ಸಮಯ ದಿ ಮೂಡುವ ದೃಶ್ಯ ದ ಕಾವ್ಯ ವೈಭವ ತನ್ನದೆ ಪದಗಳನ್ನು ಸೇರಿಸಿ ...‌ಸೂಪರ್ .....

ಸೂರ್ಯ ಚಂದ್ರ ...ಬದುಕಿಗೆ ಬಿಂಬಿಸಿ ಬರೆದಿರೊದು ...ಸೂಪರ್ ...

ಬಾಳ...ಹಾದಿಯಲಿ ಹಗಲು .ರಾತ್ರಿ 

*ಹಗಲುಂಟು ಸೂರ್ಯನಿಗೆ*
*ಇರುಳುಂಟು ಚಂದ್ರನಿಗೆ*

ಸೂಪರ್ ...!! 👌👌👌
[7/18/2019, 9:48 AM] Wr Anitha: *ಪ್ರೇಮ್ ಅವರ*

*ಬಾನಿನಾಟ*

*ಚಂದ್ರಲೋಕದಲ್ಲಿಯೂ  ಕಛೇರಿ nice imagination* 

*ಕನ್ನಡಿ ನೋಡುತ ಧರಣಿ ದೇವಿ ಬೆಳ್ಳಗಾದಳು*. *Waw super*
*ತಾರೆ ಗಳೊಡನೆ ಹುಣ್ಣಿಮೆ* *ಕೂಟ*
*ಸೋಮನ ಬಾನಿನಾಟ. Very nice*

*ಮಳೆ ಯ ಆಟಕೆ ಮರದೆಲೆ ಬಾಗಿತು*
*ನಿಜ ನಿಜ*

*ಹಗಲು ರಾತ್ರಿ ಯದು ಬಾಳ ಹಾದಿಯಲ್ಲಿ perfect trut*
👏👏👏👏👏👏👏👏
*ಧನ್ಯವಾದಗಳು*
[7/19/2019, 7:24 AM] Wr Amaresh: 🙏 *ಪ್ರೇಮ್ ಜೀ* 

೨) *ಯೋಧ*

ಸ್ಪೂರ್ತಿಯ ಕಣಜ ಯೋಧನರಿಗೊಂದು ನಮನ. ಸಾವನ್ನು ಬೆನ್ನಿಗೆ ಕಟ್ಟಿಕೊಂಡು ಮುನ್ನುಗ್ಗುವ ದೇಶಕಾಯುವ ಧೀರತನಕ್ಕೆ ನಮನ.

ತನ್ನ ಜೀವದ ಪರಿವೇ ಇರದೆ, ಗುಡುಗು ಸಿಡಿಲು ಮಳೆಯಲಿ ಎದೆಯೊಡ್ಡಿ ನಿಲ್ಲುವ, ಮರಣವನ್ನು ದೇಶ ಭಕ್ತಿ ಎನ್ನು ದೊರೆಗೆ ನಮನ.

ಯೋಧ ತನ್ನ ದೇಶ ಭಕ್ತಿ ಯ ಕಾರ್ಯದಿಂದ ಎಲ್ಲರಿಗೂ ಸ್ಪೂರ್ತಿಯಾಗಿದ್ದರೆ. ತನಗೆ ಮಾತ್ರ ತಾನೇ ಸ್ಪೂರ್ತಿ ಎಂಬ ನೈಜತೆಯನ್ನು ಸುಂದರವಾಗಿ ಚಿತ್ರಿಸಿರುವುದಕ್ಕೆ ನಿಮಗಿಂದು ನಮನ..!

✍ *ಅಮರೇಶ್ ಎಂಕೆ*
[7/19/2019, 9:30 AM] Wr Sham Prasad Bhat: *ಪ್ರೇಮ್*

*ಯೋಧ*

ಸೈನಿಕನ ಬಗ್ಗೆ ಬರೆದ ಭಾವಗೀತೆ ಮನೋಜ್ಞವಾಗಿ ಮೂಡಿ ಬಂದಿದೆ.
ಗುಂಡಿನ ದಾಳಿಗೆ ದೇಹದಿಂದ ನೆತ್ತರು ಜಿನುಗುತ್ತಿದ್ದರೂ ಹಿಂದಡಿ ಇಡದೆ ಮುನ್ನುಗ್ಗುವ ಎದೆಗಾರಿಕೆ ಯೋಧನಿಗಲ್ಲದೇ ಇನ್ನಾರಿಗಿದೆ...ವೈರಿ ಎಂಬ ಗುರಿಯನ್ನು ಗುರುತಿಸಿ ಅವನನ್ನು ಮಟ್ಟಹಾಕಿದ ಮೇಲೆಯೇ ವಿರಮಿಸಬೇಕು..ಅಲ್ಲಿಯವರೆಗೆ ಹೋರಾಡಲೇ ಬೇಕೆಂಬ ಆದಮ್ಯ ಉತ್ಸಾಹ...ಮೆಚ್ಚಿಕ್ಕೊಂಡೆ ಹೋದನ ಶ್ಲಾಘನೀಯ ಕಾರ್ಯವನ್ನು...

ಹಸಿವು,ಮನೆ,ಮಡದಿ,ಮಕ್ಕಳು ಇವೆಲ್ಲಾ ಅನಂತರ..ಮೊದಲು ದೇಶ...ದೇಶ ಸಂರಕ್ಷಣೆಯ ಗುರುತರ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಯೋಧನಿಗೆ ಸಲಾಂ....

ಜೀವದ ಹಂಗು ತೊರೆದು ರಣರಂಗದಲ್ಲಿ ಹೋರಾಡಿ ವಿಜಯೋತ್ಸವ ಆಚರಿಸುವ ಮಹತ್ವಾಕಾಂಕ್ಷೆಯ ಯೋಧನಿಗೆ ಸಮಾನರಾರು?

ವಾತಾವರಣ ಹೇಗೆ ಬೇಕಾದರೂ ಇರಲಿ, ಹಿಮ ಮಳೆಗರೆಯಲಿ,ಸುಳಿಗಾಳಿ ಬೀಸಲಿ..ಅವನ ಆತ್ಮವಿಶ್ವಾಸಕ್ಕೆ ಧಕ್ಕೆಯಾಗದು..

ಕವಯತ್ರಿ ಇಲ್ಲಿ ಯೋಧನಿಂದ ಸ್ಪೂರ್ತಿ ಪಡೆದು ಭಾವಗೀತೆ ರಚಿಸಿದ್ದಾರೆ.ಸ್ವಸ್ಥ ಸಮಾಜ ನಿರ್ಮಾಣದ ಕನಸನ್ನು ನನಸಾಗಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ..

ಉತ್ತಮ ಬರವಣಿಗೆ ಸಹೋದರಿ

ಧನ್ಯವಾದಗಳು

*ಶ್ಯಾಮ್ ಪ್ರಸಾದ್*
[7/22/2019, 11:53 AM] Wr Vara Lakshmi Amma: ಪ್ರೇಮ್  ಅವರ ನ್ಯಾನೋ ಕತೆ
 ಸುಂದರ ಸಂಸಾರದ ಚಿತ್ರಣ
 ಆದರೆ ಯಾಕೋ ಸ್ವಲ್ಪ ಅಪೂರ್ಣ  ಅನ್ನಿಸುತ್ತದೆ.  ನಿಮ್ಮ ಭಾವಕ್ಕೆ ಧಕ್ಕೆಯಾದರೆ ಕ್ಷಮೆ ಇರಲಿ 🙏
[7/22/2019, 12:15 PM] +91 70225 26694: ಪ್ರೇಮ್ ರವರೆ ನಮಸ್ತೆ

ಸಿರಿವಂತರ ಸ್ವಾಥ೯ ಪ್ರಪಂಚವನ್ನು ಚಿಕ್ಕ ಸಾಲುಗಳಲ್ಲಿ ಚುಚ್ಚಿ ಹೇಳುವಂತಿವೆ ಕಥೆಯ ಹರವು ತೀರಾ ಚಿಕ್ಕದು ಅನಿಸಿತು
ದಾನವಿಲ್ಲದ ಮನೆ ದೊಡ್ಡದಾದರೇನು
ಎಂಬ ಮಾತನ್ನು ಪುಷ್ಠಿಕರಿಸುವಂತಿದೆ

ಧನ್ಯವಾದಗಳು

ರಾಜೇಶ್ವರಿ ನಿಂ ಬಿಲಹಳ್ಳಿ
[7/22/2019, 12:41 PM] Wr Vani Bhandari: *ನಮಸ್ತೇ*
🙏🏻🙏🏻🙏🏻
*ಪ್ರೇಮ ಅವರ ನ್ಯಾನೊ ಕತೆ*

        *ಸುಂದರವಾದ ಆಶಯವನ್ನು ಹೊತ್ತು ಬಂದ ಕತೆ ಮೇಡಂ ಜಿ.*

      ಬಹುಶಃ ಹೊರಪ್ರಪಂಚಕ್ಕೆ ಬಂದರೆ ತಾನೆ ಜಗತ್ತಿನ ರೀತಿನೀತಿಗಳು ತಿಳಿವುದು.ಇಲ್ಲದಿದ್ದ ಪಕ್ಷಕ್ಕೆ ತಾವಿರುವೆ ಸ್ಥಳವೆ ಬೃಹದಾಕಾರದ ಪ್ರಪಂಚ ವಾಗುತ್ತದೆ.
👉ಉತ್ತಮ ಆಶಯ ಹೊತ್ತಿದೆ.
👉ಸುಂದರವಾಗಿದೆ.
👉 ಕೊಟ್ಟ ನಿಯಮಕ್ಕೆ ತಕ್ಕುದಾಗಿದೆ.

ಸಕಲ ಬರಹವನ್ನು ಸುಂದರವಾಗಿ ಬರೆವ ನಿಮಗೆ ಶುಭವಾಗಲಿ ಜಿ.

*ಧನ್ಯವಾದಗಳೊಂದಿಗೆ*

                             *✍ವಾಣಿ ಭಂಡಾರಿ*
[7/22/2019, 4:40 PM] Wr Sreemati Joshi: ಪ್ರೇಮ ರವರ ಕಥೆ ಸುಖ ಸಂಸಾರದ  ಚೌಕಟ್ಟಿನಲ್ಲಿ ಬಂಧಿತವಾದ ಸುಂದರ ಜೀವನ ದ ಸಾರ ಹೊತ್ತ ಕಥೆಯ ಭಾವ ಚೆನ್ನಾಗಿದೆ. ಕಥೆಗೊಂದು ತಲೆ ಬರಹ ಇದ್ದರೆ ಇನ್ನೂ ಶೋಭೆ ಬರುತ್ತಿತ್ತು.  ಅಂತ ಅನಿಸಿಕೆ 👌👌🙏🙏👏👏
[7/23/2019, 1:00 PM] Wr Uday Bhaskar Sullia: *ಪ್ರೇಮಾ ಮೇಡಂ*

*ತಪ್ಪಿಗೆ ಶಿಕ್ಷೆ*

ಬದುಕಿದ್ದಾಗ ಅಹಂಕಾರದಿಂದ ಮೆರೆದಾಡಿ ನಾನೇ ಸರ್ವಸ್ವ, ಸರ್ವಶ್ರೇಷ್ಠ ಅನ್ನುವಂತೆ ಮೆರೆದಾಡಿ ದೇಹವನ್ನು ತ್ಯಜಿಸಿದ ಬಳಿಕ ಕಳೆದು ಹೋದ ಬದುಕಿನಲ್ಲಿ ಮಾಡಿದ ಪಾಪಕರ್ಮಗಳ ಬಗ್ಗೆ ಪರಿತಪಿಸು ಪಶ್ಚಾತ್ತಾಪ ಪಡುವ ಆತ್ಮಗಳ ಮಾತುಕತೆಯನ್ನು ನ್ಯಾನೋ ಕಥೆಯ ಮೂಲಕ ತೆರೆದಿಟ್ಟಿದ್ದೀರಿ.  

*"ನಾನು ನನ್ನ ಹೆಂಡತಿಗೆ ಕುಡಿದು ಬಂದು ಹಾಗೆ ಹೊಡೆದಾಡಬಾರದಿತ್ತು ಕಣೋ"*

ಈ ವಾಕ್ಯದಲ್ಲಿ ನಾನು ಕಂಡ ಪುಟ್ಟ ವ್ಯಾಕರಣ ದೋಷ

ನಾನು ನನ್ನ *ಹೆಂಡತಿಗೆ* ಕುಡಿದು ಬಂದು ಹಾಗೆ *ಹೊಡೆದಾಡಬಾರದಿತ್ತು* ಕಣೋ" ಈ ವಾಕ್ಯದಲ್ಲಿ *ಹೆಂಡತಿಗೆ ಹೊಡೆದಾಡಬಾರದಿತ್ತು* ಅಷ್ಟೊಂದು ಸರಿ ಅನಿಸಲಿಲ್ಲ. *ಹೆಂಡತಿಗೆ ಹೊಡೆಯಬಾರದಿತ್ತು* ಅಥವಾ *ಹೆಂಡತಿಯ ಜೊತೆ ಹೊಡೆದಾಡಬಾರದಿತ್ತು* ಹೀಗೆ ಮಾಡಿದರೆ ಸರಿ ಆಗುತ್ತಿತ್ತೇನೋ..? 

(ಅದರಲ್ಲೂ *ಹೊಡೆಯುವುದು* ಮತ್ತು *ಹೊಡೆದಾಟ* ಈ ಎರಡೂ ಪದಗಳಿಗೆ ವ್ಯತ್ಯಾಸ ಇದೆ. *ಹೊಡೆದಾಟ* ಅನ್ನುವುದು *ಇಬ್ಬರೂ ಹೊಡೆದುಕೊಂಡಾಗ* ಸಂಭವಿಸುವಂತದ್ದು, ಆದರೆ ನಿಮ್ಮ ಕಥೆಯಲ್ಲಿ ಗಂಡ ಮಾತ್ರ *ಹೊಡೆದ* ಕಾರಣ *ಹೆಂಡತಿಗೆ ಹೊಡೆಯಬಾರದಿತ್ತು* ಅನ್ನುವುದೇ ಹೆಚ್ಚು ಸಮಂಜಸ)

*ತಿಳುವಳಿಕೆಯಲ್ಲೂ ವಿದ್ಯಾಭ್ಯಾಸದಲ್ಲೂ ನಿಮಗಿಂತ ತೀರಾ ಕಿರಿಯವ ನಾನು. ನನ್ನ ಅಲ್ಪಬುದ್ಧಿಯ ತಿಳುವಳಿಕೆಯ ಪ್ರಕಾರ ವ್ಯಾಕರಣ ವಿಮರ್ಶೆ ಮಾಡಿರುವೆ, ತಪ್ಪಾಗಿದ್ದಲ್ಲಿ  ನೋವಾಗಿದ್ದಲ್ಲಿ ಕ್ಷಮೆಯಿರಲಿ ಮೇಡಂ..*

*ಶುಭವಾಗಲಿ*

*- ಉದಯಭಾಸ್ಕರ್ ಸುಳ್ಯ*
[7/23/2019, 2:04 PM] Wr Anitha: *ತಪ್ಪಿಗೆ ಶಿಕ್ಷೆ*

*ಬದುಕೊಂದು ತಪ್ಪು, ಒಪ್ಪುಗಳ ಸಂತೆ*


*ಮಾಡಿದ್ದುಣ್ಣೋ ಮಾರಾಯ ಅದನ್ನು ಹೇಳಿದರೆಯಾಕ ಭಯ*
*ಬಿತ್ತಿದ್ದನ್ನ ಕೊಯ್ಯಲೇ ಬೇಕು* *ತಿಳಿಯೋ ನೀನು ಮಾರಾಯ*
*ಮಾಡಿದ್ದುಣ್ಣೋ ಮಾರಾಯ*

*ಮೇಲಕ್ಕೆ ಎಸೆದರ ಕಲ್ಲ ತಲಿ ಮ್ಯಾಲ ಬೀಳುತೈತಲ್ಲ*
*ಕೆಸರಾಗ ಎಸೆದರೆ ಕಲ್ಲ ನೀ* *ಹೊಲಸ ಆಗುತ್ತೀಯಲ್ಲ*
*ಬೇರೆಯವರಿಗೆ ತೋಡಿದ ಗುಂಡ್ಯಾಗ ನೀನು ಬಿದ್ದೀಯಲ್ಲ*

*ಎನ್ನುವ ಪದಗಳಂತೆ* 
*ಇಲ್ಲೆ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು, ಎಂದು ಅರ್ಥ ಮಾಡಿಕೊಂಡು ಬದುಕಿರುವಾಗಲೇ ತಪ್ಪು ತಿದ್ದುಕೊಂಡಿದ್ದರೆ, ಹೀಗೆ* *ಆತ್ಮವಾಗಿ ಮಾತನಾಡಿಕೊಳ್ಳುವ ಪ್ರಮೇಯ ತಪ್ಪುತ್ತಿತ್ತೇನೋ*.  
*ತಪ್ಪು ಮಾಡದವರ್ಯಾರೌರೆ* 
*ತಪ್ಪೇ ಇಲ್ಲದವರ್ಯಾರೌರೆ* 
*ಅಪ್ಪಿ ತಪ್ಪಿ ತಪ್ಪಾಗುತ್ತೆ* , 
*ಬೆಳ್ಳಿ ಕೂಡ ಕಪ್ಪಾಗುತ್ತೆ*,

*ತಪ್ಪು ಮಾಡೊದು ಸಹಜ ಕಣೋ, ತಿದ್ದಿ ನಡೆಯೋನು* *ಮನುಜಾ ಕಣೋ* 
*ಎಂಬಂತೆ ತಿದ್ದು ನಡೆವ ಬುದ್ದಿಬರಲಿ*

*ತಿದ್ದಿ, ಬುದ್ದಿ ತಿಳಿಸುವ ಪದಗಳಿಗೆ ವಂದನೆಗಳು*

*ಧನ್ಯವಾದ ಪ್ರೇಮ್ ಮೇಡಮ್,*
[7/25/2019, 6:40 AM] Wr Vinuta Kicchikeri: ಶುಭಮುಂಜಾನೆ  ಪ್ರೇಮ್ ಮೇಡಂ ಹೌದು ನಿಜ ನೀವು ಹೇಳೋದು.

ನಿಮ್ಮ ಕಥೆನೂ ಚಂದವಿದೆ.ನೋಡಿ ದೊಡ್ಡ ದೊಡ್ಡ ಭಾಷಣ ಮಾಡಿ ಆಮೇಲೆ ಮಾಡೋದೆಲ್ಲ ಮಣ್ಣು ತಿನ್ನೋ ಕೆಲಸ ಅಂತಾರಲ್ಲ ಹಾಗೆ.ಮತ್ತೆ ದುಡ್ಡಿದೆ ಏನು ಮಾಡಿದರೂ ನಡೆಯುತ್ತೆ ಅನ್ನೋ ಒಣ ಧೈರ್ಯ. ಈಗಿನ ಕಾನೂನು ವ್ಯವಸ್ಥೆ ಗಳು ಅಂತವರ ಪರವಾಗೆ ಇದೆ ಅಲ್ಲವೇ ಚಂದವಿದೆ. 

ವಿನುತಾ ಕಿಚ್ಚಿಕೇರಿ
[7/25/2019, 8:31 AM] Wr Manu Vaidya: *ಪ್ರೇಮಕ್ಕನವರ ನ್ಯಾನೋ ಕಥೆಯ ಕುರಿತಂತೆ*

 *"ಹೇಳುವುದು ಒಂದು"* ಎಂಬ ಶೀರ್ಷಿಕೆಯೇ ಕಥೆಯ ಸಾರವನ್ನು ಹೇಳುವಂತಿದೆ...

 *ಹೇಳುವುದು ಒಂದು, ಮಾಡುವುದು ಇನ್ನೊಂದು*  ಎಂಬ ಹಳೆಯ ಗಾದೆ ಇನ್ನೂ ಪ್ರಚಲಿತದಲ್ಲಿದೆ.. ಮತ್ತೊಂದು ಮಾತಿದೆ, *"ಹೇಳೋದು ಆಚಾರ ತಿನ್ನೋದು ಬದನೆಕಾಯಿ"* ಎಂದು.. ಈ ಮಾತುಗಳಿಗೆ ಉದಾಹರಣೆಯಂತಿದೆ ನಿಮ್ಮ ಕಥೆ.. ಉತ್ತಮ ನೀತಿಯನ್ನು ಸಾರುತ್ತದೆ.. ಹೊರಗೊಂದು, ಒಳಗೊಂದು, ಮಾಡುತ್ತಾ ಮುಖವಾಡದ ಜೀವನ ನಡೆಸುವವರಿಗೆ ನಿಮ್ಮ ಕಥೆ ಚಾಟಿ ಬೀಸಿದಂತಿದೆ..

ಇನ್ನು ನಿಮ್ಮ ಕಥೆಯಲ್ಲಿ...

👉🏻ನಿರೂಪಣೆ ಶೈಲಿ ಉತ್ತಮವಾಗಿದೆ
👉🏻ಪಾತ್ರವನ್ನು ಮಾತಾಡಿಸುವ ಮೂಲಕ ಕಥೆಗೆ ಒಂದು ಮೆರುಗು ಕೊಟ್ಟಿದ್ದೀರಾ..
👉🏻ಕಥೆಗೆ ಆಯ್ದುಕೊಂಡ ವಸ್ತುವಿಷಯ ಚೆನ್ನಾಗಿದ್ದರೂ, ಇದು ಸ್ವಲ್ಪ ಹಳೆಯದಾಯಿತು ಅಂತ ಅನಿಸಿತು ಅಕ್ಕಾ..
👉🏻ಯಾಕೆಂದರೆ, ಇದಕ್ಕೆ ಸಂಬಂಧಿಸಿದಂತೆ, ಸಾಕಷ್ಟು ಬಗೆ,ಬಗೆಯ ಕಥೆಗಳು ಬಂದುಬಿಟ್ಟಿವೆ.. ಅದರಲ್ಲೂ ಇದನ್ನು ಇನ್ನೂ ಸ್ವಲ್ಪ ವಿಭಿನ್ನವಾಗಿ ಹೇಳಿದ್ದರೆ ನಿಮ್ಮ ಕಥೆ ಇನ್ನಷ್ಟು ಸೊಗಸಾಗಿ ಕಾಣುತ್ತಿತ್ತು ಅಕ್ಕಾ..
👉🏻ಆದರೂ ಬರೆದ ಶೈಲಿ, ಕಥೆ ಉತ್ತಮವಾಗಿದೆ..

ನನಗೆ ಅನಿಸಿದಂತೆ ಹೇಳಿರುವೆ ಅಕ್ಕಾ.. ತಪ್ಪಿದ್ದರೆ ಮನ್ನಿಸಿ..

✍ *ಮನು ವೈದ್ಯ*
[7/25/2019, 4:44 PM] @PREM@: ಜೋಷಿ ಮೇಡಂ ನಿಮ್ಮ ಕತೆಯಲ್ಲಿ ನನ್ನನ್ನೇ ಕಂಡಂತಾಯಿತು. ಅಮ್ಮನ ಮನೆ ಬದಲಾಯಿಸುವಾಗ ತಮ್ಮ ನನ್ನ ಕಲೆಕ್ಷನ್ನಲ್ಲಿದ್ದ ಹಲವಾರು ನನ್ನ ಡೈರಿಗಳನ್ನಾಗಲೇ ಗುಜಿರಿಗೆ ಹಾಕಿದ್ದ. ಕೆಲ ಪುಸ್ತಕಗಳನ್ನು ಆಸೆ ತಾಳದೆ ಹತ್ತಿರದ ಪ್ರೌಢಶಾಲಾ ಹೆಡ್ ಮಾಸ್ಟರಿಗೆ ಫೋನ್ ಮಾಡಿ ಗ್ರಂಥಾಲಯಕ್ಕೆ ತರಲು ಹೇಳಿದೆ. ನನಗೋ ಹೋಗಿ ತರುವ ಶಕ್ತಿ ಇರಲಿಲ್ಲ ಕಾರಣ ನನ್ನ ಡೆಲಿವರಿ ಆಗಿ ಒಂದು ತಿಂಗಳೂ ಕಳೆದಿರಲಿಲ್ಲ, ನಾನು ನನ್ನ ರೂಂ ಬಿಟ್ಟು ಅಜ್ಜಿ ಮನೇಲಿ ಮಗು ಮತ್ತು ದೊಡ್ಡಮ್ಮನೊಂದಿಗಿದ್ದೆ!ಪುಸ್ತಕಗಳನ್ನು ಮಕ್ಕಳಂತೆ ಪ್ರೀತಿಸುವ ನನಗೆ ತುಂಬಾ ಬೇಸರವಾದರೂ ಅನಿವಾರ್ಯ ಪರಿಸ್ಥಿತಿ ಎದುರಿಸಲೇ ಬೇಕು. ಈಗಲೂ ನನ್ನ ರೂಮಲ್ಲಿ ಭಾರದ ದೊಡ್ಡ ಲಗೇಜೆಂದರೆ ಪುಸ್ತಕಗಳೇ. ನೀವು ಬರೆದ ಕತೆ ನನ್ನನ್ನೇ ನೋಡಿ ಬರೆದಂತೆ ಭಾಸವಾಯಿತು..🙏🙏
[7/26/2019, 8:15 AM] Wr Sham Prasad Bhat: *ಪ್ರೇಮ್*

*ಬದಲಾಯಿತು ಬದುಕು*

ರಕ್ತ ಕಂಡಾಗ ತಲೆ ಸುತ್ತು ಬರುವವರು ಹಲವರಿದ್ದಾರೆ.ಇದು ಕಾಯಿಲೆಯಲ್ಲ.ಮಾನಸಿಕ ಅಭದ್ರತೆ.ಫೋಬಿಯಾ..ಎತ್ತರದಿಂದ ಕೆಳಗಿಣುಕಿದಾಗ ಹೆದರಿ ತಲೆ ಸುತ್ತು ಬರುವುದು ಕೆಲವರಿಗೆ.ಇದನ್ನು ಹೈಟ್ ಫೋಬಿಯಾ ಅನ್ನುತ್ತೇವೆ.ಈ ಕತೆಯಲ್ಲಿ ಅವಳ ಫೋಬಿಯಾ ಅವಳಿಗೆ ಪ್ರತಿಕೂಲವಾಗಿ ಪರಿಣಮಿಸಿತು.ಇಲ್ಲವೆಂದಾದಲ್ಲಿ ಅವಳು ನರ್ಸಿಂಗ್ ಕ್ಷೇತ್ರದಲ್ಲಿ ಮುಂದುವರಿಯುತ್ತಿದ್ದಳು.ತಾಂತ್ರಿಕತೆ ಯ ಉತ್ತುಂಗದ ದಿನಗಳಿವು.ಕಂಪ್ಯೂಟರ್ ಡಿಪ್ಲೊಮಾ ಮಾಡಿದ ಅವಳಿಗೆ ಯತ್ತಮ ನೌಕರಿ ದೊರೆಯಿತು.
ಫೋಬಿಯಾ ಅವಳಿಗೆ ಒಳ್ಳೆಯದನ್ನೇ ಮಾಡಿತು .ಸೂಕ್ಷ್ಮ ಸಂಗತಿಯೊಂದನ್ನು ಆಯ್ದು ರಚಿಸಿದ ನ್ಯಾನೋ ಚೆನ್ನಾಗಿದೆ.

ಧನ್ಯವಾದಗಳು

*ಶ್ಯಾಮ್ ಪ್ರಸಾದ್*
[7/29/2019, 1:09 PM] Wr Nagamani Mysore: ಪ್ರೇಮ್ ಅವರ ಹನಿಗಳು ನಗೆಯುಕ್ಕಿಸುವಲ್ಲಿ ಯಶಸ್ವಿ ಆಗಿದೆ.

ಮಗಳ ವಯಸ್ಸು ಅಂಥದ್ದು, ಕನ್ನಡಿಯೇ ಅವಳ ಪ್ರಪಂಚ.. ಹುಚ್ಚು ಖೋಡಿ ಮನಸು.... 

ಮಡದಿಗೆ ದೂರದರ್ಶನ ಹಿಡಿಸಿರುವ ಹುಚ್ಚು ಈ ಪರಿಯಾಗಿ ಗಂಡನನ್ನು ಕಾಡಿಸುತ್ತಿದೆ.. ಧಾರಾವಾಹಿ ಬಿಟ್ಟು ಏಳಲಾರದೇ ಆತ್ಮೀಯತೆಯಿಂದ ಕಳೆಯಬೇಕಾದ ಸಮಯವನ್ನು ಟಿ.ವಿ ಮುಂದೆ ಕಳೆಯುತ್ತಿದ್ದಾಳೆ.

ಇಬ್ಬರು ತನ್ನ ಜೊತೆಗಿಲ್ಲದೇ ಗಂಡ ತನ್ನ ಪಾಡಿಗೆ ತಾನು ಮೊಬೈಲ್ ಫೋನ್ ತನ್ನ ಜೀವವಾಗಿ ಮಾಡಿಕೊಂಡು ಕಾಲ ಕಳೆಯುತ್ತಿದ್ದಾನೆ. 
ಅವರಿಬ್ಬರೂ ಹೀಗೆ ಅಂತ ಇವ ಹೀಗೋ ಅಥವಾ ಇವ ಹೀಗೆ ಅಂತ ಅವರಿಬ್ಬರೂ ಹಾಗೋ ಗೊತ್ತಾಗಲಿಲ್ಲ..
ಬಹುತೇಕ ಮನೆಗಳ ಪರಿಸ್ಥಿತಿ ಇದು !!

ನಾಗಮಣಿ
[7/29/2019, 2:02 PM] Wr Sreemati Joshi: ಪ್ರೇಮ್ ಮೇಡಂ 🙏🙏ಈಗಿನ ಜನರೇಶನ್ ಗೆ ತಕ್ಕ ಹಾಗೆ ಹನಿ. ನಗು ತರಿಸುತ್ತದೆ. ನಿಜವಾದ ಮಾತು ಮೊಬೈಲ್.. ಟಿ ವಿ ಕನ್ನಡಿ 3 ಇದ್ದರೆ ಮನೆಯಲ್ಲಿ ಬಾಂಧವ್ಯ ಬೇಡ.  ಪ್ರೀತಿಯು ಬೇಡ..ನೆಂಟರು ಬಂಧುಗಳು ಮೊದಲೇ ಬೇಡ.  ಅಲ್ವಾ. 
ಇನ್ನೂ ಕಾಲೇಜ್ ಹೇ ಹೋಗುವಾಗ ಸರ್ವೇ ಸಾಮಾನ್ಯ ಈ ಲವ್.  ಅದೊಂದು ಆಕರ್ಷಣೆ. ಮತ್ತೆ ವಯೋ ಸಹಜ .ಅಭಿವ್ಯಕ್ತಿ...ಆದರೆ ಹೆಣ್ಣು ಜಾಗೃತ ವಹಿಸಿದರೆ ಒಳ್ಳೆಯದು. ಉತ್ತಮ ಆಶಯ 🙏🙏👌👌
[7/30/2019, 10:55 AM] Wr Sham Prasad Bhat: *ಪ್ರೇಮ್*
 
*ಹನಿ೧*

ಫಲಾಪೇಕ್ಷೆಯಿಲ್ಲದೇ ಗಿಡನೆಟ್ಟು ಸಲಹಿ ಮರವಾಗಿಸಿದಳು.ಆ ಮರಗಳು ಹಿಗ್ಗಿ ಬೆಳೆದು ಪರಿಸರಕ್ಕೆ ತಮ್ಮ ಕೊಡುಗೆಯನ್ನು ಸಲ್ಲಿಸುತ್ತಲೇ ಇವೆ.ಮರಗಳಡಿಯಲ್ಲಿ ಸಂಚರಿಸುವ ಆ ನೆರಳು ನೀಡುವ ಹಿತಾನುಭವವನ್ನು ಸವಿಯುವ ಪ್ರತೀಯೊಬ್ಬನೂ ಸಾಲು ಮರದ ತಿಮ್ಮಕ್ಕನಿಗೆ ಧನ್ಯವಾದ ಸಮರ್ಪಿಸಲೇ ಬೇಕು.ಇವತ್ತಿನ ದಿನಗಳಲ್ಲಿ ನಾವು ನೋಡುತ್ತಿಲ್ಲವೇ..ಯಾರೋ ಒಬ್ಬ ಒಂದು ಗಿಡ ನೆಟ್ಟು ಫೋಟೋ ಕ್ಲಿಕ್ಕಿಸಿ ಜಾಲತಾಣಗಳಲ್ಲಿ ಹರಿಯಬಿಟ್ಟು  ಸಾವಿರ ಲೈಕ್ ನಿರೀಕ್ಷೆ ಮಾಡುತ್ತಾನೆ..ಆದರೆ ಸಾವಿರಕ್ಕೂ ಹೆಚ್ಚು ಮರ ನೆಟ್ಟ ತಿಮ್ಮಕ್ಕನಿಗೆ ಒಂದೇ ಒಂದು ಲೈಕ್ ನಿರೀಕ್ಷೆ ಮಾಡಿದವಳಲ್ಲ..ಸಣ್ಣ ಹನಿ ನಮ್ಮನ್ನು ಈ ನಿಟ್ಟಿನಲ್ಲಿ ಆಲೋಚಿಸುವಂತೆ ಮಾಡಿದೆ.ಗೆದ್ದಿದೆ.ಅಂದು ಪಂಚಪದಿಗಳಲ್ಲೂ ತಿಮ್ಮಕ್ಕನನ್ನು ಸ್ಮರಿಸಿದ್ದು ನನಗಿನ್ನೂ ನೆನಪಿದೆ.ನಿಜಕ್ಕೂ ಇದು ಉತ್ತಮ ಪ್ರಯತ್ನ. ಪರಿಸರ ಕಾಳಜಿ ಲೇಖನಿಯ ಮೂಲಕ ಹೊರಹೊಮ್ಮುವ ಬೆಳವಣಿಗೆಗೆ ನನ್ನ ಸಂಪೂರ್ಣ ಬೆಂಬಲವಿದೆ.ಹನಿ ಚೆನ್ನಾಗಿದೆ

ಧನ್ಯವಾದಗಳು ಸಹೋದರಿ

*ಶ್ಯಾಮ್ ಪ್ರಸಾದ್*
[7/31/2019, 7:53 AM] +91 94807 90863: 🙏 *ಪ್ರೇಮ್ ಜಿ*
ಬಳೆಯ ತೊಟ್ಟವಳಿಗಾಗಿ ಬಲೆಯಲ್ಲಿ ಬದ್ದ ಚುಟುಕು ಚೆನ್ನಾಗಿದೆ 😊
    ಧನ್ಯವಾದಗಳು
*ಸುಜಾತಾ ಎನ್*
[7/31/2019, 9:03 AM] Wr Shivaprasad Aradhya: ಪ್ರೇಮ ನೀವೂ ಪ್ರಾ ಸಮಯ ಚಂದ ಬರೆದಿಹಿರಿ ಭಲೇ  ಸೋದರೀ

ಶಿವಪ್ರಸಾದ್
[8/3/2019, 7:08 PM] Wr Tr Parameshwari Prasad: ಪ್ರೇಮ್ ಮೇಡಂ,

ನಮಸ್ತೆ🙏,

ಎರಡು ಸತ್ಯಗಳು ಚೆನ್ನಾಗಿದೆ.


ಸತ್ತವನಿಗೆ ಅಮೃತಕೊಟ್ಟರೆ ಬರಲಾಗದು. ಅರ್ಥ ಪೂರ್ಣ.

ಎರಡನೇದು,

ನಿಜ ಅಮೃತ ಕುಡಿದವರಾರದೂ ಗುಣ ಒಳ್ಳೆದಿರಬೇಕೆಂದಿಲ್ಲ. ಚಂದ
👌👌👌

ಪರಮೇಶ್ವರಿ ಪ್ರಸಾದ್✍️

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ