ದಶಕ -111
ಕವನ ಎಂದರೇನು, ಕವಿತೆ ಎಂದರೇನು
ಕಥೆ ಎಂದರೇನು ಬರೆದವ ಬಲ್ಲನೇನು
ಹಿರಿಯ ಕವಿಗಳು ನಲಿದಾಡಿದರು ಇಂದು
ಕಿರಿಯ ಓದುಗರ ಬಾಯಿಯಲ್ಲಿ ಮಿಂದು!
ಓದಿರಿ ಬರೆಯಿರಿ ಬೆಳೆಸಿರಿ ಎನುತ
ತಾನೂ ಓದುತ ಬರೆಯುತ ಸಾಗುತ
ಕಥಾಯಾನಕೆ ಬಂದು ಹಲವು ಕಡೆಯಿಂದಲಿ
ಕೇಳುತ ಕುಳಿತು ಕಲಿಯುವ ತವಕದಲಿ
ಹೃದಯ ತುಂಬಿ ಹರಸುವೆವು ನಾವೆಲ್ಲಾ
ಹೀಗೇ ಬಂದು ಉಪಯೋಗವಾಗಲಿ ಇವೆಲ್ಲಾ!
@ಹನಿಬಿಂದು@
22.01.2023
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ