ಸೋಮವಾರ, ನವೆಂಬರ್ 25, 2024

ಭಾವಗೀತೆ

ಭಾವಗೀತೆ
ನಾನೂ ಕೆಲಸ ಮಾಡುವೆ

ಬಟ್ಟೆ ಒಗೆದು ಪಾತ್ರೆ ತೊಳೆದು
ನಾನೂ ಅಡುಗೆ ಮಾಡುವೆ
ಅಕ್ಕಿ ರುಬ್ಬಿ ಸಾಮಾನು ಅರೆದು
ಇಡ್ಲಿ ಸಾಂಬಾರ್ ಬಡಿಸುವೆ

ಅಮ್ಮ ನಿನ್ನ  ಜೊತೆಗೆ ಸೇರಿ
ಮುದ್ದು ಹಾಡು ಹಾಡುವೆ
ತಮ್ಮ ತಂಗಿ ಬರಲಿ ಬೇಗ
ಲಲ್ಲೆಗರೆದು ಕಾಡುವೆ

ಕಲ್ಲು ತಿರುವಿ ಖಾರ ಕಡೆದು
ಹಿಟ್ಟು ತಯಾರು ಮಾಡುವೆ
ಉದ್ದು ಅರೆದು ಕಲಸಿ ಇಟ್ಟು 
ವಡೆಯ ಬಿಸಿ ಮಾಡುವೆ 

ನಾನು ನಿನಗೆ ಸಹಾಯ ಮಾಡಿ
ಕೆಲಸ ಸುಲಭ ಮಾಡುವೆ
 ಕಾರ್ಯವಲ್ಲ  ನನಗೆ ನೀಡು 
ಅಮ್ಮ ಸಾಕಿ ಸಲಹುವೆ
@ಹನಿಬಿಂದು@
25.11.2024

ಕೈಕುಲು

ಕೈಕುಲು

ನಮ್ಮಕ್ಲೆನ ಕೈಕುಲು ಒರ ತಿಕ್ಕಿನ ಖುಷಿಕ್ ಕೈ ಕೊರ್ದು
 ಅಲ್ಗದ್ ತರ್ಕ್ ಪತ್ತುನ ಮಾತ್ರ ಅತ್ತ್ !
ನಮ್ಮಕ್ಲೆ ನ ಕೈಕುಲು ಗುಂಡಿಗ್ ಬೂರಿನ ನಮನ್ ದೆರ್ತ್ 
ಪತ್ತುನವು, ಪತ್ ದೆರ್ತ್ ಪಾಡೊಡಾಯಿನವು!

ನಮ್ಮಕ್ಲೆನ ಕೈಕುಲು ನಮ್ಮ ಕಣ್ಣೀರ್‌ನ್ ಒರೆಸೊಡಾಯಿನ ಕೈತಲ ಪುರ್ಪೊಲು 
ನಮ್ಮಕ್ಲೆನ ಕೈಕುಲು ನಮನ್ ಬೂರ್ಯರೆ ಬುಡಂದೆ ನಮ್ಮೊಟ್ಟಿಗೆ ಉಂತುನ ಉಡಲ ಸೊತ್ತುಲು!

ನಮ್ಮಕ್ಲೆನ ಕೈಕುಲು ನಮಕ್ ನುಪ್ಪು ಬಾಯಿಗ್ ದೀಪಿನ  ಸೊಲ್ಮೆದ  ಮುಡಿಪುಲು
ನಮ್ಮಕ್ಲೆನ ಕೈಕುಲು ನಮ ಜೆಪ್ಪುನಗ ತೂಂಕುದು ತಟ್ಟುನ ಬೊಳ್ಳಿದ ದೀಪೊಲು!

ನಮ್ಮಕ್ಲೆನ ಕೈಕುಲು ನಾಲಯಿ ತತ್ತ್ಂಡ ಕಿನ್ಕ್ ದ್ ಸರಿ ಮಲ್ಪುನ ಸೂಜಿಲು
ನಮ್ಮಕ್ಲೆನ ಕೈಕುಲು ಜಾರ್‌ನಗ ಸರ್ತ ಉಂತವುನ ಬೇಲಿದ ಗೂಟೊಲು!

ನಮ್ಮಕ್ಲೆನ ಕೈಕುಲು ಬೆರಿ ತಟ್ಟ್ ದ್ ಸಾಯ ಕೊರ್ದು ಯಾನುಲ್ಲೆ ಪನ್ಪಿನವು!
ನಮ್ಮಕ್ಲೆನ ಕೈಕುಲು  ಲಕ್ಕದ್ ಕುಲ್ಲದ್ ಬೇಲೆ ಕೊರ್ದು ನಮ್ಮ ಕಾರ್‌ಡ್  ನಮನ್ ಉಂತವುನವು !!
@ಹನಿಬಿಂದು@
25.11.2024







ಭಾನುವಾರ, ನವೆಂಬರ್ 24, 2024

ನವಿಲುಗರಿ

ನೀನಿತ್ತ ನವಿಲುಗರಿ
ನಿನ್ನೊಳಿಹುದು ತಲೆಯ ಮೇಲೆ ಅಂದದ ನವಿಲುಗರಿ
ತನ್ನೊಳಗೆ ತಾನು ಕಲಿತು ಮೆರೆಯಬೇಕು ಸಿರಿ

ದೀಪ ಬೆಳಕು ಶಾಂತಿ ಮಂತ್ರ ಭಕ್ತಿ ಬೇಕು ಸದಾ
ಕೃಷ್ಣ ನಿನ್ನ ಕೊಳಲ ದನಿಯ ಕೇಳಿ ನಾನು ಫಿದಾ
ಗರಿಯ ಬಿಚ್ಚಿ ಕುಣಿವ ನವಿಲ ಖುಷಿಯ ಹಾಗೆ ಇಂದು
ನಿನ್ನ ನೆನೆದು ಬಾಳಿನಲ್ಲಿ ನಿತ್ಯ ಹಸಿರು ಮುಂದು

ಚುಕ್ಕೆ ತಾರೆ ಹೊಳೆಯುವಂತೆ ಮನದ ತುಂಬ ನಗು
ಪಕ್ಕದಲ್ಲಿ ರಾಧೆ ಇರಲು ಬಾಳ ಜೊತೆ ಹಿಗ್ಗು
ನಾನು ನೀನು ಎನಲು ಏನು ಬೇರೆ ಎಂಬ ಭಾವ
ಪ್ರೀತಿಯಲ್ಲಿ ಎಲ್ಲರೊಂದೆ ನೋವ ನೀಗಿ ಜೀವ

ತಾನು ತನ್ನದೆನುವ ತನ್ನತನದ ನೋವು ಸಾಕು
ನೀನೇ ಎನಲು ಬದುಕ ನಾವೆ ಮುಂದೆ ಸಾಗ ಬೇಕು
ಮುದದಿ ನಂಬಿ ದಿನವ ಕಳೆಯೆ ಹಿತವು ಇಹುದಿಲ್ಲಿ
ಸಂಗೀತದ ಅಲೆಯು ಹೊಮ್ಮಿ ನಿತ್ಯ ಗಾನ ಚೆಲ್ಲಿ
ಹನಿ ಬಿಂದು 
24.11.2024

ಚುಂಗುಡಿ

ಚುಂಗುಡಿ

ಮಲ್ಲ 

ಆ ಜನ ಪಾತೆರುನಿ ಬಾಯಿಡ್ ಭಾರಿ ಮಲ್ಲ
ಸಾಲ ಉಂಡುಗೆ ನಾಲ್ ಬ್ಯಾಂಕ್‌ಲೆಡ್ ಮಲ್ಲ ಮಲ್ಲ!
@ಹನಿಬಿಂದು@
24.11.2024

ಶುಕ್ರವಾರ, ನವೆಂಬರ್ 22, 2024

ನಿಸರ್ಗ

ನವೆಂಬರ್ ಡಿಸೆಂಬರ್ ತಿಂಗಳಿಡೀ ಚಳಿ ಒಂದೆಡೆ ಆದರೆ, ನಮ್ಮ ಕರಾವಳಿಯಲ್ಲಿ ಚಳಿ ಎಂಬುದು ಕಡಿಮೆ ಬಿಡಿ, ಆದರೆ ಈ ಸಮಯ ಇಷ್ಟವಾಗುವುದು ಎಲ್ಲಾ ಹೂವುಗಳಿಂದ. ಈಗ ಜೂನ್ ಜುಲೈನಲ್ಲಿದ್ದ ಹಸಿರು ಬರಿದಾಗಿ ಸ್ವಲ್ಪ ಒಣಗಿದ ಚಾಯೆಯ ಗಿಡ ಮರಗಳು. ಕೆಲವು ಎಲೆ ಉದುರಿಸಿ ಬೋಳಾದರೆ ಇನ್ನೂ ಕೆಲವು ಹೂವಿನಿಂದ ಬಣ್ಣ ಬಣ್ಣ. ಕ್ರಿಸ್ಮಸ್, ಹೊಸ ವರ್ಷಗಳ, ಜಾತ್ರೆ, ತೇರು, ನುಡಿ ತೇರಿನ ಅಬ್ಬರದ ಬಣ್ಣದ ಅಲಂಕಾರ ಒಂದೆಡೆಯಾದರೆ ಪ್ರಕೃತಿಯೇ ಈ ಸಮಯದಲ್ಲಿ ಬಣ್ಣ ಬಣ್ಣಗಳಿಂದ ಸಿಂಗರಿಸಿಕೊಳ್ಳುವುದನ್ನು ನೋಡಲು ಅದೇನು ಆನಂದ! ಪ್ರಕೃತಿ ಪ್ರೇಮಿಗಳಿಗಂತೂ ನಿಸರ್ಗ, ನೇಸರ ಎಂದಿಗೂ ಬೇಸರ ತಾರದು ಬಿಡಿ 
   ಇಂತಹ ಸಮಯದಲ್ಲಿ ನನ್ನ ಸೆಳೆದದ್ದು ಹುಲ್ಲಿನ ಹೂವು. ಮೈ ಬಣ್ಣ, ಕೆಂಪು, ತಿಳಿ ಹಳದಿ, ಕುಂಕುಮ ಬಣ್ಣ (ಮರೂನ್) ಹೀಗೆಲ್ಲಾ ಕಂಬಳಿ ಹುಳದ ಮೈಯ ಹಾಗೆ ಕಾಣುವ ಈ ಹೂವಿನ ಗುಂಪು ನೋಡಲು ಅದೇನೋ ಆನಂದ. ನಾನಂತೂ ನನ್ನೊಳಗೆ ಕಳೆದು ಹೋಗಿ ಬಿಡುತ್ತೇನೆ. ಪ್ರಕೃತಿಯೊಂದಿಗೆ ಒಂದಾಗಿ ಅದು ಯಾವುದೋ ಲೋಕಕ್ಕೆ ಜಾರಿ ಬಿಡುತ್ತೇನೆ. ಸಾಯಂಕಾಲದ ಸೂರ್ಯಾಸ್ತ, ಬೆಳಗ್ಗಿನ ಸೂರ್ಯೋದಯ, ಮಧ್ಯಾಹ್ನದ ಮಟಮಟ ಬಿಸಿಲಿಗೂ ಅದರ ಅಂದ ದುಪ್ಪಟ್ಟು ಹೆಚ್ಚಾಗುವುದೇ ವಿನಃ ಕಡಿಮೆಯಂತೂ ಆಗದು. ಗಾಳಿ ಬಂದರೆ ಸಾಕು ಚಿಕ್ಕ ಮಕ್ಕಳನ್ನು ಆಡಲು ಮೈದಾನಕ್ಕೆ ಬಿಟ್ಟ ಹಾಗೆ ಕುಣಿಯುವ e ಹೂವುಗಳ ಅಂದ ವರ್ಣಿಸಲು ಬಾರದು. 
    ನೀವೂ ಗಮನಿಸಿದ್ದೀರಾ? ಇನ್ನು ಸ್ವಲ್ಪ ದಿನ ಮಾತ್ರ ಈ ಅಂದ. ಮತ್ತೆ ತನ್ನಷ್ಟಕ್ಕೆ ತಾನೇ ಬಿಸಿಲಿಗೆ ಮಾಗಿ, ಒಣಗಿ ಕಾಯಾಗಿ ಮತ್ತೆ ಗಿಡವಾಗಿ ಹುಟ್ಟಲು ಜೂನ್ ಬರಬೇಕು. ಮಾರ್ಚ್ ಏಪ್ರಿಲ್ ಒಣ ಹುಲ್ಲೇ ನೋಡಬೇಕು ಅಷ್ಟೇ. Vidya Nayak ಮೇಡಂ ಮೊದಲೇ ಅದರ ಒಳಗೆ ಉಣ್ಣಿ ಇರುತ್ತದೆ. ಹೋಗುವಾಗ ಜೋಪಾನ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಅದನ್ನೂ ಪಾಲಿಸ ಬೇಕಾಗಿದೆ. ಆದರೂ ಅದು ಒಣಗುವ  ಮೊದಲೊಮ್ಮೆ ಇದರ ಅಂದವ ಕಣ್ಣಾರೆ ಕಂಡು ಮನಸಾರೆ ಸವಿದು ಖುಷಿ ಪಡೋಣ ಅಲ್ಲವೇ? ನೀವೇನಂತೀರಿ? 
ಹನಿ ಬಿಂದು #naturelovers

ಗುರುವಾರ, ನವೆಂಬರ್ 14, 2024

ಶುಭಾಶಯ

ಶುಭವಾಗಲಿ

ಶುಭವಾಗಲಿ ನಿಮಗೆ ಶುಭವಾಗಲಿ
ಜನುಮ ದಿನದ ಸಂತಸವು ಸವಿಯಾಗಲಿ
ಬದುಕೆಂಬ ಕಾಲುವೆಯು ಶುಚಿಯಾಗಿ ಇರಲಿ
ಸುಖವೆಂಬ ದೋಣಿಯು ತೇಲುತಿರಲಿ

ಶಿಸ್ತನ್ನು ತಾ ಗೆದ್ದು ಸರ್ವರ ಮನಗೆದ್ದು
ಮಸ್ತಕದಿ ಜ್ಞಾನವನು ತುಂಬಿಕೊಂಡಿದ್ದು
ಕಷ್ಟ ಕಾರ್ಪಣ್ಯಗಳ ಮೆಟ್ಟಿ ನಿಂತಿದ್ದು
ಶಿಷ್ಟರ ಸಂಘದಲಿ ಕ್ಷಣವೂ ನಗುತ್ತಿದ್ದು

ರೋಗ ರುಜಿನಗಳ ಕಂತೆ ದೂರವೇ ಉಳಿದಿರಲಿ
ಸಕಲ ದುರಿತಗಳ ಚಿಂತೆ ನಾಶವಾಗಲಿ
ನೋವ ಅಂಶಗಳೆಲ್ಲ ನೀಗಿ ಹೋಗಿ ಬಿಡಲಿ
ಕ್ಷಣ ಕ್ಷಣದ ಖುಷಿಯೂ ನಿಮ್ಮದಾಗಲಿ

ಬಾಳೆಂಬ ಪಯಣದಲಿ ಜೊತೆಗಾರರು ನಾವು
ಶಾಲೆಯೆಂಬ ದೇಗುಲದಿ ಜೊತೆ ಸೇರಿದವರು
ಕೆಲಸದ ನೊಗ ಹೊತ್ತು ಸಾಗುತಿದೆ ಬದುಕಿನಲ್ಲಿ
ಜನುಮ ದಿನಾಕಿದೋ ಶುಭಾಶಯವು ಇಲ್ಲಿ
@ಹನಿಬಿಂದು@
14.11.2024

ಬುಧವಾರ, ನವೆಂಬರ್ 13, 2024

ರೂಬಾಯಿ

ರುಬಾಯಿ 

ರಾವೊಂದು ಬತ್ತಲ್ ರಾಯೆರೆ ಮಗಲ್ 
ಪಾರೊಂದು ಪಕ್ಕಿದ ಲೆಕ್ಕನೆ  ಮುಗಲ್ 
ಸಾರೊಂದು ನಿಕ್ಲೆ ಗ್ ಯಾನುಲ್ಲೆ ಪಂದ್ 
ಬೂರೊಂದು ಲಕ್ಕ್‌ದ್  ತಿರ್ಗ್ಯ‌ಲ್ ಆಲಲ್ಲ್
@ಹನಿಬಿಂದು@
13.11.2024

ಮಂಗಳವಾರ, ನವೆಂಬರ್ 12, 2024

ನೆನೇಕೆ

ಚಿಟ್ಕಾ 

ನೆನೆಕೆ 

ಬೊಲ್ಪು ಕೊರ್ಪಿ ಸೂರ್ಯೆ ಈಲ
ತೆಲ್ಪು ನಿಚ್ಚ ಪಗೆಲ್ ಉರಿಲ
ಗೆಲ್ಪು ಕಷ್ಟ ಬೂಮಿದ ಮಿತ್ತ್ ಲ
ನೆಂಪು ದೀಲ  ಉಲ್ಲೆ  ಚಂದ್ರೆಲ
@ಹನಿಬಿಂದು@
12.11.2024

ಶುಕ್ರವಾರ, ನವೆಂಬರ್ 8, 2024

ಪನಿಕವಿತೆ

ಪನಿ ಕವಿತೆ

ಬಯ್ಯ

ಸೂರ್ಯನ್ ತೂಯೆರೆ ಪಂಡ್‌ದ್
ಸೂರ್ಯೆ ಪೋಯೆ ಕಡಲ ಬರಿಕ್
ದೋಸ್ತಿನಕ್ಲೆನ್ಲ ಲೆತೊಂದು
ಸೂರ್ಯೆ ಕಂತ್ಯೆ, ಇಂಬೆ ದಂಗಯೆ
ಎಚ್ಚಾದ್ ತಾದಿಡೆ ಬೂರ್ಯೆ 
@ಹನಿಬಿಂದು@
08.11.2024

ಗುರುವಾರ, ನವೆಂಬರ್ 7, 2024

ಟಂಕಾ

ಟಂಕಾ

ಆಲ್ ಮಗಲ್ 
ಬೇಲೆ ಆವಂದ್ ಪಂದ್
ದೂರ ನೂಕಡೆ
ಪೊಣ್ಣ ತಾಕತ್ ತೂಲೆ 
ಛಾನ್ಸ್‌ನ್  ಕೊರ್ದು ಪಲ್ಲೆ
@ಹನಿಬಿಂದು@
07.11.2024

ಶನಿವಾರ, ನವೆಂಬರ್ 2, 2024

ಹಾಯ್ಕು

ಹಾಯ್ಕು 

ಮಲ್ಲ ಜನಕ್ಲೆ
ಎಲ್ಯ ಮನಸ್‌ಲು
ಬೇಗ ಗೊತ್ತಾಪ!
@ಹನಿಬಿಂದು@
02.11.2024